nata

ttm

adweb

udgharsha

As per the recently released BARC weekly data (Urban + Rural) for the first week of the year 2019, Zee Kannada has claimed the top position in the Kannada market with a total of 415697 impressions ‘000s; 171167impressions ‘000s in the urban market, 244530 in the rural market, withrobust growth across its prime-time fiction shows. Continuing to hold the leadership position in the Urban market for the last 12 weeks, Zee Kannada has now earned thedistinction of being the leader for the first time in the last 13 years.

.

Taking to the challenge of reaching the market leader position, Zee Kannada has secured 260314 impressions ‘000s in its prime-time band, with its top shows including Yaare Nee Mohini, Paaru, and Brahmangantu. The channel has also secured leadership position across its prime-time slots in the Non-Fiction shows such a SRGMP15 & Drama Juniors 3.

.

Commenting on the ratings, Raghavendra Hunsur, Business Head of Zee Kannada said, “I am glad to congratulate the Zee Kutumba on kick-starting the year with a well-deserved celebration on achieving our goal of securing top honours in the Kannada GEC spacel. With the channel’s recently refreshed brand image, Zee Kannada has grown by leaps and bounds on the back of curating interesting concepts, storylines, and our success stands testimony to our steadily strengthening relationship with our viewers. We are extremely thrilled to be the number one Kannada general entertainment channel for the first time in the last 13 years and humbled by the overwhelming support of our partners and ardent viewers.”

 

Source: BARC India

 
ರಿಯಾಲಿಟಿ ಶೋ ಗಳಲ್ಲಿ ನಿರೀಕ್ಷೆಗೂ ಮೀರಿತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀಕನ್ನಡ,, ಪ್ರೇಕ್ಷಕರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನಪ್ರಯೋಗಗಳನ್ನು ಮಾಡುತ್ತ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ.
.
ರಿಯಾಲಿಟಿ ಶೋ ಚಿತ್ರಿಕರಣ ಮತ್ತು ಪ್ರಸಾರ ಎರಡೂ ಜನರಿಂದ ದೂರವಾಗಿ ನಡೆಯುವಂತ ಪ್ರಕ್ರಿಯೆ. ಇಲ್ಲಿ ಪ್ರೇಕ್ಷಕರಿಗು, ನಟರಿಗು ನೇರ ಮುಖಾಮುಖಿ ಇರುವುದಿಲ್ಲ,,ಆದರೆ ರಂಗಭೂಮಿ ಜನರ ನೇರ ಸಂಪರ್ಕಕ್ಕೆ ಮತ್ತು ಸಂವಹನಕ್ಕೆ ಒಳಪಡುವಂತದ್ದು.
.
“ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ” ಮುಗ್ದಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮಾಥ್ರ್ಯಕ್ಕೆ ವೇದಿಕೆಯನ್ನು ಒದಗಿಸುವ ಒಂದು ಉತ್ತಮ ಶೋ. ಈ ಶೋ ಕೇವಲ ಮನರಂಜನೆಯನ್ನಷ್ಟೇ ನೀಡದೇ, ವಿನೂತನ, ವಿಭಿನ್ನ ಪ್ರಯೋಗಗಳನ್ನು ಮಾಡಿ ಹೊಸ ದಾಖಲೆಗಳಿಗೆ ನಾಂದಿ ಹಾಡಿದೆ.. ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವುದರ ಜೊತೆಗೆ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಪ್ರೇಕ್ಷಕ ಮಹಾಶಯರಿಂದ ಇದೊಂದು ಅದ್ಭುತವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡ ಚಿತ್ರರಂಗಕ್ಕೆ ಹತ್ತು ಹಲವೂ ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ “ಡ್ರಾಮಾಜ್ಯೂನಿಯರ್ಸ್ ಸೀಸನ್ 1 ಮತ್ತು ಸೀಸನ್ 2” ಎಂಬ ಅತ್ಯದ್ಭುತ ಯಶಸ್ಸಿನ ಕಾರ್ಯಕ್ರಮವನ್ನು ಪರಿಚಯಿಸಿದಲ್ಲದೇ, ಅದುಕರ್ನಾಟಕವಲ್ಲದೇ ದೇಶ ವಿದೇಶz Àಕನ್ನಡಿಗರಲ್ಲೆರು ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ವಾಹಿನಿಗೆ ಸಲ್ಲುತ್ತದೆ. ಅದರ ಮುಂದುವರಿದ ಅಧ್ಯಾಯವೆಂಬಂತೆ “ಡ್ರಾಮಾಜ್ಯೂನಿಯರ್ಸ್ ಸೀಸನ್ 3” ಆರಂಭಗೊಳ್ಳುತಿದ್ದು ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ.
.
ಕರ್ನಾಟಕದಾದ್ಯಂತ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿಅಭನಯಕೌಶಲ್ಯದ ಹಿನ್ನಲೆಯುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಆ 30 ಮಕ್ಕಳುಗಳು ಮೆಗಾ ಆಡಿಷನ್ ನಲ್ಲಿ ಭಾಗಿಯಾಗಲು ತಯಾರಾಗಿದ್ದಾರೆ.
.
ಹೊಸ ಹೊಸ ಪ್ರಯೋಗಗಳು, ಹೊಸ ಪ್ರಯತ್ನದೊಂದಿಗೆ ಹಿಂದೆಂದು ನೋಡಿರದಂತ, ಹಿಂದೆಂದು ಕೇಳಿರದಂತ ಮನರಂಜನೆ ಈ ಒಂದುಕಾರ್ಯಕ್ರಮದಲ್ಲಿ ನಿಮಗಾಗಿ ಎದುರುಗೊಳ್ಳುತ್ತಿದೆ.
ಇನ್ನುಳಿದಂತೆ ಕಾರ್ಯಕ್ರಮಕ್ಕೆ ಅಂದದ ಮೆರುಗೆಂಬಂತೆ ತ್ರಿವಳಿ ಜೆಡ್ಜಸ್ ಗಳಾದ “ಜೂಲಿ ಲಕ್ಷ್ಮಿ, ಮುಖ್ಯಮಂತ್ರಿಚಂದ್ರು ಹಾಗು ವಿಜಯರಾಘವೇಂದ್ರ” ರವರ ುಕಾರ್ಯಕ್ರಮದ ನಿರ್ಣಾಯಕರಾದರೆ ಮಕ್ಕಳಿಂದ ಹಿಡಿದು ವಯೋಮಾನದವರಿಗೆಲ್ಲರಿಗು ಪ್ರೀತಿ ಪಾತ್ರರಾದ“ಮಾಸ್ಟರ್‍ಆನಂದ್” ತಮ್ಮ ಮಾತಿನ ಚಟಾಕಿಯ ಮೂಲಕ ನಿರೂಪಣೆಯನ್ನು ನೀಡಲಿದ್ದಾರೆ.
“ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಪುಟಾಣಿಗಳು” ಇದೇ ಅಕ್ಟೋಬರ್ 20 ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ, ನಿಮ್ಮ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
#ZeeKannada #DramaJuniors #Cineloka

 

ವಿಭಿನ್ನ ರಿಯಾಲಿಟಿ ಶೋಗಳು ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ಜೀ ಕನ್ನಡ ವಾಹಿನಿ ಈಗ ಪೌರಾಣಿಕ ಧಾರಾವಾಹಿಗಳತ್ತ ಮುಖ ಮಾಡಿದೆ. ಇತ್ತೀಚೆಗಷ್ಟೇ “ಉಘೇ ಉಘೇ ಮಾÀದೇಶ್ವರ” ಎಂಬ ಪೌರಾಣಿಕ ಧಾರಾವಾಹಿಯನ್ನು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ. ಅದೇ ರೀತಿ ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯನ್ನು ಆರಂಭಿಸಲು ಅಣಿಯಾಗಿದೆ. “ಶ್ರೀ ವಿಷ್ಣು ದಶಾವತಾರ” ಎಂಬ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಪೌರಾಣಿಕ ಧಾರಾವಾಹಿಯ ಮೂಲಕ ಶ್ರೀ ಮಹಾವಿಷ್ಣುವಿನ 10 ಅವತಾರಗಳನ್ನು ಜೀ ವಾಹಿನಿಯಲ್ಲಿ ವೀಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಅದ್ಧೂರಿ ವೆಚ್ಚದ ವೈಕುಂಠದ ಸೆಟ್ ಹಾಗೂ ಇತರ ಆಕರ್ಷಣೆಗಳೊಂದಿಗೆ ಶ್ರೀ ವಿಷ್ಣು ದಶಾವತಾರ ಕನ್ನಡ ಪ್ರೇಕ್ಷಕರ ಮುಂದೆ ಬರಲಿದೆ.
.

ಒಂದು ಸಿನಿಮಾ ಶೈಲಿಯಲ್ಲೇ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದ್ಧೂರಿ ಸೆಟ್‍ಗಳ ಗ್ರಾಫಿಕ್ಸ್ ಈ ಸೀರಿಯಲ್‍ನ ವಿಶೇಷವಾಗಿದೆ. ಮುಂಬೈ ಮೂಲದ ಕ್ರಿಯೇಟಿವ್ ಐ ಸಂಸ್ಥೆಯ ಧೀರಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯನ್ನು ಸಂತೋಷ್ ಬಾದಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ಯ ಸೂರ್ಯ, ಕಾವ್ಯ ಮಹದೇವ್, ಹರ್ಷ, ಅರ್ಜುನ್, ವಂದನ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
.

ಅಕ್ಟೋಬರ್ 15 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.00 ಗಂಟೆಗೆ ಶ್ರೀ ವಿಷ್ಣು ದಶಾವತಾರ ಪ್ರಸಾರವಾಗಲಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹೀಗೆ ಯುಗಯುಗಾದಿಗಳಿಂದಲೂ ಲೋಕಕಲ್ಯಾಣಕ್ಕಾಗಿ ಶ್ರೀ ಮಹಾವಿಷ್ಣು ಎತ್ತುವ 10 ಅವತಾರಗಳ ಕಥೆಯೇ ಶ್ರೀ ವಿಷ್ಣು ದಶಾವತಾರ. ಅಮಿತ್ ಕಷ್ಯಪ್ ಮಹಾವಿಷ್ಣುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಸೊಗಡು ಖ್ಯಾತಿಯ ನಿಷಾ ಇಲ್ಲಿ ಮಹಾಲಕ್ಷ್ಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
.

ನಿರ್ಮಾಪಕ ಧೀರಜ್‍ಕುಮಾರ್ ಮಾತನಾಡಿ ಭಾಷೆಗೆ ಯಾವುದೇ ಗಡಿಯಿಲ್ಲ. ಒಂದು ಒಳ್ಳೆಯ ಧಾರಾವಾಹಿಯನ್ನು ಮಾಡಿದ್ದೇವೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದು, ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸುವುದು ಸವಾಲಾಗಿತ್ತು. ಮುಂಬೈನಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಹೇಳಿದರು. ನಂತರ ರಾಘವೇಂದ್ರ ಹುಣಸೂರು ಮಾತನಾಡುತ್ತಾ ಈವರೆಗೆ ರಿಮೇಕ್ ಧಾರಾವಾಹಿಗಳೇ ಕಿರುತೆರೆಯಲ್ಲಿ ಹೆಚ್ಚಾಗಿ ಮೂಡಿಬರುತ್ತಿದ್ದವು. ಆದರೆ ಜೀ ಕನ್ನಡ ವಾಹಿನಿ ಸ್ವಮೇಕ್ ಧಾರಾವಾಹಿಗಳತ್ತ ಹೆಚ್ಚು ಗಮನ ಹರಿಸಿದೆ. ವಿಷ್ಣು ದಶಾವತಾರ ಕನ್ನಡ ಹಾಗೂ ತಮಿಳಿನಲ್ಲಿ ಚಿತ್ರೀಕರಣವಾಗುತ್ತಿದೆ. ಈಗಾಗಲೇ 50 ಎಪಿಸೋಡ್‍ಗಳನ್ನು ರೆಡಿ ಇಟ್ಟುಕೊಂಡಿದ್ದೇವೆ. ಕನಿಷ್ಠ 400 ರಿಂದ 500 ಕಂತುಗಳನ್ನು ಮಾಡುವ ಉದ್ದೇಶವಿದೆ. ಎಲ್ಲಾ ಕಲಾವಿದರನ್ನು ಇಲ್ಲಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದು. ಅಲ್ಲೇ ಅವರಿಗೆ ವಸತಿ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದೇವೆ. ನಮ್ಮ ಬಹುತೇಕ ಕಲಾವಿದರು ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಜೆಟ್ ಹೆಚ್ಚು ಎನ್ನುವ ಕಾರಣಕ್ಕಾಗಿ ತಮಿಳಿನಲ್ಲಿ ಕೂಡ ಒಮ್ಮೆಗೆ ನಿರ್ಮಾಣ ಮಾಡಲಾಗುತ್ತಿದೆ.

ವಿಷ್ಣು ಪಾತ್ರಧಾರಿ ಅಮಿತ್ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಈ ಧಾರಾವಾಹಿಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ.

Zee Kannada, creating the best entertainment programmes, has become a household name for quality entertainment. One of the most popular serials on Zee Kannada is Brahmagantu, which narrates the story of Gundamma, an overweight girl who has a helpful nature, and since the beginning, it has been leading the slot. In a surprising twist, Gundamma is going to be a part of Zee Kannada’s dance reality show Dance Karnataka Dance.
.
 The Dance Karnataka Dance competition will take part within the show, as a continuation of the story. Vijay Raghavendra and Arjuna will be the judges, and the programme is filmed on the DKD stage itself.
.
 The hero of the serial, Lucky, is the reason Gundamma chooses to audition for the competition. Lucky always challenges Gundamma to push her limits, and it has now made her try out a different platform. Adding to this, Gundamma's father always wanted his daughter to achieve success in her life in everything she does. However, after his demise, his aspirations stayed wandered, but Puttatthe ignites this in Gundamma again by saying, “It is not enough if you get love from Lucky, you also deserve respect from him. You have to show him that you can achieve anything.” Inspired by her words, Gundamma enters the Dance Karnataka Dance stage.
.
 Gundamma has already proved her mettle by playing kabaddi; she has also proven that her weight will never be a hindrance for her to achieve something. Whether she wins on this journey and is able to receive due respect from Lucky, or if she fails and is humiliated by it, is something we will have to wait and watch. Her dance journey will continue for over a month and a half months on Brahmagantu.
.
Brahmagantu airs from Monday to Friday at 10 pm on Zee Kannada. Shruthi Naidu, who is a popular name in the small screen industry, is directing and producing this serial.
#Cineloka #ZeeKannada
 
ಈ ಅಭಿಯಾನ ಚಾನೆಲ್‍ನ ಹೊಸ ಧಾರಾವಾಹಿ, `ಕಮಲಿ'ಗೆ ಪೂರಕವಾಗಿದ್ದು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗಿಯೊಬ್ಬಳು ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದನ್ನು ನಿರೂಪಿಸುತ್ತದೆ.
.
ರಾಜ್ಯದಾದ್ಯಂತ ವಿದ್ಯಾರ್ಥಿಗಳು ತಮ್ಮಉನ್ನತಅಧ್ಯಯನಕ್ಕಾಗಿ ನಗರಗಳಿಗೆ ಬರುತ್ತಾರೆ, ಈ ಹಿನ್ನೆಲೆಯಲ್ಲಿ ಚಾನೆಲ್‍ ರ್ಯಾಗಿಂಗ್‍ನ ದುಷ್ಪರಿಣಾಮಗಳ ಕುರಿತು ಅರಿವನ್ನು ಉಂಟು ಮಾಡುವ ಮಹತ್ತರ ಜವಾಬ್ದಾರಿ ತೆಗೆದುಕೊಂಡಿದೆ. ಜೀóಕನ್ನಡದ ಹೊಸ ಕಾರ್ಯಕ್ರಮ ಈ ಅಭಿಯಾನದ ಮುಂಚೂಣಿಯಲ್ಲಿದ್ದು, ಕರ್ನಾಟಕದ ವಿದ್ಯಾರ್ಥಿ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಒತ್ತು ನೀಡಲಿದೆ.
.
ಕಮಲಿ ಧಾರಾವಾಹಿಯು ತನ್ನ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಯುವತಿಯ ಕಥೆಯಾಗಿದ್ದು ಆಕೆ ತನಗೆ ಎದುರಾದ ಎಲ್ಲ ಅಡೆತಡೆಗಳನ್ನೂ ನಿವಾರಿಸಿ ಕಬಡ್ಡಿ ಆಟಗಾರ್ತಿಯಾಗುತ್ತಾಳೆ. ನಟಿ ಅಮೂಲ್ಯ ನಟನೆಯ ಕಮಲಿ ಹಲವು ಅಡೆತಡೆಗಳು ಎದುರಾದರೂ ದಿಟ್ಟತನದಿಂದ ಎದುರಿಸುವ ಬದ್ಧತೆ ಹೊಂದಿರುತ್ತಾಳೆ, ಹಳ್ಳಿಯಿಂದ ದೊಡ್ಡ ನಗರಕ್ಕೆ ಕಬಡ್ಡಿ ಪಟುವಾಗಬೇಕು ಹಾಗೂ ಉನ್ನತ ಅಧ್ಯಯನ ಮಾಡಬೇಕು ಎಂಬ ಬಯಕೆಯುಳ್ಳ ಅವಳಿಗೆ ರ್ಯಾಗಿಂಗ್‍ ದೊಡ್ಡ ಅಡ್ಡಿಯಾಗುತ್ತದೆ.
.
ರ್ಯಾಗಿಂಗ್‍ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯಾಗಿದ್ದು ಈ ಅಭಿಯಾನದ ಮೂಲಕ ಜೀó ಕನ್ನಡ ರ್ಯಾಗಿಂಗ್‍ನ ದುಷ್ಪರಿಣಾಮಗಳ ವಿರುದ್ಧ ಒಗ್ಗೂಡಿಸುವ ವಿಶಿಷ್ಟ ಪ್ರಯತ್ನ ಮಾಡುತ್ತಿದೆ. ಕಿರುನಾಟಕ ಮತ್ತು ಪೋಸ್ಟ್‍ಕಾರ್ಡ್ ವಿತರಣೆಯ ಮೂಲಕ ಈ ಅಭಿಯಾನ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಚಾನೆಲ್ ನಗರದ ಸುರಾನಾಕಾಲೇಜ್ ಪೀಣ್ಯ, ಶ್ರೀ ಲಕ್ಷ್ಮಿಗ್ರೂಪ್‍ ಆಫ್‍ ಇನ್ಸ್‍ಟಿಟ್ಯೂಷನ್ ಮತ್ತು ಸುರಾನಾ ಕಾಲೇಜ್‍ ಕೆಂಗೇರಿ ಒಳಗೊಂಡು ನಾಲ್ಕು ಕಾಲೇಜುಗಳಿಗೆ ಭೇಟಿ ನೀಡಿತು. ಇದಲ್ಲದೆ ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹುಬ್ಬಳ್ಳಿಯ ವಿವಿಧ ನಗರಗಳಲ್ಲಿರುವ 25 ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದೆ.
.
ಈ ವಿನೂತನಅಭಿಯಾನಯುವ ವಿದ್ಯಾರ್ಥಿ ಸಮುದಾಯವನ್ನು ಸಂಪರ್ಕಿಸುವ ಉದ್ದೇಶ ಹೊಂದಿದ್ದು ಪ್ರತಿಯೊಂದು ಕಾಲೇಜಿನಲ್ಲಿ ನಾಲ್ಕು ಸದಸ್ಯರ ತಂಡವು ರ್ಯಾಗಿಂಗ್ ಹೇಗೆ ವಿದ್ಯಾರ್ಥಿಯ ಜೀವನದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಕಿರುನಾಟಕ ಪ್ರದರ್ಶನ ನೀಡುತ್ತದೆ.ಈ ಕಿರುನಾಟಕ ಮತ್ತು ಆಟಗಳ ನಂತರ ಕಮಲಿ ಶೈಲಿಯ ಪೋಸ್ಟ್ ಕಾರ್ಡ್‍ಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ, ಅದರಲ್ಲಿ ರ್ಯಾಗಿಂಗ್ ಬಾಧಿತರಿಗೆ ಹೆಲ್ಪ್‍ಲೈನ್ ಒಳಗೊಂಡಿರುತ್ತದೆ. ರ್ಯಾಗಿಂಗ್ ವಿರೋಧಿ ಸಂದೇಶ ಒಳಗೊಂಡ ಈ ಪೋಸ್ಟ್‍ ಕಾರ್ಡ್‍ಗಳು ಬಾಧಿತ ವಿದ್ಯಾರ್ಥಿಗಳಿಗೆ ಮಾತನಾಡಲು ಮತ್ತು ಅವರ ಅನುಭವ ಹಂಚಿಕೊಳ್ಳಲು ಸೂಚಿಸುತ್ತವೆ. ಜೀóಕನ್ನಡದ ಪ್ರತಿನಿಧಿಗಳು ಯಾವುದೇ ಬಗೆಯ ದೂರುಗಳನ್ನು ಆಲಿಸಲು ಸ್ಥಳದಲ್ಲಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾರ್ಥಿಗಳು ಒಂದುಗಂಟೆಯಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲಾಗುತ್ತಿದ್ದು ಪ್ರದರ್ಶನ, ಮಾಹಿತಿಪೂರ್ಣ ಮತ್ತು ನಿರ್ಣಾಯಕ ಮಾಹಿತಿ ಹೊಂದಿರುತ್ತದೆ.
.
ಈ ಅಭಿಯಾನ ಪ್ರಾರಂಭಿಸುವಕುರಿತುಜೀóಕನ್ನಡ ಬ್ಯುಸಿನೆಸ್ ಹೆಡ್‍ರಾಘವೇಂದ್ರ ಹುಣಸೂರು, `ರ್ಯಾಗಿಂಗ್‍ ದೇಶದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ ಮತ್ತು ಜೀó ಕನ್ನಡದಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಬದ್ಧರಾಗಿದ್ದೇವೆ. ನಮ್ಮ ಹೊಸದಾಗಿ ಪ್ರಾರಂಭವಾಗುವ ಕಮಲಿ ಧಾರಾವಾಹಿ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು ರ್ಯಾಗಿಂಗ್‍ನ ಪರಿಣಾಮಗಳ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ಅರಿವನ್ನುಂಟು ಮಾಡುತ್ತದೆ ಮತ್ತು ರ್ಯಾಗಿಂಗ್ ಬಾಧಿತರಲ್ಲಿ ವಿಶ್ವಾಸ ಮೂಡಿಸುತ್ತದೆ' ಎಂದರು.
.
#ZeeKannada #Kamali #Cineloka
 
ಒಂದು ಮೊಟ್ಟೆಯ ಕಥೆ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರಾಜ್.ಬಿ.ಶೆಟ್ಟಿಯಿಂದ ಹಿಡಿದು ನಿತ್ಯೋತ್ಸವದ ಕವಿ ನಿಸಾರ್‍ ಅಹಮ್ಮದ್‍ವರೆಗೆ, ಸಾಲು ಸಾಲು ಮರಗಳಿಂದ ಹಸಿರಿಗೇ ಉಸಿರು ನೀಡಿದ ಸಾಲು ಮರದತಿಮ್ಮಕ್ಕನಿಂದ ಪವರ್‍ಸ್ಟಾರ್ ಪುನಿತ್‍ವರೆಗೆ...ಯಶ್, ಹಂಸಲೇಖ, ರವಿಚಂದ್ರನ್, ಸಂತೋಷ್‍ಹೆಗ್ಡೆ ಸೇರಿದಂತೆ ಗಣ್ಯಾತೀ ಗಣ್ಯರು, 20 ಪ್ರಶಸ್ತಿಗಳು, ಹಿರಿಯರ ಅನುಭವದ ಮಾತಿಗೆ, ಕಿರಿಯರ ಮನರಂಜನೆಯ ಬಾತು. ಹಾಡು, ನೃತ್ಯ, ಕುಣಿತ, ನಗುವಿನ ಕಚಗುಳಿ...ಹೀಗೆ ಸಮಸ್ತ ಕರ್ನಾಟಕದ ಹೆಮ್ಮೆಯನ್ನೇ ಕಣ್ಣೆದುರಿಗೆ ಕಟ್ಟಿಕೊಟ್ಟ ಜೀಕನ್ನಡ ವಾಹಿನಿಯ‘ಹೆಮ್ಮೆಯಕನ್ನಡಿಗ 2018’.
ಕನ್ನಡ ಕಿರುತೆರೆ ಲೋಕದಲ್ಲಿ ವರ್ಷಪೂರ್ತಿ ವಿಶಿಷ್ಠ ಕಾರ್ಯಕ್ರಮಗಳನ್ನು ಬಿತ್ತರಿಸಿ ಕರುನಾಡಿನ ಮನೆ-ಮನಗಳಿಗೆ ವ್ಯಾಪಿಸಿರುವ ಜೀ ಕನ್ನಡ, ನಮ್ಮ ನಾಡು-ನುಡಿಗಾಗಿ ಶ್ರಮಿಸಿದ ಸಾಧಕರನ್ನುಗೌರವಿಸಲು `ಹೆಮ್ಮೆಯಕನ್ನಡಿಗ 2018’ ಎಂಬ ವಿನೂತನಕಾರ್ಯಕ್ರಮವನ್ನು ಸಾದರಪಡಿಸುತ್ತಿದೆ. ಸಮಾಜದ ವಿವಿಧ ಕ್ಷೇತ್ರಗಳಾದ ಮನರಂಜನೆ, ಕ್ರೀಡೆ, ಸಮಾಜಸೇವೆ, ಪತ್ರಿಕೋದ್ಯಮ, ಸಾಹಿತ್ಯ ಮೊದಲಾದ ವಲಯಗಳಲ್ಲಿ ಅಪಾರ ಸಾಧನೆಗೈದುನಾಡಿನಘನತೆಗಗನದೆತ್ತರಕ್ಕೆ ಏರಿಸಿದವರನ್ನು ಕಾರ್ಯಕ್ರಮದಲ್ಲಿಸನ್ಮಾನಿಸುತ್ತಿದೆ.
ಕರುನಾಡಿನ ನಡೆದಾಡುವ ದೇವರೆನಿಸಿರುವ ಶ್ರೀಸಿದ್ಧಗಂಗಾ ಮಠದಪರಮಪೂಜ್ಯ ಶ್ರೀ ಡಾ||ಶಿವಕುಮಾರ ಸ್ವಾಮೀಜಿಯವರಿಗೆ‘ಕನ್ನಡದಹೆಮ್ಮೆ’ಗೌರವವನ್ನು ಸಮರ್ಪಿಸಲಾಯಿತು. ಜೀಕನ್ನಡ ವಾಹಿನಿ ಶ್ರೀಮಠಕ್ಕೆ ತೆರಳಿ ಶ್ರೀಗಳ ಸನ್ನಿಧಾನದಲ್ಲೇಅವರಿಗೆ ಈ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು ಜೀಕನ್ನಡದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು. ವಾಹಿನಿಯಿಂದಇನ್ನಷ್ಟುಉತ್ತಮ ಕಾರ್ಯಕ್ರಮಗಳು ಬರಲಿ ಎಂಬ ಆಶಯ ವ್ಯಕ್ತಪಡಿಸಿದರು.
ಇದಲ್ಲದೆ ಹೆಮ್ಮೆಯ ಸಾಹಿತಿ, ಹೆಮ್ಮೆಯ ಪತ್ರಕರ್ತ ಸೇರಿದಂತೆ 19 ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ ಸಾಧಕರನ್ನು ಆಹ್ವಾನಿಸಿ, ಅಭಿನಂದಿಸಲಾಯಿತು. ಸಾಧಕರಿಗೆ, ಅವರಷ್ಟೆ ಸಾಧನೆ ಮಾಡಿದಗಣ್ಯರಿಂದಲೇ ಈ ಗೌರವ ಸಲ್ಲಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಕಾರ್ಯಕ್ರಮದಚಿತ್ರೀಕರಣ ಈಗಾಗಲೇ ಪೂರ್ತಿಗೊಂಡಿದ್ದು, ಮಾರ್ಚ್.17,18ರಂದುರಾತ್ರಿ 7.30ಕ್ಕೆ ಜೀಕನ್ನಡ ವಾಹಿನಿಯಲ್ಲಿಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಯಾರಿಗೆಲ್ಲ ಗೌರವ??
ನಿತ್ಯೋತ್ಸವದ ಕವಿ ನಿಸಾರ್‍ಅಹಮ್ಮದ್‍ಅವರಿಗೆ ಜನಪದ ಕವಿ, ಪದ್ಮಶ್ರಿ ಪುರಸ್ಕøತ ದೊಡ್ಡರಂಗೇಗೌಡರು‘ಹೆಮ್ಮೆಯಸಾಹಿತಿ’ ಪ್ರಶಸ್ತಿ ನೀಡಿ ಗೌರವಿಸಿದರು.
ವಿಜಯಕರ್ನಾಟಕ ಪತ್ರಿಕೆ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲೊಂದುಹೊಸ ಅಲೆ ಹುಟ್ಟುಹಾಕಿದ ವಿಶ್ವೇಶ್ವರ ಭಟ್ಟರಿಗೆ ನಾಡೋಜ ಪಾಟೀಲ್ ಪುಟ್ಟಪ್ಪನವರು‘ಹೆಮ್ಮೆಯಪತ್ರಕರ್ತ’ಗೌರವ ನೀಡಿ ಸನ್ಮಾಸಿದರು.
ಸಾವಿನಲ್ಲೂ ಮಾನವೀಯತೆ ಮರೆದುತನ್ನ ಕಣ್ಣುಗಳನ್ನು ದಾನ ನೀಡಿದ ಹರೀಶ್ ನಂಜಪ್ಪಅವರಿಗೆ ಹೆಮ್ಮೆಯ ಶ್ರೀಸಾಮಾನ್ಯ ಗೌರವ ನೀಡಲಾಯಿತು. ಹರೀಶ್ ನಂಜಪ್ಪ ತಾಯಿ ಗೀತಾ ಅವರು ಪಬ್ಲಿಕ್ ಟಿ.ವಿಯ ಎಚ್.ಆರ್.ರಂಗನಾಥ್‍ಅವರಿಂದ ಈ ಗೌರವ ಪಡೆದರು.
ಸಾಲು, ಸಾಲು ಮರಗಳನ್ನು ನೆಟ್ಟು ಹಸಿರಿಗೆ ಉಸಿರು ನೀಡಿದ ಸಾಲು ಮರದತಿಮ್ಮಕ್ಕನವರಿಗೆ, ಕನ್ನಡಚಿತ್ರರಂಗದ ಹೆಸರಾಂತ ನಟಿಲಕ್ಷ್ಮಿ‘ಹೆಮ್ಮೆಯಸಮಾಜಸೇವಕರು’ಪ್ರಶಸ್ತಿನೀಡಿ ಗೌರವಿಸಿದರು.
ನೈಸರ್ಗಿಕ ಕೃಷಿಯಲ್ಲಿ ಕ್ರಾಂತಿಯ ಹರಿಕಾರ ಕೋಲಾರದ ನಾರಾಯಣರೆಡ್ಡಿಯವರು ದುನಿಯಾ ವಿಜಯ್‍ ಅವರಿಂದ‘ಹೆಮ್ಮೆಯ ರೈತ’ಪ್ರಶಸ್ತಿ ಸ್ವೀಕರಿಸಿದರು.
ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆಗೈದ ರಾಜೇಶ್ವರಿ ಗಾಯಕ್‍ವಾಡ್ ಮತ್ತು ವೇದಾ ಕೃಷ್ಣಮೂರ್ತಿಅವರನ್ನು ನಟಿ ಲಕ್ಷ್ಮಿಅಮ್ಮ‘ಹೆಮ್ಮೆಯ ಕ್ರೀಡಾಪಟು’ಪ್ರಶಸ್ತಿಯೊಂದಿಗೆ ಗೌರವಿಸಿದರು.
ನಾಡಿಗೆ ಅನೇಕ ದಿಗ್ಗಜರನ್ನು ನೀಡಿದ ರಂಗಸಂಸ್ಥೆ ನೀನಾಸಂಗೆ ನವರಸನಾಯಕ ಜಗ್ಗೇಶ್‘ಹೆಮ್ಮೆಯ ರಂಗಸೇವೆ’ಪ್ರಶಸ್ತಿ ನೀಡಿದರು.
5 ರೂಪಾಯಿ ವೈದ್ಯರೆಂದೇ ಪ್ರಸಿದ್ಧರಾದ ಡಾ.ಶಂಕರೇಗೌಡ ಅವರನ್ನು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ‘ಹೆಮ್ಮೆಯ ವೈದ್ಯ’ ಬಿರುದಿನೊಂದಿಗೆ ಗೌರವಿಸಿದರು.
ಐಪಿಎಸ್ ಮಾಡಿದ ಮೊದಲ ಕನ್ನಡತಿ ಎಂಬ ಖ್ಯಾತಿಯ ರೂಪಾ ಮುದ್ಗಿಲ್‍ ಅವರಿಗೆ ವಿಜಯ್‍ರಾಘವೇಂದ್ರ ಅವರು ‘ಹೆಮ್ಮೆಯ ಸಾಧಕಿ’ ಗೌರವ ನೀಡಿದರು.
ರಾಜ್‍ಕುಮಾರ್‍ಚಿತ್ರದ ಮೂಲಕ ಕನ್ನಡಚಿತ್ರರಂಗದಲ್ಲಿ ಹೊಸದೊಂದು ಹವಾ ಸೃಷ್ಟಿಸಿದ ನಿರ್ದೇಶಕ ಸಂತೋಷ್‍ ಆನಂದರಾಮ್‍ಅವರಿಗೆ ಚಿತ್ರರಂಗದ ಹಿರಿಯ ನಿರ್ದೇಶಕ ಭಾರ್ಗವ ಅವರು‘ಹೆಮ್ಮೆಯ ನಿರ್ದೇಶಕ’ಗೌರವ ನೀಡಿದರು.
ರಾಜಕುಮಾರ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್‘ಹೆಮ್ಮೆಯ ಚಲನಚಿತ್ರ’ ಎಂಬ ಗೌರವ ನೀಡಿದರು.
ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್‍ ಅವರಿಗೆ ರವಿಚಂದ್ರನ್ ‘ಹೆಮ್ಮೆಯ ನಾಯಕನಟ’ ಗೌರವ ನೀಡಿ ಅಭಿನಂದಿಸಿದರು.
ರಶ್ಮಿಕಾ ಮಂದಣ್ಣ ಅವರಿಗೆ ರಕ್ಷಿತ್ ಶೆಟ್ಟಿ ‘ಹೆಮ್ಮೆಯ ನಟಿ’ ಎಂಬ ಗೌರವ ಸಲ್ಲಿಸಿದರು.
ಕ್ರೇಜಿಸ್ಟಾರ್‍ರವಿಚಂದ್ರನ್‍ ಅವರ ಈವರೆಗಿನ ಸಿನಿಮಾರಂಗದ ಸಾಧನೆಗಾಗಿ "ಹೆಮ್ಮೆಯ ಚಿತ್ರಬ್ರಹ್ಮ’ ಗೌರವ ನೀಡಲಾಯಿತು. ರವಿಚಂದ್ರನ್‍ ಮಕ್ಕಳಾದ ಮನೋರಂಜನ್, ವಿಕ್ರಂ ಅವರು ಈ ಗೌರವ ನೀಡಿದ್ದು ವಿಶೇಷವಾಗಿತ್ತು.
ನಟರಮೇಶ್‍ಅರವಿಂದ್‍ ಅವರಿಗೆ ಚಿತ್ರನಟ ಯಶ್ ‘ಹೆಮ್ಮೆಯ ಸ್ಫೂರ್ತಿ’ ಗೌರವ ನೀಡಿ ಗೌರವಿಸಿದರು.
ವಿ.ನಾಗೇಂದ್ರ ಪ್ರಸಾದಅವರಿಗೆ ಸಾಹಿತಿ, ಬರಹಗಾರ ಜೋಗಿ ಹಾಗೂ ನಟಿ ಸಾನ್ವಿ ಶ್ರೀವಾಸ್ತವ್ ‘ಹೆಮ್ಮೆಯ ಚಿತ್ರಸಾಹಿತಿ’ ಗೌರವ ಸಲ್ಲಿಸಿದರು.
ನಾದಬ್ರಹ್ಮ ಹಂಸಲೇಖ ಹೆಸರಾಂತ ಗಾಯಕ ವಿಜಯ್‍ಪ್ರಕಾಶ್‍ ಅವರಿಗೆ ‘ಹೆಮ್ಮೆಯ ಧ್ವನಿ’ ಗೌರವನೀಡಿ ಗೌರವಿಸಿದರು.
ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಅವರಿಗೆ ನಟ ಶ್ರೀಮುರುಳಿ ‘ಹೆಮ್ಮೆಯ ಸಂಗೀತಗಾರ’ ಗೌರವ ನೀಡಿ ಗೌರವಿಸಲಾಯಿತು.
ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್.ಬಿ.ಶೆಟ್ಟಿ ಅವರಿಗೆ ಯೋಗ್‍ರಾಜ್ ಭಟ್‍ ಅವರು ‘ಹೆಮ್ಮೆಯ ಹೊಸಪ್ರತಿಭೆ’ ಎಂಬ ಗೌರವ ನೀಡಿದರು.
ಜೀ ಕನ್ನಡ ವಾಹಿನಿಯೇ ಸಿದ್ಧಪಡಿಸಿದ ಕರುನಾಡಿನ ವಿಶೇಷತೆಯನ್ನು ಬಿಂಬಿಸುವ ‘ಹೆಮ್ಮೆಯಕನ್ನಡಿಗ’ವಿಶೇಷಗೀತೆಗೆ ನಿರೂಪಕಿ ಅನುಶ್ರಿ ನಾಡಿನ ಅನೇಕ ಕಲಾತಂಡಗಳೊಂದಿಗೆ ಹೆಜ್ಜೆಹಾಕಿದರು. ನಿರುಪಮಾ ರಾಜೇಂದ್ರ ಅವರ ನೃತ್ಯ, ಪ್ರವೀಣ್‍ಡಿ.ರಾವ್ ಸಂಗೀತ ತಂಡದೊಂದಿಗೆ ವಿಜಯ್ ಪ್ರಕಾಶ್, ಸಂಗೀತ ಕಟ್ಟಿ, ಫಯ್ಯಾಜ್‍ಖಾನ್‍ ಅವರ ಗಾಯನ, ನಟ ದುನಿಯಾ ವಿಜಯ್, ರಂಗಾಯಣರಘು, ಶರಣ್, ನಟಿ ಸಾನ್ವಿ ಶ್ರೀವಾಸ್ತವ್ ಸೇರಿದಂತೆ ಅನೇಕ ಚಿತ್ರ, ಧಾರಾವಾಹಿ ನಟ, ನಟಿಯರು ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ.
ರಮೇಶ್‍ಅರವಿಂದ್ ನಿರೂಪಣೆಯೊಂದಿಗೆ ಮನರಂಜನೆಯ ಹಬ್ಬದೂಟವನ್ನು ಹೊಂದಿರುವ ‘ಹೆಮ್ಮೆಯಕನ್ನಡಿಗ’ಮಾರ್ಚ್.17,18 ರಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
#Cineloka #HemmeyaKannadiga #ZeeKannada

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top