tarakaasura

ttm

adweb

udgharsha

 

ಐಕೇರ್ ಮೂವೀಸ್ ಲಾಂಛನದಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ “ಅಸತೋಮ ಸದ್ಗಮಯ” ಕನ್ನಡ ಚಲನಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಸೆನ್ಸಾರ್ ಹಂತಕ್ಕೆ ತಲುಪಿದೆ. “ಅಸತೋಮ ಸದ್ಗಮಯ” ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ನೋಡಲೇಬೆಕಾದಂತಹ ಸಿನೆಮಾ ಎಂಬುದು ನಿರ್ದೇಶಕರ ಅಭಿಪ್ರಾಯ.

 

ಸದ್ಯದಲ್ಲೆ ಈ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿಜಯಪ್ರಕಾಶ್, ಅನುರಾಧ ಭಟ್, ಪದ್ಮಲತಾ ಅವರ ಕಂಠಗಳಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎನ್ನುತ್ತದೆ ಚಿತ್ರತಂಡ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ನಿರ್ಮಾಪಕರು.

 

 

ಈ ಚಿತ್ರದಲ್ಲಿ ರಾಧಿಕಾ ಚೇತನ್ ಜೊತೆಗೆ ಕಿರಣ್ ರಾಜ್ ಹಾಗೂ ಲಾಸ್ಯ ನಾಗರಾಜ್ ಅವರು ಮುಖ್ಯಭೂಮಿಕೆಯಲ್ಲಿದ್ದು, ರಾಜೇಶ್ ವೇಣೂರ್‍ರವರ ನಿರ್ದೇಶನವಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್ ಇದೆ ಎನ್ನುವ ಹೊತ್ತಿನಲ್ಲಿ ಕಿಚ್ಚ ಸುದೀಪ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಭಾವನಾ,ಧನಂಜಯ ನಟನೆಯ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

 

ಬಿಡುಗಡೆಯಾದ ದಿನದಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಟಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡು ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಅದರ ವಿಮರ್ಷೆ ಬರೆದಿದ್ದಾರೆ.

 

ಸೂರಿಯವರ ಡಿಫ್ರೆಂಟ್ ಸ್ಕ್ರೀನ್ ಪ್ಲೇ ಮೆಚ್ಚಿಕೊಂಡಿರುವ ಸುದೀಪ್, ಸೂರಿ ಇಟ್ಟಿರುವ ಹೆಸರುಗಳಿಗೂ ಅವರು ಖುಷಿ ಪಟ್ಟಿದ್ದಾರೆ. ಇಂತಹ ಚಿತ್ರ ಸೂರಿಯಿಂದ ಮಾತ್ರ ಸಾಧ್ಯ, ಈ ಚಿತ್ರಕ್ಕೆ ನಿರ್ದೇಶಕರು ಆರಿಸಿಕೊಂಡಿರುವ ಲೊಕೇಶನ್ ಸಹ ಬಹಳ ವಿಶೇಷವಾಗಿದೆ ಎಂದಿರುವ ಅವರು ಶಿವರಾಜ್‌ಕುಮಾರ್ ಅವರ ಎನರ್ಜಿ ಮತ್ತು ಅಭಿನಯಕ್ಕೆ ಫಿದಾ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆೆ. ಧನಂಜಯ ಅವರ ಸ್ಕ್ರೀನ್ ಅಪಿಯರೆನ್ಸ್ ಹಾಗೂ ಪಾತ್ರ ಎರಡು ತುಂಬಾ ಇಷ್ಟ ಪಟಿರುವ ಕಿಚ್ಚ, ವಸಿಷ್ಠ ಸಿಂಹ ಅವರ ಧ್ವನಿಯ ಬಗ್ಗೆ ಮಾತನಾಡಿದ್ದಾರೆ.

 

ಸಂಗೀತದ ಮೂಲಕ ಫೇಮಸ್ ಆಗಿರುವ ಚರಣ್‌ರಾಜ್ ಅವರಿಗೂ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಒಟ್ಟಾಗಿ ಟಗರು ಚಿತ್ರವನ್ನು ಸುದೀಪ್ ಇಷ್ಟಪಟ್ಟಿದ್ದಾರೆ.

ಹಿಂದಿಯ ಕ್ವೀನ್‌ ಚಿತ್ರದ ಕನ್ನಡ ಅವತರಿಣಿಕೆ “ಬಟರ್‌ಫ್ಲೈ “‌ ಈಗಾಗಲೇ ಪ್ಯಾರೀಸ್‌ನಲ್ಲಿ ಶೂಟಿಂಗ್‌ ಮುಗಿಸಿ ವಾಪಾಸ್ಸಾಗಿದೆ. ಈಗ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂ1 ಯಾರಿ ವಿತ್‌ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

 

ನಂ 1 ಯಾರಿ ವಿತ್‌ ರಾಣಾ ಶೋದ ಕನ್ನಡ ಅವತರಿಣಿಕೆಯಾದ ಈ ಕಾರ್ಯಕ್ರಮದಲ್ಲಿ ಈಗಾಗಲೇ ಉಪೇಂದ್ರ, ಶ್ರುತಿ ಹರಿಹರನ್‌, ಚಿಕ್ಕಣ್ಣ, ಶರಣ್‌ ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದ್ದಾರೆ.

 

ಈಗ ಬಟರ್‌ ಪ್ಲೈ ಚಿತ್ರದ ನಾಯಕಿ ಪಾರುಲ್‌ ಯಾದವ್‌ ನಿರ್ದೇಶಕ ರಮೇಶ್‌ ಅರವಿಂದ್‌ ಸೇರಿದಂತೆ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಕ ಶಿವರಾಜ್‌ಕುಮಾರ್‌ ಅವರೊಂದಿಗೆ ಮಸ್ತಿ ಮಾಡಿದ್ದಾರೆ.

ಕಳೆದವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಟಗರು' ಚಿತ್ರದಲ್ಲಿನ ಕೆಲ ಪಾತ್ರಗಳು ಸಿನಿಮಾದ ಟೈಟಲ್‌ಗಳಾಗಿವೆ.
 
ಟಗರು ಚಿತ್ರದಲ್ಲಿ ಡಾಲಿ, ಕಾಕ್ರೋಚ್‌, ಚಿಟ್ಟೆ, ಬೇಬಿ ಕೃಷ್ಣ, ಕಾನ್‌ಸ್ಟೇಬಲ್‌ ಸರೋಜ ಸೇರಿದಂತೆ ಸಾಕಷ್ಟು ವಿಶೇಷ ಕ್ಯಾರೆಕ್ಟರ್‌ಗಳಿದ್ದವು. ಇವೆಲ್ಲವೂ ಈಗ ಸಿನಿಮಾದ ಟೈಟಲ್‌ಗಳಾಗಿ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್‌ ಆಗಿವೆಯಂತೆ.
 
ಡಾಲಿ ಟೈಟಲ್‌ ದೊಡ್ಮನೆ ಹುಡ್ಗ ನಿರ್ಮಾಪಕ ಗೋವಿಂದು ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್‌ ಆದರೆ, ಚಿಟ್ಟೆ ‘ಕಾಕ್ರೋಚ್‌’ ಕೂಡ ಬೇರೊಬ್ಬ ನಿರ್ಮಾಪಕರು ರಿಜಿಸ್ಟರ್‌ ಮಾಡಿಕೊಂಡಿದ್ದಾರೆ.
 
ಡಾಲಿಯ ಜೊತೆಯಲ್ಲಿ ಡಾಲಿಯ ಡಾರ್ಲಿಂಗ್‌ ಕಾನ್‌ಸ್ಟೇಬಲ್‌ ಸರೋಜ ಹೆಸರು ಸಹ ಈಗಾಗಲೇ ರಿಜಿಸ್ಟರ್‌ ಆಗಿದೆ. ಇನ್ನು ಡಾಲಿಯ ಬಾಸ್‌ ಬೇಬಿ ಕೃಷ್ಣ ಟೈಟಲ್‌ನ್ನು ಟಗರು ಚಿತ್ರದಲ್ಲಿ ಅದೇ ಪಾತ್ರದಲ್ಲಿ ನಟಿಸಿದ್ದ ದೇವನಾಥ ರಿಜಿಸ್ಟರ್‌ ಮಾಡಿಸಿದ್ದಾರಂತೆ. ಸೂರಿ ಸಿನಿಮಾದ ಪಾತ್ರಗಳು ತೆರೆ ಮೇಲೆ ಬಂದರೆ ಅಚ್ಚರಿಯಿಲ್ಲ.

 

ಟಗರು ಚಿತ್ರದ ಚಿಟ್ಟೆ ವಸಿಷ್ಠ ಸಿಂಹ ಈಗ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದು, ಅದರ ನಿರ್ದೇಶಕರು ಫನೀಶ್‌.

 

ಫನೀಶ್‌ ಈ ಹಿಂದೆ ಶಿವರಾಜ್‌ಕುಮಾರ್‌ ನಟನೆಯ ಅಂದರ್‌ ಬಾಹರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಮ್ಮ ಸಮಾಜಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ್ರೂ ಅಸಮಾಧಾನ, ವ್ಯವಸ್ಥೆಯ ಮೇಲೆ ಕೋಪ, ಎಲ್ಲವೂ ಇದೆ. ಆದರೆ ಜೀವನ ಮಾತ್ರ ನಡೆಯುತ್ತಲೇ ಇದೆ. ಅಂತಾರಾಷ್ಟ್ರೀಯ ಬೆದರಿಕೆಗಳು ಸಾರ್ವಕಾಲಿಕ ಗಂಭೀರ ಸಮಸ್ಯೆಯ ಪರಿಧಿಯೊಳಗಿನ ಒಂದು ವಿಷಯವನ್ನು ಎತ್ತಿಕೊಂಡು ಅದರ ಬಗ್ಗೆ ಬೆಳಕು ಚೆಲ್ಲುವಂತೆ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರಂತೆ ಫನೀಶ್‌.

 

ಈ ಚಿತ್ರದಲ್ಲಿ ಸದ್ಯಕ್ಕೆ ವಸಿಷ್ಠ ಸಿಂಹ ಮತ್ತು ತಬಲಾ ನಾಣಿ ಇಬ್ಬರು ಆಯ್ಕೆ ಯಾಗಿದ್ದಾರೆ. ಉಳಿದ ಕಲಾವಿದರ ಆಯ್ಕೆ ನಡೆಯಬೇಕಿದೆ.

 

ಇಷ್ಟು ದಿನ ಗಾಯಕರಾಗಿ ಚಿರಪರಿಚಿತರಾಗಿದ್ದ ವಿಜಯ್‌ ಪ್ರಕಾಶ್‌ ಎರಡನೇ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸತೀಶ್‌, ಜನಾರ್ಧನ್‌, ಶಶಾಂಕ್‌ ಅನುಗ್ರಹ ಎಂಟರ್‌ಪ್ರೈಸಸ್‌ ಎಂಬ ಬ್ಯಾನರ್‌ನಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಛತ್ತೀಸಘಡದ ಕಾಡಿನಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ಫನೀಶ್‌ ತಯಾರಿ ನಡೆಸಿದ್ದಾರೆ.

 

ಸಂಚಾರಿ ವಿಜಯ್‌ ನಟನೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ 6 ನೇ ಮೈಲಿಯಲ್ಲಿ ಒಂದೇ ಒಂದು ಹಾಡಿದ್ದು ಅದಕ್ಕೆ ಗ್ರ್ಯಾಮಿ ಅವಾರ್ಡ್‌ ಪುರಸ್ಕೃತರು ಡೆತ್‌ಮೆಟಲ್‌ ಮಾದರಿಯ ಸಂಗೀತ ನೀಡಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ.ಇತ್ತೀಚೆಗೆ ಈ ಹಾಡಿನ್ನು ಚಿತ್ರತಂಡ ಬಿಡುಗಡೆ ಮಾಡಿತು.

 

ಈ ಚಿತ್ರದ ಕಥೆ ಬರೆಯುವಾಗ ಸಿನಿಮಾಗೆ ಹಾಡಿನ ಅಗತ್ಯ ಇರಲಿಲ್ಲ ಎಂದುಕೊಂಡಿದ್ದರು ನಿರ್ದೇಶಕ ಸೀನಿ. ಆದರೆ ಸಂಗಿತ ನಿರ್ದೇಶಕ ಸಾಯಿ ಕಿರಣ್‌ ಚಿತ್ರದಲ್ಲಿ ಡೆತ್‌ ಮೆಟಲ್‌ ಸಂಗೀತ ಇರುವ ಹಾಡೊಂದು ಇದ್ದರೆ ಚೆಂದ. ಕನ್ನಡದಲ್ಲಿ ಈವರೆಗೂ ಡೆತ್‌ಮೆಟಲ್‌ ಮ್ಯೂಸಿಕ್‌ ಬಂದಿಲ್ಲ ಎಂದು ಹೇಳಿದರಂತೆ. ಆಗ ನಿರ್ದೇಶಕ ಸೀನಿ ಕೂಡ ಈ ಮೂಲಕ ನಿರ್ಮಾಪಕ ಶೈಲೇಶ್‌ಕುಮಾರ್‌ಗೆ ಒಳ್ಳೆ ಗಿಫ್ಟ್‌ ಕೊಡೊಣ ಎಂದು ನಿರ್ಧಿರಿಸಿದ್ದಾರೆ. ಆಗ ಹುಟ್ಟಕೊಂಡಿದ್ದೆ '6 ನೇ ಮೈಲಿಯ ಟೈಟಲ್‌ ಟ್ರ್ಯಾಕ್‌'. ಈ ಹಾಡನ್ನು ಸಾಯಿಕಿರಣ್ ಕಂಪೋಸ್‌ ಮಾಡಿದ್ದಾರೆ. ಇವರ ಕಂಪೋಸಿಂಗ್‌ ಗೆ ಸೌಂಡ್‌ ಎಂಜಿನಿಯರ್‌ ಮತ್ತು ಮಾಸ್ಟರಿಂಗ್‌ ಎಂಜಿನಿಯರ್‌ ಕೆಲಸ ಮಾಡಿರುವ ಇಬ್ಬರೂ ಗ್ರ್ಯಾಮಿ ಅವಾರ್ಡ್‌ ವಿನ್ನರ್‌ ಆಗಿದ್ದಾರೆ.

 

ಈ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ವಸಿಷ್ಠ ಸಿಂಹ ಧ್ವನಿ ಈ ಹಾಡಿಗೆ ಸೂಟ್‌ ಆಗುತ್ತದೆ ಎಂಬ ಕಾರಣಕ್ಕೆ ಅವರ ಕೈಯಲ್ಲೇ ಹಾಡಿಸಿದ್ದಾರೆ. ಆರ್‌ಜೆ ನೇತ್ರಾ, ಸುದರ್ಶನ್‌, ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನ್ಯೂರೋ ಸರ್ಜನ್‌ ಡಾ. ಶೈಲೇಶ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ.

 

ಶಂಕರ್ & ಅಸೋಸಿಯೆಟ್ಸ್ ಲಾಂಛನದಲ್ಲಿ ಶಂಕರ್ ಅವರು ನಿರ್ಮಿಸಿರುವ `3000`ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಬ್ಬುನಿ ಕೀರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಸಂಗೀತ ನೀಡಿದ್ದಾರೆ.

ಮನುಕೃಷ್ಣನ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ ಹಾಗೂ ರಬ್ಬುನಿ ಕೀರ್ತಿ, ಶಿವಕಾಂತ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಗೌರೀಶ್ ಅಕ್ಕಿ, ರಬ್ಬುನಿ ಕೀರ್ತಿ, ಸುಹಾನ್, ಪ್ರಸಾದ್, ಮಹಂತೇಶ್, ಸ್ವಾತಿ, ಉಜ್ಜಾಲ, ಕಾವ್ಯ, ಪಲ್ಲವಿ ಮುಂತಾದವರಿದ್ದಾರೆ.

ಬಾಲಿವುಡ್‌ನಲ್ಲಿ ಆರ್‌ಜಿವಿ ಸರ್ಕಾರ್‌ ಬಿಡುಗಡೆಯಾಗಿ ಯಶಸ್ವಿಯೂ ಆಯಿತು. ಈಗ ಕನ್ನಡದಲ್ಲಿಯೂ ಸರ್ಕಾರ್‌ ಎನ್ನುವ ಚಿತ್ರ ಬರುತ್ತಿದೆ.

ಇದು ಹಿಂದಿಯ "ಸರ್ಕಾರ್‌"ನ ರಿಮೇಕ್‌ ಅಲ್ಲ. ಇದೊಂದು ಹೊಸಬರ ಪ್ರಯತ್ನ. ಇನ್ನೇನು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಮಂಜು ಪ್ರೀತಂ ಎಂಬ ಯುವಕ ನಿರ್ದೇಶನ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಜಗದೀಶ್‌ ಅಲಿಯಾಸ್‌ ಜಗ್ಗಿ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ.
ಮಂಜು ಪ್ರೀತಂಗೆ ಇದು ಮೊದಲ ಚಿತ್ರವಾದರೂ, ಅವರು ಈಗಾಗಲೇ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಗೊಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕಟ್ಟಾಭಿಮಾನಿಯಾಗಿದ್ದಾರೆ ಮಂಜುಪ್ರೀತಂ. ಪಾರ್ವತಿ ಚಿತ್ರದ ನಿರ್ಮಾಪಕರು. 'ಸರ್ಕಾರ್‌' ಅಂದರೆ, ಇದು ರೌಡಿಸಂ ಅಥವಾ ರಾಜಕೀಯ ಬ್ಯಾಗ್ರೌಂಡ್‌ ಇರುವ ಸಿನಿಮಾ ಎಂದುಕೊಳ್ಳುತ್ತಾರೆ ಆದರೆ ಇದು ಪಕ್ಕಾ ಲವ್‌ ಸ್ಟೋರಿ. ಜತೆಗೆ ಮಾಸ್‌ ಎಲಿಮೆಂಟ್ಸ್‌ ಸೇರಿಕೊಂಡು ಎಂಟರ್‌ಟೈನ್‌ಮೆಂಟ್‌ ಕೋಡುವ ಸಿನಿಮಾವಾಗಿದೆ. ಲೇಖಚಂದ್ರ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಸತೀಶ್‌ ಆರ್ಯನ್‌ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ. ನಾಗೇಂದ್ರಪ್ರಸಾದ್‌, ಮಳವಳ್ಳಿ ಸಾಯಿಕೃಷ್ಣ ಮತ್ತು ಸಂತೋಷ್‌ನಾಯ್ಕ ಗೀತೆ ರಚಿಸಿದ್ದಾರೆ. ರಾಜ್‌ಪುಟಿ ಅರುಣ್‌ಕುಮಾರ್‌ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದಲ್ಲಿ ಶೋಭರಾಜ್‌ ಸತ್ಯಜಿತ್‌, ಕೀರ್ತಿರಾಜ್‌, ರಮೇಶ್‌ ಪಂಡಿತ್‌ ಮತ್ತಿತರರು ನಟಿಸಿದ್ದಾರೆ.

ಚಿತ್ರ ನಾಳೆ ರಾಜ್ಯದೆಲ್ಲೆಡೆ ತೆರೆ ಬರುತ್ತಿದೆ. ವಿಜಯ್ ಸಿನಿಮಾಸ್ ಚಿತ್ರವನ್ನು ವಿತರಿಸುತ್ತಿದ್ದಾರೆ.

#Sarkar #Cineloka

ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಹರಿವು ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಂಸೂರೆ ಈಗ ಮಹಿಳಾ ಪ್ರಧಾನ 'ನಾತಿಚರಾಮಿ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಹೆಣ್ಣು ತನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹೇಗೆ ನಿರ್ವಹಿಸುತ್ತಾಳೆ ಎಂಬ ಕಥೆಯಿದೆ. ಇತ್ತೀಚೆಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ, ಸಿನಿಮಾದ ಬಗ್ಗೆ ಮಾಹಿತಿ ನೀಡಿತು.
ಈ ಚಿತ್ರದಲ್ಲಿ ಟೆಕ್ಕಿಯೊಬ್ಬಳು ವೃತ್ತಿಯಲ್ಲಿ ಯಶಸ್ಸು ಕಂಡು ತನ್ನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದ ಹಾಗೆ ಅದನ್ನು ಹೇಗೆ ನಿಭಾಯಿಸುವುದು ಎಂದು ಗೊಂದಲದಲ್ಲಿರುತ್ತಾಳೆ. ಇದೇ ಸಮಯದಲ್ಲಿ ತನ್ನ ಪತಿ ಮೃತಪಟ್ಟಿರುತ್ತಾನೆ. ವೃತ್ತಿ ಜೀವನ ಮೇಲೆ ಹೋದಂತೆ ವೈಯಕ್ತಿ ಕ ಜೀವನ ಕುಸಿಯುತ್ತಿರುತ್ತದೆ. ಇದೇ ಸಿನಿಮಾದ ಕಥೆಯಾಗಿದೆ. ಇಂತಹ ಸಾಕಷ್ಟು ಘಟನೆಗಳು ಸಾಕಷ್ಟು ಜನರ ಲೈಫ್‌ನಲ್ಲಿ ನಡೆದಿರುತ್ತದೆ. ನೋಡುಗರು ಈ ಕಥೆಯನ್ನು ರಿಲೇಟ್‌ ಸಹ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ನಿರ್ದೇಶಕ ಮಂಸೂರೆ.
ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಬೆಂಗಳೂರಿನಲ್ಲೇ ನಡೆಯುತ್ತದೆ. ಶ್ರುತಿ ಹರಿಹರನ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರಣ್ಯ, ಅಶ್ವಿನ್‌, ಗ್ರೀಷ್ಮಾ, ಬಾಲಾಜಿ ಮನೋಹರ್‌, ಸಂಚಾರಿ ವಿಜಯ್‌ ನಟಿಸುತ್ತಿದ್ದಾರೆ.
ಲೇಖಕಿ ಸಂಧ್ಯಾರಾಣಿ ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಕಂಟ್ರ್ಯಾಕ್ಟರ್ಗಳಾಗಿರುವ ಜಗನ್ಮೋಹನ ರೆಡ್ಡಿ, ಶಿವಕುಮಾರ್‌ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಧನಂಜಯ ಸ್ಯಾಂಡಲ್‌ವುಡ್‌ನ ಒಬ್ಬ ಪ್ರತಿಭಾವಂತ ನಟ. ಈಗಾಗಲೇ ಸುಮಾರು 9 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದಾವು ಅವರಿಗೆ ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಈಗ ಬಿಡುಗಡೆಯಾಗಿರುವ 'ಟಗರು' ಚಿತ್ರದಲ್ಲಿ ಧನಂಜಯ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಜನ ಹುಚ್ಚೆದ್ದು ಆ ಪಾತ್ರವನ್ನು ಇಷ್ಟಪಡುತ್ತಿದ್ದಾರೆ.

 

ಧನಂಜಯ ಅವರ ಹಿಂದಿನ ಯಾವುದೋ ಚಿತ್ರಗಳನ್ನು ಜನರು ಸ್ವೀಕರಿಸಿರಲಿಲ್ಲ. ಒಂದು ಗೆಲುವಿಗಾಗಿ ಕಾಯುತ್ತಿದ್ದ ಧನಂಜಯಗೆ 'ಟಗರು' ಮೂಲಕ ಆ ಜಯ ಸಿಕ್ಕಿದೆ ಎಂದು ಹೇಳಬಹುದು.

 

ಚಿತ್ರದಲ್ಲಿ ಧನಂಜಯ ಶಿವರಾಜ್‌ಕುಮಾರ್‌ ಅವರಿಗೆ ಟಕ್ಕರ್‌ ಕೊಡುವ ವಿಲನ್‌ ಆಗಿ ಯಾವ ಮಟ್ಟಿಗೆ ಮಿಂಚಿದ್ದಾರೆ ಎಂದರೆ, ಸ್ವತಃ ಶಿವರಾಜ್‌ಕುಮಾರ್‌ ಕರೆ ಮಾಡಿ ಅವರ ಪರ್ಫಾಮೆನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಜತೆಗೆ ಚಿತ್ರ ನೋಡಿದ ಜನರು ಡಾಲಿಯನ್ನು ಮನೆಗೆ ಮತ್ತು ತಮ್ಮ ಮನಸ್ಸಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

 

ನಾಯಕನಾಗಿ ಧನಂಜಯ ಚಿತ್ರರಂಗಕ್ಕೆ ಎಂಟ್ರಿಯಾದಗ ಜನ ಅವರಿಗೆ ವೆಲ್‌ಕಮ್‌ ಬೋರ್ಡ್‌ ಹಾಕಿ ರಿಸೀವ್‌ ಮಾಡಿಕೊಂಡಿದ್ದರು ಈಗ ಮತ್ತೆ ಖಳನಾಗಿಯೂ ಬಾಚಿ ತಬ್ಬಿಕೊಂಡಿದ್ದಾರೆ.

 

ಟಗರು ಚಿತ್ರದಲ್ಲಿ ಧನಂಜಯ ನೀಲಿ ಕಣ್ಣಿನ ಖಳನಟನಾಗಿ ಅಬ್ಬರಿಸಿದ್ದಾರೆ. ಇಡೀ ಚಿತ್ರರಂಗ ಧನಂಜಯ ಪರ್ಫಾಮೆನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಧನಂಜಯ ದರ್ಶನ್‌ ಅವರ ಎದುರು ನಟಿಸಲು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಸೂರಿ ಡಾಲಿಯ ಮೂಲಕ ಧನಂಜಯನಲ್ಲಿದ್ದ ನಿಜ ನಟನನ್ನು ಹೊರಗೆ ತಂದಿದ್ದಾರೆ.

 

ಈಗಾಗಲೇ ರಾಜ ಲವ್ಸ್ ರಾಧೆ ಎಂಬ ಚಿತ್ರವನ್ನು ತೆರೆಗೆ ಸಿದ್ದಪಡಿಸಿದ ತಂಡದಿಂದ ಈಗ ಮತ್ತೊಂದು ಚಿತ್ರ ಆರಂಭವಾಗಿದೆ. ಒಂದು ಚಿತ್ರ ಮುಗಿದು ಅದು ಬಿಡುಗಡೆಯಾಗುವ ಮೊದಲೇ ಮತ್ತೊಂದು ಚಿತ್ರವನ್ನು ಪ್ರಾರಂಭಿಸುವುದು ತುಂಬಾ ವಿರಳ. ಅದಿಲ್ಲಿ ನಡೆದಿದೆ. ಎಂ.ರಾಜಶೇಖರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಸಾರಥ್ಯದಲ್ಲಿ ತಯಾರಾಗುತ್ತಿರುವ 'ಪರದೇಸಿ c/o ಲಂಡನ್' ಎಂಬ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

 

ಮಾಜಿ ಸಚಿವ ಜನಾರ್ಧನ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದರು. ಈ ಚಿತ್ರದ ನಾಯಕಿ ಹಾಗೂ ನಿರ್ಮಾಪಕರನ್ನು ಬಿಟ್ಟರೆ ಉಳಿದವರೆಲ್ಲರೂ ರಾಜ ರಾಧೆ ಚಿತ್ರದಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ನಾಯಕ ವಿಜಯ ರಾಘವೇಂದ್ರ ಜೊತೆ ನಾಯಕಿಯರಾಗಿ ಡ್ಯುಯೆಟ್ ಹಾಡಲು ಈ ಬಾರಿ ಇಬ್ಬರು ನಾಯಕಿಯರಿದ್ದಾರೆ. ಪೂಜಾ ಹಾಗೂ ಸ್ನೇಹ. ಪೂಜಾ ಈಗಾಗಲೇ ಜಾನಕಿರಾಮ ಸೇರಿ ಒಂದೆರಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸ್ನೇಹಾಗೆ ಚಿತ್ರರಂಗ ಹೊಸದು. ವೀರಸಮರ್ಥ ಅವರ ಸಂಗೀತ ಸಂಯೋಜನೆಯಲ್ಲಿ 4 ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕವಿರಾಜ್, ನಾಗೇಂದ್ರ ಪ್ರಸಾದ್ ಹಾಗೂ ಪತ್ರಕರ್ತ ವಿಜಯ ಭರಮಸಾಗರ ಸಾಹಿತ್ಯ ರಚಿಸಿದ್ದಾರೆ. ಹಾಸ್ಯನಟ ತಬಲಾನಾಣಿ ಅಭಿನಯದ 101ನೇ ಚಿತ್ರವಿದು. ಚಿದಾನಂದ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಬಿ. ಬದರೀನಾರಾಯಣ ಈ ಚಿತ್ರದ ನಿರ್ಮಾಪಕರು.

 

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಎಂ. ರಾಜಶೇಖರ್ ಇದೊಂದು ಹಾಸ್ಯದ ಜೊತೆಗೇ ನಡೆಯುವ ಎಮೋಷನಲ್ ಫ್ಯಾಮಿಲಿ ಡ್ರಾಮಾ. ದಿಕ್ಕು ದಿವಾಳಿ ಇಲ್ಲದವನನ್ನು ಅಲ್ಲದೆ ಹೊರದೇಶದಿಂದ ಬಂದವನನ್ನು ಪರದೇಸಿ ಎನ್ನುತ್ತಾರೆ. ನಮ್ಮ ಚಿತ್ರದಲ್ಲಿ ಆ ಎರಡೂ ಪದಗಳಿಗೂ ಅರ್ಥವಿದೆ. ಯಾವುದೇ ಸಂಬಂಧಗಳು ಇಲ್ಲದೇ ಇರುವವನನ್ನು ಪರಿಸ್ಥಿತಿ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಆತ ಯಾರು, ಏನು ಅನ್ನೋದೇ ಚಿತ್ರದ ಕಥೆ. ರಾಧೆ ಚಿತ್ರದಲ್ಲಿ ಕ್ಯಾಮೆರಾ ಕೆಲಸ ಮಾಡಿದ್ದ ಚಿದಾನಂದ್ ಮತ್ತೆ ಜೊತೆಯಾಗಿದ್ದಾರೆ. ನಿರ್ಮಾಪಕರು ಸಿರಗುಪ್ಪದವರು. ನನ್ನ ಕ್ಲಾಸ್‍ಮೆಟ್, ಇದೇ ಮೊದಲಬಾರಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿಕೊಂಡರು.

 

ನಾಯಕ ವಿಜಯ ರಾಘವೇಂದ್ರ ಮಾತನಾಡಿ ಈ ಥರದ ಟೈಟಲ್ ಇರೋ ಸಿನಿಮಾದಲ್ಲಿ ನಾನು ಕೆಲಸ ಮಾಡಿದ್ದಿಲ್ಲ, ಪರದೇಸಿ ಏನು ಅಂತ ಹೇಳೋದೇ ಈ ಸಿನಿಮಾ ಎಂದು ಹೇಳಿದರು. ಚಿತ್ರದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದ ವಿಜಯ ಭರಮಸಾಗರ ಮಾತನಾಡಿ ಮತ್ತೊಮ್ಮೆ ಅದೇ ಟೀಮ್ ಜೊತೆ ಕೆಲಸ ಮಾಡಲು ಕಾರಣ ರಾಜ ಲವ್ಸ್ ರಾಧೆ ಸಿನಿಮಾ. ಬರುವ ಮಾರ್ಚ್ 5 ರಿಂದ ಆರಂಭಿಸಿ ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸುವ ಪ್ಲಾನ್ ಇದೆ. ಚಿತ್ರದಲ್ಲಿ ಮಾಮೂಲಿ ಸಂಭಾಷಣೆ ಇರುತ್ತದೆ. ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ ಎಂದು ಹೇಳಿದರು.

 

ಸಾಕಷ್ಟು ನೈಜ ಘಟನೆಗಳು ಸಿನಿಮಾವಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ ಪ್ರೀತಿಯ ರಾಯಭಾರಿ.

ಯುವ ನಿರ್ದೇಶಕ ಮುತ್ತು ನಂದಿ ಬೆಟ್ಟದಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಪ್ರೀತಿಯ ರಾಯಭಾರಿ ಸಿನಿಮಾ ಮಾಡಿದ್ದಾರೆ.


ಪ್ರೇಮಿಗಳಿಬ್ಬರು ಪಡುವ ಯಾತನೆಯನ್ನು ಇಟ್ಟುಕೊಂಡು ಮುತ್ತು ಸಿನಮಾ ಮಾಡಿದ್ದಾರೆ. ‘ನಂದಿ ಬೆಟ್ಟದಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಓದಿ ತುಂಬಾ ಡಿಸ್ಟರ್ಬ್‌ ಆಗಿ ಅದೇ ಎಳೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಪ್ರೇಮಿಗಳಿಗೆ ಮತ್ತು ಪೋಷಕರಿಗೆ ಮೆಸೆಜ್‌ ನೀಡಿದ್ದಾರಂತೆ.

D8H 6143

ಈ ಚಿತ್ರದ ಮೂಲಕ ನಕುಲ್ ಕುಮಾರ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅಂಜನಾ ದೇಶಪಾಂಡೆ ನಾಯಕಿ . ಇಷ್ಟು ದಿನ ಬರೀ ಗ್ಲಾಮರ್‌ ಪಾತ್ರ ನಿರ್ವಹಿಸುತ್ತಿದ್ದ ಅಂಜನಾ ದೇಶಪಾಂಡೆಗೆ ಇಲ್ಲಿ ಟಿಪಿಕಲ್‌ ಹಳ್ಳಿ ಹುಡುಗಿಯ ಪಾತ್ರವಂತೆ.

ನಾಯಕ ನಕುಲ್ ಈ ಸಿನಿಮಾದಲ್ಲಿ ರೈತನ ಮಗನ ಪಾತ್ರ ಮಾಡಿದ್ದು, ಅದು ತುಂಬಾ ಮೃದುಸ್ವಭಾವದ ಹುಡುಗನ ಪಾತ್ರ. ಹಿರಿಯ ಕಲಾವಿದೆ ಪದ್ಮಜಾ ರಾವ್, ಚರಣ್ ರಾಜ್, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 
ಬಿಗ್‌ಬಾಸ್‌ ಮನೆಯಲ್ಲಿ ರನ್ನರ್‌ ಅಪ್‌ ಆದ ದಿವಾಕರ್‌ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಆರ್ಥಿಕವಾಗಿ ನೆರವಾಗಿದ್ದಾರೆ.
ರನ್ನರ್‌ ಅಪ್‌ ಆದ ಮೇಲೆ ದಿವಾಕರ್‌ ಏನು ಮಾಡುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಅವರಿಗೆ ಎಷ್ಟು ಹಣ ದೊರೆಯಿತು ಎಂಬ ಪ್ರಶ್ನೆಗಳು ಎಲ್ಲೆಡೆ ಓಡಾಡುತ್ತಿರುವಾಗ ಸುದೀಪ್‌ ಕರೆದು ಆರ್ಥಿಕ ಸಹಾಯ ಮಾಡಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುವುದರ ಜತೆಗೆ ದಿವಾಕರ್‌ ಬೆಂಬಲಕ್ಕೆ ನಿಂತಿದ್ದಾರಂತೆ. ಸಾಮಾನ್ಯ ವ್ಯಕ್ತಿ ದಿವಾಕರ್‌ ಅವರಿಗೆ ಬಿಗ್‌ಬಾಸ್‌ ಮನೆಯಿಂದ ಸಾಕಷ್ಟು ಹಣ ಸಿಗಲಿಲ್ಲ ಎನ್ನುವ ಕೂಗು ಸಾರ್ವಜನಿಕರಲ್ಲಿ ಕೇಳಿ ಬಂದಿತ್ತು. ಇದೇ ವೇಳೆ ಅಭಿನಯ ಚಕ್ರವರ್ತಿ ಸುದೀಪ್‌, ದಿವಾಕರ್‌ಗೆ ಪರ್ಸನಲ್‌ ಆಗಿ ಸಹಾಯ ಮಾಡಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ದಿವಾಕರ್‌ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ಸುದೀಪ್‌ ಅವರು ನನ್ನನ್ನು ಮತ್ತು ನನ್ನ ಪತ್ನಿಯನ್ನು ಮನೆಗೆ ಕರೆಸಿಕೊಂಡು ಪ್ರೀತಿಯಿಂದ ನಡೆಸಿಕೊಂಡ್ರು. ಒಂದು ದೊಡ್ಡ ಮೊತ್ತದ ಹಣ ನೀಡಿದ್ರು. ಈ ಹಣದಿಂದಲೇ ನಾನು ಮನೆಯನ್ನು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಜತೆಗೆ ಚಿತ್ರಗಳಲ್ಲಿ ನಂಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸುದೀಪ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರೆ ಸುದೀಪ್‌ ನೀಡಿದ ಹಣವೆಷ್ಟು ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.
ಕೆಳೆದ ಬಾರಿ ಕೂಡ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಅವರಿಗೂ ಕಿಚ್ಚ ಸುದೀಪ್ 10 ಲಕ್ಷ ರೂ ನೀಡಿದ್ದರು.
#KicchaSudeep #AbhinayaChakravarthy #Cineloka
ಟಗರು ವಿಶೇಷತೆಗಳೇನು? ಚಿತ್ರವನ್ನು ನೀವು ಏಕೆ ನೋಡಬೇಕು?
ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅಭಿನಯದ "ಟಗರು" ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸೂರಿ ಚಿತ್ರಗಳೆಂದರೆ ಜನರಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ. ಈಗ ಶಿವರಾಜ್‌ಕುಮಾರ್‌ ಮತ್ತು ಸೂರಿ ಕಾಂಬಿನೇಶನ್‌ನ ಟಗರು ಚಿತ್ರದ ಬಗ್ಗೆಯೂ ಜನರಿಗೆ ಒಂದು ಕುತೂಹಲವಿದ್ದು, ಟಗರು ಚಿತ್ರವನ್ನು ಜನ ಯಾಕೆ ನೋಡಬೇಕು ಎಂದು ನಾವು ಒಂದಷ್ಟು ಕಾರಣ ನೀಡುತ್ತಿದ್ದೇವೆ ನೋಡಿ.
ಕಥೆ :
ಒಬ್ಬ ಪ್ರೇಕ್ಷಕನಿಗೆ ಸಿನಿಮಾದ ಕಥೆ ಬಹಳ ಮುಖ್ಯವಾಗುತ್ತದೆ. ಈ ಚಿತ್ರದಲ್ಲಿ ಒಂದಷ್ಟು ಹೊಸ ವಿಷಯಗಳಿವೆ. ಇವತ್ತು ಜಗತ್ತಿನಲ್ಲಿ ನಡೆಯುತ್ತಿರುವ ಮಾಫಿಯಾದ ಕಥೆ ಇಲ್ಲಿದೆ. ಕಾಲ್ಪನಿಕವೂ ಇದೆ.
ವಿಶೇಷ ಚಿತ್ರಕಥೆ :
ಸೂರಿ ಸಿನಿಮಾಗಳಲ್ಲಿ ಸ್ಕ್ರೀನ್‌ ಪ್ಲೇ ಬಹಳ ವಿಶೇಷವಾಗಿರುತ್ತದೆ. ಟಗರು ಚಿತ್ರದ ಸ್ಕ್ರೀನ್‌ ಪ್ಲೇ ನೋಡಿದರೆ ಒಂದು ಕಥೆಯನ್ನು ಹೀಗೂ ಹೇಳಬಹುದಾ ಅನ್ನಿಸುವಂತಿದೆ. ಪೊಲೀಸ್‌ ಮತ್ತು ಮಾಫಿಯಾ ನಡುವಿನ ಕಥೆ ಇದೆ. ಇದನ್ನು ಸೂರಿ ಮತ್ತವರ ತಂಡ ಹೇಗೆ ಸ್ಕ್ರೀನ್‌ ಮೇಲೆ ತಂದಿದೆ ಎಂಬುದೇ ವಿಶೇಷ.
ಪಾತ್ರಗಳ ಸೃಷ್ಟಿ :
ನಿರ್ದೇಶಕ ಸೂರಿಯವರು ಹೊಸ ರೀತಿಯ ಪಾತ್ರಗಳನ್ನು ಸೃಷ್ಟಿ ಮಾಡುವಲ್ಲಿ ಸಿದ್ದ ಹಸ್ತರು. ಈ ಚಿತ್ರದಲ್ಲಿ ಡಾಲಿ, ಚಿಟ್ಟೆ, ಕಾಕ್ರೋಚ್‌, ಬೇಬಿ ಕೃಷ್ಣ, ಅಂಕಲ್‌, ಎಂಬ ಚಿತ್ರ ವಿಚಿತ್ರ ಕ್ರೂರಿ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಇವರನ್ನೆಲ್ಲಾ, ಮಟ್ಟಹಾಕಲು ಶಿವರಾಜ್‌ಕುಮಾರ್‌ ಅವರಂತಹ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರವೂ ಇಲ್ಲಿ ಅದ್ಭುತವಾಗಿ ಸೃಷ್ಟಿಯಾಗಿದೆ.
ನಿರೂಪಣೆಯಲ್ಲಿ ಹೊಸ ಪ್ರಯೋಗ :
ಇಡೀ ಚಿತ್ರದಲ್ಲಿ ಪ್ರತಿಯೊಂದು ಶಾಟ್‌ ಕೂಡಾ ಕಥೆಗೆ ರಿಲೇಟ್‌ ಆಗಿರುತ್ತೆ. ಒಂದು ದೃಶ್ಯವೂ ಕಥೆಯಿಂದ ಹೊರತಾಗಿರೋಲ್ಲ ಎಂದು ನಿದೇಶಕರು ತಿಳಿಸಿದ್ದಾರೆ.
ಸಂಭಾಷಣೆ :
ಸಂಭಾಷಣೆಗಳು ಜಾಸ್ತಿ ಇಲ್ಲವಾದರೂ, ಕಮರ್ಷಿಯಲ್‌ ಮತ್ತು ಕ್ಲಾಸ್‌ ಎರಡನ್ನು ಬ್ಲೆಂಡ್‌ ಮಾಡಿ ಮಾಸ್ತಿ ಡೈಲಾಗ್‌ ಬರೆದಿದ್ದಾರೆ. ಮಾಸ್ತಿ ಈಗಾಗಲೇ ಕಡ್ಡಿಪುಡಿ , ಕಾಲೇಜ್‌ಕುಮಾರ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಡೈಲಾಗ್‌ ಬರೆದು ಫೇಮಸ್‌ ಆದವರು.
ಶಿವಣ್ಣ -ಸೂರಿ ಕಾಂಬಿನೇಶನ್ :
ಸುಕ್ಕ ಸೂರಿ ಎಂದೇ ಫೇಮಸ್ ಆಗಿರುವ ನಿರ್ದೇಶಕ ಸೂರಿ ಮತ್ತು ಡಾ. ಶಿವಣ್ಣ ಈ ಹಿಂದೆ ಕಡ್ಡಿಪುಡಿ ಎಂಬ ಚಿತ್ರ ಮಾಡಿ ಅಭಿಮಾನಿಗಳ ಮನಸ್ಸಲ್ಲುಲಿದಿದ್ದರು. ಈಗ ಈ ಜೋಡಿ ಮತ್ತೆ ಒಂದಾಗಿರುವುದು, ಸಹಜವಾಗೇ ನಿರೀಕ್ಷೆ ಹೆಚ್ಚಿದೆ.
ಹೈಲೈಟ್ಸ್‌ :
ಶಿವರಾಜ್‌ಕುಮಾರ್‌ ನಟನೆ, ಅವರ ಡೈಲಾಗ್‌ ಡಿಲೆವರಿ ಮತ್ತು ಧನಂಜಯ ಅವರ ಕ್ಯಾರೆಕ್ಟರ್‌. ಚರಣ್‌ ರಾಜ್‌ ಅವರ ಸೂಪರ್‌ ಮ್ಯೂಸಿಕ್‌. ಮಹೇಂದ್ರ ಸಿಂಹ ಅವರ ಅದ್ಭುತ ಛಾಯಾಗ್ರಹಣ ಎಲ್ಲವೂ ಚಿತ್ರವನ್ನು ಇನ್ನಷ್ಟು ರಿಚ್‌ ಮಾಡಿದೆ.
ವಿಭಿನ್ನ ಪ್ರಚಾರ :
ಹಿಂದಿನ ಶಿವರಾಜ್‌ಕುಮಾರ್‌ ಸಿನಿಮಾಗಳಿಗಿಂತೂ ಟಗರು ಚಿತ್ರದ ಪ್ರಮೋಷನ್‌ ಬೇರೆ ತರ ನಡೆದಿದೆ. ಶಿವಣ್ಣ ಅವರ ಕಟ್ಟಾ ಅಭಿಮಾನಿಯಾಗಿರುವ ಕೆ ಪಿ ಶ್ರೀಕಾಂತ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಸಿನಿಮಾದ ಟೀಸರ್‌ನ್ನು ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಶ್ರೀಕಾಂತ್‌ ಅವರ ಪ್ರಚಾರ ವೈಖರಿಯೇ ಬಹಳ ವಿಶಿಷ್ಟವಾಗಿದೆ. ಈ ಎಲ್ಲ ಕಾರಣಗಳಿಗೆ ಟಗರು ಜನರಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ.
#Tagaru #Cineloka #DrShivanna
ಟಗರು ಸಿನಿಮಾದ ಡಾಲಿ ಲುಕ್‌ಗೆ ಇಡೀ ಸ್ಯಾಂಡಲ್‌ವುಡ್‌ ಫಿದಾ ಆಗಿದೆ. ಈ ಕುರಿತು ಡಾಲಿ ಪಾತ್ರಧಾರಿ ಧನಂಜಯ್‌ ಮಾತನಾಡಿದ್ದಾರೆ .
ಬಲ್ಲುಮಾ ಬಲ್ಲುಮಾ ಎಂಬ ಹಾಡು ಸೂಪರ್‌ ಹಿಟ್‌ ಆಗಿದ್ದೇ ಆಗಿದ್ದು, ಧನಂಜಯ ಅವರನ್ನು ನೋಡಿ ಇಡೀ ಸ್ಯಾಂಡಲ್‌ವುಡ್‌ ಪ್ರೇಕ್ಷಕ ವರ್ಗ ಬೆರಗಾಯಿತು. ಇಷ್ಟು ದಿನ ಸಾಫ್ಟ್‌ ಲುಕ್‌ ನೋಡಿದ್ದ ಜನ ಧನಂಜಯ ಇಂತಹ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅಚ್ಚರಿಗೊಂಡಿದ್ದರು.
RAG 0336 Edit
ಈ ಬಗ್ಗೆ ಸಿನಿಲೋಕ ಧನಂಜಯ ಅವರನ್ನು ಮಾತನಾಡಿಸಿದಾಗ ಅವರು ಡಾಲಿ ಪಾತ್ರದ ವೃತ್ತಾಂತದ ಬಗ್ಗೆ ಬಿಚ್ಚಿಟ್ಟರು ‘ಡಾಲಿ ಒಂದು ಇಂಟೆನ್ಸ್‌ ಇರುವ ಪಾತ್ರ. ನಟಿಸಿದ ಅಷ್ಟೂ ದಿನವೂ ನಾನು ಆ ಪಾತ್ರವೇ ಆಗಿಬಿಟ್ಟಿದ್ದೆ. ಅದು ಚಾಲೆಂಜಿಂಗ್‌ ಪಾತ್ರ. ರಿಯಲ್‌ ಲೈಫ್‌ನಲ್ಲಿ ಹೀಗೂ ಇರಲು ಸಾಧ್ಯವಾ? ಎಂದು ಜನ ನೋಡಿದ ತಕ್ಷಣ ಅಂದುಕೊಳ್ಳುತ್ತಾರೆ. ನಿಜಕ್ಕೂ ನನಗೆ ಸಖತ್‌ ಚಾಲೆಂಜಿಂಗ್‌ ಆಗಿದ್ದ ಪಾತ್ರ ಇದಾಗಿದೆ,’ ಎನ್ನುತ್ತಾರವರು.
 
RAG 0438 Edit
ಇನ್ನು ಇಷ್ಟು ದಿನ ನಾಯಕರಾಗಿದ್ದವರು ನೆಗೆಟಿವ್‌ ಶೇಡ್‌ನಲ್ಲಿ ಯಾಕೆ ಕಾಣಿಸಿಕೊಂಡ್ರಿ ಎಂದರೆ ಅದಕ್ಕೆ ಅವರು ನೀಡುವ ಉತ್ತರ ಹೀಗಿದೆ ‘ನಾನಷ್ಟೇ ಅಲ್ಲ. ಪ್ರತಿಯೊಬ್ಬ ಕಲಾವಿದನಿಗೂ ನೆಗೆಟಿವ್‌ ರೋಲ್‌ ಮಾಡಬೇಕು ಎಂಬ ಆಸೆ ಇರುತ್ತದೆ. ಹೀರೋ ಆಗಿ ಎಲ್ಲರೂ ನಟಿಸಬಹುದು, ಆದರೆ ವಿಲನ್‌ ಆಗಿ ನಟಿಸುವುದು ಕಷ್ಟ. ಸಾಕಷ್ಟು ಸ್ಟಾರ್‌ ನಟರೂ ಸಹ ಒಮ್ಮೆಯಾದ್ರೂ, ವಿಲನ್‌ ಆಗಬೇಕು ಎಂದುಕೊಂಡಿರುತ್ತಾರೆ. ರಿಯಲ್‌ಲೈಫ್‌ನಲ್ಲಿ ಒಬ್ಬ ಲವರ್‌ಬಾಯ್‌ ಆಗಿರಬಹುದು ಅಥವಾ ಇನ್ನೊಂದು ಪಾತ್ರವಾಗಿರಬಹುದು.ಆದರೆ ಡಾಲಿಯಾಗಿರಲು ಸಾಧ್ಯವಿಲ್ಲ,ಎನ್ನುತ್ತಾರೆ ಧನಂಜಯ. ಡಾಲಿ ಪಾತ್ರಕ್ಕೆ ಧನಂಜಯ ಮಾನಸಿಕ ತಯಾರಿಯನ್ನು ಹೆಚ್ಚಾಗಿ ಮಾಡಿಕೊಂಡರಂತೆ.
RAG 0398 Edit Edit
ಇನ್ನು ಟಗರು ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರ ಜತೆ ನಟಿಸಿದ್ದು ಬಹಳ ಖುಷಿ ಕೊಟ್ಟಿದೆಯಂತೆ. ಜತೆಗೆ ನಿರ್ದೇಶಕ ಸೂರಿ, ಸಂಗೀತ ನಿರ್ದೇಶಕ ಚರಣ್‌ ರಾಜ್‌, ಅದ್ಭುತವಾಗಿ ಸೆರೆ ಹಿಡಿದ ಮಹೇಂದ್ರ ಸಿಂಹ ಮತ್ತು ನಿರ್ಮಾಪಕ ಶ್ರೀಕಾಂತ್‌ ಅವರ ಟೀಮ್‌ಗೆ ಧನ್ಯವಾದ ಹೇಳುತ್ತಾರೆ ಧನಂಜಯ.
#Tagaru #Cineloka

 

ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಹೆಸರು ಮಾಡಿರುವ ನಿರ್ದೇಶಕ ದಯಾಳ್‌ ಈಗ ಪುಟ 109 ಎಂಬ ಚಿತ್ರವನ್ನು ಆರಂಭಿಸಿದ್ದಾರೆ.

ಈ ಚಿತ್ರಕ್ಕೆ ಫೆ.19ರಂದು ಮುಹೂರ್ತ ಮಾಡಿರುವ ದಯಾಳ್‌ ಮಾಧ್ಯಮದವರಿಗೆ ಚಿತ್ರದ  ಬಗ್ಗೆ ಮಾಹಿತಿ ನೀಡಿದ್ದಾರೆ.

 

ಈ ಪುಟ 109 ಚಿತ್ರದ ಕಥೆ ಕ್ರೈಮ್‌ ಥ್ರಿಲ್ಲರ್‌ ಸಬ್ಜೆಕ್ಟ್ ಹೊಂದಿದೆ,  ಒಂದು ವಾಣಿಜ್ಯಾತ್ಮಕ ವಿಷಯದ ಬಗ್ಗೆ ಇಬ್ಬರು ವ್ಯಕ್ತಿಗಳು  ಧೀರ್ಘ ಕಾಲ ಚರ್ಚೆ ನಡೆಸುತ್ತಾರೆ. ಚರ್ಚೆ ನಡೆಸುವಾಗ ಒಂದಷ್ಟು ಸನ್ನಿವೇಶಗಳು ಬರಲಿದ್ದು, ಅದೇ ಚಿತ್ರಕ್ಕೆ ಜೀವಾಳವಾಗಿದೆಯಂತೆ. ಎರಡೇ ಎರಡು ಪಾತ್ರಗಳು ಪುಟ 109ರಲ್ಲಿ ಮುಖ್ಯವಾಗಿದೆ. ಆ ಪಾತ್ರಗಳನ್ನು ಜಯರಾಮ್‌ ಕಾರ್ತಿಕ್‌, ಮತ್ತು ನವೀನ್‌ ಕೃಷ್ಣ ನಿರ್ವಹಿಸುತ್ತಿದ್ದಾರೆ.

 

ಈ ಹಿಂದೆ ನವೀನ್‌ ಕೃಷ್ಣ ಮತ್ತು ದಯಾಳ್‌ ಸೇರಿಕೊಂಡು ಆ್ಯಕ್ಟರ್‌ ಎಂಬ ಚಿತ್ರ ಮಾಡಿ ಗಮನ ಸೆಳೆದಿದ್ದರು. ಈಗ ಇಬ್ಬರು ಪುಟ 109ಕ್ಕೆ ಮತ್ತೆ ಒಂದಾಗಿದ್ದಾರೆ.

ಈ ಚಿತ್ರದಲ್ಲಿ ಜೆಕೆ ಪೋಲೀಸ್‌ ಅಧಿಕಾರಿಯಾದರೆ. ನವೀನ್‌ ಕೃಷ್ಣ ಬರಹಗಾರನಾಗಿ ನಟಿಸುತ್ತಿದ್ದಾರೆ. ಮೂಡಿಗೆರೆ ಸಮೀಪದ ಸ್ಥಳದ ಒಂದು ಪುರಾತನ ಮನೆ ಮತ್ತು ಅಕ್ಕಪಕ್ಕದ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಒಂದು ಗೀತೆಗೆ ಗೌತಂಶ್ರೀವತ್ಸ ಸಂಗೀತ ನೀಡಲಿದ್ದಾರೆ. ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಬಹಳ ಮುಖ್ಯವಾಗಿದ್ದು, ಅದನ್ನು ಗೌತಂ ವಿಭಿನ್ನ ರೀತಿಯಲ್ಲಿ ನೀಡಲಿದ್ದಾರೆ ಎಂದು ನಿರ್ದೇಕರು ಹೇಳಿದ್ದಾರೆ.

 

    ದಾಸ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ, ಕ್ರೇಜಿ ಮೈಂಡ್ಸ್‌ ಸಂಕಲನ ಮಾಡಲಿದ್ದಾರೆ. ಸಂಭಾಷಣೆ ನವೀನ್‌ ಕೃಷ್ಣ, ನೃತ್ಯ ತ್ರಿಭುವನ್‌, ಅರವಿಂದ್‌ ಎಂಬುವವರು ಕಥೆ ಬರೆದಿದ್ದಾರೆ. ಮುಗುಳುನಗೆ ಚಿತ್ರದ ನಿರ್ಮಾಪಕ ಸೈಯದ್‌ ಸಲಾಂ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಒಟ್ಟಿನಲ್ಲಿ ದಯಾಳ್‌ ಎರಡು ಚಿತ್ರಗಳನ್ನು ಒಟ್ಟಿಗೆ ಪ್ರಾರಂಭ ಮಾಡಿ ದಾಖಲೆ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಪೈಲ್ವಾನ್‌ಗಾಗಿ ಮಾರ್ಷಲ್‌ ಆರ್ಟ್ಸ್‌ ಕಲಿಯಲು ಥಾಯ್‌ಲ್ಯಾಂಡ್‌ಗೆ ಹೋಗಲಿದ್ದಾರಂತೆ.

 

ಬಾಕ್ಸಿಂಗ್‌ ಮತ್ತು ರಸ್ಲಿಂಗ್‌ ವಿಷಯ ಕುರಿತಾದ ಕಥೆಗೆ ಹೆಬ್ಬುಲಿ ನಿರ್ದೇಶಕ ಎಸ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ತಯಾರಿಗೆ ಸುದೀಪ್‌ ಈಗಾಗಲೇ ಜಿಮ್‌ಗೆ ಹೋಗಿ ತಯಾರಿ ಮಾಡುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ಸುದೀಪ್‌ ಗೆ ಜೀತ್‌ ದೇವಯ್ಯ ಎಂಬುವವರು ತರಬೇತಿ ನೀಡುತ್ತಿದ್ದಾರೆ  ಮಾರ್ಚ್‌ ಕೊನೆ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಪೈಲ್ವಾನ್‌ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಅದಕ್ಕಾಗಿ ಸುದೀಪ್‌ ಫುಲ್‌ ತಯಾರಿ ಮಾಡಿಕೊಳ್ಳಲಿದ್ದಾರಂತೆ.

 

ಈ ಚಿತ್ರದಲ್ಲಿ ಮೊದಲ ಬಾರಿಗೆ ಸುದೀಪ್‌ ಸಿಕ್ಸ್‌ಪ್ಯಾಕ್‌ ಮಾಡಲಿದ್ದಾರಂತೆ.  ತಮ್ಮ ತರಬೇತುದಾರರ ಜೊತೆ ಇದೇ ವಾರದಲ್ಲಿ ಥಾಯ್‌ಲ್ಯಾಂಡ್‌ಗೆ ಹೋಗಲಿದ್ದು.  ಅಲ್ಲಿನ ಗ್ರಾಮವೊಂದರಲ್ಲಿ ಬಾಕ್ಸಿಂಗ್‌ ಮತ್ತು ರಸ್ಲಿಂಗ್‌ಗೆ ಸಂಬಂಧಪಟ್ಟಂತೆ  ಸಾಂಪ್ರದಾಯಿಕ ತರಬೇತಿ ಪಡೆದು ಬರಲಿದ್ದಾರಂತೆ.

 

ಆರ್‌ ಆರ್‌ ಆರ್‌ ಮೋಶನ್‌ ಪಿಕ್ಚರ್ಸ್‌ ನಡಿ ತಯಾರಾಗುತ್ತಿರುವ ಪೈಲ್ವಾನ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದಾರೆ. ಹೆಬ್ಬಲಿ ಕ್ಯಾಮೆರಾಮ್ಯಾನ್‌ ಕರುಣಾಕರ್‌ ಅವರ ಛಾಯಾಗ್ರಹಣವಿದೆ

ಸದ್ಯಕ್ಕೆ ಕಿಚ್ಚ ಸುದೀಪ್‌ ಮಾರ್ಷಲ್‌ ಆರ್ಟ್ಸ್‌  ಬೇಸಿಕ್ಸ್‌ಗಳನ್ನು ಕಲಿಯಲಿದ್ದಾರೆ. ಈ ಮಾರ್ಷಲ್‌ ಆರ್ಟ್ಸ್‌ ದೃಶ್ಯಗಳು ಸಿನಿಮಾದ ಕೊನೆಯಲ್ಲಿ ಬರಲಿದೆಯಂತೆ. ಒಟ್ಟಿನಲ್ಲಿ ಚಿತ್ರದಿಂದ ಚಿತ್ರಕ್ಕೆ ಸುದೀಪ್‌ ಹೆಚ್ಚೆಚ್ಚು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

 

ಶಿವರಾಜ್‌ಕುಮಾರ್‌ ಸ್ಯಾಂಡಲ್‌ವುಡ್‌ನ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಹೀರೋ, ವಯಸ್ಸು 50 ದಾಟಿದರು ಎಲ್ಲ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ಶಿವಣ್ಣ ತಮ್ಮ ಚಿತ್ರ ಜೀವನದ ಮೊದಲ ಶಾಟ್‌ ಎದುರಿಸಿ ಫೆ.19ಕ್ಕೆ ಸರಿಯಾಗಿ 32 ವರ್ಷ.

ಸದ್ಯ ಕವಚ ಚಿತ್ರದ ಶೂಟಿಂಗ್ಗಾಗಿ ಪುದುಚೆರಿಯಲ್ಲಿರುವ ಶಿವರಾಜ್‌ಕುಮಾರ್‌ 32 ವರ್ಷಗಳಲ್ಲಿ ವಿಭಿನ್ನ ಸಬ್ಜೆಕ್ಟ್ಗಳಲ್ಲಿ ನಟಿಸಿದ್ದಾರೆ. ಒಂದು ಚಿತ್ರದಲ್ಲಿ ಮಾಸ್‌ ಆಡಿಯನ್ಸ್‌ನ್ನು ಎಂಟರ್‌ ಟೈನ್‌ ಮಾಡಿದರೆ, ಇನ್ನೊಂದು ಚಿತ್ರದಲ್ಲಿ ಕ್ಲಾಸ್‌ ಆಡಿಯನ್ಸ್‌ಗೆ ಇಷ್ಟವಾಗುತ್ತಾರೆ. ಇಂಥಹ ಶಿವಣ್ಣ ನಟನೆಯ ಬಹು ನಿರೀಕ್ಷೆಯ ಟಗರು ಈ ವಾರ ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರದ ಮೊದಲ ದಿನದ ಟಿಕೆಟ್‌ಗಳು ಈಗಾಗಲೇ ಬುಕ್ಕಿಂಗ್‌ ಮುಗಿದಿದ್ದು, ಅಭಿಮಾನಿಗಳು ಶಿವಣ್ಣನ ದರ್ಶನಕ್ಕಾಗಿ ಕಾಯುತ್ತಿದ್ದಾರೆ.

32 ವರ್ಷ ಕಂಪ್ಲೀಟ್‌ ಮಾಡಿದ ಶಿವಣ್ಣ ಅವರಿಗೆ ಆನ್‌ಲೈನ್‌ನಲ್ಲಿ ಎಲ್ಲರೂ ವಿಷ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಂತೂ, ಶಿವಣ್ಣ ಅವರ ಎನರ್ಜಿಗೆ ಎಲ್ಲರೂ ಬೇಷ್‌ ಎನ್ನುತ್ತಿದ್ದಾರೆ.

ಇದನ್ನೆಲ್ಲವೂ ನೋಡುತ್ತಿರುವ ಶಿವರಾಜ್‌ಕುಮಾರ್‌ ಅವರು ಮಾತ್ರ ‘ನಾನು 32 ವರ್ಷಗಳ ನಿರಂತರವಾಗಿ ಕಲಿಯುತ್ತಿದ್ದೆ, ಇನ್ನು ಮುಂದೆಯೂ ಕಲಿಯುತ್ತೇನೆ. ನಾನೊಬ್ಬ ವಿದ್ಯಾರ್ಥಿ. ನನ್ನ ಕಡೇ ಉಸಿರು ಇರುವವರೆಗೂ ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ಯಾವ ಸಲಹೆ ನೀಡಿದ್ರು ನಾನು ತೆಗೆದುಕೊಳ್ಳುತ್ತೇನೆ. ನನ್ನ ಈ 32 ವರ್ಷಗಳ ಜರ್ನಿಯಲ್ಲಿ ನನ್ನ ತಂದೆ ತಾಯಿ, ಹೆಂಡತಿ, ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ಎಲ್ಲರನ್ನು ಜ್ಞಾಪಿಸಿಕೊಳ್ಳಲು ನಾನು ಇಷ್ಟ ಪಡುತ್ತೇನೆ. ಆ ಫಸ್ಟ್‌ ಶಾಟ್ ನೆನೆಸಿಕೊಂಡರೆ ಈಗಲೂ ಭಯ ಒಮ್ಮೆ ಹೊರ ಬರುತ್ತದೆ,’ ಎನ್ನುತ್ತಾರೆ.

ಇನ್ನು ಟಗರು ಚಿತ್ರಕ್ಕೆ ಸೃಷ್ಟಿಯಾಗಿರುವ ಕ್ರೇಜ್‌ಗೆ ಶಿವಣ್ಣ ಅವರಿಗೂ ಭಯವಿದೆಯಂತೆ. ಇದಕ್ಕೆಲ್ಲ ಮುಖ್ಯ ಕಾರಣ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಮತ್ತು ನಿರ್ದೇಶಕ ಸೂರಿಯವರ ತಂಡ ಎಂದು ಹೇಳುತ್ತಾರೆ ಶಿವಣ್ಣ. 32 ವರ್ಷಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿದ ಶಿವಣ್ಣ ಇನ್ನು ಮುಂದೆಯೂ ಹೀಗೆ ರಂಜಿಸಲಿ ಎಂದು ನಾವು ಹಾರೈಸುತ್ತೇವೆ.

 

ಬಿಗ್‌ ಬಾಸ್‌ ಮೆನೆಯಿಂದ ಹೊರಬಂದ ನಂತರ ಎರಡು ಚಿತ್ರಗಳನ್ನು ಮಾಡುತ್ತೇನೆ ಎಂದಿದ್ದ ನಿರ್ದೇಶಕ ದಯಾಳ್‌ ಅದರಲ್ಲಿ ಆ ಕರಾಳ ರಾತ್ರಿಗೆ ಫೆ.19ರಂದು ಮುಹೂರ್ತ ಮಾಡಿದ್ದಾರೆ.
ಟೈಟಲ್‌ ಕೇಳಿದರೆ ಇದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಚಿತ್ರ ಎಂಬುದು ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಸಿನಿಮಾಗಳು ಬರುತ್ತಿವೆ. ಆದರೆ ದಯಾಳ್‌ ಆ ಎಲ್ಲ ಸಿನಿಮಾಗಳಿಗಿಂತ, ಬೇರೆ ರೀತಿಯಲ್ಲಿ ಸಸ್ಪೆನ್ಸ್‌ನ್ನು ಹೇಳುತ್ತಾರಂತೆ.


ದುರಾಸೆ ಹಾಗೂ ಎಮೋಶನ್‌ ಅಂಶಗಳು ಫ್ಲಾಶ್‌ ಬ್ಯಾಕ್‌ನಲ್ಲಿ ಕುರುಡ ಸೇರಿದಂತೆ ನಾಲ್ಕು ಪಾತ್ರWಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆಯಂತೆ. ಈ ಚಿತ್ರದ ಕಥೆ 1981 ಕಾಲ ಘಟ್ಟದಲ್ಲಿ ನಡೆಯುತ್ತದೆ, ಇದು ಈ ಚಿತ್ರದ ಮತ್ತೊಂದು ವಿಶೇಷವಾಗಿದೆ ಎಂದು ದಯಾಳ್‌ ಹೇಳಿದ್ದಾರೆ.

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪ ಬಾಳೂರು ಎನ್ನುವ ಹಳ್ಳಿಯಲ್ಲಿ ರುವ ಒಂದು ಹಳೇ ಮನೆಯಲ್ಲಿ ಈ ಚಿತ್ರಕ್ಕಾಗಿ ದಯಾಳ್‌ ಬಳಸಿಕೊಳ್ಳಲು ತೀರ್ಮಾ ನ ಮಾಡಿದ್ದಾರೆ. ಈ ಮನೆ ಚಿತ್ರದ ಕಥೆಗೆ ಹೇಳಿ ಮಾಡಿಸಿದಂತೆ ಇದೆ, ಅದನ್ನು ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಿಕೊಂಡು ಕೇವಲ 15 ದಿನಗಳಲ್ಲಿ ಚಿತ್ರೀಕರಣ ಮಾಡುತ್ತೇನೆ ಎನ್ನುತ್ತಾರೆ ದಯಾಳ್‌.

 

ತಾರಗಣದಲ್ಲಿ ಜೆಕೆ, ವೀಣಾಸುಂದರ್‌, ರಂಗಾಯಣರಘು, ಅನುಪಮಗೌಡ, ನವರಸನ್‌ ಆ ಕರಾಳ ರಾತ್ರಿಯಲ್ಲಿ ನಟಿಸುತ್ತಿದ್ದಾರೆ. ತಂಗಾಳಿ ನಾಗರಾಜ ಸಾಹಿತ್ಯದ ನಾಲ್ಕು ಗೀತೆಗಳಿಗೆ ಗಣೇಶ್‌ನಾರಾಯಣ ಸಂಗಿತ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ನವೀನ್‌ ಕೃಷ್ಣ ಸಂಭಾಷಣೆ ಬರೆಯುತ್ತಿದ್ದು, ಜತೆಗೆ ಒಂದು ಸಣ್ಣ ಪಾತ್ರದಲ್ಲಿಯೂ ನಟಿಸಲಿದ್ದಾರೆ. ಸಹನಿರ್ಮಾಪಕರು ಅವಿನಾಶ್‌.ಯು.ಶೆಟ್ಟಿ ದಯಾಳ್‌ ಜತೆ ಸಹ ನಿರ್ಮಾಪಕರಾಗಿದ್ದಾರೆ.

 

ಉದಯ ಟಿವಿ ತನ್ನ ಹೊಸ ಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ 23 ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ ಕಥಾಹಂದರಗಳನ್ನು ಹೊಂದಿರುವ ಧಾರಾವಾಹಿಗಳನ್ನು ಉದಯ, ನೋಡುಗರಿಗೆ ಕೊಡುಗೆಯಾಗಿ ನೀಡಿದೆ. ನಂದಿನಿ, ಜೀವನದಿ, ಜೋಜೋ ಲಾಲಿ, ಅರಮನೆ,ದೊಡ್ಡಮನೆ ಸೊಸೆ ಮತ್ತು ಬ್ರಹ್ಮಾಸ್ತ್ರ ಧಾರಾವಾಹಿಗಳ ಯಶಸ್ಸಿನ ನಂತರ, ಈಗ ಕಿರುತೆರೆಯಲ್ಲೇ ಮೊದಲ ಬಾರಿಗೆ ಹೊಸದೊಂದು ಸಾಹಸಕ್ಕೆ ಉದಯ ಟಿವಿ ಸಜ್ಜಾಗಿದೆ. ಮಧುರವಾದ ಹಳೆಯದೊಂದು ಅದ್ಭುತ ಕನ್ನಡ ಚಿತ್ರವೊಂದನ್ನು ಮತ್ತೆ ಜನಮಾನಸದ ಎದುರಿಗೆ ಹೊಸದೇ ರೀತಿಯಲ್ಲಿ ವಿನೂತನವಾಗಿತರುವ ಪ್ರಯತ್ನಕ್ಕೆ ಉದಯ ಟಿವಿ ಹೊರಟಿದೆ. ಅದೇ, “ಮಾನಸ ಸರೋವರ”ಎನ್ನುವ ಸುಂದರಚಿತ್ರವನ್ನುಧಾರಾವಾಹಿಯಾಗಿ ಮುಂದುವರಿಸುವಯತ್ನ.

 

“ಮಾನಸ ಸರೋವರ” 1983 ರಲ್ಲಿತೆರೆಕಂಡು ಸೂಪರ್ ಹಿಟ್‍ ಸಿನಿಮಾ. ಪುಟ್ಟಣ್ಣಕಣಗಾಲರ ನಿರ್ದೇಶನದ, ಶ್ರೀನಾಥ್, ಪದ್ಮ ವಾಸಂತಿ ಮತ್ತುರಾಮಕೃಷ್ಣರ ಮನೋಜ್ಞಅಭಿನಯ ಮತ್ತು ಆ ಸುಮಧುರ ಹಾಡುಗಳನ್ನ ಯಾರಿಗೆತಾನೆ ಮರೆಯೋದಕ್ಕೆ ಸಾಧ್ಯ. ಈಗ ಅದೇ ಸಿನಿಮಾದ ಮುಂದುವರೆದ ಭಾಗವಾಗಿ“ಮಾನಸ ಸರೋವರ”ಅನ್ನೋ ಹೆಸರಿನಲ್ಲೇಧಾರಾವಾಹಿ ಉದಯಟಿವಿಯಲ್ಲಿಟೆಲಿಕಾಸ್ಟ್ ಆಗೋಕೆ ರೆಡಿಯಾಗಿದೆ. 
ಈ ಧಾರಾವಾಹಿ ಎಲಾ ್ಲರೀತಿಯಲ್ಲೂ ಜನಮಾನಸದಲಿ ್ಲಒಂದು ಕುತೂಹಲವನ್ನೇ ಸೃಷ್ಠಿಸಿದೆ. ಒಂದುಕಡೆ ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ ನಟಿಸುತ್ತಿದ್ದಾರೆ ಅನ್ನೋದಾದ್ರೆ ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ನಮ್ಮ ಡಾ|| ಶಿವರಾಜ್ ಕುಮಾರ್‍ರವರ ಬ್ಯಾನರ್ ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಈ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣರವರ ಮಗಳು ನಿವೇದಿತಾ ಶಿವರಾಜ್ ಕುಮಾರ್‍ಇದರ ಸಂಪೂರ್ಣಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಅನ್ನೋದು ವಿಶೇಷ. 
ಮನಸ್ಸಿನ ಆಧಾರದ ಮೇಲೆ ಚಿತ್ರಿತವಾಗಿದ್ದ ಮಾನಸ ಸರೋವರ ಸಿನಿಮಾ ಬಹು ಸೂಕ್ಷ್ಮಕಥಾಹಂದರ ಹೊಂದಿದ್ದಚಿತ್ರ. ಈಗ ಅದರದ್ದೇ ಮುಂದುವರೆದ ಭಾಗವಾಗಿ ಸೀರಿಯಲ್ ಬರ್ತಿದೆಅಂದ್ರೆ ವೀಕ್ಷಕ ಪ್ರಭುಗಳಿಗೆ ಅದೊಂದುರಸದೌತಣವೇ ಸರಿ.

 

ಮಾನಸ ಸರೋವರ ಸಿನಮಾದ ಕ್ಲೈಮಾಕ್ಸ್ ನಲ್ಲಿ ಹುಚ್ಚನಾದಡಾ||ಆನಂದ್ ಈಗ ಏನಾಗಿದ್ದಾರೆ? ಸಂತೋಷ್ ನನ್ನು ವರಿಸಿದ ವಾಸಂತಿ ಬದುಕು ಈಗ ಹೇಗಿದೆ? ಆನಂದ್ ನನ್ನುದುಡ್ಡಿನಾಸೆಗೆ ಬಿಟ್ಟು ಹೋಗಿದ್ದಅವರ ಪತ್ನೀ ಸರೋಜಾ ಈ ಏನು ಮಾಡುತ್ತಿದ್ದಾಳೆ? ಎಂಬ ಎಳೆಗಳನ್ನು ಇಟ್ಟುಕೊಂಡುಧಾರಾವಾಹಿಯನ್ನು ಮುಂದುವರಿಸಲಾಗಿದೆ.

“ಪುಟ್ಟಣ್ಣ ಅವರು ನನ್ನ ಫೇವರಿಟ್ ನಿರ್ದೇಶಕ, ಭಾರತೀಯ ಚಿತ್ರರಂಗದಲ್ಲೇ ಅವರಂತಹ ನಿರ್ದೇಶಕ ಇನ್ನೊಬ್ಬರಿಲ್ಲ್ಲ.ಡೈರೆಕ್ಟರ್ಸ್‍ ಡೈರೆಕ್ಟರ್‍ಅವರು. ಮಾಮೂಲಿ ಕಥೆಗಳನ್ನ ಹೊರತು ಪಡಿಸಿ ಹೊಸ ಪ್ರಯತ್ನ ಮಾಡಬೇಕು ಅನ್ನೋದು ನನ್ನ ಮಗಳ ಆಸೆ ಆಗಿತ್ತು. ಅದಕ್ಕೋಸ್ಕರ ಮಾನಸ ಸರೋವರಧಾರಾವಾಹಿ ಮಾಡೋಕೆ ಹೊರಟೆವು”ಎನ್ನುತ್ತಾರೆ ಶಿವಣ್ಣ.

“ಎಲ್ಲಿ ಕೂಡ ಕಾಂಪ್ರಮೈಸ್ ಮಾಡಿಕೊಳ್ಳದೇ ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೇವೆ. ಸಿನಿಮಾಗಳಿಗೆ ಬಳಸುವ ರೆಡ್‍ಎಪಿಕ್, ಆರೀಅಲೆಕ್ಸಾ ಕ್ಯಾಮರಾಗಳಲ್ಲಿ ಶೂಟಿಂಗ್ ನಡೀತಿದೆ. ಶ್ರೀನಾಥ್ ಸರ್ ಸೇರಿದಂತೆ ಪ್ರತೀಕಲಾವಿದರೂಕೂಡತುಂಬ ಚೆನ್ನಾಗಿಆಕ್ಟ್ ಮಾಡುತ್ತಿದ್ದಾರೆ”ಎನ್ನುತ್ತಾರೆ, ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್.

“ನಾನು ಈ ಸೀರಿಯಲ್ ನಟನೆ ಮಾಡೋದಕ್ಕೆ ಮುಖ್ಯಕಾರಣಾನೇ ಪುಟ್ಟಣ್ಣಅವರು. ಪ್ರತೀ ಸೀನಿನಲ್ಲಿ ನಟನೆ ಮಾಡೋವಾಗ ಅವರೇ ಕಣ್ಮುಂದೆ ಬರುತ್ತಾರೆ. ಭೌತಿಕವಾಗಿ ನಮ್ಮಜೊತೆಗೆಅವರುಇಂದುಇರದೇಇದ್ದರೂ, ಮಾನಸಿಕವಾಗಿ ಜೊತೆಗಿದ್ದಾರೆಎನ್ನುವ ಭಾವ ನನ್ನನ್ನು ಆವರಿಸಿದೆ” ಎನ್ನುತ್ತಾರೆ ಪ್ರಣಯರಾಜಾ ಶ್ರೀನಾಥ್.
“ನಾನು ಧಾರಾವಾಹಿ ಮಾಡೋಕೆ ಶಿವರಾಜ್ ಕುಮಾರ್‍ ಅವರೇ ಕಾರಣ. ರಾಜಕುಮಾರ್‍ ಕುಟುಂಬ ಅಂದರೆ ನನಗೆ ಅಪರಿಮಿತ ವಿಶ್ವಾಸ, ಧಾರಾವಾಹಿ ಕೂಡತುಂಬ ಚೆನ್ನಾಗಿ ಮೂಡಿಬರುತ್ತಿದೆ”ಅನ್ನುವುದು ನಟರಾಮಕೃಷ್ಣ ಮನದಾಳದ ಮಾತು.

“ಮಾನಸ ಸರೋವರ ನನ್ನ ಫಸ್ಟ್ ಸಿನಿಮಾ. ಈಗ ಮತ್ತೆ ಅದೇ ಕಥೆಯ ಮುಂದುವರಿಕೆಯನ್ನ ಧಾರಾವಾಹಿಯಾಗಿ ಮಾಡ್ತಾ ಇರೋದೆ ಒಂದು ಥ್ರಿಲ್”ಎನ್ನುತ್ತಾರೆ, ನಟಿ ಪದ್ಮಾವಾಸಂತಿ.

ಮಾನಸ ಸರೋವರ ಧಾರಾವಾಹಿಯನ್ನು ಮೂಲಕಥೆಗೆ ಯಾವ ಚ್ಯುತಿಯೂ ಬರದ ಹಾಗೆ ಈ ಕಥೆಯನ್ನ ಹೊಸೆಯಲಾಗಿದೆ. ಧಾರಾವಾಹಿ ರಂಗದಲ್ಲಿ ನುರಿತ ನಿರ್ದೇಶಕರಾದರಾಮ್ ಜಯಶೀಲ್ ವೈದ್ಯ ನಿರ್ದೇಶನದಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯರಾದ ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ ಮೊದಲಾದ ಹಿರಿಯ ಕಲಾವಿದರ ಜೊತೆ ಪ್ರಜ್ವಲ್, ಶಿಲ್ಪಾ, ಶೃತಿ ಮೊದಲಾದ ಹೊಸ ಕಲಾವಿದರ ದಂಡೆ ಇದೆ.

ಈ ಧಾರಾವಾಹಿಯ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಶಿವಣ್ಣನವರೇ ಮೊದಲ 10 ಎಪಿಸೋಡ್ಗಳ ಕಥೆಯನ್ನೂ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಒಂದು ಸಂಚಲನವನ್ನಂತು ಈ ಧಾರಾವಾಹಿ ಹುಟ್ಟುಹಾಕತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ. ಧಾರಾವಾಹಿಯ ಕಥೆ ಹೇಗೆ ಶುರು ಆಗತ್ತೆ ಅಂದ್ರೆ ವಾಸಂತಿಯ ಮಗಳು ಸುನಿಧಿ ಮನಶ್ಶಾಸ್ತ್ರಜ್ಞೆ. ತನ್ನ ತಾಯಿಯಿಂದಲೇ ಹುಚ್ಚನಾದ ಡಾ||ಆನಂದ್ ನನ್ನು ಕ್ಯೂರ್ ಮಾಡುತ್ತೇನೆ ಎಂದು ಶಪಥ ಮಾಡುವ ಸುನಿಧಿ ಆ ಪ್ರಯತ್ನದಲ್ಲಿ ಗೆಲ್ಲುತ್ತಾಳಾ? ತನ್ನ ತಾಯಿಯಿಂದಾನೇ ಹೀಗಾಯ್ತು ಅಂತಗೊತ್ತಾದ್ರೆ ಸುನಿಧಿ ಏನು ಮಾಡ್ತಾಳೆ? ಇವೇ ಮೊದಲಾದ ಹತ್ತಾರುಟ್ವಿಸ್ಟ್ ಗಳನ್ನು ಒಳಗೊಂಡಿದೆ “ಮಾನಸ ಸರೋವರ” ಧಾರಾವಾಹಿ.

ಜೊತೆಗೆ ಮಾನಸ ಸರೋವರ ತಂಡ ಒಂದು ಕಾಂಟೆಸ್ಟ್ ಕೂಡಾ ಮಾಡ್ತಿದ್ದಾರೆ. ಫೆಬ್ರವರಿ 19 ರಿಂದ ಮಾರ್ಚ್ 2 ರವರೆಗೆ ಪ್ರತಿದಿನ ಮಾನಸ ಸರೋವರ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸರಿಯಾದ ಉತ್ತರಕೊಟ್ಟು ವಿಜಯಶಾಲಿಗಳಾದ ಒಂದು ಫ್ಯಾಮಿಲಿ ಇಡಿ ಮಾನಸ ಸರೋವರ ತಂಡದ ಜೊತೆ ಭೋಜನಕೂಟದಲ್ಲಿ ಭಾಗವಹಿಸಬಹುದು ಜೊತೆಗೆ ಹ್ಯಾಟ್ರಿಕ್ ಹಿರೋ ಶಿವಣ್ಣಾನೂ ಇರ್ತಾರೆ.

ಉದಯಟವಿಯ “ಮಾನಸ ಸರೊವರ”ಇದೇ ಫೆಬ್ರವರಿ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 9.30ಕ್ಕೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.

#ManasaSarovara #Cineloka

ಆ್ಯಕ್ಷನ್‌ ಪ್ರಿನ್ಸ್‌ ಅರ್ಜುನ್‌ ಸರ್ಜಾ ತಮ್ಮ ಪುತ್ರಿಯನ್ನು ಕನ್ನಡದ ಜನತೆ ಮೆಚ್ಚಿಕೊಂಡುರುವುದಕ್ಕೆ ಖುಷಿಯಾಗಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಪ್ರೇಮ ಬರಹ ಚಿತ್ರದ ಮೂಲಕ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿದ್ದರು. ಈ ಚಿತ್ರ ಎಲ್ಲಡೆ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದ್ದೆ. ಈ ನಿಟ್ಟಿನಲ್ಲಿ ನಿರ್ದೇಶಕ ಕಮ್‌ ನಿರ್ಮಾಪಕ ಅರ್ಜುನ್‌ ಸರ್ಜಾ ಇತ್ತೀಚೆಗೆ ಪತ್ರಿಕಾ ಗೋಷ್ಠಿ ಕರೆದಿದ್ದರು.
’ನಾನು ತುಂಬಾ ಗೆಲುವನ್ನು ನೋಡಿದ್ದೇನೆ, ಸೋಲನ್ನು ನೋಡಿದ್ದೇನೆ. ಯಾವಾಗ ಬಿದ್ದರೂ ನಾನು ಡಿಪ್ರೆಸ್‌ ಆಗಿಲ್ಲ, ಯೋಚನೆ ಮಾಡಿಲ್ಲ ಈ ಸಿನಿಮಾ ಮಾಡುವಾಗಲೂ ಅಷ್ಟೇ ನನ್ನ ಮಗಳನ್ನು ನಾನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಕಾರಣದಿಂದ ಮಾಡಿದ್ದೇನೆ. ಇಂದು ಜನ ಅವಳ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಾಕಷ್ಟು ಜನ ನಿಮ್ಮ ಮಗಳ ನಟನೆ ಬಹಳ ಚೆನ್ನಾಗಿದ್ದು, ಮೊದಲ ಚಿತ್ರ ಎನ್ನಿಸುವುದಿಲ್ಲ. ಸುಮಾರು 50 ಚಿತ್ರಗಳಲ್ಲಿ ನಟಿಸಿದ ಕಲಾವಿದೆಯ ತರ ನಟಿಸಿದ್ದಾಳೆ ಎಂದಿದ್ದಾರೆ. ನನಗೆ ಈ ಸಿನಿಮಾ ಮಾಡಿದ್ದು ಖುಷಿಯಿದೆ,’ಎಂದಿದ್ದಾರೆ ಅರ್ಜುನ್‌ ಸರ್ಜಾ
ಜತೆಗೆ ಆ್ಯಕ್ಟಿಂಗ್‌ ಮತ್ತು ಡೈರೆಕ್ಷನ್‌ ಎರಡೂ ನನಗೆ ಇಷ್ಟ ಎಂದು ಅವರು ಹೇಳಿದ್ದಾರೆ. ಅರ್ಜುನ್‌ ಸರ್ಜಾ ಅವರಿಗೆ ಹಿಂದಿಯಲ್ಲಿಯೂ ಆಫರ್‌ ಬರುತ್ತಿದೆಯಂತೆ. ಆದರೆ ಈ ಚಿತ್ರಕ್ಕಾಗಿ ಯಾವುದನ್ನು ಒಪ್ಪಿಕೊಂಡಿರಲಿಲ್ಲವಂತೆ. ಒಟ್ಟಿನಲ್ಲಿ ಸರ್ಜಾ ಕುಟುಂಬದ ಐಶ್ವರ್ಯಾ ಸರ್ಜಾರನ್ನು ನಮ್ಮ ಜನ ಚೆನ್ನಾಗಿ ಸ್ವೀಕರಿಸಿದ್ದಾರೆ ಎಂಬುದು ತಿಳಿಯಿತು.
ಇನ್ನು ಐಶ್ವರ್ಯಾ ನಟನೆಯ ಬಗ್ಗೆ ಅಂಬರೀಷ್‌,ಸುದೀಪ್‌, ದರ್ಶನ್‌ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್‌ ನಟರು ಮೆಚ್ಚಿಕೊಂಡಿದ್ದಾರಂತೆ.
#PremaBaraha #Cineloka
 
 
ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು ವೀಕ್ಷಿಸಬಹುದು. ಗಣೇಶ್ ಎಂಬ ಯುವಕ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಪ್ರೇಮಿಗಳ ದಿನದಂದು ವಿಶೇಷವಾಗಿ ಬಿಡುಗಡೆಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ನಮಗೆ ಯಾರಾದರೂ ಮೋಸ ಮಾಡಿದಾಗ ಇವರೇ ಹಿಂಗಾ, ಎಲ್ಲರೂ ಹಿಂಗಾ ಅನ್ನೋ ಉದ್ಘಾರ ಬರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಹಾಡನ್ನು ಮಾಡಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಹೇಮಂತ್ ಮಾತನಾಡಿ ನಮ್ಮ ಬ್ಯಾನರ್‍ನಲ್ಲಿ ಮೂಡಿರುವ ಮೊಟ್ಟಮೊದಲ ಆಲ್ಬಂ ಹಾಡಿನ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು.
ಈ ಹಾಡಿನಲ್ಲಿ ರೋಹನ್ ರಾಜ, ವಿಜಯಶ್ರೀ ಎಂ.ಸಿ.ಬಿಜ್ಜು, ಅಕ್ಷಿತಾ, ಆರಾಧ್ಯ, ಅಮೂಲ್ಯ ಅಭಿನಯಿಸಿದ್ದಾರೆ. ಸುಮಾರು 7.8 ಲಕ್ಷಗಳ ಬಜೆಟ್‍ನೊಂದಿಗೆ ಈ ಹಾಡನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆಲ್ಬಂ ಸಾಂಗೊಂದನ್ನು ಚಾಪರ್ ಉಪಯೋಗಿಸಿ ಚಿತ್ರೀಕರಣ ಮಾಡಲಾಗಿದೆ. ಭಾನುಪ್ರತಾಪ್ ಈ ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ರಾಘವೇಂದ್ರ ಈ ಹಾಡಿಗೆ ಕಂಪೋಸ್ ಮಾಡಿದ್ದಾರೆ. ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಗಣೇಶ್.
#Cineloka

 

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ `ಉಡುಂಬ' ಕನ್ನಡ ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ದೊರಕಿದೆ ಎಂದು ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.

ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿರುವ ಈ ಚಿತ್ರದ ನಿರ್ಮಾಪಕರು ಹನುಮಂತ ರಾವ್, ವೆಂಕಟ್ ರೆಡ್ಡಿ ಹಾಗೂ ಮಹೇಶ್ ಕುಮಾರ್. 35 ದಿವಸಗಳಲ್ಲಿ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

ನಾಯಕ ಪವನ್ ಸೂರ್ಯ ಈ ಚಿತ್ರಕ್ಕೆ `ಸಿಕ್ಸ್ ಪ್ಯಾಕ್' ತಯಾರಿ ಸಹ ಮಾಡಿಕೊಂಡಿದ್ದಾರೆ. ಮೂರು ಸಾಹಸ ಸನ್ನಿವೇಶಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಚಿರಶ್ರೀ ಈ ಚಿತ್ರದ ಕಥಾ ನಾಯಕಿ. ಇರ್ಫಾನ್ ಖಳ ನಾಯಕ, ಶರತ್ ಲೋಹಿತಾಶ್ವ, ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಎಸ್ ಬಿ ಉದವ್ ಸಂಕಲನ ಈ ಚಿತ್ರಕ್ಕೆ ಒದಗಿಸಿದ್ದಾರೆ.

 
`ಸುವರ್ಣ ಸುಂದರಿ' ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ ಒಳಗೊಂಡಿದೆ.
ಬೆಂಗಳೂರು, ವಿಜಾಪುರ, ಹೈದರಾಬಾದ್, ಕೇರಳದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ್ಯ ಅವರು ತಿಳಿಸುತ್ತಾರೆ. ವಾಹಿನಿಗಳಲ್ಲಿ ಕೆಲಸ ಮಾಡಿ 10 ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಈ `ಸುವರ್ಣ ಸುಂದರಿ' ಚಿತ್ರವನ್ನ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯಕ್ಕೆ ಹೋಗಿ ಇಂದಿನ ಕಾಲಕ್ಕೆ ಸಿನಿಮಾ ಕಥೆ ಬಂದು ನಿಲ್ಲುತ್ತದೆ.
10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರಕ್ಕೆ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಷ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸಾಯಿ ಕಾರ್ತಿಕ್ ಅವರ ಸಂಗೀತ, ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರ ಒಳಗೊಂಡಿದೆ.
#SuvarnaSundari #Cineloka
 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಚಿತ್ರಕ್ಕೆ 'ಯಜಮಾನ' ಎಂಬ ಟೈಟಲ್‌ ಫಿಕ್ಸ್‌ ಆಗಿದೆ.
ಕೆಲ ವರ್ಷಗಳ ಹಿಂದೆ ಡಾ.ವಿಷ್ಣುವರ್ಧನ್‌ ನಾಯಕರಾಗಿ ನಟಿಸಿದ್ದ ಚಿತ್ರ ಟೈಟಲ್ ಇದಾಗಿದೆ. ಆ ಯಜಮಾನ ಕನ್ನಡ ಚಿತ್ರರಂಗದ ದೊಡ್ಡ ಹಿಟ್‌ ಚಿತ್ರ. 25 ವಾರಗಳ ಪ್ರದರ್ಶನ ಕಂಡಿತ್ತು. ಅಂತಹ ಯಶಸ್ವಿ ಸಿನಿಮಾದ ಟೈಟಲ್‌ನ್ನು ಮತ್ತೆ ಈಗ ದರ್ಶನ್‌ ಸಿನಿಮಾಗೆ ಬಳಸಿಕೊಳ್ಳಲಾಗುತ್ತಿದೆ.
 
ಬಿ ಸುರೇಶ್‌ ಮತ್ತು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಪಿ ಕುಮಾರ್‌ ಡೈರೆಕ್ಟ್‌ ಮಾಡುತ್ತಿದ್ದಾರೆ. ಈ ಹಿಂದೆ 'ವಿಷ್ಣುವರ್ಧನ' ಎಂಬ ಟೈಟಲ್‌ ಇರುವ ಚಿತ್ರವನ್ನು ಕುಮಾರ್‌ ಕಿಚ್ಚ ಸುದೀಪ್‌ಗಾಗಿ ನಿರ್ದೇಶನ ಮಾಡಿದ್ದರು. ಈಗ ಡಾ.ವಿಷ್ಣುವರ್ಧನ್‌ ಅವರ ಇನ್ನೊಂದು ಚಿತ್ರದ ಟೈಟಲ್‌ನ್ನು ಇಟ್ಟು ದರ್ಶನ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಬಾರಿ ದೊಡ್ಡ ಸಕ್ಸಸ್‌ ಕಂಡಿದ್ದ ಕುಮಾರ್‌, ಈ ಬಾರಿ ಮತ್ತೆ ಅದೇ ಹುರುಪಿನಲ್ಲಿದ್ದಾರೆ.
 
ಇನ್ನು ಈ ಚಿತ್ರದಲ್ಲಿ ದರ್ಶನ್‌ಗೆ ವಿಲನ್‌ ಆಗಿ ಧನಂಜಯ, ಅನುರಾಗ್‌ ಸಿಂಗ್‌ ಠಾಕೂರ್‌, ರವಿಶಂಕರ್ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದ್ದಾರೆ. ಫೆಬ್ರವರಿ 19ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
#Yajamana #Cineloka

ಇತ್ತೀಚೆಗೆ ಬಿಡುಗಡೆಯಾದ ಸಂಹಾರ ಚಿತ್ರದಲ್ಲಿ ಅಂಧನಾಗಿ ನಟಿಸಿ ಗಮನ ಸೆಳೆದ ಚಿರಂಜೀವಿ ಸರ್ಜಾ ಅಮ್ಮಾ ಐ ಲವ್‌ಯೂ ಚಿತ್ರದಲ್ಲಿ ಭಿಕ್ಷುಕನಾಗಿ ನಟಿಸಲಿದ್ದಾರೆ.

ತಮಿಳಿನಲ್ಲಿ ಸೂಪರ್‌ ಹಿಟ್‌ ಆಗಿದ್ದ ಪಿಚ್ಚಕಾರನ್‌ ಚಿತ್ರವನ್ನು ಕನ್ನಡಕ್ಕೆ ಕೆ ಎಂ ಚೈತನ್ಯ ರಿಮೇಕ್‌ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿ ಸಿತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ನಿಶ್ವಿಕಾ ನಾಯ್ಡು ಎಂಬ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಲಾಗುತ್ತಿದೆ. ಉಳಿದಂತೆ ಕರಿಸುಬ್ಬು, ನಟನ ಪ್ರಶಾಂತ್‌ ಮುಖ್ಯ ತಾರಾಗಣದಲ್ಲಿದ್ದಾರೆ.

 

ಇದು ದ್ವಾರಕೀಶ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾಗಿದ್ದು, ಕೆ ಎಂ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಅವರ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.

 

ಸುಮಾರು 54 ದಿನಗಳ ಕಾಲ ಉಡುಪಿ,ಬೆಂಗಳೂರು,ಮೈಸೂರಿನಲ್ಲಿ ಚಿತ್ರೀಕರಣ ಮಾಡಿರುವ ಚಿತ್ರತಂಡ ಈಗ ಡಬ್ಬಿಂಗ್‌ನಲ್ಲಿ ನಿರತವಾಗಿದೆ.

ಗುರು ಕಿರಣ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ,ಶೇಖರ್ ಚಂದ್ರ ಛಾಯಾಗ್ರಹಣವಿದೆ.

'ಅಕಿರ' ಸಿನಿಮಾದ ಬಳಿಕ ಅನೀಶ್‌ ತೇಜೆಶ್ವರ್‌ ನಟನೆಯ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್ ‌ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಈಗ ಆ ಚಿತ್ರಕ್ಕೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ.

ಪುನೀತ್‌ರಾಜ್‌ಕುಮಾರ್‌ ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ, ಇದರಲ್ಲೇನು ವಿಶೇಷ ಎಂದರೆ, ಅಪ್ಪು ಈ ಚಿತ್ರಕ್ಕೆ “ರಂಗೇರಿದೆ ಈ ಮನಸಿನ ಬೀದಿ” ಎಂದು ಶುರುವಾಗುವ ಒಂದು ರೊಮ್ಯಾಂಟಿಕ್‌ ಸಾಂಗ್‌ ಹಾಡಿದ್ದಾರೆ.

ಕಮರ್ಷಿಯಲ್‌ ಡೈಲಾಗ್ ಗಳ ಮೂಲಕ ಟೀಸರ್‌ನ್ನು ಸೆಳೆಯುವಂತೆ ಮಾಡಿದ್ದ ಅನಿಶ್‌ ಮತ್ತವರ ತಂಡ ಈಗ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್‌ ಅವರ ಕೈಯಲ್ಲಿ ಹಾಡಿಸಿದೆ.

ಅಜನೀಶ್‌ ಲೋಕನಾಥ್‌ “ವಾಸು...”ಗೆ ಸಂಗೀತ ನೀಡಿದ್ದಾರೆ.

ಪಕ್ಕಾ ಲೋಕಲ್ ಹುಡುಗ 'ವಾಸು' ಸುತ್ತ ಹೆಣೆದಿರುವ ಕಥೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್' . ಈ ಚಿತ್ರಕ್ಕೆ ಅಜಿತ್‌ವಾಸನ್‌ ಕ್ಯಾಪ್ಟನ್‌ ಆಗಿದ್ದಾರೆ.

ಈ ಕಥೆಯನ್ನು ಅನಿಶ್‌ಗೆ ಅಕಿರಾ ಟೈಮ್‌ನಲ್ಲಿ ಹೇಳಿದ್ದರಂತೆ. ಈ ವಾಸು ನಾನ್‌ ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ಅನಿಶ್‌ ಅವರೇ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ. ಟಾಕಿ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆಯಂತೆ.

ಜಗತ್ತಿನಲ್ಲೇ ತಂದೆ ತಾಯಿ ಪ್ರೀತಿಗಿಂತಲೂ ಮುಖ್ಯವಾದದ್ದು ಯಾವುದು ಇಲ್ಲ ಎಂಬುದನ್ನು ನಮ್ಮ ಯುವಕರಿಗೆ ತೋರಿಸಲು ಇದಂ ಪ್ರೇಮಂ ಜೀವನಂ ಎಂಬ ಚಿತ್ರ ಬರುತ್ತಿದೆ. ಸಂಪೂರ್ಣವಾಗಿ ಹೊಸಬರಿಂದಲೇ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಘವಾಂಕ ಪ್ರಭು ಎಂಬುವವರು ನಿರ್ದೇಶನ ಮಾಡಿದ್ದಾರೆ.

ಇವರ ಹೊಸ ರೀತಿಯ ಪ್ರಯತ್ನಕ್ಕೆ ಕೆಆರ್‌ಜಿ ಸ್ಟೂಡಿಯೋಸ್‌ನ ಕಾರ್ತಿಕ್‌ ಗೌಡ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಹಿಂದೆ ಗಣಿತ ಉಪನ್ಯಾಸಕರಾಗಿದ್ದ ರಾಘವಾಂಕ ಪ್ರಭು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ, ತಂದೆ-ತಾಯಿ ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. ಅವರಿಗಾಗಿ ಮಕ್ಕಳು ಏನು ಮಾಡುತ್ತಾರೆ ಎಂಬುದಕ್ಕೆ ಸ್ವಲ್ಪ ಕಮರ್ಷಿಯಲ್‌ ಟಚ್‌ ನೀಡಿ ಚಿತ್ರ ಮಾಡಿದ್ದಾರಂತೆ ನಿರ್ದೇಶಕ ರಾಘವಾಂಕ ಪ್ರಭು.

ಈ ಚಿತ್ರದಲ್ಲಿ ನಾಯಕ-ನಾಯಕಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕಥೆ ಎಂಜಿನಿಯರಿಂಗ್‌ ಕೊನೆ ಸೆಮಿಸ್ಟರ್‌ನಿಂದ ಆರಂಭವಾಗುತ್ತದೆ. ತಂದೆ ತಾಯಿ ಆಸೆ ಪೂರೈಸುವ ಸಲುವಾಗಿ ತಮ್ಮ ಪ್ರೀತಿ ತ್ಯಾಗ ಮಾಡಲು ಸಿದ್ಧರಾಗುವ ಕಥೆ ಇದರಲ್ಲಿದೆ .

ಕೆ ಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಬರೀ ಟ್ರೇಲರ್‌ ನೋಡಿ ಈ ಚಿತ್ರವನ್ನು ವಿತರಣೆ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರಂತೆ.

ಚಿತ್ರದಲ್ಲಿ ತಂದೆ ತಾಯಿಯಾಗಿ ಅವಿನಾಶ್‌ - ಮಾಳವಿಕಾ ನಟಿಸಿದ್ದಾರೆ. ಸನತ್‌ ಸನ್ನಿ, ಶನಾಯ ಕಾತ್ವೆ ಎಂಬ ಹೊಸ ಪ್ರತಿಭೆಗಳು ನಾಯಕ -ನಾಯಕಿ. ಈ ಚಿತ್ರವನ್ನು ರಿಯೋನೊ ಪ್ರೋಡಕ್ಷನ್‌ ಹೌಸ್‌ ನಿರ್ಮಿಸಿದ್ದು, ಇದು ಗೋಕುಲ್‌ ಎನ್‌. ಕೆ, ನವೀನ್‌ ಕುಮಾರ್‌ ಜೆ.ಪಿ, ರಾಘವಂಕ ಪ್ರಭು ಸೇರಿ ಸ್ಥಾಪಿಸಿರುವ ಸಂಸ್ಥೆ. ಚಿತ್ರದ ಟ್ರೇಲರ್‌ನ್ನು ಜನವರಿ 1ರಂದು ಬಿಡುಗಡೆಯಾಗಿತ್ತು.

ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಬೇಸಿಕಲ್‌, ನವೀನ್‌ ಪಂಚಾಕ್ಷರಿ ಎಂಬುವವರು ಸಿನಿಮಾಟೋಗ್ರಫಿ ಮಾಡಿದ್ದಾರೆ.

'ನನಗೆ ಸಿನಿಮಾ ಅಂದ್ರೆ ಬಹಳ ಇಷ್ಟ. ಇವತ್ತಿನ ಜನರೇಶನ್‌ಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದರಂತೆ ಇದಂ ಪ್ರೇಮಂ ಜೀವನಂ ಚಿತ್ರ ಮಾಡಿದ್ದೇನೆ. ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸಿನಿಮಾ ತಂಡ.

 

ಟೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರ "ಕಂತ್ರಿ ಬಾಯ್ಸ್" ಈವಾರ ಬಿಡುಗಡೆಯಾಗುತ್ತಿದೆ. ವೆಂಕಟ್ ಗೌಡ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಕಿರುತೆರೆಯ ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಕಾಮಿಡಿ ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ರಾಜು ಚಟ್ನಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಸಿ ಹೇಮಂತ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ ರಿಲೀಸ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಲು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಜು ಚಟ್ನಳ್ಳಿ ಇದೊಂದು ಸಪೂರ್ಣ ಹಾಸ್ಯ ಚಿತ್ರ. ಹಿಂದೆ ನಾನು ಕಾಮಿಡಿ ಸೀರಿಯಲ್‍ಗಳಿಗೆ ಕೆಲಸ ಮಾಡಿದ್ದು ಈ ಚಿತ್ರಕ್ಕೆ ಅನುಕೂಲಕರವಾಯಿತು. ಚಿತ್ರದ ಪ್ರತಿ ಸೀನ್ ಕಾಮಿಡಿಯಾಗಿದೆ. ಹೆಣ್ಣನ್ನು ಒಳ್ಳೇ ರೀತಿಯಲ್ಲಿ ನೋಡ ಎನ್ನುವುದೇ ನಮ್ಮ ಉದ್ದೇಶ. ಯಾವುದೋ ಕಾರಣಕ್ಕಾಗಿ ಪರಿಸ್ಥಿತಿಗೆ ಸಿಲುಕಿ ತಪ್ಪುದಾರಿ ಹಿಡಿದಿರುತ್ತಾರೆ. ಇಂಥವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಅಬೀನಯಿಸಿರುವವರು ಯಾರೂ ಹೊಸಬರ ಹಾಗೆ ಕಾಣುವುದಿಲ್ಲ. ಗಡ್ಡಪ್ಪ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದಾರೆ. ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದಾರೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಎಂ.ಸಿ. ಹೇಮಂತ ಗೌಡ ಮಾತನಾಡುತ್ತ ಈವರೆಗೆ ಚಿತ್ರರಂಗದಲ್ಲಿ ನಾನೂ ನಟನೆ, ಸಹನಿರ್ದೇಶನ ಅಂತ ತೊಡಗಿದ್ದೆ. ಈ ನಿರ್ದೇಶಕರು ಮಾಡಿದ್ದ ಕಥೆ ತುಂಬಾ ಇಷ್ಟವಾಯಿತು. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಜನರಿಗೆಖಂಡಿತ ಉತ್ತಮ ಮನರಂಜನೆ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ವಿತರಕ ವೆಂಕಟ ಗೌಡಮಾತನಾಡಿ ನಾನು ಒಂದೆರಡು ಚಿನಿಮಾ ರಿಲೀಸ್ ಮಾಡಿದ್ದೆ. ಸ್ವಂತ ಆಫೀಸ್ ಮಾಡಿದ ಮೇಲೆ ರಿಲೀಸ್ ಮಾಡುತ್ತಿರುವ ಮೊದಲ ಚಿತ್ರವಿದು. ಈವರೆಗೆ 75ರಿಂದ 80 ಚಿತ್ರಮಂದಿರಗಳು ಕನ್‍ಫರ್ಮ್ ಆಗಿವೆ. ಹತ್ತರಿಂದ ಹದಿನೈದು ಮಲ್ಟಿಪ್ಲೆಕ್ಸ್ ಕೂಡ ಸಿಕ್ಕಿವೆ, ಒಳ್ಳೇ ಸಿನಿಮಾ ಮಾಡಿದ್ದಾರೆ. ನನಗೂ ತುಂಬಾ ಇಷ್ಟವಾಯಿತು ಎಂದು ಹೇಳಿದರು.

'ತಿಥಿ' ಖ್ಯಾತಿಯ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರನ್ನು ಬಳಸಿಕೊಂಡು ಕಂತ್ರಿಬಾಯ್ಸ್ ಚಿತ್ರವನ್ನು ನಿರ್ದೇಶಕ ರಾಜು ಚಟ್ನಳ್ಳಿ ನಿರೂಪಿಸಿದ್ದಾರೆ. ಮರ್ಡರಿ ಮಿಸ್ಟ್ರಿಯ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಅನಿವಾರ್ಯ ಕಾರಣಕ್ಕೆ ವೈಶ್ಯಾವೃತ್ತಿಗೆ ಇಳಿಯಲು ಬರೀ ಹೆಣ್ಣಿನದಷ್ಟೇ ತಪ್ಪು ಇರುವುದಿಲ್ಲ ಬದಲಾಗಿ ಪುರುಷನದು ಇರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿ ಮತ್ತು ಕಾರಣಗಳನ್ನು ಕಂತ್ರಿಬಾಯ್ಸ್ ಮಾಡುವ ಕಂತ್ರಿ ಕಂತ್ರಿ ಕೆಲಸಗಳು ಮತ್ತು ಅದರಿಂದ ಸಮಾಜಕ್ಕೆ ಅಗುವ ಒಳ್ಳೆಯ ಕೆಲಸದ ಸುತ್ತಾ ಈ ಚಿತ್ರದ ಕಥೆ ಸಾಗಲಿದೆ.

ನಟ ಅರವಿಂದ್ ಮಾತನಾಡಿ ಇದು ನನ್ನ ಮೂರನೇ ಚಿತ್ರ. ಉದಾಸೀನತೆಯಿಂದ ಇರುವ ಹುಡುಗನಾಗಿ ಅಭಿನಯಿಸಿದ್ದೇಬೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ನಟಿಯರಾದ ಸಂಧ್ಯಾ, ಅನಕ, ಬಸಂತಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಹೇಮಂತ್ ಗೌಡ, ಜೋಕರ್ ಹನುಮಂತ್, ಹೇಮಂತ್ ಸೂರ್ಯ, ದರ್ಶನ್ ರಾಜ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೇಮಂತ್ ಗೌಡ ಅವರ ಜೊತೆ ನಿರ್ಮಾಣದಲ್ಲಿ ಎಂ.ಸಿ. ರೇಣುಕ, ಮೋಹನ್ ಕೆ. ಕೃಷ್ಣಮೂರ್ತಿ ಎಂ, ಶ್ರೀಧರ್‍ರಾಜು, ದರ್ಶನ್‍ರಾಜ್ ಕೈಜೋಡಿಸಿದ್ದಾರೆ. ಪಿ.ವಿ ಅರ್. ಸ್ವಾಮಿ ಅವರ ಛಾಯಾಗ್ರಹಣ, ಕಿರಣ್ ಮಹದೇವ್ ಅವರ ಸಂಗೀತ ಸಂಯೋಜನೆ, ಡಿ. ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಅಂಬಾರಿ, ಅದ್ಧೂರಿ ಸಿನಿಮಾಗಳ ಮೂಲಕ ಸ್ಟಾರ್‌ ನಿರ್ದೇಶಕರಾದ ಎ ಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಕಿಸ್ ಚಿತ್ರದ ನಾಯಕ ಮತ್ತು ನಾಯಕಿಯ ಪಾತ್ರ ಗಳನ್ನು ಪರಿಚಯಿಸುವ ಫಸ್ಟ್ ಲುಕ್ ಟೀಸರ್ ನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.

 

ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ವಿ. ರವಿಕುಮಾರ್ ನಿರ್ಮಾಣದ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವ ವಿರಾಟ್ ಹಾಗೂ ಶ್ರೀಲೀಲಾ ಪಾತ್ರಗಳನ್ನು ಪರಿಚಯ ಮಾಡುವ ಒಂದು ನಿಮಿಷದ ವಿಡಿಯೋವನ್ನು ಫೆ. 14ರಂದು ಬಿಡುಗಡೆ ಮಾಡಲಿದ್ದಾರೆ ಅರ್ಜುನ್.

 

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್‌ಲುಕ್‌ ಮತ್ತು ಫೋಟೋಗಳು ಫ್ರೆಶ್‌ ಫೀಲ್‌ ಕೊಡುತ್ತಿದೆ ಎಂಬ ಮಾತುಗಳು ಆನ್‌ಲೈನ್‌ನಲ್ಲಿ ವ್ಯಕ್ತವಾಗಿದೆ.

 

ನಾಯಕಿ ಪಾತ್ರಕ್ಕಾಗಿ ಎಪಿ ಅರ್ಜುನ್ ಸುಮಾರು 200 ಕ್ಕೂ ಹೆಚ್ಚು ಹುಡುಗಿಯರನ್ನು ಆಡಿಶನ್ ಮಾಡಿ, ಕೊನೆಗೆ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದಾರೆ. ನಾಯಕ ವಿರಾಟ್‌ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷದ ವ್ಯಾಲೆಂಟೇನ್ಸ್ ಡೇ‌ ದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಮಾಡಿದ್ದರು.

 

ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

Page 9 of 15

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top