tarakaasura

ttm

adweb

udgharsha

 
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 51 ನೇ ಸಿನಿಮಾಗೆ ಎಲ್ಲ ತಯಾರಿಗಳು ನಡೆಯುತ್ತಿವೆ. ಈಗ ಈ ಚಿತ್ರಕ್ಕೆ ಸ್ಪೆಷಲ್‌ ಸ್ಟಾರ್‌ ಧನಂಜಯ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
 
ಹೌದು ಟಗರು ಚಿತ್ರದಲ್ಲಿ ನೆಗೆಟಿವ್‌ ರೋಲ್‌ ಮಾಡಿದ್ದ ಧನಂಜಯ,ದರ್ಶನ್‌ ಅವರ 51 ನೇ ಚಿತ್ರದಲ್ಲಿ ಆ್ಯಂಟಿ ಹೀರೋ ಆಗಿ ನಟಿಸುತ್ತಿದ್ದಾರೆ. ಟಗರು ಚಿತ್ರದ ಡಾಲಿ ಕ್ಯಾರೆಕ್ಟರ್‌ಗೆ ಈಗಾಗಲೇ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. ಧನಂಜಯ ನಟನೆಯ ಬಲ್ಲುಮಾ ಹಾಡಿನ ಲಿರಿಕಲ್‌ ವಿಡಿಯೋವನ್ನು ಮಿಲಿಯನ್‌ಗಟ್ಟಲೇ ಜನ ನೋಡಿದ್ದಾರೆ.
 
ಶಿವರಾಜ್‌ಕುಮಾರ್‌ ಎದುರು ಗುದ್ದಾಡಿದ್ದ ಧನಂಜಯ ಈಗ ದರ್ಶನ್‌ ಎದುರು ವಿಲನ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್‌ ನಾಯಕಿಯರಾಗಿದಾರೆ. ವಿಷ್ಣು ವರ್ಧನ ಚಿತ್ರ ಖ್ಯಾತಿಯ ಪಿ ಕುಮಾರ್‌ ಇದರ ನಿರ್ದೇಶಕರು. ಟಗರು ಚಿತ್ರದ ಧನಂಜಯ ಅವರ ಖಡಕ್‌ ಲುಕ್‌ ನೋಡಿ, ಈ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
 
 
ಒಟ್ಟಿನಲ್ಲಿ ಧನಂಜಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಿಗೆ ಟಕ್ಕರ್‌ ಕೊಡುವ ವಿಲನ್‌ ಆಗುತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ದರ್ಶನ್‌ ಹುಟ್ಟುಹುಬ್ಬವಾದ ನಂತರ ಶೂಟಿಂಗ್‌ ಆರಂಭವಾಗಲಿದೆ. ಚಿತ್ರವನ್ನು ಮೀಡೀಯ ಹೌಸ್ ಬ್ಯಾನರ್‌ನಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ ಅವರು ನಿರ್ಮಿಸುತ್ತಿದ್ದಾರೆ.
#Cineloka #ChallengingStarDarshan #SpecialStarDhananjaya

 

ಶರಣ್‌,ಆಶಿಕಾ ನಟನೆಯ "ರಾಂಬೊ-2" ಚಿತ್ರ ತಂಡ ಶರಣ್‌ ಬರ್ತ್‌ಡೇ ಪ್ರಯುಕ್ತ ಆ ಚಿತ್ರದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.

 

ಸ್ಟೈಲಿಷ್‌ ಪೋಸ್ಟರ್‌ಗಳು ಮತ್ತು ಆಶಿಕಾ ಅವರ ಗ್ಲಾಮರಸ್‌ ಸ್ಟಿಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಈಗಾಗಲೇ ಒಂದು ಹವಾ ಕ್ರಿಯೇಟ್‌ ಮಾಡಿರುವ "ರಾಂಬೊ-2" ಚಿತ್ರದ 'ಯವ್ವಾ ಯವ್ವಾ' ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ.

 

ಈ ಹಾಡಿನಲ್ಲಿ ಶರಣ್‌ ಮತ್ತು ಆಶಿಕಾ ರಂಗನಾಥ್‌ ಸಖತ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಡು ಕೂಡಾ ಅದ್ಧೂರಿಯಾಗಿ ಚಿತ್ರೀಕರಣಗೊಂಡಿದ್ದು, ನೋಡುಗರನ್ನು ಮೊದಲ ನೋಟಕ್ಕೆ ಸೆಳೆಯುತ್ತಿದೆ.ಶರಣ್ ಅವರ ಡ್ಯಾನ್ಸ್ ಸ್ಟೆಪ್ಸ್ ನೋಡಿ ಜನರು ಖುಷಿಯಾಗಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡಿಗೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ಯುಟೂಬ್‌ನಲ್ಲಿ ವೀಕ್ಷಿಸಿದ್ದಾರೆ.

 

ದಿಲ್‌ವಾಲಾ ಖ್ಯಾತಿಯ ಅನಿಲ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರಕ್ಕೆ ರಾಮೇಶ್ವರಂನಿಂದ ಪಾಕಿಸ್ತಾನದ ಗಡಿವರೆಗೆ ಶೂಟಿಂಗ್‌ ಮಾಡಲಾಗಿದೆ. ಇಡೀ ಸಿನಿಮಾದ ರೋಡ್‌ನಲ್ಲಿಯೇ ನಡೆಯುತ್ತದೆ. ಚಿಕ್ಕಣ್ಣ ಮೊದಲ ಬಾರಿಗೆ ಬೇರೆ ತರಹದ ಪಾತ್ರದಲ್ಲಿ ನಟಿಸಿದ್ದು, ಅವರು ಇರುವ ಪ್ರತಿ ಸೀನ್‌ನಲ್ಲಿಯೂ ಎಲ್ಲರನ್ನು ನಗಿಸುತ್ತಾರಂತೆ.ಈ ಸಿನಿಮಾದಲ್ಲಿ ಕಾರು ಕೂಡ ಒಂದು ಪ್ರಮುಖ ಪಾತ್ರವಹಿಸಿದೆಯಂತೆ.

 

ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ "ರಾಂಬೊ-2" ಸಖತ್‌ ಸದ್ದು ಮಾಡುತ್ತಿದೆ. ಅಂಟ್ಲಾಂಟ ನಾಗೇಂದ್ರ, ಅರ್ಜುನ್‌ ಜನ್ಯ, ಮೋಹನ್‌ ಬಿ ಕೆರೆ, ಸುಧಾಕರ್‌, ತರುಣ್‌ ಸುಧೀರ್‌ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

 

ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಮಿಸ್ಟರ್ ಎಲ್.ಎಲ್.ಬಿ. ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪ್ರೇಮ್ ಅಭಿನಯದ ಗುಣವಂತ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ರಘುವರ್ಧನ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ. ಫೆಬ್ರವರಿ 16 ರಂದು ಸುಮಾರು 70 ರಿಂದ 80 ಥಿಯೇಟರುಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರದ ಬಿಡುಗಡೆಯ ಕುರಿತಂತೆ ವಿವರಗಳನ್ನು ಹಂಚಿಕೊಳ್ಳಲು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಟಿಯನ್ನು ಆಯೋಜಿಸಿತ್ತು.

ನಿರ್ದೇಶಕ ರಘುವರ್ಧನ್ ಮಾತನಾಡುತ್ತ ಈ ತಂಡದಲ್ಲಿ ನಾನೊಬ್ಬ ಹಳಬನಾಗಿದ್ದರೂ ಉಳಿದವರೆಲ್ಲ ಹೊಸಬರು. ಇಷ್ಟು ದಿನ ನಿರ್ದೇಶನ ಮಾಡಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. 2 ಜನರೇಶನ್‍ನಲ್ಲಿ ನಡೆಯುವ ಕಥೆಯಿದು ಎಂದು ಹೇಳಿದರು. ನಾಯಕ ಶಿಶಿರ್ ಮಾತನಾಡುತ್ತ ಸೀರಿಯಲ್ ಮೂಲಕವೇ ನಾನು ಚಿತ್ರರಂಗಕ್ಕೆ ಬಂದೆ. ಒಬ್ಬ ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಏನೇನು ಬೇಕೋ ಅದೆಲ್ಲ ಈ ಚಿತ್ರದಲ್ಲಿದೆ. ಒಬಬ್ ಗೌಡನ ಮಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ನಾಯಕಿ ಲೇಖಾಚಂದ್ರ ಮಾತನಾಡಿ ತುಂಬಾ ಕ್ಯೂಟ್ ಆಗಿರುವಂಥ ಹಾಗೂ ನಾಯಕನಿಗೆ ಯಾವಾಗಲೂ ಕ್ವಾಟ್ಲೆ ಕೊಡುವಂಥ ಪಾತ್ರ ಎಂದು ತನ್ನ ಪಾತ್ರವನ್ನು ವಿವರಿಸಿದರು. ಉಳಿದಂತೆ ನಾರಾಯಣಸ್ವಾಮಿ, ಕೆಂಪೇಗೌಡ, ಹಾಗೂ ಸುಜಯ್ ಹೆಗಡೆ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.

ಮಂಜು ಚರಣ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರತಿ ಹಾಡುಗಳು ವಿಶೇಷತೆಯಿಂದ ಕೂಡಿವೆ. ಬಾಂಬೆ ಬೆಡಗಿಯೊಬ್ಬಳ ಅಭಿನಯದಲ್ಲಿ ಮೂಡಿಬಂದಿರುವ ಐಟಮ್ ಹಾಡೊಂದರಲ್ಲಿ ಉಪಹಾರಗಳ ಬಗ್ಗೆಯೇ ಉಲ್ಲೇಖಿಸಲಾಗಿದೆ. ಇಡ್ಲಿ ವಡಾ ಸಾಂಬಾರ್, ಬೆಂಗಳೂರು ಮಂಗಳೂರು ನಂದೇನೇ ದರ್ಬಾರು ಎಂಬ ಈ ಹಾಡು ಎಲ್ಲಾ ಕಡೆ ವೈರಲ್ ಆಗಿದೆ. ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ, ಪ್ರೇಮದ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ನವಿರಾದ ಹಾಸ್ಯವನ್ನು ಕೂಡ ಹೇಳಲಾಗಿದೆ.

ಈ ಚಿತ್ರಕ್ಕೆ ಸುರೇಶ್ ಬಾಬು ಅವರ ಛಾಯಾಗ್ರಹಣ, ರಾಜು ಬೆಳಗೆರೆ ಅವರ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಅವರ ಸಂಕಲನ, ಗೌಸ್‍ಪೀರ್, ಮಂಜುಚರಣ್ ಅವರ ಸಾಹಿತ್ಯ, ಕಲೈ ಮಾಸ್ಟರ್, ತ್ರಿಭುವನ್ ಅವರ ನೃತ್ಯ ನಿರ್ದೇಶನ ಹಾಗೂ ಪ್ರಭು ಅವರ ಕಲಾನಿರ್ದೇಶನವಿದೆ. ಶಿಶಿರ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ್ರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತಾ ಆಚಾರ್ಯ, ನಾರಾಯಣಸ್ವಾಮಿ, ಡೈಮಂಡ್ ರಾಜಣ್ಣ, ಡಾ|| ಸೋಮಶೇಖರ್, ರಾಮಣ್ಣ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಡಾ.ಶಿವಣ್ಣ ಈಗ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ತೆಲುಗಿನಲ್ಲಿ ಬಾಹುಬಲಿ ಖ್ಯಾತಿಯ ರಾಣಾ ನಡೆಸಿಕೊಡುತ್ತಿರುವ ನಂ 1 ಯಾರಿ ವಿತ್ ರಾಣಾ ಶೋದ ಕನ್ನಡ ಅವತರಿಣಿಕೆ ಇದಾಗಿದ್ದು, ಇದಕ್ಕೆ "ನಂ 1 ಯಾರಿ ವಿತ್ ಶಿವರಾಜ್‌ಕುಮಾರ್" ಎಂದು ಹೆಸರಿಡಲಾಗಿದೆ.
ಇದರಲ್ಲಿ ಶಿವರಾಜ್‌ಕುಮಾರ್ ಸಿಲೆಬ್ರೆಟಿ ಮತ್ತು ಅವರ ನಿಜ ಜೀವನದ ಸ್ನೇಹಿತರ ಜತೆ ಮಾತುಕತೆ ನಡೆಸಲಿದ್ದಾರಂತೆ. ಜತೆಗೆ ಸಿಲೆಬ್ರೆಟಿಗಳ ಜತೆ ಆಟವಾಡಿಕೊಂಡು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರಂತೆ.
ಶಿವಣ್ಣ ಜತೆ ಉಪೇಂದ್ರ, ಶ್ರುತಿಹರಿಹರನ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಸಾಕಷ್ಟು ಮಂದಿ ಸಿಲೆಬ್ರೆಟಿಗಳು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
#KarunadaChakrvarthy #DrShivanna #Cineloka
 
ಲೂಸ್ ಮಾದ ಯೋಗೀಶ್ ನಟನೆಯ ದುನಿಯಾ-2 ಈಗ 'ಯೋಗಿ ದುನಿಯಾ' ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದ ಸೆನ್ಸಾರ್ ಆಗಿದ್ದು, ಮಾರ್ಚ್ 9ಕ್ಕೆ ಚಿತ್ರಮಂದಿರಕ್ಕೆ ಬರುತ್ತದಂತೆ.
ಫೆ.23ರಂದು 'ಯೋಗಿ ದುನಿಯಾ'ವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ತೀರ್ಮಾನ ಮಾಡಿದ್ದರು. ಆದರೆ ಅಂದು ಟಗರು ಬಿಡುಗಡೆಯಾಗುವ ಕಾರಣ ಅದನ್ನು ಮಾರ್ಚ್ 9ಕ್ಕೆ ಮುಂದೂಡಿದ್ದಾರೆ.
ಟ್ರೇಲರ್ ಮತ್ತು ಸಿನಿಮಾದ ಫೋಟೋಗಳಿಂದ 'ಯೋಗಿ ದುನಿಯಾ' ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ದುನಿಯಾದಂತೆ ಇದು ಸಹ ಪಕ್ಕಾ ರೌಡಿಸಂ ಚಿತ್ರವಾಗಿದ್ದು ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ವಿಲನ್ ಆಗಿ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯೋಗಿಯವರ ಸಹೋದರ ಮಹೇಶ್ ಇಲ್ಲಿ ಮುಸ್ಲೀಂ ಯುವಕನಾಗಿ ನಟಿಸುತ್ತಿದ್ದಾರೆ.
ಹರಿ ಎಂಬುವವರು ಇದೇ ಮೊದಲ ಬಾರಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಖಡಕ್ ಡೈಲಾಗ್‌ಗಳಿದ್ದು, ಇದು ಪಕ್ಕಾ ಜನರನ್ನು ಮನರಂಜಿಸುತ್ತದೆ. ಸಂಭಾಷಣೆಯನ್ನು ನಿರ್ದೇಶಕ ಹರಿಯವರೇ ಬರೆದಿದ್ದಾರೆ. ಬಿ ಜೆ ಭರತ್ ಈ ಚಿತ್ರಕ್ಕೆ ಸಾಂಗ್ ಕಂಪೋಸ್ ಮಾಡಿದ್ದಾರೆ.
#YogiDuniya #Cineloka

ವಿನೂತನ ಥ್ರಿಲ್ಲರ್ ಕಥೆ ಹೊಂದಿದ ಚತುರ ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. 

ಮೊನ್ನೆಯಷ್ಟೇ ಬಿಡುಗಡೆಯಾದ ಗಾಯತ್ರಿ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮುನಿ ಹಾಗೂ ಪೂಜಾ ಲೋಕೇಶ್ ನಾಯಕ, ನಾಯಕಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸತ್ಯ ಸಾಮ್ರಾಟ್ ಒಬ್ಬ ಹುಡುಗಿ ಹಳ್ಳಿಯಲ್ಲಿ ಮಿಸ್ ಆಗಿ ಸಿಟಿಗೆ ಬಂದಾಗ ಆಕೆಯನ್ನು ಜನ ಹೇಗೆ ಕಾಣುತ್ತಾರೆ, ಪೋಲೀಸ್ ಹೇಗೆ ಟ್ರೇಸ್ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ನೂರು ಜನ ಮಿಸ್ ಆದರೆ ಅವರಲ್ಲಿ 70 ಜನ ಸಿಗೋದೇ ಇಲ್ಲ, ಅವರೆಲ್ಲ ಎಲ್ಲಿಗೆ ಹೋಗ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಕಂಡುಹಿಡಿಯವ ಪ್ರಯತ್ನ ಮಾಡಲಾಗಿದೆ. ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುತ್ತಿರುವ ಸತ್ಯ ಸಾಮ್ರಾಟ್ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದಾರೆ.

 

ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿಯನ್ನು ಜನ ಹೇಗೆಲ್ಲ ಕಾಣುತ್ತಾರೆ ಎಂಬ ಅಂಶದ ಮೇಲೆ ಈ ಕಥೆ ನಡೆಯಲಿದೆ. ಖಳ, ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ನಟ ಮುನಿ ಅಪರೂಪಕ್ಕೆನ್ನುವಂತೆಈ ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಟಿ ಪೂಜಾ ಲೋಕೇಶ್ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ನಾಯಕಿಯಾಗಿ ನಟಿಸುವ ಮೂಲಕ ಬಣ್ಣ ಹಚ್ಚಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 12 ವರ್ಷಗಳ ನಂತರ ನನ್ನ ಪುನರಾಗಮನ ಎಂದೇ ಹೇಳಬಹುದು. 2ನೇ ಇನ್ನಿಂಗ್ಸ್. ತುಂಬಾ ಪವರ್ ಫುಲ್ ಪಾತ್ರವನ್ನು ಈ ಚಿತ್ರದಲ್ಲಿ ಪ್ಲೇ ಮಾಡ್ತಿದೇನೆ. ಒಬ್ಬ ಹಳ್ಳೀ ಹುಡುಗಿಯಾದ ನನಗೆ 4-5ಷೇಡ್ಸ್ ಇದೆ. ಎಂದು ಹೇಳಿಕೊಂಡರು.

 

ಶ್ರೀ ದಳವಾಯಿ ಬೀರೇಶ್ವರ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಮಂಜು.ಎಸ್. ಪಟೇಲ್ ಹಾಗೂ ಸುಮತಿ ಶ್ರೀನಿವಾಸ್ ನಿರ್ಮಿಸುತ್ತಿರುವ ಚತುರ ಚಿತ್ರಕ್ಕೆ ವಿನೋದ್ ಭಾರತಿ ಅವರ ಛಾಯಾಗ್ರಹಣವಿದೆ. ಚಿತ್ರದ 4 ಹಾಡುಗಳಿಗೆ ಅಭಿಷೇಕ್ ರಾಯ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಎಸ್.ಸಾಮ್ರಾಟ್ ಸಾಹಿತ್ಯ, ದುರ್ಗ ಪಿ.ಎಸ್. ಸಂಕಲನವಿದೆ. ಮುನಿ, ಪೂಜಾ ಲೋಕೇಶ್, ರಮೇಶ್ ಪಂಡಿತ್, ಶೋಭರಾಜ್, ಹರೀಶ್ ರಾಯ್ ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕರುಣಾಕರ್, ಲಕ್ಷ್ಮೀ ಸಿದ್ದಯ್ಯ, ವಾಸು, ಮೈಕೋ ನಾಗರಾಜ್ ಅನಂತ್ ವೇಲು, ಅಪೂರ್ವ, ರಾಣಿ ಮುಂತಾದವರು ತಾರಾಬಳಗವಿದೆ.

ದಿನೇ ದಿನೇ ಸದ್ದು ಮಾಡುತ್ತಿರುವ ಸಂಹಾರ ಚಿತ್ರದಲ್ಲಿ ನಟಿ ಕಾವ್ಯ ಶೆಟ್ಟಿ ಜರ್ನಲಿಸ್ಟ್ ಜಾನಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಹಿಂದಿನ ಸಿನಿಮಾ 3 ಗಂಟೆ, 30 ನಿಮಿಷ ,30 ಸೆಕೆಂಡ್‌ ಸಿನಿಮಾದಲ್ಲಿಯೂ ಜರ್ನಲಿಸ್ಟ್ ರೋಲ್‌ನಲ್ಲಿ ಕಾವ್ಯ ಶೆಟ್ಟಿ ನಟಿಸಿದ್ದರು. ಅಲ್ಲದೆ ಮೊದಲ ಬಾರಿಗೆ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ ಖುಷಿ ಅವರಿಗೆ ಇದೆಯಂತೆ. ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಗೆ ನಾಯಕಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಚಿರು ಜತೆ ಕೆಲಸ ಮಾಡುವುದು ಒಂದೊಳ್ಳೆ ಎಕ್ಸ್‌ಪಿರಿಯನ್ಸ್ ಎನ್ನುತ್ತಾರವರು. ಸಂಹಾರದಲ್ಲಿ ಚಿರು, ಚಿಕ್ಕಣ್ಣ, ಕಾವ್ಯ ಶೆಟ್ಟಿ ಸೇರಿಕೊಂಡು ಒಂದು ಕೊಲೆಯ ಹಿಂದೆ ಬೀಳುತ್ತಾರೆ. ಸಿನಿಮಾದ ಸೆಕೆಂಡ್‌ ಆಫ್‌ ಪೂರಾ ಕಾವ್ಯ ಶೆಟ್ಟಿ ಪಾತ್ರ ಬರುತ್ತದಂತೆ.

ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕಥೆ ಸಾಗಲಿದೆ. ಮಂಗಳೂರಿನ ಎಪಿಸೋಡ್​ನಲ್ಲಿ ಚಿಕ್ಕಣ್ಣ ಇರಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿರುವ ಹಾಡುಗಳು ಈಗಾಗಲೇ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಜೆ.ಎಸ್. ವಾಲಿ ಛಾಯಾಗ್ರಹಣ ಮಾಡಿದ್ದಾರೆ. ಎ. ವೆಂಕಟೇಶ್ ಮತ್ತು ಆರ್. ಸುಂದರ್ ಕಾಮರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

ನಿರ್ದೇಶಕ ಎಸ್ ನಾರಾಯಣ್ ಮತ್ತೆ ಸಿನಿಮಾ ಮಾಡುತ್ತಿದ್ದು ಈ ಬಾರಿ ಅವರು ಕಾಲೇಜು ಕಥೆಯನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ತಮ್ಮ ಹಿರಿಯ ಪುತ್ರ ಪಂಕಜ್ ಅವರನ್ನೇ ನಾಯಕರನ್ನಾಗಿಸಿದ್ದಾರೆ.

ಮನಸು ಮಲ್ಲಿಗೆ ಆದ ಮೇಲೆ ಎಸ್ ನಾರಾಯಣ್ ಮಾಜಿ ಸಿಎಂ ಕುಮಾರಸ್ವಾಮಿಯವರ 20 ತಿಂಗಳ ಅಧಿಕಾರಾವಧಿಯನ್ನು ಆಧರಿಸಿ ಭೂಮಿ ಪುತ್ರ ಎಂಬ ಚಿತ್ರ ಮಾಡಲು ಹೊರಟಿದ್ದರು. ಇದಕ್ಕೆ ಮುಹೂರ್ತ ಸಹ ನಡೆದಿತ್ತು, ಆದರೆ ಯಾವುದೋ ಕಾರಣಕ್ಕೆ ಈ ಚಿತ್ರ ಮುಹೂರ್ತ ಮಾಡಿದ್ದಷ್ಟೇ ಬಂತು, ಅಲ್ಲಿಂದ ಮುಂದಕ್ಕೆ ಹೋಗಲೇ ಇಲ್ಲ. ಈಗ ತಮ್ಮ ಹಿರಿಯ ಪುತ್ರ ಪಂಕಜ್‌ಗಾಗಿ ಕಾಲೇಜು ಸ್ಟೋರಿಯನ್ನು ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

‘ಈ ಚಿತ್ರದಲ್ಲಿ ಕಾಲೇಜು ಹುಡುಗರ ನಡುವೆ ನಡೆಯುವ ಕತೆ ಇದೆ. ಲೈಫ್‌ನ ಎಂಜಾಯ್‌ಮೆಂಟ್, ಆ ಎಂಜಾಯ್ ಮಾಡುವಾಗ ಏನೆಲ್ಲ ಅನಾಹುತ ನಡೆಯುತ್ತದೆ. ಇದರಿಂದ ಅವರ ಪೋಷಕರಿಗೆ ಏನು ತೊಂದರೆಯಾಗುತ್ತದೆ ಎಲ್ಲವೂ ಇರುತ್ತದೆ. ಸಧ್ಯಕ್ಕೆ ಪಂಕಜ್ ಮಾತ್ರ ನಟಿಸುತ್ತಿದ್ದಾರೆ. ಉಳಿದ ಕಲಾವಿದರ ಆಯ್ಕೆ ಸದ್ಯದಲ್ಲೇ ನಡೆಯುತ್ತದೆ., ಎಂದು ನಾರಾಯಣ್ ಹೇಳುತ್ತಾರೆ.

ಇನ್ನು ಈ ಚಿತ್ರಕ್ಕೆ ಅಶೋಕ್ ಶೇಠ್, ಶ್ರೀನಿವಾಸನ್ ದೊರೈ, ಫಾರುಕ್ ಪಾಶಾ ಬಂಡವಾಳ ಹೂಡುತ್ತಿದ್ದಾರೆ.

ಮದರಂಗಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ಮಲ್ಲಿಕಾರ್ಜುನ ಮತ್ತಲಗೆರೆ ಈಗ ತಮ್ಮ ಮೂರನೇ ಚಿತ್ರವನ್ನು ಫೆಬ್ರವರಿ 23ರಂದು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ಈ ಚಿತ್ರಕ್ಕೆ ರಂಗ್‌ಬಿರಂಗಿ ಎಂದು ಹೆಸರಿಟ್ಟಿದ್ದು,ಕಳೆದ ತಿಂಗಳು ಹಾಡುಗಳು ಬಿಡುಗಡೆಯಾಗಿದ್ದು, ಮಣಿಕಾಂತ್ ಕದ್ರಿ ಸಂಗೀತದ ಹಾಡುಗಳು ಕೇಳುಗರನ್ನು ಸೆಳೆಯುತ್ತಿವೆ. ಸದ್ಯದಲ್ಲೇ ತೆರೆ ಮೇಲೆ ಬರಲು ಸಿದ್ದವಾಗಿರುವ ಈ ಚಿತ್ರದಲ್ಲಿ ಶರಣ್, ಪಂಜು, ಶ್ರೀಜಿತ್ ನಾಯಕರಾದರೆ ತಾನ್ವಿ ಎಂಬ ಹೊಸ ಹುಡುಗಿ ನಾಯಕಿಯಾಗಿದ್ದಾರೆ.

ಮಲ್ಲಿಕಾರ್ಜುನ್ ಈ ಬಾರಿ ಪೂರ್ತಿ ಯವ ಮನಸುಗಳನ್ನೆ ದೃಷ್ಟಿಯಲ್ಲಿಟ್ಟುಕೊಂಡು ಕಥೆ ಮಾಡಿದ್ದಾರೆ. ಇದು ಹದಿನೆಂಟರಿಂದ ಇಪ್ಪತ್ತೆರಡರ ಆಸುಪಾಸಲ್ಲಿರೋ ಈಗಿನ ಹುಡುಗರ ಸುತ್ತ ನಡೆಯುವ ಕತೆಯಾಗಿದೆ. ಈಗಿನ ಯುವ ಸಮುದಾಯ ಇಡೀ ಬದುಕನ್ನೇ ಲೈಟ್ ಆಗಿ ತೆಗೆದುಕೊಂಡು ನೋಡೋ ಮನಸ್ಥಿತಿ ಹೊಂದಿದ್ದಾರೆ.
ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಇಂಥಾ ವಯೋಮಾನದ ಯುವಕರ ವಲಯದಲ್ಲಿ ನಡೆಯೋ ಲವ್ ಕಹಾನಿ, ಅದರಿಂದ ಆಗುವ ಪರಿಣಾಮಗಳನ್ನು ಇಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ.ಯುವಕರ ಕಥೆ ಇದ್ದರೂ ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎನ್ನುವುದು ನಿರ್ದೇಶಕ ಮಲ್ಲಿಕಾರ್ಜು ನ್ ಅವರ ಮಾತು.

ಚಿತ್ರವನ್ನು ರಾಮನಗರ ಮೂಲಾದ ಶಾಂತಕುಮಾರ್ ಅವರು ನಿರ್ಮಿಸಿದ್ದಾರೆ.

ಹೂ ಮಳೆ, ಬೆಳದಿಂಗಳ ಬಾಲೆ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮ ಸಹಜ ಸುಂದರದಿಂದ ಕನ್ನಡಿಗರ ಮನ ಮನೆ ಗೆದ್ದಿದ್ದ ಸುಮನ್‌ ನಗರ್‌ಕರ್‌ ವಿವಾಹವಾಗಿ ಅಮೇರಿಕಾಗೆ ಹಾರಿ ಹೋಗಿದ್ದರು. ಈಗ ಸಿನಿಮಾ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ವಾಪಾಸ್‌ ಬಂದಿದ್ದಾರೆ.

 

ಹೌದು ಸುಮನ್‌ ನಗರ್‌ಕರ್‌ ಬಬ್ರೂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಸಂಪೂರ್ಣ ಅಮೇರಿಕಾದಲ್ಲಿಯೇ ಚಿತ್ರೀಕರಣಗೊಂಡಿದ್ದು, ಇದರಲ್ಲಿ ಸುಮನ್‌ ನಗರ್‌ಕರ್‌ ಸಹ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿರುವ ಭಾರತೀಯ ಮೂಲದ ಅರ್ಜುನ್‌, ಅದೇ ದೇಶದಲ್ಲಿರುವ ವ್ಯಾಂಕೋವರ್ನಲ್ಲಿರುವ ತನ್ನ ಗೆಳತಿ ಮಾಯಾಳನ್ನು ಪ್ರೀತಿಸುತ್ತಿರುತ್ತಾನೆ. ಒಮ್ಮೆಯೂ ಭೇಟಿಯಾಗದ ಕಾರಣ ಒಮ್ಮೆ ವ್ಯಾಂಕೋವರ್‌ಗೆ ಹೋಗಲು ಅರ್ಜುನ್‌ ನಿರ್ಧಾರ ಮಾಡುತ್ತಾನೆ. ಇದು ಒಂದು ಕಡೆ ನಡೆಯುತ್ತಿರುವ ಕತೆಯಾದರೆ. ಮತ್ತೊಂದೆಡೆ ಅಮೇರಿಕಾದಲ್ಲಿರುವ ಸನಾ ಎಂಬ ಭಾರತೀಯ ಮಹಿಳೆ ತನ್ನ ಗಂಡನಿಂದ ಮುಕ್ತಿ ಪಡೆಯಲು ಹಾತೋರಿಯುತ್ತಿರುತ್ತಾಳೆ. ಅವಳು ಸಹ ವ್ಯಾಂಕೋವರ್‌ಗೆ ಹೋಗಲು ತೀರ್ಮಾನ ಮಾಡಿರುತ್ತಾಳೆ. ಈ ನಡುವೆ ಇಬ್ಬರೂ ಒಂದು ಜಾಹಿರಾತನ್ನು ನೋಡುತ್ತಾರೆ ಆ ಜಾಹಿರಾತಿನಲ್ಲಿ ಒಂದು ಕಾರನ್ನು ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಸಾಗಿಸಬೇಕಾಗಿರುತ್ತದೆ. ಕೆಲ ಅನಿವಾರ್ಯ ಕಾರಣಗಳಿಂದ ಅರ್ಜುನ್‌ ಮತ್ತು ಸನಾ ಇಬ್ಬರೂ ಅಪರಿಚತರಾದರೂ ಒಂದೇ ಕಾರಿನಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಾಗುತ್ತದೆ.

 

ಇಬ್ಬರು ಪ್ರಯಾಣ ಆರಂಭಿಸಿದಾಗ  ಮೆಕ್ಸಿಕೋದ  ರೈತನೊಬ್ಬ ಇವರ ಪ್ರಯಾಣದಲ್ಲಿ ಜತೆಯಾಗುತ್ತಾನೆ. ಈ ನಡುವೆ ಕಾರು ಕೆಲ ದುಷ್ಕರ್ಮಿಗಳಿಗೆ ಮತ್ತು ಪೊಲೀಸರಿಗೆ ಬೇಕಾಗಿರುತ್ತದೆ. ಕಾರು ಪೊಲೀಸರಿಗೆ ಮತ್ತು ದುಷ್ಕರ್ಮಿಗಳಿಗೆ ಏಕೆ ಬೇಕಾಗಿರುತ್ತದೆ. ಇದರಿಂದ ಸನಾ ಮತ್ತು ಅರ್ಜುನ್ಗೆ ತೊಂದರೆಯಾಗುತ್ತದಾ, ಇಬ್ಬರು ತಮ್ಮ ಗಮ್ಯವನ್ನು ಮುಟ್ಟುತ್ತಾರಾ ಎಂಬುದರ ಸುತ್ತ ಕತೆ ನಡೆಯುತ್ತದೆ.

 

ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಕಾರು ಪ್ರಯಾಣ ಮಾಡುವುದರಿಂದ ಈ ಪ್ರಯಾಣದಲ್ಲಿ ಅಮೇರಿಕಾದ ಜೀವನ ಶೈಲಿ, ಗ್ರಾಂಡ್‌ ಕ್ಯಾನಸನ್‌, ಡೆತ್‌ ವ್ಯಾಲಿ, ಜಿಯಾನ್‌ ಸೇರಿದಂತೆ ಸಾಕಷ್ಟು ರಮಣೀಯ ದೃಶ್ಯಗಳ ಸಹ ಪ್ರೇಕ್ಷಕರಿಗೆ ಕಾಣುತ್ತದೆ.

 

ಈ ಚಿತ್ರವನ್ನು ಸುಮನ್‌ ನಗರಕರ್‌ ಪ್ರೊಡಕ್ಷನ್‌ ಮತ್ತು ಯುಗ ಕ್ರಿಯೇಷನ್ಸ್‌ ಒಟ್ಟಿಗೆ ಸೇರಿ ನಿರ್ಮಾಣ ಮಾಡಿದೆ. ಸುಜಯ್‌ ರಾಮಯ್ಯ ಎಂಬುವವರು ನಿರ್ದೇಶನ ಮಾಡಿದ್ದಾರೆ.

 

ಸುಮನ್‌ ನಗರ್‌ಕರ್‌, ಮಾಹಿ ಹಿರೇ ಮಠ, ರೇ ತೊಸ್ತಾಡೋ, ಸನ್ನಿ ಮೋಜ, ಪ್ರಕೃತಿ ಕಶ್ಯಪ್‌ ನಟಿಸಿದ್ದಾರೆ. ಲೂಸಿಯಾ ಖ್ಯಾತಿ ಪೂರ್ಣಚಂದ್ರ ತೇಜಸ್ವಿ ಇದಕ್ಕೆ ಸಂಗೀತ ನೀಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೇ ಅಥವಾ ಜೂನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದಾರೆ.

ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಇದ್ದ ಸುಮನ್‌ ನಗರ್‌ಕರ್‌ ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ.

 

ಬಿಗ್‌ಬಾಸ್‌ ಪ್ರತಿ ಸೀಸನ್‌ನಲ್ಲಿಯೂ ಒಂದೊಂದು ಜೋಡಿ ಹುಟ್ಟಿಕೊಳ್ಳುತ್ತದೆ. ಈ ಬಾರಿ ಅಂದರೆ ಬಿಗ್‌ಬಾಸ್ ಸೀಸನ್ 5ರಲ್ಲಿ ಜೆಕೆ ಮತ್ತು ಗಾಯಕಿ ಶ್ರುತಿ ಪ್ರಕಾಶ್ ಆ ರೀತಿ ಹೆಸರು ಮಾಡಿದ್ರು. ಇವರಿಬ್ಬರನ್ನು ಕಂಡ ಸಾಕಷ್ಟು ಮಂದಿ ಇವರು ಲವ್‌ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಆದರೆ ಈ ಬಗ್ಗೆ ಜೆಕಗೆ ಬಹಳ ಬೇಸರದಿಂದ ಮಾತನಾಡುತ್ತಾರೆ.

'24 ಗಂಟೆಗಳಲ್ಲಿ ನಡೆದಿದ್ದರಲ್ಲಿ, ನಾನು ಮತ್ತು ಶ್ರುತಿ ಕ್ಲೊಸ್ ಆಗಿದ್ದ ದೃಶ್ಯಗಳನ್ನಷ್ಟೇ ಹೆಚ್ಚಾಗಿ ತೋರಿಸಿದ್ದಾರೆ ಹಾಗಾಗಿ ಜನರಿಗೆ ಹಾಗೆ ಅನ್ನಿಸಿದೆ ಆದರೆ ಅದೆಲ್ಲವೂ ಸುಳ್ಳು ನಾವಿಬ್ಬರೂ ಬಹಳ ಆತ್ಮೀಯ ಸ್ನೇಹಿತರಷ್ಟೇ ಅದನ್ನು ಬಿಟ್ಟು ಬೇರೆ ಏನು ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಇವರಿಬ್ಬರನ್ನು ಹೀಗೆ ಪ್ರೊಜೆಕ್ಟ್ ಮಾಡಿದ್ದಕ್ಕೆ ಅವರಿಗೆ ಬಿಗ್‌ಬಾಸ್‌ ಮೇಲೆ ಬೇಸರ ಉಂಟಾಗಿದೆಯಂತೆ. ಇದರ ಪರಿಣಾಮ ಇವರಿಗೆ ಹೊರಗೆ ಬಂದ ಮೇಲೆ ಬಹಳ ತೊಂದರೆಯಾಗಿದೆ. 'ನಾನು ಒಳಗಡೆ ಇದ್ದಾಗ ಅನುಪಮ ಮತ್ತು ಆಶಿತಾ ಜತೆಯೂ ಕ್ಲೋಸ್ ಆಗಿದ್ದೆ ಅದನ್ನು ಮಾತ್ರ ತೋರಿಸಿಲ್ಲ, ಎಂದು ಸಹ ಜೆಕೆ ಹೇಳುತ್ತಾರೆ. ಹಾಗಾಗಿ ನಾನು ಮತ್ತು ಶ್ರುತಿ ಇಬ್ಬರು ಸ್ನೇಹಿತರಷ್ಟೇ, ಪ್ರೇಮಿಗಳಲ್ಲ, ಹಾಗೆ ಅಂದುಕೊಳ್ಳಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿದ ಜೆಕೆ ಹಿಂದಿಯ ಒಂದು ಸೀರಿಯಲ್‌ನಲ್ಲಿ ರಾವಣನಾಗಿ ನಟಿಸಿ ದೊಡ್ಡ ಹೆಸರು ಮಾಡಿದ್ರು. ಜೆಕೆ ಸದ್ಯಕ್ಕೆ ದಯಾಳ್ ನಿರ್ದೇಶನದ ಆ ಕರಾಳ ರಾತ್ರಿ, ಪುಟ 109 ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹಾಡುಗಳನ್ನು ಬಿಡುಗಡೆ ಮಾಡಿ, ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ "ನಾನು ಲವರ್ ಆಫ್ ಜಾನು" ಚಿತ್ರದಲ್ಲಿ ಪ್ರೀತಿಯನ್ನು ಕ್ರಾಂತಿಯಿಂದ ಗೆಲ್ಲಬಹುದು. ಕ್ರಾಂತಿಯಿಂದ ಪ್ರೀತಿಯನ್ನು ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ಹೇಳುತ್ತಿದ್ದಾರಂತೆ.

 

ಜಿ ಸುರೇಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಒಂದು ತಪ್ಪು ಚಳವಳಿ ನಂತರ ಕ್ರಾಂತಿಯಾಗಿ ಬದಲಾಗುತ್ತಿದೆ. ಆತನ ಜೀವನದಲ್ಲಿ ಕ್ರಾಂತಿ ನಡೆದಾಗ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದನ್ನು ಅವರು ಚೆಂದವಾಗಿ ಸೆರೆ ಹಿಡಿದಿದ್ದಾರಂತೆ.

 

ಗೊಂಬೆಗಳ ಲವ್ ಸಿನಿಮಾಗೆ ಸಂಗೀತ ನೀಡಿದ್ದ ಚೆನ್ನೈನ ಶ್ರೀನಾಥ್ ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳು ಇದರಲ್ಲಿದ್ದು, ಈಗಾಗಲೇ ಜನರಿಗೆ ಇಷ್ಟವಾಗಿದೆ. ಈ ಸಿನಿಮಾಗೆ ಸ್ಯಾಂಡಲ್‌ವುಡ್‌ನ ವಿಕಟ ಕವಿ ಯೋಗರಾಜ್‌ ಭಟ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

 

ಚಿತ್ರಕ್ಕೆ ವಿಶಾಲ್ ಎಂಬ ಯುವಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಮಂಜುಳಾ ಗಂಗಪ್ಪ ನಾಯಕಿ. ನಿರ್ದೇಶಕ ಸುರೇಶ್ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ.

ನಿರ್ದೇಶಕ ಶಶಾಂಕ್‌ ಇತ್ತೀಚೆಗೆ ನಿರ್ಮಾಪಕರಾಗಿದ್ದರು. ಅದಕ್ಕೆ ಶಶಾಂಕ್‌ ಸಿನಿಮಾಸ್‌ ಎಂದು ಹೆಸರಿಟ್ಟು, ಅದರಡಿ ತಾಯಿಗೆ ತಕ್ಕ ಮಗ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ಈ ಚಿತ್ರವನ್ನು ವೇದ್‌ಗುರು ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದರು. ಆದರೆ ಈಗ ಅಲ್ಲಿ ನಿರ್ದೇಶಕರು ಬದಲಾಗಿದ್ದಾರೆ. ಸ್ವತಃ ಶಶಾಂಕ್‌ ಈಗ ಚಿತ್ರದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಹೌದು ಶಶಾಂಕ್‌ ನಿರ್ಮಾಣ ಮಾಡಿ ಅಜಯ್‌ರಾವ್‌ ನಾಯಕರಾಗಿದ್ದ ತಾಯಿಗೆ ತಕ್ಕ ಮಗ ಚಿತ್ರದಿಂದ ನಿರ್ದೇಶಕ ವೇದ್‌ಗುರು ಹೊರ ಬಂದಿದ್ದಾರೆ. ನಿರ್ದೇಶಕ ವೇದ್‌ಗುರು ಮಾತ್ರವಲ್ಲ, ಸಿನಿಮಾಟೋಗ್ರಫರ್‌ ನಂದ ಕಿಶೋರ್‌ ಸಹ ಬದಲಾಗಿದ್ದಾರಂತೆ. ಇದಕ್ಕೆ ಕಾರಣ ಕೇಳಿದ್ರೆ, ನಿರ್ದೇಶಕ ವೇದ್‌ಗುರು ಅವರಿಗೆ ಆರೋಗ್ಯದ ಸಮಸ್ಯೆಯಿಂದ ಈ ಚಿತ್ರದಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೆ.

ನಿರ್ದೇಶಕ ವೇದ್‌ಗುರು ಈ ಹಿಂದೆ ದಂಡಯಾತ್ರೆ ಎನ್ನುವ ಸಿನಿಮಾವನ್ನು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದರು. ಈಗ ತಾಯಿಗೆ ತಕ್ಕ ಮಗ ಚಿತ್ರದಿಂದಲೂ ಹೊರ ಬಂದಿದ್ದಾರೆ. ಶಶಾಂಕ್ ತಂಡದಲ್ಲಿ ಸಕ್ರಿಯರಾಗಿರುವ ಯಾರದರೊಬ್ಬನ್ನು ನಿರ್ದೇಶಕರನ್ನಾಗಿ ಮಾಡಲಾಗುವುದು ಎನ್ನುವ ಮಾತು ಹರಿದಾಡತ್ತಿತ್ತು ಆದರೆ ಈಗ ಅದನ್ನು ಶಶಾಂಕ್‌ ಅವರೇ ಡೈರೆಕ್ಟ್‌ ಮಾಡಲಿದ್ದಾರೆ ಮತ್ತು ಚಿತ್ರದ ಚಿತ್ರೀಕರಣ ನಾಳೆಯಿಂದ ಶುರುವಾಗಲಿದೆ. ಚಿತ್ರಕ್ಕೆ ಶೇಕರ್ ಚಂದ್ರ ಕ್ಯಾಮರಾ ವರ್ಕ್ ಮಾಡುತ್ತಿದ್ದು, ಚಮಕ್ ಖ್ಯಾತಿಯ ಜೂಡಾ ಸ್ಯಾಂಡಿ ಮ್ಯೂಸಿಕ್ ನೀಡುತ್ತಿದ್ದಾರೆ.

ಈ ಚಿತ್ರದಲ್ಲಿ ಅಜಯ್‌ರಾವ್‌ ಜೊತೆಗೆ ಸುಮಲತಾ, ಆಶಿಕಾ ರಂಗನಾಥ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

 
ನಿರ್ದೇಶಕ ಗುರು ಪಾಂಡೆ ಮತ್ತು ಚಿರಂಜೀವಿ ಕಾಂಬಿನೇಶನ್‌ನ ಸಂಹಾರ ಚಿತ್ರ ಈ ವಾರ ತೆರೆಗೆ ಬರಲಿದೆ. ರುದ್ರ ತಾಂಡವ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ, ಈಗ ಮತ್ತೆ ಮೋಡಿ ಮಾಡಲು ಬರುತ್ತಿದೆ.
ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕಣ್ಣು ಕಳೆದುಕೊಂಡ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿರುಗೆ ಇಲ್ಲಿ ಡ್ಯುಯೆಟ್ ಹಾಡಲು ಕಾವ್ಯಾ ಶೆಟ್ಟಿ, ಹರಿಪ್ರಿಯಾ ಇದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ನಾನು ಚಾಲೆಂಜಿಂಗ್ ಎನಿಸುವಂತಹ ರೋಲ್‌ನಲ್ಲಿ ನಟಿಸಿದ್ದು, ಖಂಡಿತ ಇದು ಜನರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ ಚಿರಂಜೀವಿ ಸರ್ಜಾ. ಮೊದಲ ಚಿತ್ರದಿಂದಲೂ ತಮ್ಮ ವಿಶಿಷ್ಟ ಅಭಿನಯದಿಂದ ಗಮನ ಸೆಳೆದಿರುವ ಚಿರು, ಈ ಚಿತ್ರದಲ್ಲಿ ಕುರುಡುನಾಗಿ ಮತ್ತೊಮ್ಮೆ ತಮ್ಮ ವಿಭಿನ್ನತೆ ಮೆರಿದಿದ್ದಾರೆ. ಚಿರುಗೆ ಈಗಾಗಲೇ ಟ್ವೀಟರ್‌ನಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ ನಟಿಯರು ಶು‘ಾಶಯ ಕೋರುತ್ತಿದ್ದು, ಚಿರು ಸಖತ್ ಖುಷಿಯಾಗಿದ್ದಾರೆ.
ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗಾಯಕ ರಘು ದೀಕ್ಷಿತ್ ಹಾಡಿರುವ 'ರಾಕ್ಷಸಿ' ಹಾಡು ಮತ್ತು ಪುನೀತ್ ರಾಜ್‌ಕುಮಾರ್ ಹಾಡಿರುವ 'ಏನಚ್ಚರಿಯೋ' ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ.
#Samhaara #YuvaSamratChiruSarja #Cineloka
 
ವಸಿಷ್ಠ ಖಳನಟನಾಗಿ ನಮಗೆಲ್ಲರಿಗೂ ಪರಿಚಯವಾಗಿದ್ದರು ಈಗ ಅವರು ಪೂರ್ಣ ಪ್ರಮಾಣದ ನಾಯಕರಾಗಿ ಬಡ್ತಿ ಪಡೆದಿದ್ದಾರೆ .
ಹೌದು ಅವರು ನಾನಿ ಚಿತ್ರದ ನಿರ್ದೇಶಕ ಸುಮಂತ್ ಅವರ ಹೊಸ ಚಿತ್ರ ಕಾಲಚಕ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆ ಬಿಡುಗಡೆಗೊಂಡಿದ್ದು,ಫಸ್ಟ್ ಲುಕ್ ಸಾಕಷ್ಟು ವಿಭಿನ್ನವಾಗಿದ್ದು ಜನರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಪೋಸ್ಟರ್ ಆನ್ ಲೈನ್ ನಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ.
ಚಿತ್ರದಲ್ಲಿ ವಸಿಷ್ಟ ಅವರದು ಎರಡು ಶೇಡ್ಗಳಿರುವ ಪಾತ್ರ ಒಂದು ಮೂವತ್ತು ವರ್ಷದ ಪಾತ್ರವಾದರೆ ಮತ್ತೊಂದು ಅರುವತ್ತು ವರ್ಷದ ಮುದುಕನ ಪಾತ್ರ. ವಸಿಷ್ಠನ ಜೋಡಿಯಾಗಿ ರಕ್ಷಾ ಅವರು ನಟಿಸಿದ್ದಾರೆ. ರಕ್ಷಾ ಅವರು ಈ ಮುಂಚೆ ತಮಿಳಿನ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರಿಗೆ ಇದು ಮೊದಲ ಕನ್ನಡ ಚಿತ್ರ .ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದ್ದು ಅದುವೇ ಚಿತ್ರದ ಬೆನ್ನೆಲುಬು ಎಂದು ಚಿತ್ರದ ನಿರ್ದೇಶಕ ಸುಮಂತ್ ಹೇಳಿಕೊಂಡಿದ್ದಾರೆ .
ನಾನಿ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ಸುಮಂತ್ ಅವರು 'ಕಾಲಚಕ್ರ' ಚಿತ್ರದ ಮೂಲಕ ನಿರ್ಮಾಪಕ ಕೂಡ ಆಗಿದ್ದಾರೆ.
ನಮಗೆಲ್ಲರಿಗೂ ಚಿರಪರಿಚಿತವಿರುವ ಒಬ್ಬ ವ್ಯಕ್ತಿಯ ನೈಜ ಕತೆಯನ್ನೊಳಗೊಂಡ ಚಿತ್ರ ಕಾಲಚಕ್ರ.ಚಿತ್ರದಲ್ಲಿ ಒಂದೊಳ್ಳೆ ಮೆಸೆಜ್ ಇದ್ದು ಫ್ಯಾಮಿಲಿ ಎಮೋಷನ್ಸ್ ಮೇಲೆ ಸಾಕಷ್ಟು ಒತ್ತು ಕೊಡಲಾಗಿದೆ. ಚಿತ್ರದಲ್ಲಿ ಒಂದು ಚಿಕ್ಕ ಹೆಣ್ಣು ಮಗಳ ಪಾತ್ರ ಕೂಡಾ ಬಹಳ ಪ್ರಮುಖವಾದದ್ದು . ಚಿತ್ರದ ಕಥೆ ಮೇಲೆ ನಂಬಿಕೆ ಇದ್ದ ಕಾರಣ ನಾನೇ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಧರಿಸಿದೆ ಎಂದು ಚಿತ್ರದ ನಿರ್ದೇಶಕ ಸುಮಂತ್ ಹೇಳಿಕೊಂಡರು.
ಚಿತ್ರೀಕರಣ ಬಹುತೇಕ ಮುಗಿದಿದ್ದು,ಎರಡು ಮೂರು ದಿನಗಳ ಪ್ಯಾಚ್ವರ್ಕ್ ಬಾಕಿ ಇದೆ. ಫೈನಲ್ ಟ್ರಿಮ್ಮಿಂಗ್ ನಡೆಯುತ್ತಿದ್ದು ಬಹುಶಃ ಏಪ್ರಿಲ್ ಹೊತ್ತಿಗೆ ಚಿತ್ರ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ .
#KaalaChakra #Cineloka
ಕನ್ನಡದಲ್ಲಿ ಆಕರ್ಷಕ ಶೀರ್ಷಿಕೆಗಳ ಹೊತ್ತ ಸಿನಿಮಾಗಳು ಸೆಟ್ಟೇರುತ್ತಿವೆ. ಅದಕ್ಕೆ ಹೊಸ ಸೇರ್ಪಡೆ "ಲುಂಗಿ". ಶಾರುಖ್‌ ಖಾನ್‌ ನಟನೆಯ ಚೆನ್ನೈ ಎಕ್ಸ್ ಪ್ರೆಸ್‌ ಚಿತ್ರದ ಲುಂಗಿ ಡ್ಯಾನ್ಸ್‌ ಸಿಕ್ಕಾಪಟ್ಟೆ ಫೇಮಸ್‌ ಆಗಿತ್ತು. ಈಗ ಲುಂಗಿ ಎಂಬ ಹೆಸರನ್ನಿಟ್ಟು, ಕೊರಿಯೋಗ್ರಫರ್‌ ಒಬ್ಬರು ಚಿತ್ರ ಮಾಡುತ್ತಿದ್ದಾರೆ.
ಹೌದು ಡಾನ್ಸರ್‌ ಆಗಿ ಹೆಸರು ಮಾಡಿರುವ ಅಕ್ಷಿತ್‌ ಶೆಟ್ಟಿ "ಲುಂಗಿ" ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಮನಸು ಮನಸುಗಳ ಬೇಸುಗೆಯ ಕತೆಯನ್ನು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ಅಕ್ಷಿತ್ ಶೆಟ್ಟಿ.
ಈ ಚಿತ್ರದಲ್ಲಿ ಮನಸುಗಳನ್ನು ಬೆಸೆಯುವ ಜತೆಗೆ ನಮ್ಮ ಸಂಸ್ಕೃತಿ ಸೇರಿದಂತೆ ಸಾಕಷ್ಟು ವಿಷಯಗಳನ್ನು ಅಕ್ಷಿತ್‌ ಹೇಳಲಿದ್ದಾರಂತೆ. ಇಂಜಿನಿಯರಿಂಗ್ ಓದಿಕೊಂಡಿರುವ ನಾಯಕ ತನ್ನ ತಂದೆ ಕೊಡಿಸಿದ ಕೆಲಸಕ್ಕೆ ಹೋಗದೆ, ಲುಂಗಿ ಬ್ಯುಸೆನೆಸ್‌ ಪ್ರಾರಂಭ ಮಾಡುತ್ತಾನೆ. ಅದರಿಂದ ಅವನು ಹೇಗೆ ಸಕ್ಸಸ್‌ ಆಗುತ್ತಾನೆ ಎಂಬುದೇ ಸಿನಿಮಾ ಕತೆ.
ತುಳು ಸಿನಿಮಾಗಳನ್ನು ಅನುಭವವಿರುವ ಮುಕೇಶ್ ಹೆಗ್ಡೆ ಈ ಚಿತ್ರದ ನಿರ್ಮಾಪಕರು.ತಮ್ಮ ಮಗ ಪ್ರಣವ್ ಹೆಗ್ಡೆಗಾಗಿ ಚಿತ್ರ ಮಾಡಿದ್ದಾರೆ. ಅಹಲ್ಯ ಸುರೇಶ್ & ರಾಧಿಕಾ ರಾವ್ ಈ ಚಿತ್ರದ ನಾಯಕಿಯರು. ಅಹಲ್ಯ ಸುರೇಶ್ ಕ್ರಿಶ್ಚಿಯನ್ ಹುಡುಗಿಯಾಗಿ ನಟಿಸಿದ್ದಾರೆ. ಮತ್ತೋರ್ವ ನಾಯಕಿ ರಾಧಿಕಾ ರಾವ್ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗಿ ನಟಿಸಿದ್ದಾರೆ.
#Lungi #Cineloka
 
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಅಬ್ಬಾಯಿನಾಯ್ಡು ಅವರು ಪರಿಚಯಿಸಿರುವ ನಟರಲ್ಲಿ ಒಬ್ಬರಾದ ವಿನೋದ್ ಆಳ್ವಾ ಈಗ ತಮ್ಮ ಮಕ್ಕಳನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.
ತವರು ಮನೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿನೋದ್ ಆಳ್ವಾ ಸಿನಿಮಾ ಕೆರಿಯರ್ ಆರಂಭಿಸಿದ ವಿನೋದ್ ಆಳ್ವಾ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸಿದ್ದರು.
ಮಂಗಳೂರು ಮೂಲದ ಪುತ್ತೂರಿನ ನಿವಾಸಿ ವಿನೋದ್ ಆಳ್ವಾ 1985 ರಲ್ಲಿ ಚಿತ್ರರಂಗಕ್ಕೆ ಬಂದು ಯಶಸ್ವಿ ನಾಯಕರಾದರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆ ಸೇರಿದಂತೆ 200 ಚಿತ್ರಗಳಲ್ಲಿ ವಿನೋದ್ ಆಳ್ವಾ ನಟಿಸಿದ್ದಾರೆ.
ಈಗ ಅವರ ಇಬ್ಬರು ಪುತ್ರರಾದ ಅಮೋಘ ಹಾಗೂ ಹಯಾಗ್‌ರನ್ನು ಬೆಳ್ಳಿತೆರೆಗೆ ಪರಿಚಿಯಸಿಲು ಅವರು ತಯಾರಿ ನಡೆಸುತ್ತಿದ್ದಾರೆ. ಅಭಿನಯಕ್ಕೆ ಸಂಬಂಧಪಟ್ಟಂತೆ ಈ ಇಬ್ಬರು ಪುತ್ರರು ತರಬೇತಿ ಪಡೆದಿದ್ದಾರೆ. ಅಜಾನುಬಾಹುಗಳಾದ ಈ ಇಬ್ಬರು ಕೂಡ 2020 ರಲ್ಲಿ ತೆರೆಯ ಮೇಲೆ ಬರಬಹುದು ಎಂದು ಅವರು ಇತ್ತೀಚೆಗೆ ಪ್ರೇಮ ಯುದ್ಧ ಎಂಬ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
#VinodAlva #Cineloka #PremaYuddha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗ ಅವರ ಫ್ಯಾನ್ಸ್‌ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸರಪ್ರೈಸ್ ನೀಡಿದ್ದಾರೆ. ತಮ್ಮ ಬೆರಳಿನ ಮೇಲೆ ದರ್ಶನ್ ಅವರ ಹೆಸರನ್ನು ಅಚ್ಚೆ ಹಾಕಿಸಿಕೊಂಡು ದರ್ಶನ್ ಮೇಲಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

ಫೆ.16ರಂದು ದರ್ಶನ್ ಅವರ ಹುಟ್ಟು ಹಬ್ಬವಿದ್ದು, ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಈ ಸಮಯದಲ್ಲಿ ವಿಜಯಲಕ್ಷ್ಮೀ ಅವರು ತಮ್ಮ ಎಡಗೈನ ಉಂಗುರದ ಬೆರಳಿನ ಮೇಲೆ ದರ್ಶನ್(Darsh) ಅವರ ಹೆಸರಿನ ಜತೆಯಲ್ಲಿ ಒಂದು ಹಾರ್ಟ್ ಸಿಂಬಲ್ ಹಾಕಿಸಿಕೊಂಡಿದ್ದಾರೆ.

ಭಾನುವಾರ ಅವರು ಪರ್ಷಿಯನ್ ಬೆಕ್ಕನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಹಚ್ಚೆ ಹಾಕಿಸಿಕೊಂಡಿರುವುದು ಕಾಣಿಸುತ್ತದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರಿಗೆ ರಿಪ್ಲೈ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

 
ಆರ್ಜೆ ರೋಹಿತ್ ಮತ್ತು ರವಿಚಂದ್ರನ್ ನಟನೆಯ ಬಕಾಸುರ ಸಿನಿಮಾಗೆ ತೆಲುಗಿನಿಂದ ಭರ್ಜರಿ ರಿಮೇಕ್ ಆಫರ್ ಬಂದಿದೆ.
ಟೀಸರ್ ಮತ್ತು ಸ್ಟೈಲಿಷ್ ಪೊಸ್ಟರ್ನಿಂದ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಚಿತ್ರವನ್ನು ತೆಲುಗಿನ ನಿರ್ಮಾಪಕರೊಬ್ಬರು ನೋಡಿ ಇದನ್ನು ಕೊಳ್ಳಲು ಮುಂದೆ ಬಂದಿದ್ದಾರೆ.
ತೆಲುಗಿನಲ್ಲಿ ಈ ಚಿತ್ರವನ್ನು ನಾಗಾರ್ಜುನ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರಂತೆ. ರವಿಚಂದ್ರನ್ ಪಾತ್ರದಲ್ಲಿ ನಾಗಾರ್ಜುನ , ರೋಹಿತ್ ಪಾತ್ರದಲ್ಲಿ ನಾಗ್ ಚೈತನ್ಯ ಅಥವಾ ಅಖಿಲ್ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ.
ಒಟ್ಟಿನಲ್ಲಿ ಬಿಡುಗಡೆಗೂ ಮುನ್ನ ಬಕಾಸುರ ಸದ್ದು ಮಾಡುತ್ತಿದೆ. ನವನೀತ್ ಇದರ ನಿರ್ದೇಶಕರು.
#Buckaasuura #Cineloka
ನಟಿ ಹರಿಪ್ರಿಯಾ ತಮ್ಮ ಮುಖಕ್ಕೆ ಶಾಲು ಸುತ್ತಿಕೊಂಡು ತಾವು ನಟಿಸಿದ 'ಜೈಸಿಂಹ' ಚಿತ್ರವನ್ನು ಬೆಂಗಳೂರಿನ ಲೋಕಲ್ ಚಿತ್ರಮಂದಿರದಲ್ಲಿ ನೋಡಿದ್ದಾರೆ.
  

ಆ ಚಿತ್ರದ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಅವರೇ ಸ್ವತಃ ಇಷ್ಟಪಟ್ಟು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಇದಕ್ಕಿಂತಲೂ ಮೊದಲು ಹೀಗೆ ಮಾಡಿರಲಿಲ್ಲ,ಚಿತ್ರದ ನಿಜವಾದ ಪ್ರತಿಕ್ರಿಯೆ ಏನು ಎಂದು ತಿಳಿಯಲು ಹೀಗೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

 
ಅಲ್ಲದೆ ಎಲ್ಲರ ಮಧ್ಯೆ ಕೂತು ಸಿನಿಮಾ ನೋಡಬೇಕು ಎಂದನಿಸಿ ಯಾರಿಗೂ ತಮ್ಮ ಗುರುತು ಸಿಗದಂತೆ ಚೂಡಿದಾರ ಹಾಕಿಕೊಂಡು ಮುಖಕ್ಕೆ ಕಪ್ಪು ಶಾಲನ್ನು ಸುತ್ತಿಕೊಂಡು ಬೆಂಗಳೂರಿನ ಲೋಕಲ್ ಥಿಯೇಟರ್‌ಗೆ ಹೋಗಿದ್ದಾರೆ.
 
ಹರಿಪ್ರಿಯಾಗೆ ಇತ್ತೀಚೆಗೆ ತೆರೆಕಂಡ ತಮ್ಮ ಅಭಿನಯದ'ಕನಕ' ಚಿತ್ರಕ್ಕೆ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ನೋಡುವ ಆಸೆ ಕೂಡ ಇದೆಯಂತೆ.

 
#Cineloka
ನಟಿ ಹರಿಪ್ರಿಯಾ ತಮ್ಮ ಮುಖಕ್ಕೆ ಶಾಲು ಸುತ್ತಿಕೊಂಡು ತಾವು ನಟಿಸಿದ 'ಜೈಸಿಂಹ' ಚಿತ್ರವನ್ನು ಬೆಂಗಳೂರಿನ ಲೋಕಲ್ ಚಿತ್ರಮಂದಿರದಲ್ಲಿ ನೋಡಿದ್ದಾರೆ.
ಆ ಚಿತ್ರದ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಅವರೇ ಸ್ವತಃ ಇಷ್ಟಪಟ್ಟು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಇದಕ್ಕಿಂತಲೂ ಮೊದಲು ಹೀಗೆ ಮಾಡಿರಲಿಲ್ಲ,ಚಿತ್ರದ ನಿಜವಾದ ಪ್ರತಿಕ್ರಿಯೆ ಏನು ಎಂದು ತಿಳಿಯಲು ಹೀಗೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಎಲ್ಲರ ಮಧ್ಯೆ ಕೂತು ಸಿನಿಮಾ ನೋಡಬೇಕು ಎಂದನಿಸಿ ಯಾರಿಗೂ ತಮ್ಮ ಗುರುತು ಸಿಗದಂತೆ ಚೂಡಿದಾರ ಹಾಕಿಕೊಂಡು ಮುಖಕ್ಕೆ ಕಪ್ಪು ಶಾಲನ್ನು ಸುತ್ತಿಕೊಂಡು ಬೆಂಗಳೂರಿನ ಲೋಕಲ್ ಥಿಯೇಟರ್‌ಗೆ ಹೋಗಿದ್ದಾರೆ.
ಹರಿಪ್ರಿಯಾಗೆ ಇತ್ತೀಚೆಗೆ ತೆರೆಕಂಡ ತಮ್ಮ ಅಭಿನಯದ'ಕನಕ' ಚಿತ್ರಕ್ಕೆ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ನೋಡುವ ಆಸೆ ಕೂಡ ಇದೆಯಂತೆ.
#Cineloka
 
ಬಹು ನಿರೀಕ್ಷಿತ ಚಿತ್ರ 'ದಿ ವಿಲನ್‌'ನಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಒಟ್ಟಿಗೆ ನಟನೆಯ ಎಲ್ಲ ಭಾಗದ ಚಿತ್ರೀಕರಣವನ್ನು ನಿರ್ದೇಶಕ ಪ್ರೇಮ್ ಮುಗಿಸಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಮೂಲಕ ಶಿವಣ್ಣ ಮತ್ತು ಸುದೀಪ್ ಕಾಂಬಿನೇಶನ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನೇನಿದ್ರು, ಶಿವರಾಜ್‌ಕುಮಾರ್ ಅವರ ಟಾಕಿ ಪೋಷನ್ ಮತ್ತು ಸುದೀಪ್ ಅವರನ್ನಿಟ್ಟುಕೊಂಡು ತಯಾರಾಗಬೇಕಿರುವ ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ.
ಸಿ ಆರ್ ಮನೋಹರ್ ನಿರ್ಮಾಣ ಮಾಡುತ್ತಿರುವ ಬಹು ಕೋಟಿ ವೆಚ್ಚದ ಈ ಚಿತ್ರದಲ್ಲಿ ಸೌತ್ ಬ್ಯೂಟಿ ಆ್ಯಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ರವಿವರ್ಮಾ ಅವರು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದಾರಂತೆ.
ಶಿವಣ್ಣ ಮತ್ತು ಸುದೀಪ್ ಜತೆ ಚಿತ್ರೀಕರಣ ಮಾಡಿದ್ದು ಬಹಳ ಖುಷಿಯಾಯಿತು, ಮತ್ತು ಇದೊಂದು ಅದ್ಭುತ ಎಕ್ಸ್‌ಪಿರಿಯನ್ಸ್ ಎಂದಿದ್ದಾರೆ ನಿರ್ದೇಶಕ ಪ್ರೇಮ್.
ಇನ್ನು ಈ ಬಗ್ಗೆ ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡಿದ್ದು 'ವಿಲನ್' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿದಿದ್ದು, ಪ್ರೇಮ್ ಮತ್ತುವರ ತಂಡದ ಜತೆ ಕೆಲಸ ಮಾಡಿದ್ದು ಒಂದು ಅಮೇಜಿಂಗ್ ಅನುಭವ. ನನ್ನ ಭಾಗದ ಒಂದು ಹಾಡು ಮಾತ್ರ ಬಾಕಿ ಉಳಿದಿದೆ. ಅರ್ಜುನ್ ಜನ್ಯ ಅವರ ವಿಶೇಷವಾದ ಹಾಡಿಗಾಗಿ ಕಾಯುತ್ತಿದ್ದೇನೆ ಎಂದು ಅವರು ಟ್ವಿಟ್‌ನಲ್ಲಿ ಹೇಳಿದ್ದಾರೆ.
ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
#TheVillain #Cineloka #AbhinayaChakrvarthyKicchaSudeep #KarunadaChakravarthyDrShivanna
ವಸಿಷ್ಠ ಎಂದರೆ ಸ್ಯಾಂಡಲ್‌ವುಡ್ನಲ್ಲಿ ಒಂದು ಇಮೇಜ್‌ ಇದೆ, ರಾಜಾ ಹುಲಿ, ಗೋದಿ ಬಣ್ಣ ಸಾಧಾರಾಣ ಮೈಕಟ್ಟು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ಧ್ವನಿಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ವಸಿಷ್ಠ ಈಗ ನಾಯಕರಾಗಿ ನಟಿಸುತ್ತಿದ್ದಾರೆ.
ಈ ಹಿಂದೆ ನಾನಿ ಎಂಬ ಸಿನಿಮಾ ಭರವಸೆ ಮೂಡಿಸಿದ್ದ ಸುಮಂತ್ ಎಂಬ ಯುವಕ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಸಿಷ್ಠ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ.
ವಸಿಷ್ಠ ಎಂದರೆ ಕನ್ನಡಿಗರ ಮನಸ್ಸಲ್ಲಿ ಒಂದು ಬೇರೆ ರೀತಿಯ ಕಲ್ಪನೆ ಇದೆ, ಈಗ ಹೊಸ ಚಿತ್ರದಲ್ಲಿ ಅದೆಲ್ಲವನ್ನೂ ಮೀರಿದ ಕಲ್ಪನೆ ಜನರಿಗೆ ಬರುತ್ತದಂತೆ. ಈ ಹೊಸ ಚಿತ್ರ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಂತೆ.
ಶನಿವಾರ ಈ ಚಿತ್ರದ ಟೈಟಲ್ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಮಾಡಲು ಸುಮಂತ್‌ ತಯಾರಿ ನಡೆಸಿದ್ದಾರೆ.
ಇಷ್ಟು ದಿನ ತಮ್ಮ ಖಡಖ್‌ ವಾಯ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ವಸಿಷ್ಠ ನಾಯಕರಾಗಿರುವ ಸಿನಿಮಾದಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ತಿಳಿಯಬೇಕಿದೆ.
#Cineloka

ಫೆ.19 ರಂದು ದಯಾಳ್ ನಿರ್ದೇಶನದ ಎರಡು ಚಿತ್ರಗಳಿಗೆ ಚಾಲನೆ :

ಇತ್ತೀಚೆಗಷ್ಟೇ ಬಿಗ್‌ಬಾಸ್ ಮುಗಿಸಿಕೊಂಡು ಬಂದಿರುವ ದಯಾಳ್ ಪದ್ಮನಾಭನ್ ಸದ್ಯದಲ್ಲೆ "ಕರಾಳ ರಾತ್ರಿ" ಎಂಬ ಹೊಸ ಸಿನಿಮಾ ಆರಂಭಿಸಲಿದ್ದು,ಈ ಚಿತ್ರದಲ್ಲಿ ಬಿಗ್‌ಬಾಸ್‌ನ ಜೆಕೆ, ಜಯ ಶ್ರೀನಿವಾಸನ್, ಸಿಹಿಕಹಿ ಚಂದ್ರು, ಅನುಪಮಾ ಗೌಡ ನಟಿಸಲಿದ್ದಾರೆ.

 

ಈ ಚಿತ್ರದ ಜತೆ "ಪುಟ 109" ಎಂಬ ಚಿತ್ರವನ್ನು ದಯಾಳ್ ಆರಂಭಿಸಲಿದ್ದಾರಂತೆ. ಈ ಚಿತ್ರದಲ್ಲಿ ಎರಡೇ ಪಾತ್ರಗಳಿದ್ದು, ಒಂದು ಜಯರಾಮ್ ಕಾರ್ತಿಕ್ ಮತ್ತೊಂದು ಪಾತ್ರದಲ್ಲಿ ನವೀನ್ ಕೃಷ್ಣ ನಟಿಸಲಿದ್ದಾರಂತೆ. ಈ ಎರಡು ಚಿತ್ರಗಳ ಪೂಜೆಯನ್ನು 19ರಂದು ದಯಾಳ್ ನಡೆಸಲಿದ್ದಾರೆ.

ಈಗಾಗಲೇ "ಪುಟ 109" ಎಂಬ ಕತೆಯನ್ನು ಇಬ್ಬರು ನಟರಿಗೂ ಹೇಳಿ ಒಪ್ಪಿಸಿದ್ದಾರಂತೆ, ಎರಡು ಚಿತ್ರಗಳು ದಯಾಳ ಬ್ಯಾನರ್‌ನಲ್ಲೇ ನಿರ್ಮಾಣವಾಗಲಿದೆ. ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳೆರೆಡು ಸಸ್ಪನ್ಸ್ ಥ್ರಿಲ್ಲರ್ ಕತೆಯನ್ನು ಹೊಂದಿವೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನು ಮೋಡಿ ಮಾಡಿದ್ದ ಜೆಕೆ, ಅನುಪಮಾ, ಜಯಶ್ರೀನಿವಾಸನ್, ಸಿಹಿಕಹಿ ಚಂದ್ರು ಕರಾಳ ರಾತ್ರಿಯಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಎರಡು ಚಿತ್ರಗಳನ್ನು ಒಟ್ಟಿಗೆ ಶೂಟಿಂಗ್ ಮಾಡಿ ಮೇ ತಿಂಗಳಿನಲ್ಲಿ ಒಂದು ಸಿನಿಮಾ, ಜುಲೈನಲ್ಲಿ ಒಂದು ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಹಾಕಿದ್ದಾರೆ ದಯಾಳ್.

"ಪುಟ 109" ಚಿತ್ರ ಒಂದು ಮನೆಯಲ್ಲಿ ನಡೆಯುವ ಕತೆ, ಇದು ಸಹ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ದಯಾಳ್ ಈ ಚಿತ್ರದ ಮೂಲಕ ಅದೇನು ಮೋಡಿ ಮಾಡಲಿದ್ದಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಕೂಡಲೇ ಎಲ್ಲರೂ ಒಟ್ಟಿಗೆ ನಟಿಸಲು ತಯಾರಾಗಿದ್ದಾರೆ.

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 41ನೇ ವಾರ್ಷಿಕೋತ್ಸವ, 17ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪ್ರಶಸ್ತಿಗಳ ವಿವರ

ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾ, ಚಿತ್ರರಂಗದ ಏಳಿಗೆಗೆ ತಮ್ಮದೇ ಕೊಡುಗೆ ನೀಡಿರುವವರು ದಿವಂಗತ ಡಿ.ವಿ ಸುಧೀಂದ್ರ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದ ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಆ ಸಂಸ್ಥೆಯ ಮೂಲಕ ಮೊದಲಿಗೆ ಈ ಪರಿಪಾಠ ಆರಂಭವಾಗಿದ್ದು ಕೇವಲ ಎರಡು ಪ್ರಶಸ್ತಿಗಳ ಮೂಲಕ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಆ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭವೀಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಪತ್ರಕರ್ತರು ಕೂಡಾ ಈ ಸಮಾರಂಭಕ್ಕೆ ಜೊತೆಯಾಗಿ ಅರ್ಥವಂತಿಕೆ ಹೆಚ್ಚಿಸಿದ್ದಾರೆ.

2017ರ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಶ್ರೀ ಕೆ.ಸಿ.ಎನ್ ವೇಣುಗೋಪಾಲ್ ಹಿರಿಯ ಚಲನಚಿತ್ರ ನಿರ್ಮಾಪಕರು 
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀ ಕೃಷ್ಣರಾವ್ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀಮತಿ ನಂದಿತ ಖ್ಯಾತ ಹಿನ್ನಲೆಗಾಯಕರು
(`ಡಾ:ರಾಜ್‍ಕುಮಾರ್ ಪ್ರಶಸ್ತಿ’ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರಿಂದ)

ಶ್ರೀಎಸ್.ನಾರಾಯಣ್ ನಿರ್ದೇಶಕರು
(`ಯಜಮಾನ’ ಚಿತ್ರದ ಖ್ಯಾತಿ `ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ)

ಶ್ರೀಮತಿ ಸುಂದರಶ್ರೀ ಕಲಾವಿದರು
(ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)

ಶ್ರೀ ಬಾಪು ಪದ್ಮನಾಭ ಅತ್ಯತ್ತಮ ಸಂಗೀತ ನಿರ್ದೇಶನ `ಅಲ್ಲಮ್ಮ’ಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಪ್ರೈ.ಲಿ ಪ್ರಶಸ್ತಿ)

ಶ್ರೀ ಸಂತೋಷ್ ಆನಂದರಾಮ್ ಅತ್ಯುತ್ತಮ ಕಥಾಲೇಖಕರು `ರಾಜಕುಮಾರ’ ಚಿತ್ರ
(`ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ’ ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

ಶ್ರೀ ರಾಜೇಶ್ ಬಿ ಶೆಟ್ಟಿ ಅತ್ಯುತ್ತಮ ಸಂಭಾಷಣೆ `ಒಂದು ಮೊಟ್ಟೆಯ ಕಥೆ’ ಚಿತ್ರಕ್ಕಾಗಿ
(`ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ ಡಾ:ಎಚ್.ಕೆ.ನರಹರಿ ಅವರಿಂದ)

ಶ್ರೀ ನರ್ತನ್ `ಮಫ್ತಿ’ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜ್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಶ್ರೀಬಿ.ಸುರೇಶ್ ಪ್ರಶಸ್ತಿ)

ಶ್ರೀ ವಿ.ನಾಗೇಂದ್ರಪ್ರಸಾದ್ `ಚೌಕ’ ಚಿತ್ರದ (ಅಪ್ಪ ಐ ಲವ್ ಯು ಅಪ್ಪ) ಗೀತರಚನೆಗಾಗಿ
(`ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಶ್ರೀ ಮನದೀಪರಾಯ್ ಹಿರಿಯ ಕಲಾವಿದರು
(`ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ’ ನಟ ಶ್ರೀ ಸುದೀಪ್ ಅವರಿಂದ)

#Cineloka

 

‘Sprouter’ is a discovery of 20 years young American Daniel Everist a college student of St Thomas, Minnesota.


 ‘Sprouter’ is a platform where you can use social media accounts such as Face Book, Instagram, Twitter, Snapshot, Linkedin, Spotify, Pinterest and VSCO in a single app. Daniel Everist's ‘Sprouter’ is yet to get approval from Whats App.

Daniel Everist is a student of Indian professor in chemistry Mr Manoj Patil invited his mentor to be the operations director of ‘Sprouter’. It took three months to finalize on the mode of bringing it to public for Daniel Everist. It is exactly after one year ‘Sprouter’ is reality and available on Google Play and the App Store. With the help of his Uncle,Daniel Uncle John,maker of movie ‘Valley of Bones’ for Sony, Daniel has taken ‘Sprouter’ to the next level.

The Sprouter is for all teenage, students, businessmen and others very conducive to operate. It is ‘Bazaar of Social Media’ says Manoj Patil addressing the media at the Shangrila Hotel,Bangalore  on Saturday night. There is no other app like this in the world. It is available on Apple, Android and other tools. Apple took lot of time to scrutinize on the operating system and finally approved great work of Daniel Everist.

‘Sprouter’ is the new app of this generation, the privacy aspects are also well taken care of. Grow your network and it is easy platform called ‘Sprouter’ that connects people in a quick span of time.

 

ದರ್ಶನ್ ರಾಗ್ ನಿರ್ಮಾಣದ `ನಾಕುಮುಖ` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ ಸನ್ನೆವೇಶಕ್ಕೆ ಶಕ್ತಿ ಪತ್ರಿಕೆಯ ಸಂಪಾದಕರಾದ ಶ್ರೀಚಿದ್‍ವಿಲಾಸ್ ಆರಂಭ ಫಲಕ ತೋರಿದರು. ಬೇಬಿ||ಧ್ವನಿ ಕ್ಯಾಮೆರಾ ಚಾಲನೆ ಮಾಡಿದರು.

ಕುಶಾನ್ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಮಹೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ ಮುಂತಾದವರಿದ್ದಾರೆ.

ಕೆ ಎ ಸುರೇಶ್ ನಿರ್ಮಾಣದ ಈ ವರ್ಷದ ಮೊದಲ ಬಿಗ್ ಬಜೆಟ್ ಸಿನಿಮಾ `ರಾಜು ಕನ್ನಡ ಮೀಡಿಯಂ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಬಹುಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರೆಲ್ಲರ ಗಮನ ಸೆಳೆದಿರೋ ಈ ಚಿತ್ರ ರಾಜ್ಯಾಧ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಚಿತ್ರದಿಂದ ಖ್ಯಾತಿ ಪಡೆದ ಗುರುನಂದನ್, ನಿರ್ದೇಶಕ ನರೇಶ್ ಕುಮಾರ್, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಸಂಕಲಕಾರ ಗಿರೀಷ್ ಈ ಚಿತ್ರದಲ್ಲೂ ಒಟ್ಟಿಗೆ ಸೇರಿದ್ದಾರೆ.
ಗುರುನಂದನ್ ಜೊತೆಗೆ ಆವಂತಿಕ ಶೆಟ್ಟಿ, ಆಶಿಕ ರಂಗನಾಥ್ ಹಾಗೂ ಅಂಜೇಲಿನ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಓಂ ಪ್ರಕಾಶ್ ರಾವ್ ಹಾಗೂ ಇಂದ್ರಜಿತ್ ಲಂಕೇಶ್ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಈ ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣದಲ್ಲಿ ಮೂಡಿ ಬಂದಿರೋಈ ಚಿತ್ರಕ್ಕೆ ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಚೆಲುವರಾಜ್, ಅನೂಪ್ ಆರ್ಯನ್, ಹೇಮಂತ್ ಅರುಣ್, ಸಹಾಯಕ ನಿರ್ದೇಶಕರಾಗಿ ಲಕ್ಷ್ಮಿ ವಿನಾಯಕ್ ಕೆಲಸ ಮಾಡಿದ್ದಾರೆ

 

ಇದು ಅಸಲಿ ಬದುಕಿನ ಆಟ. ಕುತೂಹಲದ ಜೊತೆಗೆ ಅಚ್ಚುಕಟ್ಟಾದ ನಿರೂಪಣೆ, ತಾರಾಗಣ,
ಅತ್ಯುತ್ತಮ ತಂತ್ರಜ್ಞರು ಸೇರಿಕೊಂಡು ಮಾಡಿರುವ ಹೊಸ ಬಗೆಯ ಚಿತ್ರ? 3 ಘಂಟೆ 30 ದಿನ 30 ಸೆಕೆಂಡ್? ಸಿನಿಮಾ ಇಂದ ನೀಡುತ್ತಿದ್ದಾರೆ. ಇದೆ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬ್ರೈನ್ ಶೇರ್ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಚಂದ್ರಶೇಖರ ಪದ್ಮಶಾಲಿ ಆರ್ ನಿರ್ಮಾಪಕರಾಗಿದ್ದಾರೆ. ಇವರ ಜೊತೆ 10 ಸ್ನೇಹಿತರು ಸಹ ಸೇರಿಕೊಂಡಿದ್ದಾರೆ.

`3 ಘಂಟೆ 30 ದಿನ 30 ಸೆಕೆಂಡ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮುಕ್ತವಾಗಿ ಪ್ರಶಂಸೆ ಮಾಡಿ ಯಾವುದೇ ಕತ್ತರಿ ಪ್ರಯೋಗ ಇಲ್ಲದೆ ಯು/ಎ ಅರ್ಹತಾ ಪತ್ರವನ್ನು ದಯಪಾಲಿಸಿದೆ. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್ ಮಾಸ್ ಅಂಶಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದಾರೆ. ಇವರದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ. ಹೆಜ್ಜೆ ಹೆಜ್ಜೆಗೂ ಕುತೂಹಲ, ಹೃದಯ ಕಲಕುವ ಭಾವನಾತ್ಮಕ ಅಂಶಗಳು, ಪ್ರೇಕ್ಷಕ ಕುರ್ಚಿಯ ತುದಿಯಲ್ಲೇ ಕುಳಿತು ನೋಡುವ ಹಾಗೆ ಮಾಡುತ್ತಲೆ ಒಂದು ಪ್ರೇಮಕಥೆಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.

ಅರು ಗೌಡ, ಕಾವ್ಯ ಶೆಟ್ಟಿ, ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್, ಜಯಲಕ್ಷ್ಮಿ ಪಾಟಿಲ್, ಯಮುನ, ಮೇಘನ, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಅನಂತ ವೇಲು, ವಿಶ್ವ, ಹನುಮಂತೆ ಗೌಡ, ಯತಿರಾಜ್, ಟಿ ಎಸ್ ನಾಗಾಭರಣ, ಅಂಜಿನಪ್ಪ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಮಧುಸೂಧನ್ ಹಾಗೂ ಜಯಂತ್ ಕಾಯ್ಕಿಣಿ ಗೀತ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ಸಂಭ್ರಮ್ ಈ ಚಿತ್ರದ ಸಂಗೀತ ನಿರ್ದೇಶಕರು. ಶ್ರೀನಿವಾಸ ರಾಮಯ್ಯಾ ಛಾಯಾಗ್ರಾಹಕರು, ಕ್ರೇಜಿ ಮೈಂಡ್ಸ್ ಶ್ರೀ ಸಂಕಲನ, ತ್ರಿಭುವನ್ ನೃತ್ಯ, ಮಾಸ್ ಮಾದ ಸಾಹಸ, ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಅವರು ಒಂದು ಹಾಡಿನಲ್ಲಿ ಮಿಂಚಿದ್ದಾರೆ.

 
ಅಮೆರಿಕ ದೇಶದ ನಿವಾಸಿ ಅಮೆರಿಕ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ `ಶಿವು ಪಾರು' ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.
ಕಳೆದ 20 ವರ್ಷಗಳಿಂದ ಅಮೆರಿಕ ದೇಶದಲ್ಲಿ ಇದ್ದು ಹಾಲೀವುಡ್ ಅಲ್ಲಿ ಕೆಲಸ ಮಾಡಿ, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅನೇಕ ಕತೆಗಳನ್ನು ರಚಿಸಿ, ಅಮೆರಿಕ ಬ್ಯಾಂಕ್ ಅಲ್ಲಿ ಸಾಫ್ಟ್ ವೇರ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸಿರುವ ಹೊಸಕೋಟೆಯ ಈ ಅಮೆರಿಕ ಸುರೇಶ್ ಕನ್ನಡ ಸಿನಿಮಾ ಮಾಡುವ ಆಸೆ ಇಟ್ಟುಕೊಂಡು ಅಪಾರ ಶ್ರಮ ಸಹ ವ್ಯಯ ಮಾಡಿದ್ದಾರೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಎಂದು ಬಣ್ಣಿಸುತ್ತಾರೆ.
135 ನಿಮಿಷಗಳ ಈ `ಶಿವು ಪಾರು' ಇತ್ತೀಚಿಗೆ ಫಿಲ್ಮ್ ಬಜಾರ್ ಅಲ್ಲಿ ಸಹ ಪ್ರದರ್ಶನ ಮಾಡಿ ಪ್ರಶಂಸೆಗೆ ಒಳಗಾಗಿತ್ತು. ಇದು ಈಗಾಗಲೇ ಅನೇಕ ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಕನ್ನಡ ಸಿನಿಮಾಕ್ಕೆ ಆಂಗ್ಲ ಭಾಷೆಯ ಸಬ್ ಟೈಟಲ್ ಸಹ ಮಾಡಲಾಗಿದೆ.
ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ, ಹಾಲೇಶ್ ಛಾಯಾಗ್ರಹಣ, ಜೀವನ್ ಸಂಕಲನ, ಅಮೆರಿಕ ಸುರೇಶ್ ಗೀತ ಸಾಹಿತ್ಯ ಹಾಗೂ ಸಂಗೀತ, ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.
`ಶಿವ ಪಾರು' ಚಿತ್ರಕ್ಕೆ ಯಮನ ಗೆದ್ದ ಶಿವು, ದೇವಲೋಕದ ಪ್ರೇಮ ಲೋಕ, ಕಿಟ್ಟಪ್ಪ ಯಾಕೆ ಶಿವು ಹತ್ಯೆ ಮಾಡಿದ, ಯಾಕೆ ಪಾರು ಆತ್ಮಹತ್ಯೆ ಮಾಡಿಕೊಂಡಳು? ವಿಚಾರಗಳು ಅಪಾರ ಕುತೂಹಲ ಹುಟ್ಟು ಹಾಕಿದೆ. ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ `ಶಿವು ಪಾರು' ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ, ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ. ?ಪ್ಯಾಟೆ ಹುಡ್ಗಿರ್ ಹಳ್ಳಿಗ್ ಬಂದ್ರು? 6 ನೇ ಕಂತು ರಿಯಾಲಿಟಿ ಕಾರ್ಯಕ್ರಮ ಸಹ ಚಿತ್ರದ ಅಂಶಗಳಲ್ಲಿ ಒಂದು.
#ShivuPaaru #Cineloka
Page 10 of 15

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top