IB anigif

Ayugya Gif

adweb

udgharsha

 

ಪ್ರಿಮೆಚ್ಯೂರ್ ಪ್ರೇಮ ಕತೆ ಹೊಂದಿರುವ ‘ನಡುವೆ ಅಂತರವಿರಲಿ’ ಚಿತ್ರವನ್ನು 12 ವರ್ಷದಿಂದ 50 ವರ್ಷದ ವಯೋಮಾನದವರಿಗೆ ಟೆಸ್ಟ್ ಚೆಕ್ ಎಂದು ತೋರಿಸಿದ್ದಾರೆ. 55 ನೋಡುಗರಲ್ಲಿ 38 ಮಂದಿ ಕಣ್ಣೀರು ಹಾಕಿದ್ದಾರೆ. ಅಂದರೆ ಎಷ್ಟರಮಟ್ಟಿಗೆ ಸಿನಿಮಾ ಆವರಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗಿದೆ. ಓದುವ ವಯಸ್ಸಿನಲ್ಲಿ ಓದಬೇಕು. ಅದು ಬಿಟ್ಟು ಪ್ರೀತಿ, ಪ್ರೇಮ ಅಂತ ಹಿಂದೆ ಹೋದರೆ ಅವರು ನೋವು ಅನುಭವಿಸುವುದು ಅಲ್ಲದೆ ಮನೆಯವರು ಕೂಡ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. 18-20 ವಯಸ್ಸಿನ ಯುವಜನತೆಯ ಮನಸ್ಸು ಚಂಚಲವಾಗಿರುತ್ತದೆ. ಇದೇ ಅಂತರದಲ್ಲಿ ತಪ್ಪುಗಳು ಆಗುತ್ತದೆ. ಅದಕ್ಕೆ ಈ ವಯಸ್ಸುನಲ್ಲಿ ಅಂತರವಿರುವುದು ಒಳ್ಳೇದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ.

.
ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ರವೀನ್‍ಕುಮಾರ್ ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರಿಗೆ ಜೊತೆಯಾಗಿ ನಾಗರಾಜ್ ಪಾಲುದಾರರು.
.
ರಂಗಭೂಮಿ ನಟ, ಸದ್ಯ ಇಂಜನಿಯರಿಂಗ್ ಓದುತ್ತಿರುವ ಪ್ರಖ್ಯಾತ್‍ಪರಮೇಶ್ ಸಂಭಾóಷಣೆ,ನಿರ್ದೇಶಕ ಮಂಜುಮಾಂಡವ್ಯ ಇವರ ಶೋಧದಿಂದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಶಾನಿಶೆಟ್ಟಿ ನಾಯಕಿ. ಇಬ್ಬರು ಮೇಕಪ್‍ರಹಿತ ನಟನೆ ಮಾಡಿರುವುದು ವಿಶೇಷ. ಉಳಿದಂತೆ ನಾಯಕಿಯ ಪೋಷಕರಾಗಿ ಅಚ್ಯುತಕುಮಾರ್-ತುಳಸಿಶಿವಮಣಿ, ನಗಿಸಲು ಚಿಕ್ಕಣ್ಣ , ಉದಯ್‍ಮೆಹ್ತಾ ನಟಿಸಿದ್ದಾರೆ. ಮಣಿಕಾಂತ್ ಖದ್ರಿ ಹಾಡುಗಳಲ್ಲಿ ‘ಶಕುಂತ್ಲೆ ಬಂದಳು’ ಗೀತೆ ಹಿಟ್ ಆಗಿದೆ. ಸದರಿ ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬೆಳಿಗ್ಗೆ ಆರು ಗಂಟೆಯಲ್ಲಿ ಕೇವಲ ಐದು ನಿಮಿಷದಲ್ಲಿ ರಚಿಸಿದ್ದಾರಂತೆ.
.

ವಿತರಕ ಕಾರ್ತಿಕ್‍ಗೌಡ ಮುಖಾಂತರ ಸುಮಾರು 100 ಕೇಂದ್ರಗಳಲ್ಲಿ ಅಕ್ಟೋಬರ್ 5ರಂದು ರಾಜ್ಯದ್ಯಂತ ತೆರೆ ಕಾಣಲಿದೆ.

ಹೆಸರಾಂತ ಸಂಕಲನಕಾರ, ಕಿರು ಚಿತ್ರಗಳ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರ ಪ್ರಥಮ ನಿರ್ದೇಶನದ ಚಿತ್ರ ಆದಿ ಪುರಾಣ ಶಮಂತ್ ನಿರ್ಮಾಣದಲ್ಲಿ ರೈನ್ ಬೋ ಪೆÇ್ರಡಕ್ಷನ್ ಸಂಸ್ಥೆಯಲ್ಲಿ ಬಿಡುಗಡೆ ಆಗುತ್ತಿದೆ.

.

ಆದಿ ಪುರಾಣ ಚಿತ್ರದಿಂದ ಶಷಾಂಕ್, ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್ ಪರಿಚಯ ಸಹ ಆಗುತ್ತಿದ್ದಾರೆ. ಎಂ ಜಿ ಗುರುಪ್ರಸಾದ್ ಛಾಯಾಗ್ರಹಣ, ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಹಾಗೂ ಸಿದ್ದಾರ್ತ್ ಕಾಮತ್ ಸಂಗೀತ ನೀಡಿದ್ದಾರೆ. ಶಕ್ತಿ ವೆಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕವಿರಾಜ್ ಹಾಗೂ ವಿಕ್ರಮ್ ವಸಿಷ್ಠ ಗೀತ ಸಾಹಿತ್ಯ, ಅನುಷ ಶಾಮಂತ್ ಹಾಗೂ ತೇಜಸ್ವಿನಿ ವಸ್ತ್ರ ವಿನ್ಯಾಸ, ರಘು ಕಲಾ ನಿರ್ದೇಶನ, ಜೈ ದೇವ್ ಸಹಾಯಕ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.
.
ಯುವ ಮನಸನ್ನು ಸೂರೆ ಗೊಳ್ಳುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ನಾಗೇಂದ್ರ ಶಾ, ಕರಿ ಸುಬ್ಬು, ಡಾ ವತ್ಸಲಾ ಮೋಹನ್, ಶಕ್ತಿ ವೆಲ್, ಸಮೀರ, ಆದಿತ್ಯ ಭಾರದ್ವಾಜ್, ಜಿಮ್ ಶಿವು, ರಾಧ ಹಾಗೂ ಇತರರು ಇದ್ದಾರೆ.

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ಆರಂಭಿಸಿರುವ ಪಿಆರ್ಕೆ ಪ್ರೊಡಕ್ಷನ್‌ ಹೌಸ್‌ನಲ್ಲಿ 'ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌' ಖ್ಯಾತಿಯ ದಾನಿಷ್ ನಾಯಕರಾಗುವ ಹೊಸ ಸಿನಿಮಾ ನಿರ್ಮಾಣವಾಗಲಿದೆ.

.

ಈ ಸಿನಿಮಾವನ್ನು ಹ್ಯಾಪಿ ನ್ಯೂ ಇಯರ್‌ ಸಿನಿಮಾ ಮೂಲಕ ಗಮನ ಸೆಳೆದಿದ್ದ ಪನ್ನಗಭರಣ ನಿರ್ದೇಶನ ಮಾಡಲಿದ್ದಾರೆ.

ನೋಗ್‌ರಾಜ್‌ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ದಾನಿಶ್‌ರನ್ನು ಈ ಸಿನಿಮಾದ ಮೂಲಕ ಬೇರೆಯದ್ದೇ ರೂಪದಲ್ಲಿ ತೋರಿಸಲಿದ್ದೇನೆ ಎನ್ನುತ್ತಾರೆ ನಿರ್ದೇಶಕ ಪನ್ನಗಭರಣ.

.

ಈ ಮೂಲಕ ಪುನೀತ್‌ರಾಜ್‌ಕುಮಾರ್‌ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಹೊಸ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡುವುದನ್ನು ಮುಂದುವರೆಸಿದ್ದಾರೆ.

 

ಸಿಂಗಂ , ಕಮಾಂಡೋ ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿದ್ದ ಠಾಕೂರ್‌ ಅನೂಪ್‌ ಸಿಂಗ್‌ ಸುನೀಲ್‌ಕುಮಾರ್‌ ದೇಸಾಯಿ ಅವರ ಉದ್ಘರ್ಷ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

.

ಈ ಬಗ್ಗೆ ಠಾಕೂರ್‌ ಅನೂಪ್‌ ಸಿಂಗ್‌ ಅವರನ್ನು ಪರಿಚಯಿಸುವ ಸಲುವಾಗಿ ದೇಸಾಯಿ ಪತ್ರಿಕಾ ಗೋಷ್ಠಿ ಕರೆದಿದ್ದರು. ಅಲ್ಲಿ ಮಾತನಾಡಿದ ಅನೂಪ್‌ ಸಿಂಗ್‌ ದೇಸಾಯಿಯವರು ನನಗೆ ಮೊದಲು ವಿಲನ್‌ ಪಾತ್ರಕ್ಕೆ ಕರೆಯುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ನನಗೆ ನಾಯಕನ ಪಾತ್ರ ಕೊಟ್ಟರು ಎಂದು ಖುಷಿ ವ್ಯಕ್ತಪಡಿಸಿದ್ರು.

.

‘ಈ ಸಿನಿಮಾ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇದೆ. ದೇಸಾಯಿ ಸರ್‌ ನನಗೆ ಕಥೆ ಹೇಳಿದಾಗ ನಾನು ಈ ಚಿತ್ರಕ್ಕೆ ನಾಯಕ ಯಾರು ಎಂದು ಕೇಳಿದೆ, ಅದಕ್ಕೆ ಅವರು ನೀವೇ ಎಂದಾಗ ನನಗೆ ನಿಜಕ್ಕೂ ಶಾಕ್‌ ಆಯಿತು. ಮತ್ತೆ ಮತ್ತೆ ಕೇಳಿಕೊಂಡು ಕನಧಿರ್ಮ್‌ ಮಾಡಿಕೊಂಡೆ,’ಎಂದು ಹೇಳಿದರು ಅನೂಪ್‌.
ಠಾಕೂರ್‌ ಅನೂಪ್‌ ಸಿಂಗ್‌ಗೆ ಈ ಸಿನಿಮಾದಲ್ಲಿ ಕಬಾಲಿ ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್‌ ಜೋಡಿಯಾಗಿ ನಟಿಸಿದ್ದಾರೆ

 
ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ನಿರ್ಮಾಪಕ ಬಿ ಕೆ ಶ್ರೀನಿವಾಸ್‌  ಫಿಲಂ ಫ್ಯಾಕ್ಟರಿ ಎಂಬ ಹೊಸ ಪ್ರೊಡಕ್ಷನ್‌ ಹೌಸ್‌ನ್ನು ಆರಂಭಿಸಿದ್ದಾರೆ. ಈ ಮೂಲಕ ಅವರು ಪ್ರತಿ ವರ್ಷ ಹೊಸ ಹೊಸ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರಂತೆ.
.
ಈ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾದಲ್ಲಿ ಬೆಂಕೋಶ್ರೀ ತಮ್ಮ ಪುತ್ರ ಅಕ್ಷರ್‌ನನ್ನು ಲಾಂಚ್‌ ಮಾಡಲಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕಯೋಗರಾಜ್‌ ಭಟ್‌  ಬೆಂಕೋಶ್ರೀ ಫಿಲಂ ಫ್ಯಾಕ್ಟರಿಯ ಲೋಗೋವನ್ನು ಉದ್ಘಾಟಿಸಿದರು.

 

ಸಂಗೀತ ಅಂದ್ರೆ ಹಬ್ಬ, ಸಂಗೀತ ಅಂದ್ರೆ ಸೌರಭ, ಸಂಗೀತ ಅಂದ್ರೆ ಸಂತೋಷ, ಖುಷಿ.. ಈ ರೀತಿಯ ಎಲ್ಲಾ ಖುಷಿ, ನಗು, ಸಂತೋಷವನ್ನು ಹೊತ್ತು ತರುತ್ತಿದೆ ಜೀ ಕನ್ನಡದ ಐತಿಹಾಸಿಕ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15. ಕನ್ನಡ ಕಿರುತೆರೆಯಲ್ಲೇ ದಾಖಲೆ ಎಂಬಂತೆ ತನ್ನ 14 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಸರಿಗಮಪ ಈಗ ಹದಿನೈದನೇ ಆವೃತ್ತಿಯಮೂಲಕ ಸೀನಿಯರ್ ಗಾಯಕರ ಜೊತೆ ಕನ್ನಡಿಗರ ಮನೆಗಳಲ್ಲಿ ಸಂಗೀತ ಸುಧೆ ಹರಿಸಲು ಸಜ್ಜಾಗಿ ಬರುತ್ತಿದೆ.

.

ಪ್ರತಿ ಭಾರಿಯೂ ಹೊಸತನ, ಹೊಸ ಪ್ರತಿಭೆಗಳನ್ನ ತರುವ ಸರಿಗಮಪ ವೇದಿಕೆ ಕನ್ನಡ ಗಾಯನ ಪ್ರತಿಭೆಗಳಿಗೆ ದೈವೀಸಮಾನ.. ಈ ವೇದಿಕೆಯ ಘನತೆ ಹೆಚ್ಚಿಸಿರುವವರು ಸಂಗೀತ ಮುಕುಟದ ರತ್ನಗಳಂತಿರುವ ತೀರ್ಪುಗಾರರು.. ಸರಿಗಮಪ ಕಾರ್ಯಕ್ರಮದ ಪ್ರಮುಖ ಜಡ್ಜ್ ಕನ್ನಡ ಚಂದನವನದ ಚಿತ್ರಸಂಗೀತ ಲೋಕಕ್ಕೆ ಹೊಸತನದ ಸಂಗೀತದ ಜೊತೆ, ಹಸನಾದ ಪದಗಳ ಮೂಲಕ ದಶಕಗಳಿಂದ ಅಭಿಮಾನಿಗಳನ್ನ ಆವರಿಸಿಕೊಂಡು ನಾದದಿಂದ ಅನಂತವಾಗಿ ಬೆಳೆದ ನಾದಬ್ರಹ್ಮ ಶ್ರೀಯುತ ಹಂಸಲೇಖರವರು ಮಹಾಗುರುಗಳ ಪಟ್ಟ ಅಲಂಕರಿಸಲಿದ್ದಾರೆ.. ಇವರ ಜೊತೆಗೆ ತೀರ್ಪುಗಾರರಾಗಿ ಮುಂದುವರೆಯುತ್ತಿರುವುದು ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ, ಪ್ರಪಂಚದೆಲ್ಲೆಡೆ ತಮ್ಮ ದೊಡ್ಡ ಧನಿಯ ಮೂಲಕ ಅತಿದೊಡ್ಡ ಹೆಸರು ಮಾಡಿ ಹೆಮ್ಮೆಯ ಕನ್ನಡಿಗನಾಗಿ ಮೆರೆಯುತ್ತಿರುವ ಶ್ರೀ ವಿಜಯ್ ಪ್ರಕಾಶ್ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮ ಮ್ಯೂಸಿಕ್ ಮೂಲಕ ಮ್ಯಾಜಿಕ್ ಮಾಡುತ್ತಿರುವ ಪ್ರಸ್ತುತ ಅಚ್ಚು ಮೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ.

.

ಇನ್ನೂ ಈ ಭಾರಿಯ ಸರಿಗಮಪ ಸೀಸನ್ ಹದಿನೈದರ ವಿಶೇಷತೆ ಸರಿಗಮಪ ಇಷ್ಟು ವರ್ಷಗಳ ಪಯಣದಲ್ಲಿ ಅತಿ ಹೆಚ್ಚು ಭಾರಿ ತೀರ್ಪುಗಾರರಾಗಿ ಕಾರ್ಯಕ್ರಮ ಮುನ್ನಡೆಸಿದ, ಕನ್ನಡ ಚಿತ್ರರಂಗದ ಸುಶ್ರಾವ್ಯ ಧನಿಯ ಸುರದ್ರೂಪಿ ಗಾಯಕ ಶ್ರೀ ರಾಜೇಶ್ ಕೃಷ್ಣನ್.. ಈ ಭಾರಿ ರಾಜೇಶ್ ಕೃಷ್ಣನ್ ಆಗಮನ ಎಲ್ಲಾ ಕನ್ನಡಿಗರಿಗೆ, ಸಂಗೀತ ಪ್ರೇಮಿಗಳಿಗೆ ಸಂತಸ ತಂದಿದ್ದಲ್ಲದೆ, ಸರಿಗಮಪ ಕಾರ್ಯಕ್ರಮಕ್ಕಾಗಿ ಕಾದು ಕೂರುವಂತೆ ಮಾಡಿದೆ.
ಜೊತೆಗೆ ಇಡೀ ಸಂಗೀತ ಕಾರ್ಯಕ್ರಮಕ್ಕೆ ಕಳೆ ಕಟ್ಟುವುದು ಮುದ್ದು ನಗುವಿನ ಚಂದದ ಮಾತಿನ ಲವಲವಿಕೆಯ ನಿರೂಪಕಿ ಅನುಶ್ರೀಯವರ ನಿರಾಯಾಸವಾದ ನಿರೂಪಣೆ.

.

ಇಷ್ಟೆಲ್ಲಾ ವಿಶೇಷತೆ ಇರುವ ವಿಶೇಷ ಸಂಗೀತ ಕಾರ್ಯಕ್ರಮ, ಸರಿಗಮಪ ಸೀಸನ್ 15 ಇದೆ ಶನಿವಾರ ಅಂದರೆ ಸೆಪ್ಟೆಂಬರ್ 29 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.. ಕನ್ನಡ ಕಿರುತೆರೆಯ ಏಕೈಕ ಸಂಗೀತ ಹಬ್ಬವನ್ನ ತಪ್ಪದೆ ವೀಕ್ಷಿಸಿ ಸಾಕ್ಷೀಕರಿಸಿ..

ಭರಾಟೆ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಇರುವ ನಟ ಶ್ರೀಮುರುಳಿ ಈಗ ಮದಗಜನಾಗಲು ಹೊರಟಿದ್ದಾರೆ. 

ಹೌದು ಅಯೋಗ್ಯ ಮಹೇಶ್‌ಕುಮಾರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಮುರುಳಿ ನಾಯಕರಾಗಿದ್ದು, ಇದಕ್ಕೆ "ಶ್ರೀಮುರುಳಿ ಮದಗಜ" ಎಂಬ ಟೈಟಲ್‌ ಇಡಲಾಗಿದೆ.

.

ಹೆಬ್ಬುಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸಗೌಡ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ನಟಿಸಲಿದ್ದಾರಂತೆ.

.

ಶ್ರೀಮುರುಳಿ ಸಧ್ಯ ಭರಾಟೆ ಚಿತ್ರದ ಶೂಟಿಂಗ್‌ನಲ್ಲಿದ್ದು, ಅದು ಮುಗಿದ ತಕ್ಷಣ ಮದಗಜ ಆರಂಭವಾಗಲಿದೆ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಅಂತೆ. ಟಗರು, ಅಯೋಗ್ಯ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದ್ದಾರೆ.

 

ಗಿರೀಶ್ ಕಾರ್ನಾಡರ ನಿರ್ದೇಶನ ಹಾಗೂ ದಿ. ಶಂಕರನಾಗ್ ಅಭಿನಯದಲ್ಲಿ, 40 ವರ್ಷಗಳ ಹಿಂದೆ ತೆರೆಕಂಡಿದ್ದ ಒಂದಾನೊಂದು ಕಾಲದಲ್ಲಿ ಚಿತ್ರದ ಹೆಸರು ಈಗ ಮತ್ತೆ ಕೇಳಿಬರುತ್ತಿದೆ. ಅದೇ ಹೆಸರಿಟ್ಟುಕೊಂಡು ಹೊಸಬರ ತಂಡವೊಂದು ಸಿನಿಮಾ ಆರಂಭಿಸಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‍ನ ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮುಹೂರ್ತ ದೃಷ್ಯಕ್ಕೆ ಹಿರಿಯ ನಿರ್ದೇಶಕ ಭಗವಾನ್ ಅವರು ಆರಂಭ ಫಲಕ ತೋರಿದರೆ, ನಟಿ ಸಂಗೀತಾ ಕ್ಯಾಮೆರಾ ಆನ್ ಮಾಡಿದರು.
.

ಮುನಿಲಕ್ಷ್ಮಿವೆಂಕಟೇಶ್ವರ ಕ್ರಿಯೇಶನ್ಸ್ ಲಾಂಛನದಲ್ಲಿ ವೈ. ನಾರಾಯಣಸ್ವಾಮಿ, ಮುನೇಶ್, ಅಕ್ಷಿತ್ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜುನಾಥ ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಕೇಶ್ ಸಿ.ತಿಲಕ್ ಚಿತ್ರದ ಕ್ಯಾಮೆರಾವರ್ಕ್ ಮಾಡಿದರೆ, ಯಶವಂತ್ ಭೂಪತಿ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ನಾಯಕನಾಗುವ ಮೂಲಕ ಗಜ ಎಂಬ ಮತ್ತೊಂದು ಯುವ ಪ್ರತಿಭೆ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದೆ.
.

ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಂಜುನಾಥ್ ಶಂಕರ್‍ನಾಗ್ ಅವರ ಒಂದಾನೊಂದು ಕಾಲ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಶೀರ್ಷಿಕೆ ಬಿಟ್ಟರೆ ಮತ್ಯಾವುದೇ ರೀತಿಯ ಸಂಬಂಧವಿಲ್ಲ. 1980ರ ದಶಕದಲ್ಲಿ ನಡೆಯುವ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದರಿಂದ ಈ ಚಿತ್ರಕ್ಕೆ ಒಂದಾನೊಂದು ಕಾಲದಲ್ಲಿ ಎಂದು ಹೆಸರಿಟ್ಟಿದ್ದೇವೆ. ಒಂದು ಕರ್ಚೀಫ್(ಕರವಸ್ತ್ರ) ಮೇಲೆ ನಡೆಯುವ ಲವ್‍ಸ್ಟೋರಿ ಈ ಚಿತ್ರದಲ್ಲಿದೆ. ರೆಟ್ರೋ ಸ್ಟೈಲ್‍ನಲ್ಲಿ ಇಡೀ ಚಿತ್ರವನ್ನು ಮಾಡುತ್ತಿದ್ದೇವೆ. ಆಗಿನ ಕಾಲದ ಹಳೇ ಕಟ್ಟಡ, ಜನರ ಜೀವನ ಶೈಲಿ, ಹಳ್ಳಿ ಪರಿಸರ ಇಂಥವುಗಳನ್ನು ಮರುಸೃಷ್ಟಿ ಮಾಡಬೇಕಿದೆ. ಒಂದು ಕರವಸ್ತ್ರದಿಂದಲೇ ಚಿತ್ರದ ಕಥೆ ಆರಂಭವಾಗುತ್ತದೆ. ಬನ್ನೇರುಗಟ್ಟ, ಬನವಾಸಿ, ಪಾಂಡವಪುರ, ಸಕಲೇಶಪುರ ಸುತ್ತಮುತ್ತ ಈ ಚಿತ್ರಕ್ಕೆ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
.

ನಂತರ ಚಿತ್ರದ ನಾಯಕನಟ ಗಜ ಮಾತನಾಡಿ ನಿರ್ದೇಶಕ ಮಂಜು ನನ್ನ ಸ್ನೇಹಿತರು. ರೆಟ್ರೋಸ್ಟೈಲ್‍ನಲ್ಲಿ ಮೂಡಿಬರುವ ಒಂದು ಲವ್‍ಸ್ಟೋರಿ ಈ ಚಿತ್ರದಲ್ಲಿದೆ. ಆಗಿನ ಕಾಲದ ಹುಡುಗರು ಹೇಗಿದ್ದರು ಎಂದು ತಿಳಿದುಕೊಂಡಿದ್ದೇನೆ. ಅಭಿನಯದ ಬಗ್ಗೆ ನಿರ್ದೇಶಕರು ಹೇಳಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನೊಬ್ಬ ಡೈರೆಕ್ಟರ್ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಂತರ ಚಿತ್ರದ ನಾಯಕಿ ಜಾಹ್ನವಿ ಮಾತನಾಡಿ ನಾಟಕಗಳಲ್ಲಿ ಅಭನಯಿಸಿದ ಅನುಭವವಿದೆ. ಚಿತ್ರರಂಗ ಹೊಸದು, ಹಳೇಕಾಲದ ಹುಡುಗಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ನೀನಾಸಂ ಅಶ್ವತ್ ಈ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರ ಮಾಡುತ್ತಿದ್ದಾರೆ. ನಟಿ ಸಂಗೀತ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

 

ಇತ್ತೀಚೆಗೆ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ಕಾಮಿಡಿಯನ್ ಪ್ರಶಸ್ತಿ ಪಡೆದ ಸಾಯಿಕುಮಾರ್‌ ತಮ್ಮ ಪ್ರಶಸ್ತಿಯನ್ನು ನಿರ್ದೇಶಕ ಪನ್ನಗಭರಣಗೆ ಅರ್ಪಿಸಿದ್ದಾರೆ.

.

ಪನ್ನಗಭರಣ ನಿರ್ದೇಶನದ ಹ್ಯಾಪಿ ನ್ಯೂ ಇಯರ್‌ ಸಿನಿಮಾದ ಪಾತ್ರಕ್ಕಾಗಿ ಸಾಯಿಕುಮಾರ್‌ ಅವರಿಗೆ ಬೆಸ್ಟ್‌ ಕಮಡಿಯನ್‌ ಪ್ರಶಸ್ತಿ ಸಿಕ್ಕಿತು, ಪ್ರಶಸ್ತಿ ಪಡೆದುಕೊಂಡ ಸಾಯಿಕುಮಾರ್‌ ‘ನಾನು ಈ ಪ್ರಶಸ್ತಿಯನ್ನು ನನ್ನ ನಿರ್ದೇಶಕ ಪನ್ನಗಭರಣ ಅವರಿಗೆ ಅರ್ಪಿಸುತ್ತೇನೆ. ನಾನು ಜನರನ್ನು ನಗಿಸಬಲ್ಲೆ ಎಂದು ಕಾನ್ಫಿಡೆನ್ಸ್ ಇಂದ ನನ್ನ ಕೈಯಲ್ಲಿ ಇಂತಹ ಪಾತ್ರ ಮಾಡಿಸಿದ್ದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಇವತ್ತು ಕಂಪ್ಲೀಟ್‌ ನಟ ಆದೆ ಅದಕ್ಕೆ ಮುಖ್ಯ ಕಾರಣ ಪನ್ನಗ,’ಎಂದು ಹೇಳಿದರು.

.

ಇದೇ ವೇದಿಕೆಯಲ್ಲಿದ್ದ ನಟ ವಿಜಯ್‌ ರಾಘವೇಂದ್ರ ಸಹ ಪನ್ನಗ ಅವರು ಸಾಯಿಕುಮಾರ್‌ ಅವರ ಹತ್ತಿರ ಇಂತಹ ಪಾತ್ರ ಮಾಡಿಸಿದ್ದು ನಿಜಕ್ಕೂ ಖುಷಿಯ ವಿಚಾರ, ಪ್ರಶಸ್ತಿ ಪಡೆದ ಸಾಯಿಕುಮಾರ್‌ ಅವರಿಗೂ, ನಿರ್ದೇಶಕ ಪನ್ನಗ ಅವರಿಗೂ ಅಭಿನಂದನೆಗಳು ಎಂದು ಹೇಳಿದರು.

ಒಟ್ಟಿನಲ್ಲಿ ಒಬ್ಬ ನಟ ತನ್ನ ಪ್ರಶಸ್ತಿಯನ್ನು ನಿರ್ದೇಶಕರಿಗೆ ಅರ್ಪಿಸಿದ್ದು ಖುಷಿಯ ವಿಚಾರ.

 

ಹಾಡುಗಳು, ಟ್ರೇಲರ್‌ನಿಂದಾಗಿ ಗಮನ ಸೆಳೆದಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸಿ ಅವರಿಂದ ತಂಡ ಮೆಚ್ಚುಗೆ ಗಳಿಸಿಕೊಂಡಿದೆ.
ಹೌದು, ಕಳೆದ ವಾರ ಒಂದಷ್ಟು ಪಬ್ಲಿಕ್‌ಗೆ ಅವರ ಎಲ್ಲ ಕೆಲಸಗಳನ್ನು ಬಿಟ್ಟು, ಸಿನಿಮಾ ನೋಡುವ ಚಾಲೆಂಜ್‌ ನೀಡಲಾಗಿತ್ತು, ಸಾಕಷ್ಟು ಮಂದಿ ಇರುವುದೆಲ್ಲವ ಬಿಟ್ಟು, ಅಂದರೆ ಅವರ ಕೆಲಸಗಳನ್ನು ಬಿಟ್ಟು ಸಿನಿಮಾ ನೋಡಿದ್ದಾರೆ.
.

ಚಿತ್ರತಂಡ ನಿರೀಕ್ಷೆ ಮಾಡದಷ್ಟರ ಮಟ್ಟಿಗೆ ಈ ಪಬ್ಲಿಕ್‌ ಶೋ ಹೌಸ್‌ ಫುಲ್‌ ಆಗಿದೆ, 16 ಮಂದಿ ಸಿನಿಮಾ ತಂಡ ಮಾತ್ರ ಈ ಶೋನಲ್ಲಿತ್ತು. ನೋಡಿದ ಪ್ರತಿಯೊಬ್ಬರು ಸಿನಿಮಾದ ಸಬ್ಜೆಕ್ಟ್ ಬಗ್ಗೆ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ವಯೋವೃದ್ಧರು ಈ ಸಿನಿಮಾವನ್ನು ನೋಡಿ ಇದು ಫ್ಯಾಮಿಲಿ ಓರಿಯೆಂಟೆಡ್‌ ಸಿನಿಮಾ ಎಂದು ಹೊಗಳಿದ್ದಾರೆ. ಮೇಘನಾ ರಾಜ್‌, ತಿಲಕ್‌, ಮತ್ತು ಶ್ರೀ ನಟನೆಯನ್ನು ಪ್ರತಿಯೊಬ್ಬರು ಹೊಗಳಿದರು. ಬಿಡುಗಡೆಗೆ ಮುನ್ನವೇ ಒಂದಷ್ಟು ಜನರಿಂದ ಈ ಸಿನಿಮಾ ಒಳ್ಳೆ ಅಭಿಪ್ರಾಯವನ್ನು ಗಳಿಸಿದೆ.
.

ಕಾಂತಾ ಕನ್ನಲಿ ನಿರ್ದೇಶನ ಈ ಸಿನಿಮಾ ಇದೇ 21ಕ್ಕೆ ಬಿಡುಗಡೆಯಾಗಲಿದ್ದು, ದೇವರಾಜ್‌ ದಾವಣಗೆರೆ ನಿರ್ಮಾಣ ಮಾಡಿದ್ದಾರೆ.
.

ಇದೇ 21ಕ್ಕೆ ಬಿಡುಗಡೆಯಾಗುತ್ತಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾದಲ್ಲಿ ಮೇಘನಾ ರಾಜ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಜತೆಗೆ ತಿಲಕ್‌ ಮತ್ತು ಶ್ರೀ ಮಹದೇವ್‌ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕಾಂತಾ ಕನ್ನಲಿ ನಿರ್ದೇಶಿಸಿದ್ದಾರೆ.

.

ಈ ಸಿನಿಮಾದಲ್ಲಿ ಮೇಘನಾ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಮುದ್ದಿನ ಮಗಳಾಗಿ, ಯಶಸ್ವಿ ಉದ್ಯಮಿಯಾಗಿ, ಪ್ರೀತಿಯನ್ನು ಹುಡುಕುವ ಹುಡುಗಿಯಾಗಿದ್ಧಾರೆ.

.

ಈ ಸಿನಿಮಾಗೆ ಯು ಸರ್ಟಿಫಿಕೇಟ್‌ ಸಿಕ್ಕಿದ್ದು, ಇದಕ್ಕೆ ನಿರ್ದೇಶಕ ಕಾಂತಾ ಕನ್ನಲಿ ಖುಷಿಯಾಗಿದ್ದಾರೆ. ಈ ಚಿತ್ರವನ್ನು ಬಿಲ್ವ ಕ್ರಿಯೇಶನ್ಸ್‌ ನಡಿ ದೇವರಾಜ್‌ ದಾವಣಗೆರೆ ನಿರ್ಮಾಣ ಮಾಡಿದ್ದಾರೆ.

ಪ್ರೀತಂ ಗುಬ್ಬಿ ಮತ್ತು ಗೊಲ್ಡನ್‌ ಸ್ಟಾರ್‌ ಗಣೇಶ್‌ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕಳೆದ 6 ತಿಂಗಳುಗಳಿಂದ ಓಡಾಡುತ್ತಲೇ ಇತ್ತು. ಈಗ ಅದು ನಿಜವಾಗುತ್ತಿದೆ.

.

ಹೌದು, ಗಣೇಶ ಹಬ್ಬದ ದಿನ ಪ್ರೀತಂ ಗುಬ್ಬಿ ಅವರು ಈ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಮೂಲಕ ಚಿತ್ರ ಮಾಡುವ ವಿಷಯವನ್ನು ಅಧಿಕೃತ ಮಾಡಿದ್ದಾರೆ. ಚಿತ್ರಕ್ಕೆ "ಮರೆಯುವ ಮುನ್ನ" ಎಂದು ಹೆಸರಿಡಲಾಗಿದೆ.

.

ಹೆಸರೇ ಸೂಚಿಸುವಂತೆ ಈ ಸಿನಿಮಾ ಫುಲ್‌ ರೊಮ್ಯಾಂಟಿಕ್‌ ಕಥೆಯನ್ನು ಹೊಂದಿದ್ದು, ಇದಕ್ಕಾಗಿ ಬಹಳ ದಿನಗಳಿಂದ ಪ್ರೀತಂ ಕೆಲಸ ಮಾಡುತ್ತಿದ್ದಾರಂತೆ.  ಗಣೇಶ್‌ ಅವರ ಆರೇಂಜ್‌, ಗಿಮಿಕ್‌, ಗೀತಾ ಚಿತ್ರಗಳ ನಂತರ ಮರೆಯುವ ಮುನ್ನ ಆರಂಭವಾಗುತ್ತದಂತೆ.

.

ಗಣೇಶ್‌ ಮತ್ತು ಪ್ರೀತಂ ಜೋಡಿ ಈ ಮೊದಲು 'ಮಳೆಯಲಿ ಜೊತೆಯಲಿ', 'ದಿಲ್‌ ರಂಗೀಲಾ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಇವರಿಬ್ಬರು ಮಾಡಿದ ಸಿನಿಮಾಗಳು ಹಿಟ್‌ ಆಗಿದ್ದವು, ಹಾಗಾಗಿ ಈ ಬಾರಿಯೂ ಈ ಜೋಡಿ ಮೇಲೆ ಸಹಜವಾಗಿಯೇ ನೀರಿಕ್ಷೆಗಳಿರುತ್ತವೆ.

ಕನ್ನಡ ರಜತ ಪರದೆಯ ಮೇಲೆ ಮತ್ತೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ "ಕಾರ್ನಿ". ದುನಿಯಾ ರಶ್ಮಿ ಪ್ರಧಾನ ಭೂಮಿಕೆಯಲ್ಲಿ ಇರುವ ಈ ಚಿತ್ರ ಗೋಕುಲ ಎಂಟರ್ಟೈನರ್ಸ್ ಹಾಗೂ ವಿನಿ ಸ್ಟುಡಿಯೋ ಅಡಿಯಲ್ಲಿ ತಯಾರಾಗಿದ್ದು ಇದೇ ಶುಕ್ರವಾರ(ಸೆ.14) ಬಿಡುಗಡೆ ಆಗುತ್ತಿದೆ.

.

`ಕಾರ್ನಿ' ಎಂಬುದು ದುರ್ಗ ದೇವಿಯ ಅಸ್ತ್ರ. ಈ ಆಸ್ತ್ರ ಯಾರ ಸಂಹಾರಕ್ಕಾಗಿ ಎಂಬುದು ಕುತೂಹಲ ಹುಟ್ಟಿಸುವ ವಿಷಯ. ಬಹುತೇಕ ರಾತ್ರಿಯ ಹೊತ್ತಿನಲ್ಲೇ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ ನಾಯಕಿ ರಶ್ಮಿ ಅವರಿಗೆ ಮಾತು ಬಹಳ ಕಡಿಮೆ. ಇದು ಶಕ್ತಿ ಹಾಗೂ ಯುಕ್ತಿಯ ನಡುವಿನ ಹೋರಾಟ.


.
ಈ ಚಿತ್ರವನ್ನು ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. ಆಲೋಕ್ ಗೋವಿಂದಪ್ಪ ಸಹ ನಿರ್ಮಾಪಕ. ವಿನೀ ಅವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ನಾಯಕ ಹಾಗೂ ಖಳ ನಾಯಕ ನಿರಂತ್. ಕನ್ನಡದಲ್ಲಿ ಬಿಡುಗಡೆ ಆದ ದಿನೇಷ್ ಬಾಬು ನಿರ್ದೇಶನದ ?ಇದು ಸಾಧ್ಯ? ಚಿತ್ರದ ಪ್ರೇರಣೆ ಇಂದ ವಿನೀ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಲೈಫು ಸೂಪರ್ರು ಚಿತ್ರ ನಿರ್ದೇಶನ ಮಾಡಿದವರು.
.
ನಾಯಕಿ ರಶ್ಮಿ ಅವರು ಈ ಚಿತ್ರದಲ್ಲಿ ಕೆಲವು ಸಾಹಸ ಮಾಡಿದ್ದಾರೆ. ಬಹುತೇಕ ಮೂಕಿ ಆಗಿಯೇ ಅವರ ಪಾತ್ರ ಸಾಗುತ್ತದೆ. ರಾಜೇಶ್ ರಾಮಕೃಷ್ಣ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.
ಸೂರ್ಯೋದಯ ಛಾಯಾಗ್ರಹಣ, ಅರಿಂದಂ ಗೋಸ್ವಾಮಿ ಸಂಗೀತ, ವಿನಯ್ ಆಲೂರ್ ಸಂಕಲನ ಹಾಗೂ ಕಲರಿಂಗ್ ಮಾಡಿದ್ದಾರೆ.

ತಮ್ಮ ಕಾಮಿಡಿ ಪಂಚಿಂಗ್‌ ಡೈಲಾಗ್‌ಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದ ಡೈಲಾಗ್ ರೈಟರ್ ಪ್ರಶಾಂತ್‌ ರಾಜಪ್ಪ ನಿರ್ದೇಶನಕ್ಕಿಳಿದಿದ್ದಾರೆ, ಅವರ ಮೊದಲ ಚಿತ್ರದಲ್ಲಿ ನಟ ಅನಿಶ್‌ ಹಳ್ಳಿ ಹುಡುಗನಾಗಿ ನಟಿಸುತ್ತಿದ್ದಾರಂತೆ. ಚಿತ್ರತಂಡ ಚಿತ್ರಕ್ಕೆ "ಕೇಡಿ ನಂ.1" ಎಂದು ಹೆಸರಿಟ್ಟಿದ್ದಾರೆ.

.
ಅಕಿರಾ ಸಿನಿಮಾದಲ್ಲಿ ಮಾಡ್‌ ಹುಡುಗನಾಗಿ ಕಾಣಿಸಿಕೊಂಡು, ವಾಸು ನಾನ್‌ ಪಕ್ಕಾ ಕಮರ್ಶಿಯಲ್‌ ಸಿನಿಮಾದಲ್ಲಿ ಪಕ್ಕಾ ಲೋಕಲ್‌ ಆಗಿ ನಟಿಸಿದ್ರು ಅನಿಶ್‌. ಈಗ ಪ್ರಶಾಂತ್‌ ರಾಜಪ್ಪ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಮೊದಲ ಬಾರಿಗೆ ಹಳ್ಳಿ ಹೈದನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
.
ವಾಸು ಚಿತ್ರದಂತೆ ಈ ಸಿನಿಮಾವನ್ನು ಸಹ ಅನಿಶ್‌ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
.

 

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಶಿಷ್ಟ ಮತ್ತು ವಿಚಿತ್ರ ಶೀರ್ಷಿಕೆಗಳು ಸಿನಿಮಾಗಳಾಗುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ "ಅಟ್ಟಯ್ಯ v/s ಹಂದಿ ಕಾಯೋಳು".
.
ಮಳವಳ್ಳಿಯಲ್ಲಿ ನಡೆದ ಕ್ರೆಂ ಸ್ಟೊರಿಗೆ ದೃಶ್ಯದ ಟಚ್‌ ನೀಡಿದ್ದಾರಂತೆ ನಿರ್ದೇಶಕ ನಿರ್ದೇಶಕ ಲೋಕೇಂದ್ರ ಸೂರ್ಯ.
ಒಂದು ಗದ್ದೆಗೆ ಬೇರೆಯವರ ಹಂದಿಗಳು ನುಗ್ಗಿದಾಗ ಜಗಳ ಆರಂಭವಾಗುತ್ತದೆ. ಈ ಜಗಳ ಕಡೆಗೆ ಕೊಲೆಯ ವರೆಗೂ ಹೋಗುವ ಕಥೆ ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಸಿನಿಮಾದಲ್ಲಿದೆ. ನಗರದಿಂದ ಬಂದ ಇಂಜಿನಿಯರ್‌ ಹುಡುಗ ಈ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾನೆ. ಚಿತ್ರದಲ್ಲಿ ಕತೆಯೇ ಹೀರೊ. ಲವ್, ಹಳ್ಳಿಯ ಚಿತ್ರಣ ಎಲ್ಲವೂ ಇದೆ’ ಎಂದಿದ್ದಾರೆ ಲೋಕೇಂದ್ರ ಸೂರ್ಯ.
.
ಈ ಸಿನಿಮದಲ್ಲಿ ನಾಯಕಿಯಾಗಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯ ಗೌಡನ ಮಗಳಾಗಿ ನಟಿಸಿರುವ ಇವರು, ಡಿಗ್ಲಾಮ್‌ ಪಾತ್ರದಲ್ಲಿದ್ದಾರಂತೆ. ಚಿತ್ರದಲ್ಲಿ ಅಟ್ಟಯ್ಯನಾಗಿ ಪ್ರೊಫೆಸರ್ ಎ. ಮಾದೇವಯ್ಯ, ಲೋಕೇಂದ್ರ, ಕೆಂಪೇಗೌಡ, ಎಡಿಟರ್‌ ವಿನಯ್‌ ಕೂರ್ಗ್‌, ಅರ್ಜುನ್‌ ಮತ್ತಿತರರು ನಟಿಸಿದ್ದಾರೆ. ವಿಜಯ್‌ ಪ್ರಕಾಶ್‌ ಒಂದು ಹಾಡನ್ನು ಹಾಡಿದ್ದಾರೆ. ಯಶವಂತ್‌ ಭೂಪತಿ ಸಂಗೀತ ನೀಡಿದ್ದಾರೆ.

 

ಸಾಮಾನ್ಯವಾಗಿ ಖಾಕಿ, ಕಾವಿ ಮತ್ತು ಖಾದಿ ಧರಿಸುವವರನ್ನು ವೇಷಧಾರಿಗಳು ಎಂದು ಹೇಳುತ್ತೇವೆ ಆದರೆ ಹೊಸಬರ ಚಿತ್ರವೊಂದು ನಾವೆಲ್ಲರೂ ಹಾಕಿರುವುದು ವೇಷ ಎಂದು ಹೇಳುತ್ತಿದೆ.
.

ಹೌದು ಆರ್ಯನ್‌ ನಾಯಕನಾಗಿ ನಟಿಸಿರುವ ‘ವೇಷಧಾರಿ’ ಸಿನಿಮಾದಲ್ಲಿ ಬದುಕಿನ ನಾನಾ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
.

ನಿರ್ದೇಶಕ ವಿಕ್ರಮಾದಿತ್ಯ ಹೇಳುವ ಪ್ರಕಾರ ‘ಇದೊಂದು ಸಾಮಾಜಿಕ ವಿಡಂಭನೆಯ ಸಿನಿಮಾ. ತನ್ನ ಬಯಕೆಯನ್ನು ಈಡೇರಿಸಿಕೊಳ್ಳಲು ನಾಯಕ ನಾನಾ ವೇಷ ಧರಿಸುತ್ತಾನೆ. ಅವುಗಳಲ್ಲಿ ಅವನನ್ನು ಕೈ ಹಿಡಿಯುವ ವೇಷ ಯಾವುದು ಎಂಬುದು ಸಿನಿಮಾದ ತಿರುಳಂತೆ. ಈ ಸಿನಿಮಗೆ ಶ್ರುತಿ ರಾಜೇಂದ್ರ, ಸೋನಂ ರೈ ಎಂಬ ಇಬ್ಬರು ನಾಯಕಿಯರಿದ್ದಾರೆ.

 

ಇರುವುದೆಲ್ಲವ ಬಿಟ್ಟು ಸಿನಿಮಾದ ಬಿಡುಗಡೆಗಾಗಿ ಕಾದಿರುವ ಮೇಘನಾ ತಮ್ಮ ಸಿನಿಮಾ ಟೀಮ್‌ ಜತೆ ಎಕೋ ಫ್ರೆಂಡ್ಲಿ ಗಣಪನನ್ನು ಪೂಜಿಸಿದ್ದಾರೆ.
.
ಕಾಂತ ಕನ್ನಲಿ ನಿರ್ದೇಶನ ಮಾಡಿರುವ ಇರುವುದೆಲ್ಲವ ಬಿಟ್ಟು ಸಿನಿಮಾ ತನ್ನ ಹಾಡು ಮತ್ತು ಟ್ರೇಲರ್‌ನಿಂದಾಗಿ ಗಮನ ಸೆಳೆದಿದೆ, ಇದೇ 21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಗಣೇಶ ಹಬ್ಬದ ಸಮಯದಲ್ಲಿ ನಟಿ ಮೇಘನ ರಾಜ್‌ ಚಿತ್ರತಂಡದೊಡನೆ ಸೇರಿಕೊಂಡು ಎಕೋ ಫ್ರೆಂಡ್ಲಿ ಗಣೇಶನನ್ನು ಪೂಜೆ ಮಾಡಿದ್ದಾರೆ.
.

ಹೌದು, ಮಂಗಳವಾರ ಇರುವುದೆಲ್ಲವ ಬಿಟ್ಟು ಚಿತ್ರದ ನಾಯಕರಾದ ಶ್ರೀ,ತಿಲಕ್‌ ನಿರ್ದೇಶಕ ಕಾಂತಕನ್ನಲಿ ನಿರ್ಮಾಪಕ ದೇವರಾಜ್‌ ಮತ್ತು ಇಡೀ ಚಿತ್ರತಂಡ ಎಕೋ ಫ್ರೆಂಡ್ಲಿ ಗಣಪತಿಯನ್ನು ಪೂಜೆ ಮಾಡಿದ್ದಾರೆ.
.

ಕಾರ್ಪೋರೇಟ್‌ ಜಗತ್ತಿನ ಕಥೆ ಹೇಳುವ ಈ ಚಿತ್ರಕ್ಕೆ ತಮಿಳು ನಟ ಸಿಂಬು ಹಾಡಿದ್ದಾರೆ, ನಟ ಶ್ರೀಮುರುಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಸಿನಿಮಾಗೆ ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿದ್ದು, ದೇವರಾಜ್‌ ದಾವಣಗೆರೆ ಬಂಡವಾಳ ಹೂಡಿದ್ದಾರೆ.
.

ಇದೇ ಮೊದಲ ಬಾರಿಗೆ ತಿಲಕ್‌ ಹಾಗೂ ಶ್ರೀ ಜತೆ ಮೇಘನಾ ರಾಜ್‌ ತೆರೆ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಬಹಳ ವಿಭಿನ್ನವಾಗಿದ್ದು, ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.

 

ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರಕ್ಕಾಗಿ ಗಡ್ಡ ಬಿಟ್ಟು ಪಕ್ಕಾ ಹಳ್ಳಿ ಹುಡುಗನಾಗಿದ್ದಾರೆ.
ಅನಂತು ಸಿನಿಮಾದಲ್ಲಿ ಲಾಯರ್‌ ಆಗಿರುವ ವಿನಯ್‌, ಗ್ರಾಮಾಯಣದಲ್ಲಿ ಸಿಕ್ಸ್ತ್‌ ಸೀನ ಎಂಬ ಹಳ್ಳಿ ಹುಡುಗನ ಕ್ಯಾರೆಕ್ಟರ್‌ ಮಾಡುತ್ತಿದ್ದಾರೆ.
.
ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ಚಿತ್ರೀಕರಣಗೊಂಡ ಟೀಸರ್‌ನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್‌ನಲ್ಲಿ ವಿನಯ್‌ ಲುಕ್‌ ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
.

ಹಳ್ಳಿ ಹುಡುಗನಾಗಲು ವಿನಯ್‌ ಚಿತ್ರತಂಡದ ಜತೆ ಲೊಕೇಶನ್‌ ನೋಡಲು ಎಲ್ಲ ಕಡೆ ಹೋಗಿ ಬಂದಿದ್ದಾರೆ. ಈ ಸಿನಿಮಾದ ಶೂಟಿಂಗ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ದುನಿಯಾ ವಿಜಯ್‌ ನಟನೆಯ "ಕುಸ್ತಿ" ಸಿನಿಮಾಗೆ ಬಜ಼ಾರ್ ಬೆಡಗಿ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

.

ಕುಸ್ತಿ ಅಖಾಡದ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ತಮ್ಮ ಪುತ್ರ ಸಾಮ್ರಾಟ್‌ರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿಸುತ್ತಿದ್ದಾರೆ. ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

.

ಅಕ್ಟೋಬರ್‌ ಮೊದಲ ವಾರದಿಂದ ಶೂಟಿಂಗ್‌ ಆರಂಭವಾಗಲಿದ್ದು, ಈಗಾಗಲೇ ಉತ್ತರ ಕರ್ನಾಟಕದ ಸಾಕಷ್ಟು ಕಡೆಗಳಲ್ಲಿ ನಿರ್ದೇಶಕರು ಲೊಕೇಶನ್‌ ನೋಡಿಕೊಂಡು ಬಂದು ಫೈನಲ್‌ ಮಾಡಿದ್ದಾರೆ.

.
ಈ ಸಿನಿಮಾದಲ್ಲಿ ಅದಿತಿ ಸಕ್ಕತ್ ಬಬ್ಲಿ ಮತ್ತು ಬಹಳ ಆ್ಯಕ್ಟಿವ್‌ ಆಗಿರುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅದಿತಿ ನಟನೆಯ ಬಜಾರ್‌ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.

ಅಗ್ನಿ ಸಾಕ್ಷಿ ವಿಜಯ್‌ ಸೂರ್ಯ ಮತ್ತು ಮೇಘಶ್ರಿ ನಟನೆಯ ಕದ್ದು ಮುಚ್ಚಿ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.
.
ಪೋಷಕರಿಲ್ಲದ, ಅವರ ಪ್ರೀತಿ ವಂಚಿತ ಹುಡುಗನ ಕಥೆಯನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗನಿಗೆ ಅವನ ತಂದೆ ತಾಯಿಯ ಪ್ರೀತಿ ಸಿಗುವುದಿಲ್ಲ, ಆಗ ಆತ ಪ್ರೀತಿಯನ್ನು ಅರಸಿಕೊಂಡು ಹೋರಡುತ್ತಾನೆ. ಹೀಗೆ ಹೋರಟಾಗ ನಡೆಯುವ ಘಟನೆಗಳನ್ನು ಸಿನಿಮಾ ಮಾಡಿದ್ದಾರಂತೆ. ಕದ್ದು ಮುಚ್ಚಿ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಮೇಘಶ್ರೀ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಮೇಘಶ್ರೀ.
.
ಬಹಳಷ್ಟು ವರ್ಷಗಳ ನಂತರ ನಾದಬ್ರಹ್ಮ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿರುವ ಸಿನಿಮಾ 'ಕದ್ದು ಮುಚ್ಚಿ'. ಬಹಳ ದಿನಗಳ ನಂತರ ಬಂದರೂ ಸಾಕಷ್ಟು ಮೆಲೋಡಿ ಟ್ಯೂನ್‌ಗಳನ್ನು ಹಂಸಲೇಖ ನೀಡಿದ್ದಾರಂತೆ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವನ್ನು ಇಡೀ ಚಿತ್ರತಂಡ ಮೆಚ್ಚಿಕೊಂಡಿತು.
.
ಈ ಸಿನಿಮಾದ ವಿಶೇಷವೆಂದರೆ ಮಾರೀಚನನ್ನು ಕೊಂದ ಜಾಗ ಕೊಶವಾರ ಜಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

'ರಾಜು ಕನ್ನಡ ಮೀಡಿಯಂ' ಚಿತ್ರದ ಮೂಲಕ ಸಕ್ಸಸ್‌ಫುಲ್‌ ಜರ್ನಿಗೆ ವಾಪಾಸ್ಸಾದ ಗುರುನಂದನ್‌ 'ರಾಜು ಜೇಮ್ಸ್‌ ಬಾಂಡ್‌' ಸಿನಿಮಾದಲ್ಲಿ ಒರಿಜಿನಲ್‌ ಜೇಮ್ಸ್‌ ಬಾಂಡ್‌ನ್ನು ಅನುಕರಣೆ ಮಾಡುತ್ತಾರಂತೆ.

.

ಜೇಮ್ಸ್‌ ಬಾಂಡ್‌ ಅನುಕರಣೆ ಮಾಡಲು ಹೋಗಿ ಅವರು ಏನಾಗುತ್ತಾರೆ ಎನ್ನುವುದೇ ಚಿತ್ರಕಥೆ. ಜೇಮ್ಸ್‌ ಬಾಂಡ್‌ನ ಪಕ್ಕಾ ಅಭಿಮಾನಿಯಾಗಿ ಅವರ ರೀತಿಯಲ್ಲಿ ಸ್ಟಂಟ್‌ ಮಾಡಲು ಹೋಗಿ ಯಡವಟ್ಟುಗಳನ್ನು ಮಾಡಿಕೊಳ್ತಾರಂತೆ ಗುರು.
.
ಇತ್ತೀಚೆಗೆ ಮುಹೂರ್ತವಾಗಿರುವ ಈ ಚಿತ್ರವನ್ನು ದೀಪಕ್‌ ಮಧುವನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದೊಳ್ಳೆ ಲವ್‌ಸ್ಟೋರಿ ಸಹ ಇದ್ದು, ಅದು ಸಹ ಸಿನಿಮಾದ ಆಕರ್ಷಣೆಯಲ್ಲಿ ಒಂದು ಎನ್ನುತ್ತಾರೆ ನಿರ್ದೇಶಕ ದೀಪಕ್‌.

ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರಗಳಿಗೆ ಹೆಸರುವಾಸಿಯಾದ, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಬತ್ತಳಿಕೆಯಿಂದ ಮತ್ತೊಂದು ಥ್ರಿಲ್ಲರ್ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅದುವೇ ಉದ್ಘರ್ಷ. ಕನ್ನಡದ ಮೇರು ನಟರಿಗೆ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಸುನಿಲ್ ಕುಮಾರ್ ದೇಸಾಯಿ ಈ ಬಾರಿ ಹೊಸಬ್ಬರಿಗಾಗಿ ಚಿತ್ರ ಮಾಡಿದ್ದು, ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಠಾಕೂರ್ ಅನುಪ್ ಸಿಂಗ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಟ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರವೊಂದರಲ್ಲಿ ಖಳನಾಯಕನ ಪಾತ್ರವನ್ನು ಮಾಡುತ್ತಿದ್ದಾರೆ.

ಕೃಷ್ಣ ಲೀಲಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮಯೂರಿ ಈಗ ಸಿನಿಮಾಗಳ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಡಾ ಗಿರಿಧರ್‌ ನಿರ್ದೇಶನ ಮಾಡುತ್ತಿರುವ ಹರಿಕೃಷ್ಣ ನಾರಾಯಣಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

.

'ಇಷ್ಟಕಾಮ್ಯ', ಕರಿಯಾ-2’ ಸಿನಿಮಾಗಳು ಮಯೂರಿಗೆ ಹೆಸರು ತಂದುಕೊಟ್ಟವು. ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ’ ’ರುಸ್ತುಂ’, ನನ್ನ ಪ್ರಕಾರ’ ಹಾಗೂ 8 ಎಂ ಎಂ’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಚಿತ್ರದ ಹೆಸರಿಗೆ ತಕ್ಕಂತೆ ಇಲ್ಲಿ ಮಯೂರಿ ಅವರು ನಾರಾಯಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣಲೀಲಾ ನಂತರ ಟೈಟಲ್‌ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಶುಕ್ರವಾರ ಬಿಡುಗಡೆಯಾಗಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಹೇ ಜಲೀಲ ಹಾಡನ್ನು ರೆಬಲ್‌ ಸ್ಟಾರ್‌ ಅಂಬರೀಷ್‌ ಮೆಚ್ಚಿಕೊಂಡು ಸಿಎಂ ಕುಮಾರಸ್ವಾಮಿಗೂ ಅದರ ಬಗ್ಗೆ ಹೇಳಿದ್ದಾರಂತೆ.

.

ನಿರ್ದೇಶಕ ಪ್ರೇಮ್‌ ಬರೆದಿರುವ ಹೇ ಜಲೀಲ ಹಾಡು ಶುಕ್ರವಾರ ಬಿಡುಗಡೆಯಾಗಿ ವೈರಲ್‌ ಆಗಿದೆ. ಈ ಹಾಡು ಸಂಪೂರ್ಣ ಮಂಡ್ಯ ಸ್ಟೈಲ್‌ನಲ್ಲಿದ್ದು, ಇದನ್ನು ಮೊದಲಬಾರಿಗೆ ಅಂಬರೀಷ್‌ ಕೇಳಿದ್ದೇ ತಡ ಅವರಿಗೆ ಇಷ್ಟವಾಗಿತ್ತಂತೆ. ಒಂದು ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿಗೆ ಈ ಹಾಡಿನ ಬಗ್ಗೆ ಹೇಳಿದ್ದರಂತೆ.
.

ಈ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡಿದ್ದು, ಜಾಕ್‌ ಮಂಜು ಬಂಡವಾಳ ಹೂಡಿದ್ದಾರೆ.

 

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಿರ್ಮಾಣದ "ಕವಲುದಾರಿ" ಸಿನಿಮಾದ ಟೀಸರ್‌ ಸೆಪ್ಟೆಂಬರ್ 2 ರಂದು ಅಮೇರಿಕಾದಲ್ಲಿ ಬಿಡುಗಡೆಯಾಗಲಿದೆ.
.
ಪುನೀತ್‌ ಅಮೇರಿಕಾದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನಕ್ಕೆ ಹೋಗಲಿದ್ದು, ಅಲ್ಲಿಯೇ ಅದರ ಟೀಸರ್‌ನ್ನು ಬಿಡುಗಡೆ ಮಾಡಲಿದ್ದಾರೆ. ಅಲ್ಲಿ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಕರ್ನಾಟಕದಲ್ಲಿಯೂ ಅದು ಬಿಡುಗಡೆಯಾಗಲಿದೆ.
.

ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಹೇಮಂತ್‌ರಾವ್‌ ಕವಲುದಾರಿಯನ್ನು ನಿರ್ದೇಶನ ಮಾಡಿದ್ದಾರೆ. ಆಪರೇಶನ್‌ ಅಲಮೇಲಮ್ಮ ಚಿತ್ರದ ನಾಯಕ ರಿಷಿ ಮತ್ತು ಅನಂತ್‌ನಾಗ್‌ ಕವಲು ದಾರಿ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್‌ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ನ ಮೊದಲ ಕಾಣಿಕೆ ಇದಾಗಿದೆ.

ರಾಕಿಂಗ್ ಸ್ಟಾರ್ ಯಶ್‌ ಮತ್ತು ದಿಲ್‌ವಾಲ ಅನಿಲ್‌ಕುಮಾರ್‌ ಕಾಂಬಿನೇಶನ್‌ "ಮೈ ನೇಮ್‌ ಈಸ್‌ ಕಿರಾತಕ" ಸಿನಿಮಾಗೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡುತ್ತಿದ್ದಾರೆ. ಲಕ್ಕಿ ನಂತರ ಯಶ್‌ ಅವರ ಯಾವುದೇ ಚಿತ್ರಕ್ಕೂ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರಲಿಲ್ಲ. ಲಾಂಗ್‌ ಗ್ಯಾಪ್‌ ನಂತರ ಇಬ್ಬರೂ ಒಂದಾಗಿದ್ದಾರೆ.

.
ಅನಿಲ್‌ ನಿರ್ದೇಶನದ ರಾಂಬೊ 2, ದಿಲ್‌ವಾಲ ಎಲ್ಲ ಚಿತ್ರಗಳಿಗೂ ಅರ್ಜುನ್‌ ಜನ್ಯ ಸಂಗೀತ ನೀಡಿದ್ದರು. ಈಗ ಅನಿಲ್‌-ಯಶ್‌- ಅರ್ಜುನ್‌ ಜನ್ಯ ಮೂರು ಜನ ಒಟ್ಟಿಗೆ ಸೇರಿದ್ದು ಒಳ್ಳೊಳ್ಳೆ ಟ್ಯೂನ್‌ಗಳನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದು.
.

ಸದ್ಯದಲ್ಲೇ ಮಂಡ್ಯ ಸುತ್ತಮುತ್ತ ಚಿತ್ರೀಕರಣವನ್ನು ಚಿತ್ರತಂಡ ಆರಂಭಿಸಲಿದ್ದಾರೆ. ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ

Zee Kannada recently brought together the musical prowess of ace Director Prem’s most-awaited film of the year, Villian. The event held on 19th August at White Orchid, Manyata Tech Park in Bangalore witnessed prominent faces from the Sandalwood industry to express their support, along with 5000 passionate enthusiasts. The film embarks the journey of Sandalwood King Dr. Shivrajkumar and Abhinaya Chakravarthi Kiccha Sudeep together for the first time ever, making the audio launch of Villian an enormous one.

.

Hosted by the ebullient Anushree, “Who is the Villian?” is what the audio launch began and ended with. Director Prem, his wife Rakshita Prem, Producer C.R. Manohar, renowned playback singer and music composer Arjun Janya, Actor Shivrajkumar, KicchaSudeep, Telugu film star Meka Srikanth, and Rebel Star Ambareesh took the entertainment quotient several notches higher by joining in for the celebrations, as fans were jubilant and beaming with excitement! They took a trip down memory lane talking about their time filming together, the challenges they faced and how they overcame them. Expressing gratitude of being able to work with one another, the night was filled with acknowledgements and praises.

.

The audio launch event played host as a donation centre for the Kodagu flood relief. With the recent disaster, Zee Kannada collected funds to contribute to the relief fund.

.

Zee Kannada and the Villian team honoured the most popular and senior Villians of the Kannada film industry by felicitating them for their impeccable roles over the years – Keerthi Raj, Lohitashwa, Nanda Kishore - son of Sudhir, Vidhya - daughter of Dheerendra Gopal, Nagendra Urs - son of Sundar Krishna Urs, and Giri - son of Dinesh.

.

Known for his extraordinary music, the concert saw Arjun Janya, Director Prem, Shivrajkumar and KicchaSudeep perform to some of the high-octane songs from Villian, along with a line-up of sizzling performances by Zee Kannada’s Dance Karnataka Dance contestants, Aarav Gowda, Sonu Gowda, Bhavana Rao, Radhika Chetan, NabhaNatesh and fiction leads Dileep Shetty and Thandav Ram, heightening the entertainment factor for the night.

 

 

ಸುಶೀಲ್ ಕಮಾರ್ ಅವರು ನಿರ್ಮಿಸಿ, ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಆರೋಹಣ. ಇದೊಂದು ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವಂಥ ಪ್ರೇಮ ಕಥಯಾಗಿದ್ದು ಶ್ರೀಧರ್ ಶೆಟ್ಟಿ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗು ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಮೂರು ಹಾಡುಗಳು ಹಾಗೂ ನಾಲ್ಕು ಬಿಟ್ ಗೀತೆಗಳನ್ನೂಳಗೊಂಡಿರುವ ಆರೋಹಣ ಚಿತ್ರಕ್ಕೆ ಆರ್.ಎನ್.ಉತ್ತಮ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
.
ಒಬ್ಬ ಮನುಷ್ಯ ಜೀವದಲ್ಲಿ ಬರುವಂಥ ಸಮಸ್ಯೆಗಳು ಆರೋಹಣದಂತೆ ಕಂಟಿನ್ಯೂ ಆಗುತ್ತಲೇ ಹೋಗುತ್ತದೆ. ಒಬ್ಬ ತಂದೆಯನ್ನು ಮಗನಾದವನು ಹೇಗೆಲ್ಲಾ ನೋಡಿಕೊಳ್ಳಬಹುದು ಎಂದು ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ನಿರೂಪಿಸಲಾಗಿದೆ ಇದೆಲ್ಲದರ ಜೊತೆಗೆ ಒಂದು ಹಾರರ್ ಹಾಗು ಥ್ರಿಲ್ಲರ್ ಕಂಟೆಂಟೆ ಕೂಡ ಈ ಚಿತ್ರದಲ್ಲಿರುವುದು ವಿಶೇಷ ಮೊನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ಹಾಗು ನಿರ್ಮಾಪಕ ಸುಶೀಲ್ ಕುಮಾರ್, ನಾಯಕಿ ಪ್ರೀತಿ ಮಡಿಕೇರಿ ಹಾಗು ನಿರ್ದೇಶಕ ಶ್ರೀಧರ್ ಶಟ್ಟಿ ಕೂಡ ಹಾಜರಿದ್ದು ಚಿತ್ರದ ಬಗ್ಗೆ ಹೇಳಿಕೊಂಡರು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ಎ’ ಪ್ರಮಾಣ ಪತ್ರ ನೀಡಿದ್ದು ಇದನ್ನು ತಿರಸ್ಕರಿಸಿದ ನಿರ್ಮಾಪಕ ಸುಶೀಲ್ ಕುಮಾರ್ ಟ್ರಬ್ಯೂನಲ್ ಮೊರೆ ಹೋಗಿದ್ದರು ಹೀಗೆ ಚಿತ್ರ ಆರಂಭಸಿದಾಗಿನಿಂದಲೂ ಸತತ ಹೋರಾಟ ಮಾಡಿಕೊಂಡೇ ಬಂದಿದ್ದು ಈಗ ರಿಲೀಸ್ ಹಂತಕ್ಕೆ ಚಿತ್ರವನ್ನು ತೆಗೆದುಕೊಂಡು ಬಂದಿರುವುದಾಗಿ ಹೇಳಿÀದ್ದಾರೆ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕೊರತೆ ಇದ್ದೇ ಇರುತ್ತದೆ ಅದನ್ನು ಹೊರಗೆ ತೋರಿಸಿಕೊಳ್ಳದೆ ಇಟ್ಟುಕೊಂಡರೆ ಏನೆಲ್ಲ ಆಗಬಹುದು ಎಂದು ಈ ಚಿತ್ರ ಹೇಳುತ್ತದೆ.
.
ನಂತರ ನಿರ್ದೇಶಕರು ಮಾತನಾಡಿ ಆರಂಭದಲ್ಲಿ ಒಂದು ಲವ್ ಸಬ್ಜಕ್ಟ್ ಅಂತ ಆರಂಭಿಸಿದ್ದೆವು ನಂತರ ಅದು ಥ್ರಿಲ್ಲರ್ ಹಾಗು ಹಾರರ್ ಕಥಯಾಗಿ ರೂಪುಗೊಂಡಿತು. ಬಿಡದಿ, ರಾಮನಗರ ಹಾಗು ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದÀಲ್ಲಿ ಬರುವ 4 ಬಿಟ್ ಹಾಡುಗಳನ್ನು ನಟ, ಗಾಯಕ ರವಿಶಂಕರ ಗೌಡ ಹಾಡಿದ್ದಾರೆ. ಆಂರಭಲ್ಲಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಶೀಲ್ ಕುಮಾರ್ ಸದ್ಯ ಸಾಫ್ಟವೇರ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಕಡೆ ಡಬಲ್ ಮೀನಿಂಗ್ ಡೈಲಾಗ್‍ಗಳು ಹಾಗು ಮರ್ಡರ್ ಸೀನ್ ಇರುವುದರಿಂದ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಕೊಟ್ಟಿರುವುದಾಗಿ ನಿರ್ಮಾಪಕ ಸುಶೀಲ್ ಕುಮಾರ್ ಹೇಳಿದರು.

ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ಸು ಗಳಿಸಿದ್ದ ದಿನಕರ್‌ ತೂಗುದೀಪ ಈಗ 'ಲೈಫ್‌ ಜತೆ ಒಂದ್ ಸೆಲ್ಫಿ' ಎಂಬ ಯೂತ್‌ ಸಿನಿಮಾದೊಂದಿಗೆ ವಾಪಾಸ್‌ ಬಂದಿದ್ದಾರೆ. ವಿಶೇಷ ಎಂದರೆ ದಿನಕರ್‌ ಅವರ ಪತ್ನಿ ಮಾನಸ ಈ ಕಥೆಯನ್ನು ಬರೆದಿದ್ದಾರೆ.
.

‘ನನ್ನ ಪತ್ನಿ ಈ ಹಿಂದೆ ಎರಡು ಕಥೆಗಳನ್ನು ನನ್ನ ಪತ್ನಿ ಬರೆದಿದ್ದರು. ಆದರೆ ಅದಾವುದು ನನಗೆ ಸಿನಿಮಾ ಮಾಡಬೇಕು ಎಂದು ಅನ್ನಿಸಿರಲಿಲ್ಲ. ಒಮ್ಮೆ ಈ ಕಥೆಯನ್ನು ಹೇಳಿ, ಅಲ್ಲಿನ ಪಾತ್ರಗಳ ಬಗ್ಗೆ ಹೇಳಿದಳು, ನನಗೆ ವಿರಾಟ್‌, ರಾರ‍ಯಶ್‌ ಮತ್ತು ನಕುಲ್‌ ಕ್ಯಾರೆಕ್ಟರ್‌ಗಳು ನನ್ನನ್ನು ಟ್ರಿಗರ್‌ ಮಾಡಿದವು.ಕ್ಯಾರೆಕ್ಟರ್‌ಗಳು ಇಂಟ್ರೆಸ್ಟಿಂಗ್‌ ಆಗಿದೆ, ಜತೆಗೆ ಅವುಗಳು ಮಾಡುವ ಜರ್ನಿ ಕೂಡಾ ಆಸಕ್ತಿ ಅನ್ನಿಸ್ತು ಆಗ ನಾನು ಇದನ್ನು ಸಿನಿಮಾ ಮಾಡೋಣ ಎಂದು ತೀರ್ಮಾನ ಮಾಡಿದೆ.,’ಎನ್ನುತ್ತಾರೆ ದಿನಕರ್‌.
.

ಡೈಲಾಗ್‌, ಸ್ಕ್ರೀನ್‌ ಪ್ಲೇ ಬರೆದ ಮೇಲೆ ಕಾನ್ಫಿಡೆನ್ಸ್ ಹೆಚ್ಚಾಯಿತು :

ಕಥೆ ರೆಡಿಯಾದ ಕೂಡಲೇ ನಾನು, ಚಿಂತನ್‌ ಮತ್ತು ರಘುಶಾಸ್ತ್ರಿ ಮತ್ತು ಮಾನಸ ಮೂರು ಜನ ಕುಳಿತು ಸ್ಕ್ರೀನ್‌ ಪ್ಲೇ ಮತ್ತು ಡೈಲಾಗ್‌ ಬರೆದೆವು ಆಗ ಈ ಸ್ಕ್ರಿಪ್ಟ್‌ ಮೇಲೆ ಮತ್ತಷ್ಟು ಕಾನಿಧಿಡೆನ್ಸ್‌ ಹೆಚ್ಚಾಯಿತು. ಆಮೇಲೆ ಇದಕ್ಕೆ ಹರಿಕೃಷ್ಣ ಅವರ ಹತ್ತಿರ ಟ್ಯೂನ್‌ ಹಾಕಿಸಲು ಹೋದಾಗ ಅವರುಹೊಸಬರ ಜತೆ ಯಾಕೆ ಮಾಡುತ್ತೀರಾ, ಎಕ್ಸ್‌ಪಿರಿಯನ್ಸ್‌ ಇರುವ ನಟ, ನಟಿಯರನ್ನೇ ಹಾಕಿಕೊಂಡು ಮಾಡಿ ಎಂದು ಸಲಹೆ ನೀಡಿದ್ರ, ಆಗ ನಾನು ಪ್ರೇಮ್‌, ಹರಿಪ್ರಿಯಾ, ಪ್ರಜ್ವಲ್‌ಗೆ ಹೇಳಿದೆ ಒಂದೇ ದಿನದಲ್ಲಿ ಎಲ್ಲರೂಒಂದು ಕಡೆ ಸಿಕ್ಕೆವು ಟೋಟಲ್‌ ಆಗಿ ಆರು ಗಂಟೆಯ ಅವಧಿಯಲ್ಲಿ ಎಲ್ಲವೂ ಫೈನಲ್‌ ಆಗಿ, ಮೂರು ಜನರು ಫಿಕ್ಸ್‌ ಸಹ ಆದರು,’ಎಂದು ಹೇಳುತ್ತಾರೆ ದಿನಕರ್‌.
.

ಪ್ರತಿಯೊಬ್ಬರ ಲೈಫ್‌ಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ :

ಇನ್ನು 'ಲೈಫ್‌ ಜತೆ ಒಂದ್ ಸೆಲ್ಫಿ' ಪ್ರತಿಯೊಬ್ಬರ ಲೈಫ್‌ಗೂ ಕನೆಕ್ಟ್ ಆಗುತ್ತದಂತೆ. ಮೂರು ವಿವಿಧ ರೀತಿಯ ಸ್ನೇಹಿತರ ಕಥೆ ಈ ಚಿತ್ರದಲ್ಲಿದೆ. ಲೈಫ್‌ನಲ್ಲಿ ಏನೇ ತೊಂದರೆ ಬಂದರು ಎಲ್ಲವನ್ನು ಹರ್ಡಲ್ಸ್‌ಗಳನ್ನು ದಾಟುವ ಹಾಗೆ ದಾಟಿಕೊಂಡು ಹೋಗಬೇಕು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ ಎನ್ನುವುದು ದಿನಕರ್‌ ಮಾತು.
.
ಒನ್‌ಲೈನ್‌ ಕೇಳಿ ಕಥೆ ಒಪ್ಪಿಕೊಂಡ ನಟರು :

‘ನಾನು ಪ್ರಜ್ವಲ್‌, ಪ್ರೇಮ್‌, ಹರಿಪ್ರಿಯಾ ಈ ಮೂವರಿಗೂ ಬರೀ ಒನ್‌ ಲೈನ್‌ ಹೇಳಿದ್ದಷ್ಟೇ ಎಲ್ಲರೂ ತುಂಬಾ ಖುಷಿಯಿಂದ ಸಿನಿಮಾ ಮಾಡಲು ಒಪ್ಪಿಕೊಂಡರು. ಯಾವಾಗ ಶೂಟಿಂಗ್‌ ಎಂದು ಸಹ ಕೇಳಲಿಲ್ಲ, ಅಲ್ಲಿಯೇ ಮೊದಲ ಸೆಲ್ಫಿ ತೆಗೆದುಕೊಂಡೆವು ಅದೇ 'ಲೈಫ್‌ ಜತೆ ಒಂದ್ ಸೆಲ್ಫಿ' ಟೀಮ್‌ನ ಮೊದಲ ಸೆಲ್ಫಿ ಎಂದು ಖುಷಿ ಪಡುತ್ತಾರೆ ನಿರ್ದೇಶಕ ದಿನಕರ್‌.

.

'ಲೈಫ್‌ ಜತೆ ಒಂದ್ ಸೆಲ್ಫಿ' ಸಿನಿಮಾವನ್ನು ಸಮೃದ್ಧಿ ಮಂಜುನಾಥ್‌ ನಿರ್ಮಾಣ ಮಾಡಿದ್ದು ಇದೇ 24ರಂದು ಚಿತ್ರ ರಾಜ್ಯದ್ಯಾಂತ ಬಿಡುಗಡೆಯಾಗುತ್ತಿದೆ.

 

 

ವಿದೇಶದಲ್ಲಿದ್ದುಕೊಂಡು ಕನ್ನಡ ಸಿನಿಮಾಗಳನ್ನು ಮಾಡಿರುವವರ ಸಂಖ್ಯೆ ಬಹಳಷ್ಟಿದ್ದು ಆ ಸಾಲಿಗೆ ಹೊಸ ಸೇರ್ಪಡೆ ಹೇಮಂತ್ ‌ಕೃಷ್ಣಪ್ಪ.
.

ವಿದೇಶದಲ್ಲಿ ಟೆಕ್ಕಿಯಾಗಿದ್ದ ಹೇಮಂತ್‌ ಕೃಷ್ಣಪ್ಪ ಅಲ್ಲಿಯೇ ಕಿರು ಚಿತ್ರಗಳನ್ನು ಮಾಡುತ್ತಿದ್ದರು, ಈಗ ನಟ, ನಿರ್ಮಾಪಕ, ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. 
.

ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ಈ ಸಿನಿಮಾ ಪಕ್ಕಾ ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾನಕವಂತೆ. ಕನ್ನಡದ ಮಟ್ಟಿಗೆ ಹೊಸ ಪ್ರಯತ್ನ ಕೂಡಾ ಹೌದು ಎನ್ನುತ್ತಾರವರು.

ಈಸಿನಿಮಾಗೆ ಹಾಲಿವುಡ್‌ನ ಕಥೆಗಾರ ರಾಬರ್ಟ್‌ ಗ್ರಿಫಿನ್‌ ಚಿತ್ರಕಥೆ ಬರೆದಿದ್ದಾರೆ.

.
ಶೇಡ್ರಾಕ್‌ ಸಾಲೋಮನ್‌ ಸಂಗೀತ ಮತ್ತು ಚೇತನ್‌ ರಘುರಾಮ್‌ ಛಾಯಾಗ್ರಹಣದ ಜವಬ್ದಾರಿ ಹೊತ್ತಿದ್ದಾರೆ. ಇವರು ಸಹ ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಥ್ರಿಲ್ಲರ್‌ ಸಿನಿಮಾಗಳ ನಡುವೆ ಉದ್ದಿಶ್ಯ ಒಂದು ವಿಶೇಷ ಸಿನಿಮಾವಾಗುತ್ತದೆ ಎನ್ನುತ್ತಾರೆ ಹೇಮಂತ್‌.

#Uddishya #Cineloka

Page 2 of 14

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top