tarakaasura

ttm

adweb

udgharsha

ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ. ಈಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಕಿಚ್ಚ ಸುದೀಪ್ ಅವರೀಗ ಅಭಿಮಾನಿಗಳು ಬೆರಗಾಗುವಂತಹ ಸುದ್ದಿ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್‍ ಇತ್ತೀಚೆಗಷ್ಟೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದು ತಮಗೆಲ್ಲರಿಗೂ ಗೊತ್ತೇ ಇದೆ. ಈಗ ಈ ಕಿರಿಕ್ ಸ್ಟಾರ್ ಚಿತ್ರದ ವಿತರಕರಾಗುತ್ತಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣದ ನಂತರ ರಕ್ಷಿತ್ ಶೆಟ್ಟಿ ವಿತರಕರಾಗುತ್ತಿರುವುದು ಸ್ಯಾಂಡಲ್ ವುಡ್ ಪಾಲಿಗೆ ಸಂತಸದ ವಿಷಯವೂ ಹೌದು.

ಮೊನ್ನೆಯಷ್ಟೇ ಅನುಷ್ಟಾನಕ್ಕೆ ಬಂದ ಜಿ ಎಸ್ ಟಿ ಹಲವು ಉದ್ಯಮಿಗಳಿಗೆ ತುಸು ತಲೆಬಿಸಿಯುಂಟು ಮಾಡಿದ್ದರೂ, ಜಿ ಎಸ್ ಟಿ ಹಾಡಿನ ಮೂಲಕ ಪ್ರಚಾರ ಗಿಟ್ಟಿಸಿಕೊಂಡ ’ಮುಗುಳು ನಗೆ’ ಚಿತ್ರತಂಡ ಸಂತಸದಲ್ಲಿದೆ. ಬ್ಲಾಕ್ಬಸ್ಟರ್ ಜೋಡಿ ಎಂದೇ ಪ್ರಖ್ಯಾತವಾದ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ ’ಮುಗುಳು ನಗೆ’ ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಮುಗುಳುನಗೆ ಬೀರಿದ್ದಾರೆ.


ಸುಮಾರು 5 ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ಕಪ್ಪು-ಬಿಳುಪು ಎಂಬ ಚಲನಚಿತ್ರವು ನಿರ್ಮಾಣವಾಗಿತ್ತು. ದಿ.ಕಲ್ಪನಾ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಆ ಚಿತ್ರ ಸೂಪರ್‍ಹಿಟ್ ಆಗಿತ್ತು. ಈಗ 48 ವರ್ಷಗಳ ನಂತರ ಮತ್ತೆ ಅದೇ ಹೆಸರಿನಲ್ಲಿ ಕನ್ನಡ ಚಲನ ಚಿತ್ತವೊಂದು ನಿರ್ಮಾಣವಾಗುತ್ತಿದೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಜೀವಾ ಕಳೆದ ವರ್ಷ ವ್ಯಾಟ್ಸ್‍ಪ್ ಲವ್ ಎಂಬ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರು. ಈಗ ಕಪ್ಪು-ಬಿಳುಪು ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಪೂಜ ಹಾಗೂ ಪಸ್ಟ್ ಲುಕ್, ಮೋಷನ್ ಪೋಸ್ಟರ್ ಅನಾವರಣ ಸಮಾರಂಭ ಕಳೆದವಾರ ರೇಣುಕಾಂಭ ಥಿಯೇಟರಿನಲ್ಲಿ ನೆರವೇರಿತು.

ಶ್ರೀವತ್ಸ ನಾಡಿಗ ಅವರು ಚಿತ್ರದ ಫಸ್ಟ್‍ಲುಕ್ ಮೋಷನ್ ಪೋಸ್ಟರ್ ಅನಾವರಣಗೊಳಿಸಿದರು. ಹಿರಿಯ ನಿರ್ದೇಶಕರ ತಿಪಟೂರು ರಘು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಮಂಜುಶಿವನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 2 ತಮಿಳು ಹಾಗೂ ಒಂದು ಕನ್ನಡ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮಂಜು ಶಿವನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನಕ್ಕಿಳಿದಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಜೀವ ಇದೊಂದು ವಿಭಿನ್ನ ಪ್ರಯತ್ನ ನಾನು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 2ನೇ ಚಿತ್ರವಿದು. ಬೆಂಗಳೂರಿನಲ್ಲಿ ಚಿಕ್ಕಮಕ್ಕಳನ್ನು ಉಪಯೋಗಿಸಿಕೊಂಡು ವಯಸ್ಸಾದವರನ್ನು ಹೇಗೆ ಯಾಮಾರಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಇಂಥ ಪ್ರಕರಣಗಳನ್ನು ತಡೆಗಟ್ಟುವುದು ಹೇಗೆ. ನಮ್ಮವರು ಇನ್ನು ಏಕೆ ಹಿಂದುಳಿದಿದ್ದಾರೆ, ಅದಕ್ಕೆ ಕಾರಣ ಏನು ಎಂಬ ಬಗ್ಗ ಕೂಡ ನಮ್ಮ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಕಾನೂನಿನ ಮೂಲಕ ಇದನ್ನು ಹೇಗೆ ತಡೆಗಟ್ಟಬಹುದು ಎಂದು ಚಿತ್ರಕಥೆ ಮಾಡಿಕೊಂಡಿದ್ದೇವೆ.

ಬೆಂಗಳೂರಿನಲ್ಲಿ ಹಿಂದುಳಿದಿರುವಂಥ ಅನೇಕ ಏರಿಯಾಗಳಿವೆ. ಅವುಗಳನ್ನು ನಮ್ಮ ಚಿತ್ರದ ಶೂಟಿಂಗ್‍ನಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಎಲ್ಲೆಲ್ಲಿ ಪ್ರಾಬ್ಲಂ ಇದೆ ಅಂತ ತೀರಿಸಿಕೊಟ್ಟಿದೆ ಸರ್ಕಾರಕ್ಕೂ ಇದರಿಂದ ಸಹಕಾರಿಯಾಗುತ್ತದೆ ಎಂಬ ನಂಬಿಕೆಯಿದೆ. ಜುಲೈ 15 ರಿಂದ ಶೂಟಿಂಗ್ ಆರಂಭಿಸಿ 3 ಹಂತಗಳಲ್ಲಿ ಮುಗಿಸುವ ಪ್ಲಾನ್ ಇದೆ. ದಸರಾ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಯೋಜನೆಯಿಂದ ಎಂದು ಹೇಳಿದರು.

ನಿರ್ದೇಶಕ ಮಂಜು ಶಿವನ್ ಮಾತನಾಡಿ ಒಂದು ಸ್ಟ್ರಾಂಗ್ ಕಂಟೆಂಟ್ ಇರುವ ಚಿತ್ರ ಜನರಿಗೆ ಕಾನೂನಿನ ಬಗ್ಗೆ ಅರಿವು ಇರುವುದಿಲ್ಲ. ಅದನ್ನು ತಿಳಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಚಿತ್ರದ ನಾಯಕಿ ಪಾತ್ರವನ್ನು ಪೂಜಾ ಶರ್ಮ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತ: ಮಾಡೆಲ್ ಆದ ಇವರು ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಐಶ್ವರ್ಯ ನಟಿಸುತ್ತಿದ್ದಾರೆ. ಜೆ.ಪಿ.ಆರ್.ಜಿ. ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕಾವೇರಿಗೌಡ ಈ ಚಿತ್ರದ ಛಾಯಾಗ್ರಾಹಕರು, ಬಿ.ಆರ್.ಹೇಮಂತಕುಮಾರ ಈ ಚಿತ್ರದ ಸಂಗೀತ ನಿರ್ದೇಶಕರು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನೆಮಾ ಅದ್ಧೂರಿ ಚಾಲನೆಗೆ ಸಿದ್ಧವಾಗಿದೆ. ಈಗಾಗಲೇ ಸಿನಿಮಾಗಾಗಿ ಭರದಿಂದ ಸಿದ್ಧತೆ ಸಾಗುತ್ತಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮುತ್ತಣ್ಣ' ತೊಂಬತ್ತರ ದಶಕದಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ. ಈ ಸಿನಿಮಾ ಇದೀಗ ಹೊಸ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಆಗುತ್ತಿದೆ.

ಹಾರರ್ ‘ಗಾಯತ್ರಿ’ ಹಾಡುಗಳ ಅನಾವರಣ :

ಇತ್ತೀಚಿನ ದಿನಗಳಲ್ಲಿ ಹಾರರ್ ಚಿತ್ರಗಳೇ ಸಿನಿ ಪ್ರೇಕ್ಷಕರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಕರ್ವ, 6-5=2, ಲಾಸ್ಟ್‍ಬಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹಾರರ್ ಕಂಟೆಂಟ್ ಇರೋದೇ ಗೆಲುವಿನ ಮೂಲ ಸೂತ್ರವಾಗಿತ್ತು. ಈಗ ಮತ್ತೊಂದು ಅಂಥದೇ ಎಳೆ ಹೊಂದಿರುವ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿದೆ. ಅ ಚಿತ್ರದ ಹೆಸರು ಗಾಯಿತ್ರಿ. ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು. ಒಂದು ಮನೆ ಹಾಗೂ ಅಲ್ಲಿ ವಾಸವಿರುವ ಕುಟುಂಬದ ಹಿನ್ನಲೆಯಲ್ಲಿ ನಡೆಯುವಂಥ ಹಾರರ್ ಕಥೆಯಿದು. ಈಗಾಗಲೇ ಚಿತ್ರೀಕರಣ ಪೂರೈಸಿರುವ ಚಿತ್ರ ತಂಡ ಸಧ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸತ್ಯ ಸಾಮ್ರಾಟ್ ಒಂದು ಮನೆಗೆ 3 ಜನ ಹುಡುಗರು ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ವಾಸವಿದ್ದ ಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳಿರುತ್ತಾರೆ. ಈ ಹುಡುಗರು ಅಲ್ಲಿಗೆ ಹೋದಾಗ ಅಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತವೆ. ಅದಕ್ಕೆಲ್ಲಾ ಕಾರಣವೇನು. ನಿಜಕ್ಕೂ ಆ ಮನೆಯಲ್ಲಿ ದೆವ್ವ ಇದೆಯೇ, ಇಲ್ಲವೇ ಅಂತ ಹೇಳುವುದೇ ನಮ್ಮ ಚಿತ್ರದ ಕಥೆ. ಸಕಲೇಶಪುರ, ಮಂಗಳೂರು, ಬೆಂಗಳೂರು ಹಾಗೂ ಚೆನ್ನೈ ಸುತ್ತ ಮುತ್ತ ಈ ಚಿತ್ರಕ್ಕೆ ಶೂಟಿಂಗ್ ನಡೆಸಿದ್ದೇವೆ. ರೋಹಿತ್ ಶೆಟ್ಟಿ, ಸ್ಮೈಲ್ ಶಿವು ಹಾಗೂ ಚೇತನ್ ನಾಯಕರಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶ ಈ ಚಿತ್ರದಲ್ಲಿದೆ. ದುಶ್ಚಟಗಳಿಗೆ ಬಲಿಯಾಗುವಂಥ ಯುವ ಜನಾಂಗ ಯಾವ ರೀತಿಯಲ್ಲಿ ಹಾಳಾಗುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. 2 ಕನ್ನಡ ಹಾಗೂ 2 ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸತ್ಯ ಸಾಮ್ರಾಟ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನೂ ಕೂಡ ಅವರೇ ಬರೆದಿದ್ದಾರೆ.

ನಯನಕೃಷ್ಣ ಅವರು ಈ ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಶ್ಯಾಮ್ ಸಿಂಧನೂರು ಈ ಚಿತ್ರದ ಛಾಯಾಗ್ರಾಹಕರು. ಭಾರತಿಗೌಡ ಹಾಗೂ ವಿ.ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ಸಿ.ರವಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ನಾಲ್ಕು ಹಾಡುಗಳು ಮೂಡಿ ಬಂದಿವೆ, ಎರಡು ರೋಮ್ಯಾಂಟಿಕ್, ಒಂದು ಐಟಂ ಹಾಗೂ ಒಂದು ಪ್ಯಾಥೋ ಸಾಂಗ್ ಈ ಚಿತ್ರದಲ್ಲಿದೆ. ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಸೇರಿ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಚೇತನ್, ಶೋಭರಾಣಿ ಸ್ಮೈಲ್ ಶಿವು, ಪೂಜಾ, ರಂಜಿತಾ ಮೊಹನ್ ಜುನೇಜಾ, ದಯಾನಂದ್, ಬ್ಯಾಂಕ್ ಜನಾರ್ಧನ್ ಹಾಗೂ ಇತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಹಿಂದೆ ಬಂಗಾರಿ ಚಿತ್ರವನ್ನು ನಿರ್ದೇಶಿಸಿದ್ದ ಮಾ ಚಂದ್ರು ಬಹಳ ದಿನಗಳ ನಂತರ ಇದೀಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದ ‘ಶಿವನಪಾದ' ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಈ ಚಿತ್ರದ ಮೂಲಕ ಪುನಃ ಕಲಾವಿದನಾಗಿ ಬಣ್ಣ ಹಚ್ಚುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಾಗಿಯೇ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವನ ಪಾದ ಉತ್ತರ ಕರ್ನಾಟಕ ಏರಿಯಾದಲ್ಲಿರುವ ಒಂದು ಸ್ಥಳ. ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿ ಬರುತ್ತದೆ. ಚಿತ್ರದ ಬಹುತೇಕ ಕಥೆ ಜರ್ನಿಯಲ್ಲಿ ನಡೆಯುತ್ತದೆ ಎಂಬದಾಗಿ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಮಾ ಚಂದ್ರು ಹೇಳಿದರು.

ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರ ಚಿತ್ರದಲ್ಲಿದ್ದು ಆ ಪಾತ್ರವನ್ನು ಸಾಂಗ್ಲಿಯಾನ ಅವರ ಕೈನಲ್ಲೇ ಮಾಡಿಸಿದರೆ ಸೂಕ್ತ ಎಂದೆನಿಸಿ ಅವರ ಬಳಿ ಹೋದೆವು. ಅವರು ಮೊದಲು ಕಥೆಯನ್ನು ಕೇಳಿ ನಂತರ ಒಪ್ಪಿದರು. ಜು.2 ರಿಂದ ಆರಂಭಿಸಿ 45 ದಿನಗಳ ಕಾಲ ಬೆಂಗಳೂರು, ಮೈಸೂರು, ತಲಕಾಡು ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನ್ ಹಾಕಿಕೊಂಡಿದ್ದೇವೆ. ಈ ಚಿತ್ರದಲ್ಲಿ 2 ಜೋಡಿಗಳು ಪ್ರಮುಖವಾಗಿ ಬರುತ್ತವೆ. ಚಿರಶ್ರೀ-ಆನಂದ್, ಹಾಗೂ ಮಮತಾ ರಾಹುತ್-ಕೃಷ್ಣ. ಈ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂದು ಕೂಡ ಮಾಚಂದ್ರು ಅವರು ಹೇಳಿಕೊಂಡರು.

ನಂತರ ಹೆಚ್.ಟಿ.ಸಾಂಗ್ಲಿಯಾನ ಮಾತನಾಡುತ್ತ ನಾನು ಎಸ್.ಪಿ.ಆಗಿದ್ದಾಗ ಹಲವಾರು ಕ್ರೈಂ ಘಟನೆಗಳನ್ನು ಎದುರಿಸಿದ್ದೇನೆ. ಅಂಥಾ ಒಂದಿಷ್ಟು ಘಟನೆಗಳು ಈ ಚಿತ್ರದಲ್ಲಿಯೂ ಬರುತ್ತವೆ. ಹಲವಾರು ನೈಜ ಘಟನೆಗಳನ್ನು ಕೂಡ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಕಥೆ ಜನರಿಗೆ ಕುತೂಹಲ ಮೂಡಿಸುತ್ತದೆ ಎಂಬುದಾಗಿ ಅವರು ಹೇಳಿದರು. ನಿರ್ಮಾಪಕರಲ್ಲೊಬ್ಬರಾದ ಟಿ.ಮಂಜುನಾಥ ಮಾತನಾಡುತ್ತ ಮಾ ಚಂದ್ರು ಬಂದು ಈ ಕಥೆ ಹೇಳಿದರು. ಶಿವನಪಾದ ಎಂದರೆ 2 ರೀತಿಯ ಅರ್ಥ ಬರುತ್ತದೆ. ನಮ್ಮ ಚಿತ್ರದಲ್ಲಿ ಅದನ್ನು ಪಾಸಿಟಿವ್ ಆಗಿಯೇ ತೋರಿಸಿದ್ದೇವೆ. ಚಿತ್ರದಲ್ಲಿ ಹಲವಾರು ಟ್ವಿಸ್ಟ್‍ಗಳಿವೆ. ಹಾರರ್ ಎಫೆಕ್ಟ್ ಕೂಡ ಇದೆ ಎಂದು ಹೇಳಿದರು.
ಮತ್ತೊಬ್ಬ ನಿರ್ಮಾಪಕ ಪ್ರಕಾಶ್ ಮಾತನಾಡುತ್ತ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿತ್ತು. ವಿನಯ್‍ರಾಜ್‍ಕುಮಾರ್ ಅವರ 3ನೇ ಚಿತ್ರವನ್ನೂ ತಾವೇ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡರು. ಸಂಗೀತ ನಿರ್ದೇಶಕ ವೀರಸಮರ್ಥ ಮಾತನಾಡುತ್ತ ಚಿತ್ರದಲ್ಲಿ 2 ಹಾಡುಗಳು ಮಾತ್ರವಿದ್ದು ಮಾಂಟೇಜ್ ಹಾಗೂ ಥ್ರಿಲ್ಲರ್ ಹಾಡುಗಳಿವೆ ಎಂದು ಹೇಳಿದರು. ನಾಯಕಿ ಚಿರಶ್ರೀ ಮಾತನಾಡಿ ಒಬ್ಬ ಇನೋಸೆಂಟ್ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾಂಗ್ಲಿಯಾನ ಅವರ ಜೊತೆ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ ಎಂದು ಹೇಳಿದರು.

ನಟ ಆನಂದ್ ಈ ಚಿತ್ರದಲ್ಲಿ ಒಬ್ಬ ನಿರ್ದೇಶಕನ ಪಾತ್ರ ಮಾಡಿದ್ದಾರೆ. ಕೃಷ್ಣ ಈ ಹಿಂದೆ ಮಾತುಕತೆ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಅವರ 2ನೇ ಚಿತ್ರ. ನಂದಕುಮಾರ ಈ ಚಿತ್ರದ ಛಾಯಾಗ್ರಾಹಕರು.
ಈ ಚಿತ್ರದಲ್ಲಿ ಬರುವ ಪಾತ್ರಗಳಿಗೆಲ್ಲ ಅವರ ನಿಜವಾದ ಹೆಸರನ್ನೇ ಬಳಸಿಕೊಂಡಿದ್ದಾರೆ. ಈ ಪಾತ್ರಗಳನ್ನು ಕೂಡ ಅದೇ ರೀತಿ ರೂಪಿಸಿದ್ದಾರೆ. ನಿರ್ಮಾಪಕ ಮಂಜುನಾಥ ಅವರು ಗಾಂಧೀನಗರದಲ್ಲಿ ವಿತರಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಲ್ಯಾಂಡ್ ಡೆವಲಪರ್ ಆಗಿದ್ದು ಒಂದು ಸ್ಥಳೀಯ ವಾಹಿನಿಯನ್ನು ಕೂಡ ನಡೆಸುತ್ತಿದ್ದಾರೆ.

ವಿ.ಪಿ.ಕಂಬೈನ್ಸ್ ಲಾಂಛನದಡಿಯಲ್ಲಿ ವಿ.ಶ್ರೀನಿವಾಸ್ (ನಾಗೇನಹಳ್ಳಿ) ನಿರ್ಮಿಸಿರುವ ಚೊಚ್ಚಲ ಕಾಣಿಕೆ “ನಮ್ಮೂರ ಹೈಕ್ಳು” ಚಿತ್ರವು ಇದೇ 30 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರಕ್ಕೆ ಮನು ಛಾಯಾಗ್ರಹಣ, ಶಕೀಲ್ ಅಹಮ್ಮದ್ ಸಂಗೀತ, ಕಲೈ, ರಘು ನೃತ್ಯ, ಥ್ರಿಲ್ಲರ್ ಮಂಜು ಸಾಹಸ, ವೇಣು ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಪ್ರಸನ್ನ ಚಿತ್ರದ ಸಹ ನಿರ್ಮಾಪಕರು ರಂಗರಾಜು ಹಾಸನ್.

ತಾರಾಗಣದಲ್ಲಿ ರಘುಹಾಸನ್, ದೀಪ್ತಿ ಮನ್ನೆ, ಮಜಾ ಟಾಕೀಸ್‍ನ ಪವನ್, ಕುರಿಸುನೀಲ್, ತೇಜಸ್ ವಿನಯ್‍ರಾಮ್, ಮಮತಾ ರಾವುತ್, ರಚಿತಾ, ಅಣ್ಣಯ್ಯ, ಸುಚೇಂದ್ರ ಪ್ರಸಾದ್, ರಮೇಶ್ ಭಟ್, ಎಂ.ಎಸ್. ಉಮೇಶ್, ಚಿಕ್ಕಣ್ಣ, ಬಿರಾದಾರ್ ಮುಂತಾದವರಿದ್ದು ವಿಶಿಷ್ಟ ಪಾತ್ರವೊಂದರಲ್ಲಿ ಸತ್ಯಜಿತ್ ಕಾಣಿಸಿಕೊಳ್ಳಲಿದ್ದಾರೆ.

 

23 ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಉದಯ ವಾಹಿನಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ.ಹಾಗೆ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ಧವಾಗಿದೆ. ಇದೇ ಜೂನ್ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ “ಕಾವೇರಿ” ಪ್ರಸಾರವಾಗಲಿದೆ.

“ಕಾವೇರಿ” ಬೆಂಕಿಯಲ್ಲಿ ಅರಳಿದ ಹೂ, ತಾನು ನೊಂದರೂಮನೆಯವರಿಗೆ ನೆರಳನ್ನು ನೀಡುವಾಕೆ. ಇನ್ನೂ ನಾಯಕ ಸಂತೋಷ, ಜನ್ಮತ: ಆಗರ್ಭ ಶ್ರೀಮಂತನಾದರೂ ತನ್ನತಂದೆಯದುರ್ಬುದ್ಧಿ, ಲೋಭತನದಿಂದಕುಪಿತನಾಗಿ ಮನೆಯಿಂದ ಹೊರಬಂದಿರುತ್ತಾನೆ. ಕಾವೇರಿಯ ಮಾನವೀಯ ಮೌಲ್ಯಗಳನ್ನು ಕಂಡು ಅವಳೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ ಅವಳಿಗೆ ತನ್ನ ಮನಸ್ಸಿನ ಪಿಸುಮಾತನ್ನು ಹೇಳಬೇಕು ಎಂದು ಅವಳ ಮನೆಗೆ ಬಂದಾಗಅಲ್ಲಿ ಅವಳ ನಿಶ್ಚಿತಾರ್ಥ ನಡೆಯಿತ್ತಿರುತ್ತದೆ. ಆದರೆ ವಿಧಿಯಾಟದಿಂದಕಾವೇರಿಯ ಮದುವೆ ಮುರಿದುಬೀಳುತ್ತದೆ. ಭವಿಷ್ಯದಲ್ಲಿಕಾವೇರಿ ಮದುವೆಯಾಗದಿದ್ದರೂ ಹೆಂಡತಿಯಾಗಿ ಮತ್ತುಜನ್ಮ ನೀಡದಿದ್ದರೂ ತಾಯಿಯಾಗಿ ಬದುಕುವ ಅನಿವಾರ್ಯತೆಯಲ್ಲಿ ಬೀಳುತ್ತಾಳೆ. ಆದರೆ ಸಂತೋಷನ ನಿಷ್ಕಲ್ಮಷ ಪ್ರೀತಿಗೆ ಕಾವೇರಿ ಒಲಿಯುತ್ತಾಳಾ ಎಂಬುದುಕಾದು ನೋಡಬೇಕಾಗಿದೆ.
ಕಾವೇರಿಯ ಪಾತ್ರದಲ್ಲಿ ನಟಿ ಪ್ರಿನ್ಸಿಕೃಷ್ಣನ್ ನಟಿಸಿದರೆ ನಾಯಕನಾಗಿ ಶ್ರೀಧರ ನಟಿಸುತ್ತಿದ್ದಾರೆ. ಪ್ರಧಾನ ಪಾತ್ರದಲ್ಲಿಜನಪ್ರೀಯ ನಟರಾದ ಅಶ್ವಿನಿ ಗೌಡ,ಸುರೇಶ್‍ರೈ,ಶ್ರೀಕಾಂತ ಹೆಬ್ಳಿಕರ್ ಮತ್ತು ನಟಿಸುತ್ತಿದ್ದಾರೆ.“ಕಾವೇರಿ” ನ್ಯೂ ಡಿ-ಟು ಮಿಡಿಯಾ ನಿರ್ಮಾಣದಲ್ಲಿಮೂಡಿಬರುತ್ತಿದೆ. ನಿರ್ದೇಶನದ ಜವಾಬ್ದಾರಿಯನ್ನು ವಿನೋದ ಫೀಲ್ಸ್ ವಹಿಸಿಕೊಂಡಿದ್ದಾರೆ.
“ಕಾವೇರಿ” ಕೇವಲ ಪಾತ್ರವಲ್ಲದೇ ಅದು ಸಮಸ್ತ ಹೆಣ್ತನದ ರಾಯಭಾರಿ ಎನ್ನುವುದು ನಿರ್ದೇಶಕ ವಿನೋದ ಮಾತು.
ಇದೇ ಸಂದರ್ಭದಲ್ಲಿ “ಕಾವೇರಿ” ಧರಾವಾಹಿಯನ್ನು ನೋಡಿಚಿನ್ನಗೆಲ್ಲಿಎಂಬುದರ ಮೂಲಕ ಉದಯ ವೀಕ್ಷಕರಿಗೆ ಚಿನ್ನದ ಸುರಿಮಳೆ ಹರಿಸಲಿದೆ. ಜೂನ್ 26ರಿಂದ ಜೂಲೈ07ರವರೆಗೆ ಧಾರಾವಾಹಿಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ವಿನ್ನರ್‍ಗಳಿಗೆ 100ಗ್ರಾಮದವರಗೆ ಬಂಗಾರವನ್ನು ಗೆಲ್ಲುವ ಅವಕಾಶವಿದೆ.
“ಕಾವೇರಿ” ಇದೇ ಜೂನ್ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

 
ಜನಪ್ರಿಯ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ `ನಾ ಪಂಟ ಕಣೋ'. ಲಕ್ಷ್ಮಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿರುವ ನೂಪ್ ರೇವಣ್ಣ ಹಾಗೂ ರಿತೀಕ್ಷ (ಮೋನಿಕಾ) ಅಭಿನಯದ ಈ ಚಿತ್ರ ನಿರ್ಮಾಪಕ ಸುಬ್ರಮಣ್ಯಂ ಕೆ ಅವರ ಪ್ರಥಮ ಕಾಣಿಕೆ. ಈ ವಾರ `ಪಂಟ' ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಈ `ಪಂಟ' ಮೈಂಡ್ ಗೇಮ್ ಮಾಡುವುರದಲ್ಲಿ ನಿಸ್ಸೀಮ. ತನ್ನ ಬುದ್ದಿ ಶಕ್ತಿಯಿಂದ ಹೇಗೆ ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತಾನೆ ಎಂಬುದೇ ಕಥಾ ವಸ್ತು.
#PANTA #Cineloka

ಕೆಲ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕಿರು ಚಿತ್ರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವುದೇ ಚಿತ್ರಕ್ಕೆ ಕಮ್ಮಿ ಇಲ್ಲವೆಂಬಂತೆ ಮೂಡಿಬಂದಿರುವ ಈ ಕಿರು ಚಿತ್ರದ ಹೆಸರು 'ಮೈ ಡೆತ್ ನೋಟ್'. ಹೌದು ಎಂ. ಸುಭಾಷ್ ಚಂದ್ರ ನಿರ್ದೇಶನದ ಈ ಕಿರು ಚಿತ್ರವು ತನ್ನ ಟೈಟಲ್‌ನಂತೆಯೇ ವಿಭಿನ್ನವಾಗಿ ಮೂಡಿಬಂದಿದ್ದು, ಸದ್ಯ ಯೂಟ್ಯುಬ್ ನಲ್ಲಿ ಟ್ರೆಂಡಿಂಗ್ ಲಿಸ್ಟ್ ನಲ್ಲಿರುವುದೇ ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿಗೆ ಹಿಡಿದಿರುವ ಕನ್ನಡಿಯಾಗಿದೆ.

 

ದತ್ತ ಫಿಲಂಸ್ ಲಾಂಛನದಲ್ಲಿ ದತ್ತಾತ್ತ್ರೇಯ ಬಚ್ಚೇಗೌಡ ಹಾಗೂ ಬಾನು ದತ್ತ ಅವರು ನಿರ್ಮಿಸಿರುವ `ಜಿಂದಾ’ ಚಿತ್ರ ಈ ವಾರ (June 9) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಒಂದು ಗ್ಯಾಂಗಿನ ಸುತ್ತಾ ನಡೆಯುವ ಕಥಾ ಹಂದರ ಹೊಂದಿರುವ `ಜಿಂದಾ’ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಯುವರಾಜ್, ಮೇಘನಾರಾಜ್, ದೇವರಾಜ್, ಕೃಷ್ಣ, ಲೋಕಿ, ಅರುಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಇದು ನೂತನ `ಯುಗ ಪುರುಷ' ತೆರೆಯಮೇಲೆ. ಅಂದು 28 ವರ್ಷಗಳ ಹಿಂದೆ `ಯುಗ ಪುರುಷ' ಹಿಂದಿ ಸಿನಿಮಾ `ಕರ್ಜ್' ರೀಮೇಕ್ ಆಗಿ ಜನಪ್ರಿಯ ಆಗಿತ್ತು. ಆ ಸಿನಿಮಾದ ನಾಯಕ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಖುಷ್ಬೂ ನಾಯಕಿ, ಡಿ ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು. ಇಂದಿನ `ಯುಗ ಪುರುಷ' ಸಿನಿಮಾದಲ್ಲಿ ವಿ ರವಿಚಂದ್ರನ್ ಅವರ ಅಭಿಮಾನಿಯಾಗಿ ಅರ್ಜುನ್ ದೇವ್ ನಾಯಕರಾಗಿ ಪಾದ ಬೆಳಸಿದ್ದಾರೆ. ಈ ನಾಯಕ ಪೌರುಷದಲ್ಲಿ ಹಾಗೂ ನಿಯತ್ತಿನಲ್ಲಿ ಸಕ್ಕತ್ತು.
ಕನ್ನಡದಲ್ಲಿ ಮನಸುಗಳ ಮಾತು ಮಧುರ, ಗೌರಿ ಪುತ್ರ ಅಂತಹ ಸದಭಿರುಚಿಯ ಸಿನಿಮಾಗಳ ನಿರ್ದೇಶನ ಮಾಡಿದ ಮಂಜು ಮಸ್ಕಲ್ಮಟ್ಟಿ ಅವರು ನಿರ್ದೇಶನ ಮಾಡಿರುವ ಚಿತ್ರ ಇದು. ತೆಲುಗು ಭಾಷೆಯಲ್ಲಿ ಮೂರು ಸಿನಿಮಾದಲ್ಲಿ ಅಭಿನಯಿಸಿರುವ ಪೂಜಾ ಝವೇರಿ ಕಥಾನಾಯಕಿ.

ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಮುರುಡೇಶ್ವರ, ಭಟ್ಕಳ್, ಸಕಲೆಶಪುರ, ಕೆ ಜಿ ಎಫ್, ಬಿಡದಿ ಸ್ಥಳಗಳಲ್ಲಿ 40 ದಿವಸ ಚಿತ್ರೀಕರಣ ಮಾಡಲಾಗಿದೆ. ಐದು ಹಾಡುಗಳು ಹಾಗೂ ಆರು ಸಾಹಸ ಸನ್ನಿವೇಶ ಇರುವ ಈ ಚಿತ್ರದಲ್ಲಿ ನಾಯಕನ ಹೆಸರೆ ಚಿತ್ರದಲ್ಲಿ ?ಟಗರು? ಎಂದು. ಅನಾಥಾಶ್ರಮದಲ್ಲಿ ಬೆಳದ ಹುಡುಗ ನಿಷ್ಠೆ ಹಾಗೂ ನಿಯತ್ತಿಗೆ ಮತ್ತೊಂದು ಹೆಸರು. ತನ್ನ ಗುರು ದೇವರಾಜ್ ಅಂದರೆ ಬಹಳ ಪ್ರಿಯ. ಇಂತಹ ವ್ಯಕ್ತಿಯ ಜೀವನದಲ್ಲಿ ಪ್ರೀತಿ ನುಸುಳಿದರೆ? ಮುಂದೇನು ಎಂಬುದು ಕಥಾ ವಿಸ್ತರಣೆ.

ಡಾಕ್ಟರ್ ಮಂಜುನಾಥ್ ಬಾಬು, ಚಳ್ಳಕೆರೆ ಮೂಲತಃ ಮಕ್ಕಳ ತಜ್ಞ. ಅವರು ಬೆಟ್ಟ ಸ್ವಾಮಿ ಗೌಡ, ಶಿವರಾಜ್ ಟಿ ಸಿ ಅವರ ಜೊತೆ ಸೇರಿ ?ಯುಗ ಪುರುಷ? ಚಿತ್ರವನ್ನು ನಿರ್ಮಾಣ ಮಾದಿದ್ದಾರೆ.

ಇದೊಂದು ಪಕ್ಕ ಕಮರ್ಷಿಯಲ್ ಚಿತ್ರದ ಜೊತೆಗೆ ಒಂದು ಪ್ರೇಮಕಥೆ ಸಹ ಇದೆ. ಮಂಜು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು, ನಟ ಬರಹಗಾರ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಧನಪಾಲ್ ಸಿಂಗ್ ರಜಪುಟ್ ಅವರ ಸಂಗೀತ ಇದೆ. ಶರತ್ ಕುಮಾರ್ ಜಿ ಅವರು ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.
ವಿನೋದ್ ಮನೋಹರ್ ಅವರು ಸಂಕಲನಕಾರರು, ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ. ಶೋಬರಾಜ್, ಪವನ್, ಮೋಹನ್ ಜುನೇಜ, ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ.

ಕಮರ್ಷಿಯಲ್ ಅಂಶಗಳನ್ನು ಮಂಜು ಮಸ್ಕಲ್ ಮಟ್ಟಿ ಚನ್ನಾಗಿ ಪ್ಯಾಕ್ ಮಾಡಿದ್ದಾರೆ ಸಹ. ಕುತೂಹಲವನ್ನು ಕೆಲವು ಟ್ವಿಸ್ಟ್ ಇಂದ ಕಟ್ಟಿದ್ದಾರೆ. ಒಂದು ಹಂತಕ್ಕೆ ಬೆಳಸಿದ ಗುರುನಾ ಅಥವಾ ಪ್ರೀತಿನಾ ಎಂಬ ಧ್ವಂದ್ವ ನಾಯಕನಲ್ಲಿ ಮೂಡಿ ಬರುತ್ತದೆ.

ಅಜ್ಜ ಹಾಗೂ ಅಜ್ಜಿ ಜೊತೆ ಬೆಳೆಯುವ ನಾಯಕಿಗು ಒಂದು ರೀತಿಯ ಇಕ್ಕಟಿನ ಪರಿಸ್ಥಿತಿ. ಇವರ ತಂದೆ ಪಾತ್ರ ಮಾಡಿರುವ ರಾಧಾಕೃಷ್ಣ ಪಲ್ಲಕಿ ಖಳರ ಗುಂಪಿನವರು. ನಾಯಕಿ ಪ್ರೀತಿಸುವ ಹುಡುಗ ವಿರೋದ ತಂಡದವನು.
`ಯುಗ ಪುರುಷ' ಹೃದಯಗಳ ಲೋಕದಲ್ಲಿ ಎಂದು ಅಡಿ ಬರಹ ಇಟ್ಟುಕೊಂಡಿದೆ. ಇದೆ ಶುಕ್ರವಾರ ತೆರೆಯ ಮೇಲೆ ರಾರಾಜಿಸಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕರ ಪಾಲಿಗೆ ಮಿನಿಮಮ್ ಗ್ಯಾರಂಟಿ ನಟ ಅನ್ನುವ ಮಾತಿದೆ. ಯಾಕೆಂದರೆ ಅವರ ಸಿನಿಮಾಗಳು, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬ್ಯುಸಿನೆಸ್ ಮಾಡುತ್ತೆ ಅನ್ನೋದು ಗಾಂಧಿನಗರದ ನಿರ್ಮಾಪಕರ ಲೆಕ್ಕಾಚಾರ. ಆದ್ದರಿಂದಲೇ ದರ್ಶನ್ ತಮ್ಮ ಒಂದು ಚಿತ್ರಕ್ಕೆ ೫ ರಿಂದ ೬ ಕೋಟಿಯಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ.

ಸ್ಯಾಂಡಲ್ ವುಡ್ ಸೂಪರ್ ಹಿಟ್ ಜೋಡಿ ರಕ್ಶಿತ್ ಶೆಟ್ಟಿ-ರಶ್ಮಿಕಾ ಈಗ ನಿಜ ಜೀವನದಲ್ಲೂ ಜೊಡಿಯಾಗಲು ಹೊರಟಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಈ ಜೋಡಿ ಮದುವೆಯಾಗಲಿದ್ದಾರೆ ಅನ್ನುವ ಗುಲ್ಲು ಈ ಮುಂಚೆಯೇ ಎಲ್ಲೆಡೆ ಹಬ್ಬಿತ್ತು.

ವಿಧಾನಸೌಧದ ಮುಂದೆ `ಧೈರ್ಯಂ’ ಆಡಿಯೋ ರಿಲೀಸ್ :


     ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಕೆ.ರಾಜು ಅವರು ನಿರ್ಮಿಸುತ್ತಿರುವ `ಧೈರ್ಯಂ` ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ವಿಧಾನಸೌಧದ ಮುಂದೆ ವಿಭಿನ್ನವಾಗಿ ನೆರವೇರಿತು. ದೇಶದ ಆಧಾರ ಸ್ಥಂಭಗಳಂತಿರುವ ಯೋಧ ಗುರುಪ್ರಸಾದ್,ರೈತ ಗೋಪಾಲ ಗೌಡ ಹಾಗೂ ವಿದ್ಯಾರ್ಥಿ ಲಿಖಿತ್‍ರಾಜ್ `ಧೈರ್ಯಂ` ಚಿತ್ರದ ಹಾಡುಗಳ ಸೀಡಿಯನ್ನು ಲೋಕಾರ್ಪಣೆ ಮಾಡಿದ್ದರು. ನಿರ್ಮಾಪಕ ಕೆ.ರಾಜು, ನಿರ್ದೇಶಕ ಶಿವತೇಜಸ್, ನಾಯಕ ಅಜಯ್ ರಾವ್, ನಾಯಕಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಎಮಿಲ್ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
     ಅಜಯ್ ರಾವ್ ಹಾಗೂ ಅದಿತಿ ಪ್ರಭುದೇವ ನಾಯಕ - ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಹಿಂದೆ `ಮಳೆ` ಚಿತ್ರವನ್ನು ನಿರ್ದೇಶಿಸಿದ್ದ ಅನುಭವ ಶಿವತೇಜಸ್ ಅವರಿಗಿದೆ. ಎಮಿಲ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಕಲೈ, ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಸಂಗೀತ, ಶ್ರೀನಿವಾಸಪ್ರಭು, ಎಸ್ಖಾರ್ಟ್ ಶ್ರೀನಿವಾಸ್, ಸಿದ್ದಾರಾಜ್ ಕಲ್ಯಾಣ್‍ಕರ್, ವಿಜಯಲಕ್ಷ್ಮೀ ಉಪಾಧ್ಯಾಯ, ಚಿತ್ಕಲಾ, ಸಿಂಗರ್ ಶ್ರೀನಿವಾಸ್, ಸೋನು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಂ.ಎಂ.ಜಿ. ಫಿಲಂಸ್ ಲಾಂಛನದಲ್ಲಿ ಎಂ.ಮಹಾದೇವೇಗೌಡ ನಿರ್ಮಿಸಿರುವ, ಗ್ರಾಮೀಣ ಸೊಗಡಿನ ನೈಜ ಕಥೆ ಹೊಂದಿರುವ ಹಾಸ್ಯದೊಂದಿಗೆ, ಪ್ರೀತಿ-ಪ್ರೇಮದ ಎಳೆಯ `ಈ ಕಲರವ' ಚಿತ್ರ ಈ ವಾರ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ದಕ್ಷ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಎಂ ಜೋಸೆಫ್ ಸಂಗೀತ, ಕುಮಾರ್ ಜಿ ಛಾಯಾಗ್ರಹಣ, ಧನುಕುಮಾರ್ ನೃತ್ಯ ನಿರ್ದೇಶನ, ಪ್ರಕಾಶ್ ಬಾಬು ಸಾಹಿತ್ಯ, ರವಿಚಂದ್ರನ್ ಸಂಕಲನ, ಸುಬ್ಬು, ಅಶೋಕ್ ಸಾಹಸವಿದೆ. ನವೀನ್ ಕೃಷ್ಣ, ರೋಹಿಣಿ ಭಾರದ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಮೈಸೂರು ಶೋಭಾ, ಪದ್ದು, ಸಂತೋಷ್, ಪ್ರಿಯಾ, ಮಹದೇವೆಗೌಡ ಮುಂತಾದವರ ತಾರಾಬಳಗವಿದೆ.

ದತ್ತ ಫಿಲಂಸ್ ಲಾಂಛನದಲ್ಲಿ ದತ್ತಾತ್ರೇಯ ಬಚ್ಚೇಗೌಡ ಮತ್ತು ಶ್ರೀಮತಿ ಬಾನುದತ್ತ ನಿರ್ಮಾಣದಲ್ಲಿ, ಮುಸ್ಸಂಜೆ ಮಾತು ಖ್ಯಾತಿಯ ಮಹೇಶ್ ನಿರ್ದೇಶನದ "ಜಿಂದಾ" ಚಿತ್ರವು ಜೂನ್ 9ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುವುದು ಖಚಿತವಾಗಿದೆ.

ನೈಜ ಘಟನೆ ಆಧಾರಿತ ಚಿತ್ರವಾಗಿರುವ "ಜಿಂದಾ" ಚಿತ್ರದ ಟ್ರೇಲರ್ ಮತ್ತು ವಿ. ಶ್ರೀಧರ್ ಸಂಗೀತವಿರುವ  ಹಾಡುಗಳು ಜನರಿಗೆ ಮೆಚ್ಚುಗೆಯಾಗಿದ್ದು, ಚಿತ್ರದ ಮೇಲೆ ಬಹಳ ನಿರೀಕ್ಷೆಗಳಿವೆ.

ಮೇಘನ ರಾಜ್, ದೇವರಾಜ್,ಅಸ್ತಿತ್ವ ಯುವರಾಜ್, ಲೋಕೀ, ಅರುಣ್, ಅನಿರುದ್ದ, ದೇವ್ ತಾಳಿಕೋಟೆ, ಕೃಷ್ಣ ಚಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಒಂದು ಸುಂದರ ಲವ್ ಸ್ಟೋರೀ ಕೂಡ ಇದೆ ಎಂದು ತಿಳಿದು ಬಂದಿದೆ.

ಮಹೇಶ್ ಅವರು ಬಹಳ ದಿನಗಳ ನಂತರ ಒಂದೊಳ್ಳೆ ಕಥೆಯೊಂದಿಗೆ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ.

ಇತ್ತೀಚೆಗಷ್ಟೆ 1000 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಭಾಷ್ಯ ಬರೆದಂತ ಬಾಹುಬಲಿ ಚಿತ್ರದಲ್ಲಿ ಖಳನಟ ನಾಗಿ ಬಲ್ಲಾಳ ದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಈಗ ಸ್ಯಾಂಡಲ್‌ವುಡ್ ನ ಬಹುನಿರೀಕ್ಷಿತ ಚಿತ್ರವಾದ 'ಕುರುಕ್ಷೇತ್ರ' ದಲ್ಲಿ ಭೀಮ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದುನಿಯಾ ವಿಜಯ್ ನಟನೆಯ ’ಮಾಸ್ತಿ ಗುಡಿ’ ಬಹುನಿರೀಕ್ಷಿತ ಕಳೆದ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆ ಆಗಿತ್ತು. ಅನೇಕ ಕಾರಣಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಲಭಿಸಿತ್ತು. ಆದ್ರೆ, ಚಿತ್ರದ ಸೆಕೆಂಡ್ ಹಾಫ್ ಗೆ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ’ಮಾಸ್ತಿ ಗುಡಿ’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಚಿತ್ರತಂಡ ಮುಂದಾಗಿದೆ. 

ಇತ್ತೀಚೆಗಷ್ಟೆ ವಿಶ್ವದಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಬಾಹುಬಲಿ ೨ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಕನ್ನಡದಲ್ಲೂ ಡಬ್ಬಿಂಗ್ ಬೇಕೆಂದು ಡಬ್ಬಿಂಗ್ ಪರವಾಗಿ ಮಾತನಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ’ರಾಜಕುಮಾರ’ ಚಿತ್ರ 50 ದಿನಗಳನ್ನು ಪೂರೈಸಿದೆ. ಸುಮಾರು 30ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ೫೦ ದಿನವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯ ಯಾತ್ರೆಯನ್ನು ನಡೆಸಲು ಸಿದ್ಧತೆ ನಡೆಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದ ಬಹುನಿರೀಕ್ಷಿತ ಹಾಗೂ ತಮ್ಮ 50 ನೇ ಚಿತ್ರವಾಗಿರುವ ಕುರುಕ್ಶೇತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಹೌದು ಕಳೆದ ವಾರ ಬಿಡುಗಡೆಯಾಗಿರುವ ಬಹುತಾರಾಗಣದ ಹ್ಯಾಪಿ ನ್ಯೂ ಇಯರ್ ಚಿತ್ರ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಚಿತ್ರ ನೋಡಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ನೀಡುತ್ತಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ಗೆ ಈಗ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗಿಯಾಗುವಂತೆ ಆಹ್ವಾನ ಬಂದಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಬಗ್ಗೆ ಬಹು ದೊಡ್ಡ ಅಪವಾದವಿತ್ತು, ಏನೆಂದರೆ ಕನ್ನಡ ಚಿತ್ರರಂಗದ ಸ್ಟಾರ್ ಗಳು ಮಾತ್ರ ’ಸಾಧಕರು’. ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಸಾಧಕರ ಸೀಟು ಕೇವಲ ’ಬಣ್ಣ ಹಚ್ಚುವವರಿಗೆ’ ಮಾತ್ರ ಸೀಮಿತ ಎನ್ನುವುದು.

ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿಯಾಗಿರುವ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

'ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಚಿತ್ರ ’ಥಗ್ಸ್ ಆಫ್ ಮಾಲ್ಗುಡಿ ಡೇಸ್’ಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಈ ವಿಷಯವನ್ನು ಸ್ವತ: ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಮುಂಗಾರು ಮಳೆ ಚಿತ್ರದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ಬಂದ ಚಿತ್ರವೇ ’ಗಾಳಿಪಟ’. ಈ ಚಿತ್ರವೂ ಶತದಿನ ಪ್ರದರ್ಶನವನ್ನು ಕಂಡಿತ್ತು. ಇದೀಗ ಇದೇ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಗಾಳಿಪಟ ಚಿತ್ರದ ಸೀಕ್ವಲ್ ನಲ್ಲಿ ಭಟ್-ಗಣಿ ಜೋಡಿ ಒಂದಾಗುತ್ತಿದ್ದು ಮತ್ತೊಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದೆ ಗಾಂಧಿನಗರ.

Page 14 of 15

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top