IB anigif

Ayugya Gif

adweb

udgharsha

ನಟ ಜೆಕೆ ನಟನೆಯ "ಮೇ 1" ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಜೆಕೆ ನಾಯಕ ಮಾತ್ರವಲ್ಲ ಚಿತ್ರಕಥೆ ಬರೆದಿದ್ದಾರೆ. ಜತೆಗೆ ಕಾಸ್ಟ್ಯೂಮ್‌ ಡಿಸೈನ್, ಆರ್ಟ್‌ ವರ್ಕ್‌ ಸಹ ಮಾಡಿದ್ದಾರಂತೆ. 

.
ಈ ಸಿನಿಮಾದಲ್ಲಿ ಬರುವ ಜೆಕೆಯವರ ಪಾತ್ರವನ್ನು ಬರೆದಿದ್ದು ಅವರೇ ಅಂತೆ.ಹಾಗಾಗಿ ಇದು ಅವರಿಗೆ ಡ್ರೀಮ್‌ ಪ್ರಾಜೆಕ್ಟ್ ಎನ್ನುತ್ತಾರವರು.
.
‘ನಟನೊಬ್ಬನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹಾಗಾಗಿ ಸಿನಿಮಾ ಬದುಕು ಚಿತ್ರದಲ್ಲಿದೆ. ನಟ ಚಿತ್ರೀಕರಣಕ್ಕೆ ಹೋದಾಗ ಏನಾಗುತ್ತದೆ ಎನ್ನುವುದು ಚಿತ್ರದಲ್ಲಿದೆ. ಸಾಕಷ್ಟು ಮಾಸ್‌ ಅಂಶಗಳು ಈ ಸಿನಿಮಾದಲ್ಲಿದ್ದು ಸಿನಿಮಾದ ಕ್ಲೈಮ್ಯಾಕ್ಸ್‌ ಜನರಿಗೆ ಇಷ್ಟವಾಗುತ್ತದೆ,’ಎನ್ನುತ್ತಾರೆ ಜಯರಾಮ್‌ ಕಾರ್ತಿಕ್‌. ಈ ಸಿನಿಮಾವನ್ನು ಖ್ಯಾತ ಸಂಕಲನಕಾರ ನಾಗೇಂದ್ರ ಅರಸ್‌ ನಿರ್ದೇಶನ ಮಾಡಿದ್ದಾರೆ.
.
#May1st #Cineloka

ಜಗ್ಗೇಶ್‌ ಅವರ ನೂರನೇ ಚಿತ್ರ ಮಠ ಸೂಪರ್‌ ಹಿಟ್‌ ಆಗಿತ್ತು, ಆ ಸಿನಿಮಾ ಮೂಲಕ ಗುರುಪ್ರಸಾದ್‌ ಮತ್ತು ಜಗ್ಗೇಶ್‌ ಇಬ್ಬರಿಗೂ ಒಳ್ಳೆ ಹೆಸರು ಬಂದಿತ್ತು.ಈಗ ಗುರುಪ್ರಸಾದ್‌ ಮತ್ತು ಜಗ್ಗೇಶ್‌ ಮತ್ತೆ ಒಂದಾಗುತ್ತಿದ್ದು, ಹೊಸ ಸಿನಿಮಾದ ಸ್ಕ್ರಿಪ್ಟ್‌ ಕೆಲಸ ನಡೆಯುತ್ತಿದೆಯಂತೆ ಎಂಬ ಸುದ್ದಿ ಈಗ ಗಾಂಧಿನಗರ ಹಾಟ್ ನ್ಯೂಸ್.

.
ಹೌದು ಗುರುಪ್ರಸಾದ್‌ ಮತ್ತು ಜಗ್ಗೇಶ್‌ ಮತ್ತೆ ಒಂದಾಗುತ್ತಿರುವ ಸಿನಿಮಾ ಮಠದ ಮುಂದುವರೆದ ಭಾಗವೋ, ಎದ್ದೇಳು ಮಂಜುನಾಥ ಸಿನಿಮಾದ ಮುಂದುವರೆದ ಭಾಗವೋ ಗೊತ್ತಿಲ್ಲ. ಒಟ್ಟಿನಲ್ಲಿ ಜಗ್ಗಣ್ಣ-ಗುರು ಇಬ್ಬರೂ ಒಂದಾದ್ರೆ ಕಿಕ್‌ ಕೊಡುವ ಸಿನಿಮಾ ಅಂತೂ ಆಗುತ್ತದೆ.

 
 ಸತೀಶ್‌ ನೀನಾಸಂ ಮತ್ತು ರಚಿತಾರಾಮ್‌ ನಟನೆಯ ಅಯೋಗ್ಯ ಸಿನಿಮಾ ಶುಕ್ರವಾರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರು ದಿನಗಳಳೊಗೆ 4.18 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
.
 
ಪಕ್ಕಾ ಮಂಡ್ಯ ಭಾಷೆಯಲ್ಲಿ ತಯಾರಾಗಿದ್ದ ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್‌ ಮಾಡುತ್ತಿದ್ದು, ದಿನೇ ದಿನೇ ಪ್ರದರ್ಶನಗಳು ಹೌಸ್‌ಫುಲ್‌ ಆಗುತ್ತಿವೆ. ಭಾನುವಾರ ಮತ್ತು ಸೋಮವಾರ ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದು, ಅಲ್ಲೆಲ್ಲಾ ಜನ ಜಂಗುಳಿ ಹೆಚ್ಚಾಗಿ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.
 
.
ಮಹೇಶ್‌ಕುಮಾರ್‌ ಚೊಚ್ಚಲ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾಗಲು ನಮ್ಮ ರಾಜಕಾರಣಿಗಳು ಏನೇನು ಮಾಡುತ್ತಾರೆ ಎಂಬ ಅಂಶವಿದೆ. ಬಹಳ ದಿನಗಳ ನಂತರ ನೀನಾಸಂ ಸತೀಶ್‌ ನಟನೆಯ ಸಿನಿಮಾವೊಂದಕ್ಕೆ ಈ ಮಟ್ಟದ ಕ್ರೇಜ್‌ ಕ್ರಿಯೇಟ್‌ ಆಗಿರುವುದರಿಂದ ಸತೀಶ್‌ ಸಹ ಖುಷಿಯಾಗಿದ್ದಾರೆ. 
.
#Ayogya #Cineloka 

ಉಳಿದವರು ಕಂಡಂತೆ ಸಿನಿಮಾದ 'ರಿಚ್ಚಿ' ಕ್ಯಾರೆಕ್ಟರ್‌ ಎಲ್ಲರಿಗೂ ಇಷ್ಟವಾಗಿತ್ತು ಮತ್ತು ಎಲ್ಲೆಡೆ ಸಕ್ಕತ್ ಕ್ರೇಜ಼್ ಕ್ರಿಯೇಟ್ ಮಾಡಿತ್ತು, ಆ ಸಿನಿಮಾ ಕಮರ್ಷಿಯಲ್‌ ಆಗಿ ಸೋತರು ವಿಮರ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಅದೇ ಕ್ಯಾರೆಕ್ಟರ್‌ ಇಟ್ಟುಕೊಂಡು ರಾಹುಲ್‌ ಎನ್ನುವವರು ಸಿನಿಮಾ ಮಾಡುತ್ತಿದ್ದು, ರಕ್ಷಿತ್‌ ಶೆಟ್ಟಿ ಮತ್ತೊಮ್ಮೆ ರಿಚ್ಚಿ ಅವತಾರವೆತ್ತಲಿದ್ದಾರೆ.
.
ರಾಹುಲ್‌ ಈ ಹಿಂದೆ ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್‌ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದಾದ ಮೇಲೆ ರಿಕ್ಕಿ ಮತ್ತು ಕಿರಿಕ್‌ ಪಾರ್ಟಿಯಲ್ಲಿ ಜತೆಗೆ ಇದ್ದರು, ಈಗ ರಕ್ಷಿತ್‌ ಶೆಟ್ಟಿಗೆ ನಿರ್ದೇಶಕರಾಗುತ್ತಿದ್ದಾರೆ
.
"777 ಚಾರ್ಲಿ" ಚಿತ್ರದ ನಂತರ ರಕ್ಷಿತ್ ಅವರು "ರಿಚ್ಚಿ" ಅವತಾರ ತಾಳಲಿದ್ದಾರೆ.

ಇಂದಿನ ಪ್ರಸ್ತುತ ಬದುಕಿಗೆ ಹತ್ತಿರವಾದ ಕಥಾವಸ್ತುವಿರುವ “ಲೈಫ್ ಜೊತೆ ಒಂದ್ ಸೆಲ್ಫಿ” :

—————

ದಿನಕರ್‌ ತೂಗದೀಪ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ “ಲೈಫ್‌ ಜತೆ ಒಂದು ಸೆಲ್ಫಿ ” ಸಿನಿಮಾದಲ್ಲಿ ಟೆಕ್ಕಿಯೊಬ್ಬ ನಿರ್ದೇಶಕನಾಗಬೇಕು ಎಂಬ ಕನಸಿರುವ ಹುಡುಗ,ಮೊತ್ತೊಬ್ಬ ಮಲ್ಟಿ ಮಿಲಿನಿಯರ್‌ , ಸ್ವತಂತ್ರವಾಗಿ ಬದುಕಬೇಕೆಂದಿರುವ ಬೋಲ್ಡ್‌ ಹುಡುಗಿ, ಈ ಮೂವರ ಜರ್ನಿಯೇ ಸಿನಿಮಾದ ಕಥೆಯಾಗಿದೆ.
.
ದಿನಕರ್‌ ಪತ್ನಿ ಬರೆದಿರುವ ಈ ಕಥೆ, ಇಂದಿನ ಪ್ರಸ್ತುತ ಬದುಕಿಗೆ ಹತ್ತಿರವಾಗಿದೆಯಂತೆ. ಕಷ್ಟಗಳು ಬಂದಾಗ ಎದೆಗುಂದದೆ, ಎಲ್ಲವನ್ನು ಪರಿಹರಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂಬುದು ಸಿನಿಮಾದ ತಿರುಳು.
.
ಚಿತ್ರಕ್ಕೆ ಮೊನ್ನೆ ಸೆನ್ಸಾರ್ ಆಗಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ ೨೪ ರಂದು ಬಿಡುಗಡೆಯಾಗುತ್ತಿದೆ.
.

ಪ್ರಜ್ವಲ್‌ ದೇವರಾಜ್‌, ಪ್ರೇಮ್‌, ಹರಿಪ್ರಿಯಾ ಈ ಸಿನಿಮಾದ ಮುಖ್ಯ ಪಾತ್ರಧಾರಿಗಳು. ಸಮೃದ್ಧಿ ಮಂಜುನಾಥ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

ಮಹೇಶ್‌ಕುಮಾರ್‌ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಪಕ್ಕಾ ಮಂಡ್ಯದ ಹುಡುಗಿಯಾಗಿ ನಟಿಸಿದ್ದಾರೆ. ಈ ರೀತಿ ನಟಿಸಲು ಅವರು, ಮಂಡ್ಯ ಭಾಗದ ಹುಡುಗಿಯರ ಸಹಾಯ ಪಡೆದುಕೊಂಡಿದ್ದಾರಂತೆ.
.
‘ನಾನು ಇಷ್ಟು ದಿನ ಬರೀ ಪಟ್ಟಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇ, ಇದೇ ಮೊದಲ ಬಾರಿಗೆ ಮಂಡ್ಯದ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮಂಡ್ಯದ ಭಾಷೆಯ ಸೊಗಡು ನನಗೆ ಆರಂಭದಲ್ಲಿ ಕಷ್ಟವಾಯಿತು. ಆದರೆ ಸತೀಶ್‌ ಮತ್ತು ನಿರ್ದೇಶಕ ಮಹೇಶ್‌ ನನಗೆ ಸೊಗಡನ್ನು ಕಲಿಸುವಲ್ಲಿ ಸಹಾಯ ಮಾಡಿದರು. ಅದರ ಜತೆಗೆ ಸಿನಿಮಾ ಮಂಡ್ಯದ ಸುತ್ತಮುತ್ತ ಶೂಟಿಂಗ್‌ ನಡೆದಿದ್ದು, ಅಲ್ಲಿನ ಕೆಲ ಹುಡುಗಿಯರು ನನಗೆ ಸಿಕ್ಕಾಪಟ್ಟೆ ಸಹಾಯ ಮಾಡಿದರು. ಆ ಭಾಷೆಯನ್ನು ಮಾತನಾಡುವುದು ಹೇಗೆ, ಅವರ ಟಿಪಿಕಲ್‌ ಡ್ರೆಸ್‌ ಸ್ಟೈಲ್‌ ಎಲ್ಲದರಲ್ಲು ಮಂಡ್ಯದ ಹುಡುಗಿಯರು ಹೆಲ್ಪ್‌ ಮಾಡಿದರು,’ಎಂದು ಹೇಳುತ್ತಾರೆ ರಚಿತಾರಾಮ್‌.
.
ಅಯೋಗ್ಯ ಸಿನಿಮಾವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ ಆರ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದಾರೆ. ನೀನಾಸಂ ಸತೀಶ್‌ ಮತ್ತು ರಚಿತಾರ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದಾರೆ. ಚಿತ್ರ ಈ ವಾರ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
.
#Ayogya #Cineloka

ಉಪೇಂದ್ರ ಜತೆ ಕೆಲಸ ಮಾಡುತ್ತಿದ್ದ ಸುನೀಲ್‌ ಭೀಮರಾವ್‌ ಎಂಬುವವರು ಆ್ಯಕ್ಷನ್‌ ಕಟ್‌ ಹೇಳಿರುವ 'ಒಂಥರ ಬಣ್ಣಗಳು' ಸಿನಿಮಾದಲ್ಲಿ ಐದು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಕಥೆ ಹೇಳಲಾಗಿದೆಯಂತೆ.
.
ಸುಮಾರು 51 ದಿನ ಚಿತ್ರೀಕರಣ ಮಾಡಬೇಕಾಗಿದ್ದ ಚಿತ್ರವನ್ನು ನಿರ್ದೇಶಕರು ಪಕ್ಕಾ ಪ್ಲಾನಿಂಗ್‌ ಮಾಡಿಕೊಂಡು ಕೇವಲ 29 ದಿನಗಳಲ್ಲಿ ಮುಗಿಸಿದ್ದಾರಂತೆ.
.
ಈ ಸಿನಿಮಾದಲ್ಲಿ ಕಿರಣ್‌ ಶ್ರೀನಿವಾಸ್, ಹಿತಾ ಚಂದ್ರಶೇಖರ್, ಸೋನುಗೌಡ, ಪ್ರತಾಪ್‌ ನಾರಾಯಣ್‌, ಮತ್ತು ಪ್ರವೀಣ್‌ ಐದು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಲವ್‌ಸ್ಟೋರಿ ಇದೆ, ಜತೆಗೆ ಗೆಳೆತನದ ಅಂಶವೂ ಢಾಳವಾಗಿದೆ. ಟೈಟಲ್‌ ಹೇಳುವಂತೆ ಈ ಸಿನಿಮಾದಲ್ಲಿ ಸಾಷಕ್ಟು ವ್ಯಕ್ತಿತ್ವಗಳ ಪರಿಚಯವಾಗುತ್ತದೆ. ಜರ್ನಿಯಲ್ಲಿ ಸಾಗುವ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಇವೆ, ಅವೆಲ್ಲವೂ ಏನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಸುನೀಲ್‌.
.
ಚಿತ್ರಕ್ಕೆ ಮನೋಹರ್‌ ಜೋಶಿ ಕ್ಯಾಮೆರಾ ಹಿಡಿದರೆ, ಭರತ್‌ ಬಿ.ಜೆ. ಸಂಗೀತ ನೀಡಿದ್ದಾರೆ. ಇದೆ ಆಗಸ್ಟ್ 17 ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
.
#OntharaBannagalu #Cineloka
ಸ್ಯಾಂಡಲ್‌ವುಡ್‌ನಲ್ಲಿ ರಾಜಣ್ಣ ಅಂದ್ರೆ ಡಾ. ರಾಜ್‌ಕುಮಾರ್‌, ರಾಜಣ್ಣನ ಮಕ್ಕಳು ಅಂದ್ರೆ ಅಪ್ಪು, ಶಿವಣ್ಣ, ರಾಘಣ್ಣ, ಆದರೆ ಈಗ ರಾಜಣ್ಣನ ಮಗ ಎಂಬ ಟೈಟಲ್‌ ಇಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕೋಲಾರ ಸೀನು.
.
ಈ ಸಿನಿಮಾಗೂ ಡಾ.ರಾಜ್‌ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಅವರು ಇದೊಂದು ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಚಿತ್ರ ಎನ್ನುತ್ತಾರೆ.
.
ಈ ಸಿನಿಮಾದಲ್ಲಿ ರಾಜಣ್ಣನಾಗಿ ಹಿರಿಯ ನಟ ಚರಣ್‌ರಾಜ್‌ ಕಾಣಿಸಿಕೊಂಡಿದ್ದಾರೆ. ಅವರದ್ದು ಸರಳ ಮತ್ತು ಸದ್ಗುಣ ಸಂಪನ್ನನ ಪಾತ್ರವಂತೆ. ಆದರೆ ಅವರ ಮಗನದ್ದೇ ಇಡೀ ಸಿನಿಮಾದ ತುಂಬಾ ಹಾವಳಿಯಂತೆ.
.
ಜಸ್ಟ್‌ ಮದ್ವೇಲಿ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಹರೀಶ್‌ ರಾಜಣ್ಣನ ಮಗನಾಗಿ ನಟಿಸಿದ್ದಾರೆ. ಈಗ ಟೀಸರ್‌ ಬಿಡುಗಡೆಯಾಗಿದ್ದು, ಅದು ಫುಲ್‌ ಮಾಸ್‌ ಫೀಲ್‌ ಕೋಡತ್ತಿದೆ. ಜಸ್ಟ್‌ ಮದ್ವೇಲಿ ಸಿನಿಮಾದಲ್ಲಿ ಹರೀಶ್‌ ಲವರ್‌ ಬಾಯ್‌ ಆಗಿದ್ದರು, ಈ ಬಾರಿ ಪಕ್ಕಾ ಮಾಸ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷತಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.
ಈ ಚಿತ್ರಕ್ಕೆ ನಾಯಕ ಹರೀಶ್‌ ಬಂಡವಾಳ ಹೂಡಿದ್ದು, ಆಗಸ್ಟ್‌ ಕೊನೆ ವಾರದಲ್ಲಿ ತೆರೆಗೆ ತರಲಿದ್ದಾರಂತೆ.
.
#RajannanaMaga #Cineloka
 
ಸಂಚಾರಿ ವಿಜಯ್ ನಾಯಕನಟರಾಗಿ ನಟಿಸಿರುವ,ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಪಾದರಸ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಜಯಣ್ಣ ಫಿಲಂಸ್ ಹಂಚಿಕೆ ಮಾಡುತ್ತಿದೆ.
.
ಸಂಚಾರಿ ವಿಜಯ್ ಅವರು ಈ ಚಿತ್ರದಲ್ಲಿ ಪ್ಲೇ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ತುಂಬಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದಾರೆ.
.
ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ, ಛಾಯಾಗ್ರಹಣ – ಎಂ.ಬಿ. ಅಳ್ಳಿಕಟ್ಟಿ, ಸಂಗೀತ – ಎ.ಟಿ. ರವೀಶ್, ಸಾಹಿತ್ಯ – ಜಯಂತ್ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ, ಸಂಕಲನ- ಕೆ.ಎಂ.ಪ್ರಕಾಶ್, ಸಹನಿರ್ದೇಶನ–ಕುಬೇರ್ ಕೆ.ಮಂಡ್ಯ, ಕಲೆ - ಬಾಬು ಖಾನ್, ನೃತ್ಯ – ಮನುಮಾಸ್ಟರ್, ನಾಗಿ, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ.
.
ತಾರಾಗಣದಲ್ಲಿ - ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ.
.
#Padarasa #Cineloka

ಶ್ರೀ ಹನುಮಾನ್ ಟಾಕೀಸ್ ಅಡಿಯಲ್ಲಿ ಒಂದು ನೈಜ ಘಟನೆ ಆಧಾರಿತ ಚಿತ್ರ ಪುಟ್ಟರಾಜು... ಲವರ್ಸ್ ಆಫ್ ಶಶಿಕಲಾ ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ. ನಾಗರಾಜು ಎಚ್, ರಾಜು ಬಾಲಕೃಷ್ಣ ಅವರ ಜಂಟಿ ನಿರ್ಮಾಣದ ಈ ಚಿತ್ರದ ನಿರ್ದೇಶಕರು ಸಹದೇವ.

.
ಅಮಿತ್, ಸುಶ್ಮಿತ, ಜಯಶ್ರೀ ಆರಾಧ್ಯ ಮುಖ್ಯ ತಾರಗಣದ ಈ ಚಿತ್ರ ಪ್ರೀತಿಯ ಜೊತೆ ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡಿದೆ. ಪ್ರೇಕ್ಷಕರಿಗೆ ಅದರಲ್ಲೂ ಹಿರಿಯರಿಗೆ ತಮ್ಮ ಶಾಲಾ ದಿವಸಗಳನ್ನು ನೆನಪಿಗೆ ತರುವುದು ಎಂದು ನಿರ್ದೇಶಕ ಸಹದೇವ ತಿಳಿಸುತ್ತಾರೆ.
.
ಜನಪ್ರಿಯ ಸಂಗೀತ ನಿರ್ದೇಶಕ ಗಂಧರ್ವ ಅವರ ಪುತ್ರ ಶ್ರೀರಾಮ್ ಈ ಸಿನಿಮಾ ಇಂದ ಸಂಗೀತ ನಿರ್ದೇಶಕ ಆಗುತ್ತಿದ್ದಾರೆ. ವೆಂಕಿ, ಕರಣ್ ಮಹಾದೇವ್, ರಾಜು ಶಿರಾ, ಮೋಹನ್, ಕಂಬಿ ರಾಜು, ನೀಲ್ ರಾಜ್, ಸತೀಶ್ ರಾಜೇಂದ್ರನ್, ಈಶ್ವರ್ ಗೌಡ ತಂತ್ರಜ್ಞರ ಪಟ್ಟಿಯಲ್ಲಿ ಇದ್ದಾರೆ.
.
#Cineloka #Puttaraju

 
ಲಿಖಿತ್‌ ಶೆಟ್ಟಿ ಅಭಿನಯದ 'ಸಂಕಷ್ಟಕರ ಗಣಪತಿ' ಚಿತ್ರ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈಗ ಈ ಸಿನಿಮಾವನ್ನು ಆಸ್ಪ್ರೇಲಿಯಾ ಮತ್ತು ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
.
ತನ್ನ ಸಬ್ಜೆಕ್ಟ್ನಿಂದ ಗಮನ ಸೆಳೆಯುತ್ತಿರುವ ಈ ಸಂಕಷ್ಟಕರ ಗಣಪತಿ ಚಿತ್ರ ಇದೇ 19ಕ್ಕೆ ಆಸ್ಪ್ರೇಲಿಯಾದ ಸಿಡ್ನಿ, ಮೆಲ್ಬೋರ್ನ್‌ ಮತ್ತು ಯುಎಸ್‌, ಕೆನಾಡದಲ್ಲಿ ಬಿಡುಗೆ ಮಾಡಲಾಗುತ್ತಿದೆ. ಇದರ ಜತೆಗೆ ಕರ್ನಾಟಕದಲ್ಲಿ ಚಿತ್ರಮಂದಿರಗಳ ಸಂಖ್ಯೆಯು ಹೆಚ್ಚಾಗಿದೆ.
.
ಕಾಮಿಡಿ ಮತ್ತು ಸೆನ್ಸಿಬಲ್‌ ಸಬ್ಜೆಕ್ಟ್ ಆಗಿರುವುದರಿಂದ ಗಣಪತಿ ಪರಭಾಷೆಯವರನ್ನು ಸೆಳೆದಿದ್ದು, ತೆಲುಗು ಡಬ್ಬಿಂಗ್‌ ಮತ್ತು ರಿಮೇಕ್‌ ರೈಟ್ಸ್‌ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ತೆಲುಗಿನ ನಿರ್ಮಾಪಕ ವಿಜಯ್‌ ಅದನ್ನು ಕೊಂಡುಕೊಂಡಿದ್ದು, ಸದ್ಯದಲ್ಲೇ ಅವರು ಶೂಟಿಂಗ್‌ ಸಹ ಆರಂಭಿಸುತ್ತಾರಂತೆ.
.
ಅರ್ಜುನ್‌ಕುಮಾರ್‌ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಶೃತಿ ಗೊರಾಡಿಯಾ , ಅಚ್ಯುತ್‌ಕುಮಾರ್‌, ನಾಗಭೂಷಣ್‌, ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದರು.
.
#SankashtaKaraGanapathi #Cineloka Likith Shetty

ತೆಲುಗು,ತಮಿಳು, ಹಿಂದಿ ಹೀಗೆ ಎಲ್ಲ ಇಂಡಸ್ಟ್ರಿಯಲ್ಲೂ ಹೆಸರು ಮಾಡಿರುವ ಅಪ್ಪಟ ಕನ್ನಡತಿ ಲಕ್ಷ್ಮಿ ರೈ ಆರು ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದಿದ್ದಾರೆ.

.

ಹೌದು ಕನ್ನಡದವರೇ ಆದ್ರೂ ಅಲ್ಲೊಂದು ಇಲ್ಲೊಂದು ಪಾತ್ರ ಮಾಡುತ್ತಿದ್ದ ಅವರು 'ಝಾನ್ಸಿ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಲು ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದಿದ್ದಾರೆ.

.

ಉಪೇಂದ್ರ ಅಭಿನಯದ ಕಲ್ಪನಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೇ ಕೊನೆ, ಆಮೇಲೆ ಹಿಂದಿ, ತೆಲುಗು, ತಮಿಳಿನಲ್ಲಿ ಬಿಝಿಯಾಗಿದ್ದರು. ಈ ಹಿಂದೆ ಮರ್ಯಾದಾ ರಾಮಣ್ಣ ಸಿನಿಮಾ ನಿರ್ದೇಶನ ಮಾಡಿದ್ದ ಗುರು ಪ್ರಸಾದ್‌ 'ಝಾನ್ಸಿ' ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

'ಝಾನ್ಸಿ' ಅಂತಾ ಟೈಟಲ್‌ ಇದ್ರೂ ಇದ್ಯಾವುದೋ ಐತಿಹಾಸಿಕ ಸಿನಿಮಾ ಅಲ್ಲ, ಆದ್ರೆ ಪಕ್ಕಾ ಮಾಸ್‌ ಎಂಟರ್ಟೈನರ್‌ ಸಿನಿಮಾ ಅಂತೆ.

ಯಶಸ್ವಿ ನಿರ್ದೇಶಕ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಟೈಟಲ್ಲೇ ಆಕರ್ಷಕವಾಗಿದೆ. ಸಾರಥಿ ನಂತರ ದಿನಕರ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.ಇದೀಗ ಲೈಫ್ ಜೊತೆ ಒಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದವರ ಸಂಖ್ಯೆ ಇಪ್ಪತ್ತೆಂಟು ಸಾವಿರವನ್ನು ಮೀರಿದೆ.

.

ಲೈಫ್ ಜೊತೆ ಒಂದ್ ಸೆಲ್ಫಿ ಟೈಟಲ್ಲಿರುವ ಫ್ರೇಮಿನಲ್ಲಿ ತಮ್ಮದೇ ಸೆಲ್ಫಿ ಫೋಟೋ ಹಾಕಿಕೊಳ್ಳುವ ನವೀನ ತಂತ್ರವನ್ನು ಚಿತ್ರತಂಡ ಫೇಸ್‍ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಗೆ ತಂದಿತ್ತು. ಇದಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳೂ ಕೂಡಾ ಸ್ಪಂದಿಸಿದ್ದಾರೆ. ಜನಸಾಮಾನ್ಯರಂತೂ ಸೆಲ್ಫಿ ಫ್ರೇಮಿನೊಳಗೆ ಫೋಟೋಗಳನ್ನು ಸೆರೆ ಹಿಡಿಯುತ್ತಾ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.
.

ಅಂದಹಾಗೆ ಈ ಸಿನಿಮಾ ಪ್ರೀತಿ ಸ್ನೇಹಗಳ ಸುತ್ತಾ ಹೆಣೆಯಲ್ಪಟ್ಟ ಸೂಕ್ಷ್ಮ ಕಥಾ ಹಂದರವನ್ನು ಹೊಂದಿದೆ. ನಿರ್ದೇಶಕ ದಿನಕರ್ ಅವರ ಮಡದಿ ಮಾನಸಅವರು ಈ ಕಥೆಯನ್ನು ರಚಿಸಿರೋದು ವಿಶೇಷ. ಬದುಕಿನ ಎಲ್ಲಾ ಬಂಧಗಳ ನಡುವೆ ಸ್ನೇಹ ಎಷ್ಟು ಮುಖ್ಯ ಎಂಬುದನ್ನು ಸಾರುವ ಲೈಫ್ ಜೊತೆ ಒಂದ್ ಸೆಲ್ಫಿ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.

ಇದೇ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ತಯಾರಾಗುತ್ತಿರುವ ಲೈಫ್ ಜೊತೆ ಸೆಲ್ಫಿ ಸಿನಿಮಾವನ್ನು ವಿರಾಟ್ ಸಾಯಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮೃದ್ಧಿ ಮಂಜುನಾಥ್ ನಿರ್ಮಿಸಿದ್ದಾರೆ.

ವಿ. ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಚಿಂತನ್ ಎ.ವಿ. ಸಂಭಾಷಣೆ, ಈಶ್ವರಿ ಕುಮಾರ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.
.

ಜಾಗ್ವಾರ್‌ ಸಿನಿಮಾದಲ್ಲಿ ನಿಖಿಲ್‌ಕುಮಾರ್‌ ಜತೆ ನೃತ್ಯ ಮಾಡಿದ್ದ ತಮನ್ನಾ ಈಗ 'ಕೆಜಿಎಫ್‌'ಗೆ ಬಂದಿದ್ದಾರೆ. ಅರ್ಥಾತ್‌, 'ಕೆಜಿಎಫ್‌' ಚಿತ್ರದಲ್ಲಿ ಒಂದು ಸ್ಪೇಷಲ್‌ ಹಾಡಿಗೆ ನೃತ್ಯ ಮಾಡಲು ಬಂದಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್‌' ಸಿನಿಮಾದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂಬ ಹಾಡಿನ ರೀಮಿಕ್ಸ್‌ಗೆ ಸ್ಟೆಪ್‌ ಹಾಕಲಿದ್ದಾರೆ.
.

1970ರಲ್ಲಿ ಬಿಡುಗಡೆಯಾದ ‘ಪರೋಪಕಾರಿ’ ಸಿನಿಮಾದ ಈ ಹಾಡು ಅಂದಿನಿಂದ ಇಂದಿನವರೆಗೂ ಸೂಪರ್‌ ಹಿಟ್‌ ಸಾಂಗ್‌ ಆಗಿದೆ. ತಮನ್ನಾ ಸಿನಿಮಾದಲ್ಲಿ ನೃತ್ಯ ಮಾಡುತ್ತಿರುವ ವಿಷಯವನ್ನು ಚಿತ್ರತಂಡದವರೇ ಸೋಷಿಯಲ್‌ ಮೀಡಿಯಾದಲ್ಲಿ ಕನ್‌ಫರ್ಮ್‌ ಮಾಡಿದ್ದಾರೆ. ಇದಕ್ಕೂ ಮುಂಚೆ ರಾಯ್‌ ಲಕ್ಷ್ಮೇ, ಕಾಜಲ್‌ ಅಗರ್ವಾಲ್‌, ನೊರಾ ಫತೇಹಿ ಹೆಸರುಗಳು ಕೇಳಿ ಬಂದಿದ್ದವು.
.

ಇದೀಗ ತಮನ್ನಾ ಹೆಸರು ಫೈನಲ್‌ ಆಗಿದ್ದು, ಇಂದಿನಿಂದ ಬೆಂಗಳೂರಿನಲ್ಲಿ ಹಾಡಿನ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ.
ಈ ಹಾಡಿಗೆ ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ.

 

19ನೇ ಶತಮಾನದಲ್ಲಿ ಶಿಕ್ಷ ಣ ಗುರುಕುಲಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಸಾವಿತ್ರಿಬಾಯಿಪುಲೆ ತಮ್ಮ ಮನೆಯಲ್ಲಿ ಶಾಲೆ ಆರಂಭಿಸಿ ಶಿಕ್ಷಣ ನೀಡಲು ಆರಂಭಿಸಿದರು, ಈ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ, ಅದರಲ್ಲಿ ಸರಜೂ ಕಾಟ್ಕರ್‌ ಅವರದ್ದು ಒಂದು, ಅದನ್ನೇ ಆಧಾರವಾಗಿಟ್ಟುಕೊಂಡು ವಿಶಾಲ್‌ ರಾಜ್‌ 'ಸಾವಿತ್ರಿಬಾಯಿಪುಲೆ' ಸಿನಿಮಾ ಮಾಡಿದ್ದಾರೆ.
.

ಹೌದು, ಭಾರತದ ಮೊಟ್ಟ ಮೊದಲ ಶಿಕ್ಷಕಿ ಎಂದು ಕರೆಯುವ ಸಾವಿತ್ರಿಬಾಯಿ ಪುಲೆ ಅವರ ಜೀವನ್ನು ಆಧರಿಸಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದ್ದು, ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದೆ.
.

ಈ ಚಿತ್ರದಲ್ಲಿ ಸಾವಿತ್ರಬಾಯಿ ಪುಲೆ ಪಾತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ನಟಿಸಿದ್ದಾರೆ. ಅಲ್ಲದೆ ಸಾವೊತ್ರೊ ಬಾಯಿ ಪತಿಯಾಗಿ ಸುಚೇಂದ್ರಪ್ರಸಾದ್‌ ನಟಿಸಿದ್ದಾರೆ. ಬಸವರಾಜ್‌ ಡಿ ಭೂತಾಳಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.
.
#SavitriBaiPhule #Cineloka

 

ರಾಕಿಂಗ್ ಸ್ಟಾರ್ ಯಶ್ ಮತ್ತು 'ರಾಂಬೋ 2' ನಿರ್ದೇಶಕ ಅನಿಲ್‌ ಕಾಂಬಿನೇಶನ್‌ನ "ಕಿರಾತಕ-2" ಚಿತ್ರದ ಮುಹೂರ್ತ ಆಗಸ್ಟ್‌ 24ರಂದು ನಡೆಯಲಿದೆಯಂತೆ.

.

ಆಗಸ್ಟ್‌ 24ಕ್ಕೆ ವರಮಹಾಲಕ್ಷ್ಮಿ ಹಬ್ಬ ನಡೆಯಲಿದ್ದು, ಅಂದು ಸಿನಿಮಾಗೆ ಪೂಜೆ ಮಾಡಿ 27ರಿಂದ ಮೈಸೂರು ಸುತ್ತಮುತ್ತ ಚಿತ್ರೀಕರಣ ಆರಂಭಿಸಲಿದೆಯಂತೆ ತಂಡ. ಇನ್ನು ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬುದು ಕನ್ಪರ್ಮ್‌ ಆಗಿಲ್ಲ. 'ಕೆಜಿಎಫ್‌' ನಂತರ ಯಶ್‌ ನಟನೆಯ ಸಿನಿಮಾ ಇದಾಗಲಿದ್ದು, ಇಡೀ ಸಿನಿಮಾ ಮಂಡ್ಯ ಭಾಷೆಯಲ್ಲಿರಬಹುದು ಎನ್ನಲಾಗುತ್ತಿದೆ.

.

ಕಿರಾತಕ ಚಿತ್ರದ ಸೀಕ್ವಲ್ ಇದಾಗಿದ್ದು,ನಿರ್ದೇಶಕ ಅನಿಲ್ ಅವರು ನಿನ್ನೆ ದುಬೈ ಗೆ ಲೊಕೇಷನ್ ನೋಡಲು ತೆರಳಿದ್ದಾರೆ. ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 
ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮನಸಿನ ಮರೆಯಲಿ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಭಾ.ಮ ಹರೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜು ಹಾಗೂ ಶಬೀನಾ ಅರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಂ.ಎಸ್.ತ್ಯಾಗರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಶೋರ್ ಯಾದವ್ ಹಾಗೂ ದಿವ್ಯಗೌಡ ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
.
ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಆಸ್ಕರ್ ಕೃಷ್ಣ ಇದು ನನ್ನ ಪಸ್ಟ್ ರೋಮ್ಯಾಂಟಿಕ್ ಲವ್ ಸ್ಟೋರಿ ಆರಂಭದಲ್ಲಿ ನಾನು ಆಸ್ಕರ್ ಎಂಬ ವಿಭಿನ್ನ ಕಥಾ ಹಂದರವುಳ್ಳ ಚಿತ್ರವನ್ನು ಮಾಡಿದ್ದೆ. ನನ್ನ ಪ್ರಯತ್ನವನ್ನು ಎಲ್ಲರೂ ಮೆಚ್ಚಿದರು. ಆದರೆ ಜನ ಥಿಯೇಟರ್‍ಗೆ ಬರಲಿಲ್ಲ. ಆದಾದ ಮೇಲೆ ಮಿಸ್ ಮಲ್ಲಿಗೆ ಹಾಗೂ “ಮೊನಿಕಾ ಈಸ್ ಮಿಸ್ಸಿಂಗ್” ಎಂಬ ಗ್ಲಾಮರಸ್ ಶೈಲಿಯ ಉತ್ತಮ ಚಿತ್ರಗಳನ್ನು ಮಾಡಿದೆ. ಅದಾದ ಮೇಲೆ ಮಾಡಿದ ಮ್ಯೂಸಿಕಲ್ ಲವ್ ಸ್ಟೋರಿ, ಮನಸಿನ ಮರೆಯಲಿ. ಈ ಥರಹದ ಸಿನಿಮಾ ಮಾಡಬೇಕೆಂದು ಮೊದಲಿನಿಂದಲೂ ಇತ್ತು. ಅದಕ್ಕೆ ಸರಿಯಾದ ನಿರ್ಮಾಪಕರು ಸಿಕ್ಕರು, ನಾಯಕ ಕಿಶೋರ್ ಸಿಕ್ಕರು. ಏಕ್‍ದುಜೆಕೇಲಿಯೆ ನನಗೆ ಬಹಳ ಸ್ಫೂರ್ತಿ ಕೊಟ್ಟಂತಹ ಚಿತ್ರ. ಅದರಲ್ಲಿದ್ದ ಹಾಗೆ ಈ ಚಿತ್ರದಲ್ಲೂ ಸಮುದ್ರ ತೀರ, ಮರಳು, ಪ್ರೇಮಿಗಳು ಇವಿಷ್ಟನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಈಗಾಗಲೇ ರೆಡಿಯಾಗಿದೆ. ಮುಂದಿನ ವಾರ ಸೆನ್ಸಾರ್ ಆಗಲಿದೆ. ಆಗಸ್ಟ್‍ನಲ್ಲಿ ಬಿಡುಗಡೆ ಪ್ಲಾನ್ ಇದೆ. ಇಂಥ ಚಿತ್ರಗಳಲ್ಲಿ ಮ್ಯೂಸಿಕ್ ತುಂಬಾ ಪ್ರಮುಕವಾಗಿರುತ್ತದೆ. ಮನಸ್ಸಿಗೆ ನಾಟುವಂತಿರಬೇಕು. ಸಿದ್ದಸೂತ್ರಗಳನ್ನು ಬಿಟ್ಟು ಈ ಸಿನಿಮ ಮಾಡಿದ್ದೇನೆ ಎಂದು ಹೇಳಿದರು.
.
ನಂತರ ನಿರ್ಮಾಪಕರಾದ ಲಿಂಗರಾಜು ಮಾತನಾಡಿ ಎಲ್ಲರ ಲೈಫ್‍ನಲ್ಲಿ ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ ಅಂತಹ ಒಂದು ಚಿತ್ರ ಮಾಡೋಣ ಎಂದು ನಾನು ಕಿಶೋರ ಮಾತನಾಡಿಕೊಂಡಿದ್ದೆವು. ಕೃಷ್ಣ ಅವರಲ್ಲಿ ಇದನ್ನು ಹೇಳಿದಾಗ ಅವರು ಈ ಕಥೆ ಮಾಡಿದ್ದರು. ಸಿನಿಮಾ ತುಂಬ ಚೆನ್ನಾಗಿ ಬಂದಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ತ್ಯಾಗರಾಜ್ ಮಾತನಾಡಿ ಹಾಡುಗಳ ಮೂಲಕವೇ ಸಿನಿಮಾನ ಹೇಗೆ ತೋರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದೆ. ನನ್ನ ಸಂಗೀತದಲ್ಲಿ ಹೊರ ಬರುತ್ತಿರುವ ಐದನೇ ಸಿನಿಮಾ ಇದು. ಈ ಚಿತ್ರದಲ್ಲಿ ಮೊದಲ ಬಾರಿಗೆ ನಾನೂ ಕೂಡ ಒಂದು ಹಾಡನ್ನು ಹಾಡಿದ್ದೇನೆ ಎಂದು ಹೇಳಿದರು.
.
ನಂತರ ಚಿತ್ರದ ನಾಯಕಿ ದಿವ್ಯಗೌಡ ಮಾತನಾಡಿ ನನ್ನ ಸ್ನೇಹಿತರೆಲ್ಲ ಹಾಡುಗಳನ್ನು ಕೇಳಿ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಹಾಡುಗಳು ಅವರಿಗೆ ತುಂಬಾ ಹಿಡಿಸಿಬಿಟ್ಟಿದೆ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೋ ಅದೇ ತರಹದ ಒಬ್ಬ ನಾರ್ಮಲ್ ಹುಡುಗಿ ಪಾತ್ರ ನನ್ನದು. ಈಗಾಗಲೇ ಸೀರಿಯಲ್‍ಗಳಲ್ಲಿ ಅಭಿನಯಿಸಿದ್ದರಿಂದ ಆಕ್ಟಿಂಗ್ ಕಷ್ಟ ಎನಿಸಲಿಲ್ಲ ಎಂದು ತನ್ನ ಅನುಭವಗಳನ್ನು ಹೇಳಿಕೊಂಡರು.
.
ನಾಯಕ ಕಿಶೋರ್ ಮಾತನಾಡುತ್ತ ಒಂದು ಒಳ್ಳೆಯ ಲವ್‍ಸ್ಟೋರಿ ಆಗಬೇಕೆಂದರೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿರಬೇಕು. ಅದರಲ್ಲಿ ನಮ್ಮ ಚಿತ್ರ ಗೆದ್ದಿದೆ. ಎಲ್ಲಾ ತರಹದ ಎಲಿಮೆಂಟ್ಸ್ ಇರುವ ಚಿತ್ರ. ನನ್ನದು ಈ ಚಿತ್ರದಲ್ಲಿ ಒಬ್ಬ ಲೋಕಲ್ ಹುಡುಗನ ಪಾತ್ರ. ಲವ್ ಬಗ್ಗೆ ಆತನಿಗಿದ್ದ ಅಭಿಪ್ರಾಯವೇನು, ಕೊನೆಗೆ ಆತನಿಗೆ ಹೇಗೆ ರಿಯಲೈಸ್ ಆಯ್ತು ಅಂಥ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಹೇಳಿದರು. ಆನಂದ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಹೊರಬಂದಿದ್ದು ಶ್ಯಾಮ್ ಕೂಡ ಹಾಜರಿದ್ದು ಮಾತನಾಡಿದರು. ಪ್ರೇಮಿಗಳ ಮಧ್ಯೆ ಸಣ್ಣ ಇಗೋ ಬಂದಾಗ ಅವರಲ್ಲಿ ಹೇಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಂದು ಈ ಚಿತ್ರದಲ್ಲಿ ನಿರ್ದೇಶಕ ಆಸ್ಕರ್ ಕೃಷ್ಣ ಹೇಳಿದ್ದಾರೆ.
#ManasinaMareyali #Cineloka

 

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ವಿಚಿತ್ರ ಖಾಯಿಲೆಯನ್ನು ಇಟ್ಟುಕೊಂಡು ನವ ನಿರ್ದೇಶಕ ಅರ್ಜುನ್‌ ಸಿನಿಮಾ ಮಾಡಿದ್ದಾರೆ, ಆದರೆ ಈ ಖಾಯಿಲೆಯನ್ನು ಸಿನಿಮಾ ಮಾಡುವುದು ಬಹಳ ಕಷ್ಟವಾಯಿತು ಎನ್ನುತ್ತಾರೆ ಅವರು.

.


‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆ ಇದೆ ಎಂದು ನನಗೆ ತಿಳಿದಾಗ ಬಹಳ ಆಶ್ಚರ್ಯಪಟ್ಟಿದ್ದೆ, ಆಗ ಅದನ್ನು ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿ, ಕಥೆ ಮಾಡಲು ಕುಳಿತೆ, ಆದರೆ ಈ ಖಾಯಿಲೆಯನ್ನು ಸಿನಿಮಾ ರೂಪಕ್ಕೆ ಇಳಿಸುವುದು ಬಹಳ ಕಷ್ಟವಾಯಿತು. ಅದಕ್ಕಾಗಿ ಸಾಕಷ್ಟು ವೆಬ್‌ಸೈಟ್‌ಗಳಲ್ಲಿ ಸಂಶೋಧನೆಗಿಳಿದೆ. ಈ ವಿಷಯದ ಬಗ್ಗೆ ಸಿನಿಮಾ ಏನಾದರೂ ಬಂದಿದೆಯಾ ಎಂದು ತಿಳಿದುಕೊಳ್ಳಲು ಯತ್ನಿಸಿದೆ. ಹಾಲಿವುಡ್‌, ಅರೇಬಿಕ್‌ ಸೇರಿ ಎಲ್ಲ ಭಾಷೆಗಳಲ್ಲಿಯೂ ಹುಡುಕಿದೆ, ಆಗ ನನಗೆ ಇದರ ಬಗ್ಗೆ ತೆಲುಗಿನಲ್ಲಿ ಒಂದು ಶಾರ್ಟ್‌ ಫಿಲಂ ಮತ್ತು ಬಿಬಿಸಿಯಲ್ಲಿ ಒಂದು ಡಾಕ್ಯುಮೆಂಟರಿ ಬಂದಿರುವುದು ತಿಳಿದು, ಅದರ ಸಹಾಯದಿಂದ ಸ್ಕ್ರೀನ್‌ಪ್ಲೇ ಮಾಡಿಕೊಂಡೆ,’ಎನ್ನುತ್ತಾರೆ ಅರ್ಜುನ್‌.

.

ಈ ಚಿತ್ರದಲ್ಲಿ ನಾಯಕನಿಗೆ ಆತನ ಎಡಗೈ ವಿಲನ್‌ ಆಗಿರುತ್ತದೆ. ಹಾಗಾಗಿ ಚಿತ್ರಕ್ಕೆ ‘ಸಂಕಷ್ಟಕರ ಗಣಪತಿ’ ಎಂದು ಹೆಸರಿಡಲಾಗಿದೆಯಂತೆ. ಒಂದು ಗಂಭೀರ ಖಾಯಿಲೆಯನ್ನು ತೆರೆಗೆ ಅಳವಡಿಸುವಾಗ ಅದಕ್ಕೆ ಕಾಮಿಡಿ ಮತ್ತು ರೊಮ್ಯಾಂಟಿಕ್‌ ಅಂಶಗಳನ್ನು ಸೇರಿಸಿದ್ದಾರಂತೆ.

ಲಿಖಿತ್‌ಶೆಟ್ಟಿ ಈ ಸಿನಿಮಾದ ನಾಯಕ, ಶ್ರುತಿ ನಾಯಕಿಯಾಗಿ ನಟಿಸಿದ್ದಾರೆ.

.

#Cineloka

 

ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಹಾಗೂ ಗುಜಲ್ ಪುರುಷೋತ್ತಮ್ ಅವರು ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 42` ನೂತನ ಚಿತ್ರದಲ್ಲಿ ಕ್ರೇಜಿಸ್ಟ್ರಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೈಸೂರು ರಸ್ತೆಯಲ್ಲಿರುವ ಬ್ಲೂ ಆರ್ಕೆಟ್ ಅಪಾರ್ಟ್‍ಮೆಂಟ್‍ನಲ್ಲಿ ಸೋಮವಾರ(ಜುಲೈ 23) ಸರಳಪೂಜಾ ಸಮಾರಂಭದೊಂದಿಗೆ ಆರಂಭವಾಯಿತು. ಚಿತ್ರದ ನಿರ್ಮಾಪಕರಾದ ಗುಜಲ್ ಪುರುಷೋತ್ತಮ್ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.


.
ಈ ಹಿಂದೆ `ಜಿಗರ್ ಥಾಂಡಾ` ಹಾಗೂ `ತ್ರಾಟಕ` ಚಿತ್ರಗಳನ್ನು ನಿರ್ದೇಶನ ಮಾಡಿರುವ ಶಿವಗಣೇಶ್ ಈ ಚಿತ್ರದ ನಿರ್ದೇಶಕರು. ಶಿವಗಣೇಶ್ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಡಾ|||ವಿ.ನಾಗೇಂದ್ರಪ್ರಸಾದ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ನೀಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಚಂದ್ರು, ಗಣೇಶ್ ಅವರ ಸಾಹಸ ನಿರ್ದೇಶನವಿದೆ.


.
ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್ ಅವರು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಉಡುಗೆ, ತೊಡುಗೆ ಹೊಸರೀತಿಯಲ್ಲಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರು, ಕೊಡಗು, ಊಟಿ, ಉತ್ತರ ಭಾರತ, ಜಮ್ಮು, ಕಾಶ್ಮೀರ ಮುಂತಾದ ಕಡೆ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ರವಿಚಂದ್ರನ್, ಅಚ್ಯುತಕುಮಾರ್, ಯಶ್‍ಶೆಟ್ಟಿ, ಚೈತ್ರಾರಾವ್, ನಿಸರ್ಗ, ಚೇತನ್, ಅರ್ಜುನ್ ಗೌಡ, ಗಿರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

.

#Cineloka

ನಟ ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆದ ಕೆಸಿಸಿಯ ಎರಡನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ, ಈ ಬಾರಿ 6 ಮಂದಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
.
ವೀರೇಂದ್ರಸೆಹ್ವಾಗ್‌, ಆಸ್ಪ್ರೇಲಿಯಾದ ಆಯ್ಯಡಂ ಗಿಲ್ಕ್ರಿಸ್ಟ್‌, ಶ್ರೀಲಂಕಾದ ತಿಲಕರತ್ನೆ ದಿಲ್ಯಾನ್‌, ದಕ್ಷಿಣ ಆಫ್ರಿಕಾದ ಲ್ಯಾನ್ಸ್‌ ಕ್ಲೂಸ್ನರ್‌, ಹರ್ಷಲ್‌ ಗಿಬ್ಸ್‌ ಮತ್ತು ಇಂಗ್ಲೇಂಡ್‌ನ್ನ ಓವೈಸಿ ಶಾ ಆಡುತ್ತಿದ್ದಾರೆ. ಇದರ ಸಂಬಂಧ ಶನಿವಾರ ನಡೆದ ಸುದ್ದಿಗೋಷ್ಠಿಯನ್ನು ಸುದೀಪ್‌ ಏರ್ಪಡಿಸಿದ್ದರು.
.
ಕೆಸಿಸಿ ಲೀಗ್‌ಗೆ ಶಿವರಾಜ್‌ಕುಮಾರ್‌ ಪುನೀತ್‌,ಯಶ್‌ ಸೇರಿದಂತೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಉಪೇಂದ್ರ, ಗಣೇಶ್‌ ಸೇರಿಕೊಂಡಿರುವುದು ಖುಷಿ ಹೆಚ್ಚಾಗಿದೆ ಎಂದು ಕಿಚ್ಚ ಸುದೀಪ್‌ ಹೇಳಿದರು.
.
ಸೆಪ್ಟಂರ್ಬ 8ರಂದು ನಾಲ್ಕು ಪಂದ್ಯಗಳು, 9 ರಂದು ಎರಡು ಪಂದ್ಯಗಳು ನಡೆಯಲಿದ್ದು, ಅಂದೇ ಫೈನಲ್‌ ಪಂದ್ಯ ಕೂಡ ನಡೆಯುತ್ತದೆ .
ಎಲ್ಲ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ.
#KCC2 #Cineloka

ನೀನಾಸಂ ಸತೀಶ್‌ ನಟನೆಯ 'ಆಯೋಗ್ಯ' ಚಿತ್ರದ 'ಏನಮ್ಮಿ' ಹಾಡು 10 ದಿನದಲ್ಲಿ, 17 ಲಕ್ಷ ಮಂದಿಯಿಂದ ವೀಕ್ಷಣೆಗೊಳಪಟ್ಟಿದ್ದು, 20 ಲಕ್ಷದತ್ತ ಸಾಗುತ್ತಿದೆ.

.

ತನ್ನ ಮೇಕಿಂಗ್‌ ಮತ್ತು ಸ್ಟಿಲ್‌ಗಳಿಂದಾಗಿ ಸಿಕ್ಕಾಪಟ್ಟೆ ಗಮನ ಸೆಳೆದಿದ್ದ ಅಯೋಗ್ಯ ಸಿನಿಮಾದ ಈ ಹಾಡನ್ನು ಇತ್ತೀಚೆಗೆ ನಟ ಧ್ರುವ ಸರ್ಜಾ ರಿಲೀಸ್‌ ಮಾಡಿದ್ದರು. ಅರ್ಜುನ್ ಜನ್ಯ ಅವರ ಸಂಗೀತಕ್ಕೆ ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್‌ ಸಾಹಿತ್ಯ ರಚಿಸಿದ್ದಾರೆ.

.

ಏನಮ್ಮಿ ಏನಮ್ಮಿ ಡಬ್ಸ್ಮ್ಯಾಶ್ ನಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಕನ್ನಡ ಹಾಡು. ಅನೇಕ ಹುಡುಗಿಯರು ಈ ಹಾಡಿಗೆ ಡಬ್ ಸ್ಮ್ಯಾಶ್ ಮಾಡಿ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡುವ ರೇಂಜ್‌ಗೆ ಹಾಡು ಹಿಟ್ ಆಗಿದೆ.

.

ಈ ಹಾಡು ಸಂಪೂರ್ಣ ಗ್ರಾಮ್ಯ ಭಾಷೆಯಲ್ಲಿದ್ದು, ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿತ್ತು. ಯೂಟ್ಯೂಬ್‌ನಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿಯೂ ಇದೆ. ಈ ಹಾಡಿನಲ್ಲಿ ರಚಿತಾ ಮತ್ತು ಸತೀಶ್‌ ಇಬ್ಬರೂ ಬಹಳ ಸುಂದರವಾಗಿ ಕಾಣುತ್ತಾರೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಈ ಚಿತ್ರವನ್ನು ಟಿ ಆರ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದಾರೆ.

.

ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ

 

ಸಿಂಪಲ್‌ ಸುನಿ ನಿರ್ದೇಶನದ ಹೊಸ ಚಿತ್ರ 'ಬಜಾರ್‌' ಟೀಸರ್ 2 ಬಿಡುಗಡೆ ಮಾಡಿ ಸದ್ದು ಮಾಡಿತ್ತು, ಸುನಿ ಅವರು ಈಗ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದ್ದು, ಬಜಾರ್‌ ಸಿನಿಮಾದ ಆಡಿಯೋವನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಿಡುಗಡೆ ಮಾಡಲಿದ್ದಾರಂತೆ.
.

ಧನ್ವೀರ್‌ ಎಂಬ ಯುವಕನನ್ನು ಈ ಚಿತ್ರದ ಮೂಲಕ ಸುನಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಧನ್ವೀರ್‌ ಲುಕ್ಸ್‌ ಮತ್ತು ಟೀಸರ್ ನಲ್ಲಿ ಕಾಣಿಸಿಕೊಂಡಿರುವ ರೀತಿಗೆ ಗಾಂಧಿನಗರದಲ್ಲಿ ಒಳ್ಳೆ ಟಾಕ್‌ ಶುರುವಾಗಿದೆ. ಈಗ ಹಾಡುಗಳು ಸಹ ಅದೇ ರೀತಿ ಸದ್ದು ಮಾಡುತ್ತವೆ ಎನ್ನುತ್ತಿದೆ ಚಿತ್ರತಂಡ. ದರ್ಶನ್‌ ಯಾವತ್ತು ಹಾಡನ್ನು ಬಿಡುಗಡೆ ಮಾಡುತ್ತಾರೆ ಎಂಬುದು ಇನ್ನೂ ಕನ್ಫರ್ಮ್‌ ಆಗಿಲ್ಲ, ಆದರೆ ಅವರು ಬರುವುದು ಪಕ್ಕಾ ಆಗಿದೆ ಎನ್ನುತ್ತಿವೆ ಮೂಲಗಳು.
.
ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಈ ಸಾಲಿಗೆ 'ಬಜಾರ್‌' ಸಹ ಸೇರಿಕೊಳ್ಳುತ್ತದೆ.

 

#Bazaar #Cineloka


ಮೂಕಹಕ್ಕಿ ನಿರ್ದೇಶನ ಮಾಡಿರುವ ನೀನಾಸಂ ಮಂಜು ಈಗ ಕಾಡು, ನಾಡು ನಡುವಿನ ಕತೆಯನ್ನು ಆರಿಸಿಕೊಂಡು ‘ಕನ್ನೇರಿ’ ಅಡಿಬರಹದಲ್ಲಿ ಕಾಡಿನ ವಸಂತಗಳು ಎಂದು ಹೇಳಿಕೊಂಡಿರುವ ಚಿತ್ರ ಶುರು ಮಾಡಿದ್ದಾರೆ. ಕಾಡಿನ ಮಕ್ಕಳಿಗೆ, ವನವೇ ವಾಸತಾಣ. ಅಲ್ಲೇ ನೆಲೆ ಕಂಡುಕೊಂಡಿರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕøತಿಯನ್ನು ಬೆಳೆಸಿಕೊಂಡವರು. ಆದರೆ ದಿನಕಳೆದಂತೆ ಅವರನ್ನೇ ಹೊರ ಹಾಕುವ ಷಡ್ಯಂತರ ನಡೆಯುತ್ತಿದೆ. ಕಾಡಿನ ಜೊತೆ ನಾಡಿನ ಕಥೆಯೂ ಬರಲಿದೆ. ಉದ್ಯೋಗ ಬಯಸಿ ನಾಡಿಗೆ ಬರುವ ಮುಗ್ದ ಜನರಿಗೆ ಇಲ್ಲಿನ ಪರಿಸರ, ರೀತಿ, ನೀತಿ ಎಲ್ಲವು ಹೊಸತಾಗಿರುತ್ತದೆ. ಮುಂದೆ ಪಟ್ಟಣ್ಣ ಇವರ ಮಧ್ಯೆ ನಡುವೆ ಜರುಗುವ ಘಟನೆಗಳು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಜೇನು ಆಕಾಶದ ಅರಮನೆಯೊ ಕಾದಂಬರಿಗೆ ಸೂತ್ರದಾರರಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಚಿತ್ರಕ್ಕೆ ಸಾಹಿತ್ಯ, ಸಂಭಾಷಣೆ ಮಾತುಗಳನ್ನು ಪೋಣಿಸುತ್ತಿದ್ದಾರೆ.
.

ಸುಧಾರಾಣಿ ಗಣಿತ ತಜ್ಞೆಯಾಗಿ ನಟಿಸುತ್ತಿದ್ದಾರೆ. ತಬಲಾನಾಣಿ ಕಾಡು-ನಾಡಿಗೆ ಸೇತುವೆಯಾಗಿ ವಿಶೇಷ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ. ಇವರ ಮಗಳಾಗಿ ಕುಮಾರಿ ಅರ್ಚನಾಗೆ ನಟನೆ ಹೊಸ ಅನುಭವ. ಹಾಡುಗಳಿಗೆ ಕದ್ರಿಮಣಿಕಾಂತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಸುಜೀತ್‍ನಾಯಕ್, ಛಾಯಗ್ರಹಣ ಗುರುಪ್ರಸಾದ್.ಎಂ.ಜಿ, ಚಿತ್ರಕ್ಕಿದೆ.
.
ಬೆಳಗಾವಿಯ ಉಮೇಶ್.ಎಂ.ಕತ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ನಿರ್ಮಾಣ ಮಾಡಬೇಕೆಂಬ ಬಹುದಿನದ ಕನಸನ್ನು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ. ಆಗಸ್ಟ್ ಮೊದಲವಾರದಿಂದ ಕೊಡಗು, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಬಸವನ ಗುಡಿಯ ದೊಡ್ಡಗಣೇಶ ದೇವಾಲಯದಲ್ಲಿ ಚಿತ್ರದ ಮಹೂರ್ತ ನೆರವೇರಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕ್ಯಾಮೆರಾ ಚಾಲನೆಮಾಡಿ ಚಿತ್ರಕ್ಕೆ ಶುಭ ಕೋರಿದರು.

 

#Kanneri #Cineloka

Zee Kannada, creating the best entertainment programmes, has become a household name for quality entertainment. One of the most popular serials on Zee Kannada is Brahmagantu, which narrates the story of Gundamma, an overweight girl who has a helpful nature, and since the beginning, it has been leading the slot. In a surprising twist, Gundamma is going to be a part of Zee Kannada’s dance reality show Dance Karnataka Dance.
.
 The Dance Karnataka Dance competition will take part within the show, as a continuation of the story. Vijay Raghavendra and Arjuna will be the judges, and the programme is filmed on the DKD stage itself.
.
 The hero of the serial, Lucky, is the reason Gundamma chooses to audition for the competition. Lucky always challenges Gundamma to push her limits, and it has now made her try out a different platform. Adding to this, Gundamma's father always wanted his daughter to achieve success in her life in everything she does. However, after his demise, his aspirations stayed wandered, but Puttatthe ignites this in Gundamma again by saying, “It is not enough if you get love from Lucky, you also deserve respect from him. You have to show him that you can achieve anything.” Inspired by her words, Gundamma enters the Dance Karnataka Dance stage.
.
 Gundamma has already proved her mettle by playing kabaddi; she has also proven that her weight will never be a hindrance for her to achieve something. Whether she wins on this journey and is able to receive due respect from Lucky, or if she fails and is humiliated by it, is something we will have to wait and watch. Her dance journey will continue for over a month and a half months on Brahmagantu.
.
Brahmagantu airs from Monday to Friday at 10 pm on Zee Kannada. Shruthi Naidu, who is a popular name in the small screen industry, is directing and producing this serial.
#Cineloka #ZeeKannada

 

ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಅರುಣ್ ಎನ್.ಡಿ. ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ.
.

ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು. 5 ಜನ ಇಂಜಿನಿಯರಿಂಗ್ ಸ್ನೇಹಿತರು ಬಹಳ ವರ್ಷಗಳ ನಂತರ ಗ್ಯಾಪ್ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸಂಧಿಸುವುದು ಒಂದು ಪೊಲೀಸ್ ಠಾಣೆಯಲ್ಲಿ ಸಂಧಿಸುವ ಸಂದರ್ಭ ಹೇಗೆ ಏಕೆ ಎಂಬುದುದನ್ನು ಹೇಳುವ ಚಿತ್ರವೇ ದಿವಂಗತ ಮಂಜುನಾಥನ ಗೆಳೆಯರು.
.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರು ಆದ ಅರುಣ್ ಇದೊಂದು ಮಲ್ಟಿ ಲೇಯರ್ ಸಿನಿಮಾ 10 ವರ್ಷಗಳು ಕಳೆದ ನಂತರ ಈ ಸಿನಿಮಾ ನೋಡಿದರೂ ಹಳೆಯದು ಅನಿಸುವುದಿಲ್ಲ. ಸುಮಾರು 6-7 ತಿಂಗಳ ಕಾಲ ಕೂತು ಈ ಸ್ಕ್ರಿಪ್ಟ್ ಭರವಸೆಯ ಮೇಲೆ ಇದೇ ಟೈಟಲ್ ಕ್ಯಾಚಿಯಾಗಿದೆ ಅನಿಸಿತು. ಹಾಗಾಗಿ ದಿವಂಗತ ಮಂಜುನಾಥ ಗೆಳೆಯರು ಅಂತ ಹೆಸರಿಟ್ಟಿದ್ದೇವೆ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ. ನಮ್ಮ ಚಿತ್ರದಲ್ಲಿ 90 ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಿದ್ದೇವೆ. ಪುಟ್ಟಣ್ಣ ಸ್ಟುಡಿಯೋ ಭೂಮಿಕ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೊಂದು ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರ. ಸಿನಿಮಾ ಆಗಷ್ಟ ಮೊದಲವಾರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು.
.

ರುದ್ದ ಪ್ರಯಾಗ್ ಹಾಗೂ ಶೀತಲ್ ಪಾಂಡ್ಯ ಪ್ರಮುಕ ಪಾತ್ರದಲ್ಲಿ ನಟಿಸಿದ್ದು ಶಂಕರ್ ಮೂರ್ತಿ ಅವಿನಾಶ್ ಮುದ್ದಪ್ಪ ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೋ ಗೋಪಿ ಶೀಗೆಹಳ್ಳಿ ಸಾಹಿತ್ಯ ಬರೆದಿದ್ದಾರೆ. ರವಿಪೂಜಾರ್ ಈ ಚಿತ್ರದ ಕಲಾ ನಿರ್ದೇಶನ ಹಾಗೂ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
.

ನಾಯಕ ರುದ್ರ ಪ್ರಯಾಗ್ ಐ.ಟಿ.ಕಂಪನಿಯಲ್ಲಿ ವರ್ಕ್ ಮಾಡುತ್ತಿದ್ದವರು ಒಬ್ಬ ಕಲಾವಿದನಾಗಬೇಕೆಂದ ಆಸೆಯಿಂದ ಕೆಲಸ ತೊರೆದು ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
.
#ManjunathanaGeleyaru #Cineloka

 
ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವು ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ‘ಗಂಡುಲಿ’ ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಆರ್.ಟಿ.ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಪಕ್ಕ ಹಳ್ಳಿಯ ಸೊಗಡಿನ ಕಥಾ ಹಂದರ ಹೊಂದಿರುವ ಈ ಚಿತ್ರದ ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸುತ್ತಿದ್ದಾರೆ. ವಿನಯ್ ರತ್ನಸಿದ್ದಿ ಈ ಹಿಂದೆ ಇಂಜಿನಿಯರ್ಸ್ ಹಾಗೂ ಕಿಲಾಡಿಗಳು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಗಂಡುಲಿ ಇವರ ಮೂರನೇ ಚಿತ್ರವಾಗಿದೆ.
ಇದೇ ಮೊದಲ ಬಾರಿಗೆ ಗ್ರಾಮೀಣ ಕಥಾ ಹಂದರವನ್ನು ಕೈಗೆತ್ತಿಕೊಂಡಿರುವ ವಿನಯ್ ಈ ಚಿತ್ರಕ್ಕೆ ತುಮಕೂರು, ಕೆ.ಆರ್.ಪೇಟೆ, ಚಾಮರಾಜನಗರ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ವಿಜಯರ್‍ರತ್ನಸಿದ್ಧಿ ಗಂಡುಲಿ ಎನ್ನುವುದು ನಾಯಕನ ನಿಕ್‍ನೇಮ್ ಗ್ರಾಮೀಣ ಪ್ರದೇಶಗಳಲ್ಲಿ ಧೈರ್ಯವಂತ, ಸಾಹಸಿ ಯುವಕರನ್ನು ಗಂಡುಲಿ (ಗಂಡುಹುಲಿ) ಎಂದು ಕರೆಯುವುದು ರೂಡಿಯಲ್ಲಿದೆ. ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರದ ಕಥೆ ಕೂಡ ಅಂತ ಒಬ್ಬ ಯುವಕನ ಮೇಲೆ ನಡೆಯುತ್ತದೆ. ಒಬ್ಬ ಹುಡುಗ ತನ್ನ ಹಳ್ಳಿಯನ್ನು ಹೇಗೆಲ್ಲ ಏಳಿಗೆ ಮಾಡಬಹುದು ಅಲ್ಲದೇ ಹಳ್ಳಿಯನ್ನು ಹೇಗೆಲ್ಲ ಹಾಳುಮಾಡಬಹುದು ಎಂಬುದನ್ನು ಚಿತ್ರದಲ್ಲಿ ನಾಯಕನ ಪಾತ್ರದ ಮೂಲಕ ತೋರಿಸಿದ್ದೇವೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಡೀ ಚಿತ್ರದ ಕಥೆ ಹಳ್ಳಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
.
ನಂತರ ನಾಯಕಿ ಛಾಯಾದೇವಿ ಮಾತನಾಡಿ ಸಿಟಿಯಿಂದ ಹಳ್ಳಗೆ ಡಾಕ್ಟರ್ ಆಗಿ ಬರುವ ಪಾತ್ರವನ್ನು ನಾನು ಕಾಣಿಸಿಕೊಂಡಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ಈ ಹಿಂದೆ ಎ.ಟಿ.ಎಂ. ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದ ರವಿದೇವ್ ಈ ಚಿತ್ರದ 4 ನಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಆಗಷ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಬೇಕೆಂಬ ಯೋಜನೆಯನ್ನು ಚಿತ್ರದ ನಿರ್ದೇಶಕ ಆದ ವಿನಯ್ ರತ್ನ ಸಿದ್ದಿ ಹಾಕಿಕೊಂಡಿದ್ದಾರೆ.
.
ಧಮೇಂದ್ರ ಅರಸ್ ಸುಧಾ ಬೆಳವಾಡಿ ಗೌತಮ್ ವಿಜಯ್ ಪ್ರಜ್ವಲ್, ಶಿವು ಹಾಗೂ ಸಂತೋಷ್ ಉಳಿದ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ.
#Ganduli #Cineloka

ನಿನ್ನೆ ಬಿಡುಗಡೆಯಾಗಿದ್ದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ 'ದಿ ವಿಲನ್‌' ಚಿತ್ರದ ‘ಐ ಆ್ಯಮ್‌ ವಿಲನ್‌’ ಹಾಡು ಒಂದು ಮಿಲಿಯನ್‌ ವಿವ್ಯ್ಸೂ ಆಗಿದೆ ಮತ್ತು ಯೂಟ್ಯೂಬ್‌ನಲ್ಲಿ ನಂ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾನೆ.

.

ಡಾ.ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌ ನಟನೆಯ ಈ ಚಿತ್ರದ ಎರಡು ಟೀಸರ್‌ಗಳು ಇತ್ತೀಚಗೆ ಯೂ ಟ್ಯೂಬ್‌ನಲ್ಲಿ ದೊಡ್ಡ ಹಂಗಾಮವನ್ನೇ ಮಾಡಿದ್ದವು. ಈಗ ಈ ಲಿರಿಕಲ್‌ ಹಾಡು ದೊಡ್ಡ ಹಿಟ್‌ ಆಗಿದ್ದು, ಇಬ್ಬರು ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಾಡಿನಲ್ಲಿ ಸಿನಿಮಾದ ಮೇಕಿಂಗ್‌ ವಿಡಿಯೋವನ್ನು ಹಾಕಲಾಗಿದ್ದು, ಶಿವರಾಜ್‌ಕುಮಾರ್‌ ಅವರ ಸ್ಟಂಟ್‌ ಮತ್ತು ಸುದೀಪ್‌ ಅವರ ಕೆಲ ಸೀನ್‌ಗಳು ನೋಡುಗರನ್ನು ಸೆಳೆದಿದೆ.
.

ಒಟ್ಟಿನಲ್ಲಿ ವಿಲನ್‌ ಸಿನಿಮಾ ಬಿಡುಗಡೆಗೆ ಮುನ್ನವೇ ಈ ರೀತಿಯ ಕ್ರೇಜ಼್ ಕ್ರಿಯೇಟ್‌ ಆಗಿದೆ, ಸಿನಿಮಾ ಬಿಡುಗಡೆಯಾದ ನಂತರ ಏನೇನಾಗುತ್ತೋ ನೋಡಬೇಕು.

Song Link -->> https://www.youtube.com/watch?v=CMVd2MYd0cc&feature=youtu.be


#Cineloka #TheVillain 

 
ಮೊದಲ ಸಂಚಿಕೆಯಲ್ಲಿ ಬಹದ್ದೂರ್‍ ಎಂಟ್ರಿ ಇದೇ ಭಾನುವಾರದಿಂದ ರಾತ್ರಿ 9ಕ್ಕೆ
.
ಕನ್ನಡಕಿರುತೆರೆಯಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ "ಸದಾ ನಿಮ್ಮೊಂದಿಗೆ" ಇದೇ ಭಾನುವಾರದಿಂದರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.
.
ಪ್ರತಿಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೆರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು,ಆಟೋ ಓಡಿಸುವುದು, ಗೋಲಿ ಸೋಡಾ ಮಾರುವುದು,ಸೊಪ್ಪು ಮಾರುವುದು ಪಾನಿ ಪುರಿ,ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‍ವುಡ್‍ ತಾರೆಯರು.
.
"ಸದಾ ನಿಮ್ಮೊಂದಿಗೆ" ಯ ಮುಂಚುಣಿಯನ್ನು ಪಂಚಭಾಷಾತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ “ಜೂಲಿಲಕ್ಮೀ”ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿ ತಮ್ಮ ಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆ ತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.
.
“ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆ ಆದರೆ ಯಾವುದೋ ಸಂದರ್ಭದಲ್ಲಿ ಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನು ಕೊಡುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‍ವುಡ್‍ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡ ಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನಾರ್ಹ” ಎಂದು ಜುಲಿ ಲಕ್ಷ್ಮೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
.
“ಸದಾ ನಿಮ್ಮೊಂದಿಗೆ” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗ ಧ್ರುವ ಸರ್ಜಾ. ಇವರು ನರೇಂದ್ರಕುಮಾರ್ ಎಂಬ ಒಬ್ಬ ಆಟೋ ಡ್ರೈವರ್‍ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ನರೇಂದ್ರ ಕುಮಾರ್‍ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.
.
ಅಟೋ ಓಡಿಸುವ ಮೊದಲು ಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್‍ ಗರ್ಭಿಣಿ ಅವರನ್ನು ಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರ ದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದ ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‍ಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್‍ ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆ ಆಟೋ ಹತ್ತಿದರು. ಹೀಗೆ ದಿನ ಪೂರ್ತಿಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲಕಡೆ ಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರಕುಮಾರ್‍ ಅವರ ಸ್ವಂತ ಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
.
ಈ ಶೋನಲ್ಲಿ ಪ್ರತಿ ವಾರವೂಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ, ಲವ್ಲಿ ಸ್ಟಾರ್ ಪ್ರೇಮ್, ಪ್ರೀಯಾಂಕ ಉಪೇಂದ್ರ, ಪಾರೂಲ್‍ ಯಾದವ್,ವಿಜಯರಾಘವೇಂದ್ರ, ಸೃಜನ್ ಲೋಕೇಶ್, ಮಾನ್ವಿತಾ ಹರೀಶ್,ಪ್ರೀಯಾಮಣಿ, ರಶ್ಮೀಕಾ ಮಂದಣ್ಣ, ರ್ಧನಂಜಯ್, ಚಿರಂಜೀವಿ ಸರ್ಜಾ, ಹೀಗೆ ಇನ್ನೂ ಅನೇಕರು ಭಾಗವಹಿಸಿದ್ದಾರೆ.
.
ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ"ಲೋಕೇಶ್ ಪ್ರೊಡಕ್ಷನ್" ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಆರ್ಥಿಕ ದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆ ದೈರ್ಯ ತುಂಬುವ ಶಕ್ತಿ ನೀಡುವ, ಕಷ್ಟದ ಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯ ರೀಯಾಲಿಟಿ ಅಲ್ಲ್ಲರೀಯಲ್ ಶೋ "ಸದಾ ನಿಮ್ಮೊಂದಿಗೆ" ಪ್ರತಿ ಭಾನುವಾರ(15.7.2018) 9ಕ್ಕೆ ಪ್ರಸಾರವಾಗಲಿದೆ.
#UdayaTv #Cineloka #SadaNimmondige

ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯ ಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ.

.

ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ಕಿರಿಯರವರೆಗೂ ಮನೆಮಂದಿಯೆಲ್ಲಾ ಕೂತು ನೋಡುವಂತ ಶೋ “ಸವಾಲ್ ಗೆ ಸೈ”.

.
ಹಿರಿತೆರೆ ಮತ್ತು ಕಿರುತೆರೆ, ಎರಡರಲ್ಲೂತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯರಾಂ, ಇದೇ ಮೊದಲ ಬಾರಿಗೆ “ಸವಾಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆ ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‍ ದೇಶಪಾಂಡೆ ಸಹ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯ ಆಶಯ.

1980ರಲ್ಲಿ ಮೈಸೂರಿನ ಕಾಲೇಜಿನಲ್ಲಿ ನಡೆದ ನೈಜ ನಡೆದ ಘಟನೆಯನ್ನು ಇಟ್ಟುಕೊಂಡು ಎಂಎಂಸಿಎಚ್‌ ಚಿತ್ರ ಮಾಡಿದ್ದಾರಂತೆ ನಿರ್ದೇಶಕರು.

.
ದೀಪ್ತಿ, ಪ್ರಥಮಾ, ರಾಗಿಣಿ, ಸಂಯುಕ್ತಾ ಹೊರ್ನಾಡ್‌, ಮೇಘನಾ ರಾಜ್‌, ಯುವರಾಜ್‌ ಮತ್ತು ರಘು ಭಟ್‌ ಕೂಡ ನಟಿಸಿದ್ದಾರೆ. ಬಹುತೇಕ ಎಲ್ಲರೂ ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾದಲ್ಲಿ ನಟಿಸಿದ್ದಾರಂತೆ.
.
ಈ ಸಿನಿಮಾದಲ್ಲಿ ಮೇಘನಾ, ದೀಪ್ತಿ, ಪ್ರಥಮಾ, ಸಂಯುಕ್ತಾ ಎಲ್ಲರೂ ಫೈಟ್‌ ಮಾಡಿದ್ದಾರಂತೆ. ಸಂಯುಕ್ತಾ ಇಲ್ಲಿ ಮಂಗಳೂರು ಮೂಲದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜ್‌ನಲ್ಲಿ ಏನಾದರೂ ಘಟನೆ ಆಯಿತೆಂದರೆ ಅದು ಈ ಹುಡುಗೀರ ಗ್ಯಾಂಗಿನಿಂದಲೇ ಆಗುತ್ತಿರುತ್ತದಂತೆ. ಇಂತಹ ಒಂದು ತಂಡ ಸಮಸ್ಯೆಗೆ ಸಿಲುಕಿ ಅದರಿಂದ ಹೇಗೆ ಹೊರಗೆ ಬರುತ್ತದೆ ಎಂಬುದೇ ಸಿನಿಮಾದ ಕಥೆಯಾಗಿದೆ.
.
ಮುಸ್ಸಂಜೆ ಮಹೇಶ್‌ ಈ ಚಿತ್ರದ ನಿರ್ದೇಶಕರಾಗಿದ್ದು, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡಿದ್ದಾರೆ.
ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

#MMCH #Cineloka

Page 3 of 14

na anigif

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top