Headlines

ಸೈಮಾ ಅವಾರ್ಡ್‌ನ್ನು ನಿರ್ದೇಶಕ ಪನ್ನಗಭರಣಗೆ ಅರ್ಪಿಸಿದ...
  ಇತ್ತೀಚೆಗೆ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ಕಾಮಿಡಿಯನ್ ಪ್ರಶಸ್ತಿ ಪಡೆದ ಸಾಯಿಕುಮಾರ್‌ ತಮ್ಮ ಪ್ರಶಸ್ತಿಯನ್ನು ನಿರ್ದೇಶಕ ಪನ್ನಗಭರಣಗೆ ಅರ್ಪಿಸಿದ್ದಾರೆ. . ಪನ್ನಗಭರಣ ನಿರ್ದೇಶನದ ಹ್ಯಾಪಿ ನ್ಯೂ ಇಯರ್‌ ಸಿನಿಮಾದ ಪಾತ್ರಕ್ಕಾಗಿ ಸಾಯಿಕುಮಾರ್‌ ಅವರಿಗೆ ಬೆಸ್ಟ್‌ ಕಮಡಿಯನ್‌ ಪ್ರಶಸ್ತಿ... More detail
ಜನ ಮೆಚ್ಚಿದ "ಇರುವುದೆಲ್ಲವ ಬಿಟ್ಟು"
  ಹಾಡುಗಳು, ಟ್ರೇಲರ್‌ನಿಂದಾಗಿ ಗಮನ ಸೆಳೆದಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸಿ ಅವರಿಂದ ತಂಡ ಮೆಚ್ಚುಗೆ ಗಳಿಸಿಕೊಂಡಿದೆ. ಹೌದು, ಕಳೆದ ವಾರ ಒಂದಷ್ಟು ಪಬ್ಲಿಕ್‌ಗೆ ಅವರ ಎಲ್ಲ ಕೆಲಸಗಳನ್ನು ಬಿಟ್ಟು, ಸಿನಿಮಾ ನೋಡುವ ಚಾಲೆಂಜ್‌ ನೀಡಲಾಗಿತ್ತು, ಸಾಕಷ್ಟು ಮಂದಿ ಇರುವುದೆಲ್ಲವ ಬಿಟ್ಟು, ಅಂದರೆ ಅವರ... More detail
"ಇರುವುದೆಲ್ಲವ ಬಿಟ್ಟು" ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ...
ಇದೇ 21ಕ್ಕೆ ಬಿಡುಗಡೆಯಾಗುತ್ತಿರುವ "ಇರುವುದೆಲ್ಲವ ಬಿಟ್ಟು" ಸಿನಿಮಾದಲ್ಲಿ ಮೇಘನಾ ರಾಜ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಜತೆಗೆ ತಿಲಕ್‌ ಮತ್ತು ಶ್ರೀ ಮಹದೇವ್‌ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕಾಂತಾ ಕನ್ನಲಿ ನಿರ್ದೇಶಿಸಿದ್ದಾರೆ. . ಈ ಸಿನಿಮಾದಲ್ಲಿ ಮೇಘನಾ ಮೂರು ಶೇಡ್‌ನಲ್ಲಿ... More detail
"ಮರೆಯುವ ಮುನ್ನ" ಒಂದಾಗಲಿರುವ ಗಣೇಶ್ - ಪ್ರೀತಂ ಗುಬ್ಬಿ
ಪ್ರೀತಂ ಗುಬ್ಬಿ ಮತ್ತು ಗೊಲ್ಡನ್‌ ಸ್ಟಾರ್‌ ಗಣೇಶ್‌ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕಳೆದ 6 ತಿಂಗಳುಗಳಿಂದ ಓಡಾಡುತ್ತಲೇ ಇತ್ತು. ಈಗ ಅದು ನಿಜವಾಗುತ್ತಿದೆ. . ಹೌದು, ಗಣೇಶ ಹಬ್ಬದ ದಿನ ಪ್ರೀತಂ ಗುಬ್ಬಿ ಅವರು ಈ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಮೂಲಕ ಚಿತ್ರ ಮಾಡುವ ವಿಷಯವನ್ನು ಅಧಿಕೃತ ಮಾಡಿದ್ದಾರೆ. ಚಿತ್ರಕ್ಕೆ... More detail
ದುನಿಯಾ ರಶ್ಮಿ ನಟಿಸಿರುವ ಥ್ರಿಲ್ಲರ್ ಮೂವಿ "ಕಾರ್ನಿ"...
ಕನ್ನಡ ರಜತ ಪರದೆಯ ಮೇಲೆ ಮತ್ತೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ "ಕಾರ್ನಿ". ದುನಿಯಾ ರಶ್ಮಿ ಪ್ರಧಾನ ಭೂಮಿಕೆಯಲ್ಲಿ ಇರುವ ಈ ಚಿತ್ರ ಗೋಕುಲ ಎಂಟರ್ಟೈನರ್ಸ್ ಹಾಗೂ ವಿನಿ ಸ್ಟುಡಿಯೋ ಅಡಿಯಲ್ಲಿ ತಯಾರಾಗಿದ್ದು ಇದೇ ಶುಕ್ರವಾರ(ಸೆ.14) ಬಿಡುಗಡೆ ಆಗುತ್ತಿದೆ. . `ಕಾರ್ನಿ' ಎಂಬುದು ದುರ್ಗ ದೇವಿಯ ಅಸ್ತ್ರ. ಈ ಆಸ್ತ್ರ ಯಾರ ಸಂಹಾರಕ್ಕಾಗಿ ಎಂಬುದು ಕುತೂಹಲ ಹುಟ್ಟಿಸುವ... More detail
prev
next

sep2018 ad

IB anigif

Ayugya Gif

adweb

udgharsha

ಸಿನಿಮಾ ಅಂದರೆ ಒಂದು ಲವ್‌ಸ್ಟೋರಿ, ಆ ಲವ್ ಸ್ಟೋರಿಯನ್ನು ಉಳಿಸಿಕೊಳ್ಳಲು ನಾಯಕ ಪಡುವ ಕಷ್ಟ. ಇದು ಸಾಮಾನ್ಯ ಕಥಾ ಹಂದರವಾಗಿದೆ. ಈ ವಾರ ಬಿಡುಗಡೆಯಾಗಿರುವ ಹೈಪರ್‌ ಚಿತ್ರದಲ್ಲಿ ಸೇಮ್‌ ಸ್ಟೋರಿಯಿದ್ದರೂ ಅದರ ಜತೆಗೆ ಪರಿಸರ ಕಾಳಜಿ, ಅಪ್ಪ ಮಗಳ ಬಾಂಧವ್ಯವನ್ನು ಹೇಳಲಾಗಿದೆ. ಈ ಕಾರಣಕ್ಕಾಗಿ ಗಣೇಶ್‌ ವಿನಾಯಕ್‌ ನಿರ್ದೇಶನದ ಹೈಪರ್‌ ಚಿತ್ರ ಗಮನ ಸೆಳಯುತ್ತದೆ.
.
ಸೂರ್ಯ (ಅರ್ಜುನ್‌ ಆರ್ಯ). ಕಾಲೇಜು ವಿದ್ಯಾರ್ಥಿ. ಓದುವುದರ ಜತೆಗೆ ಗಿಡಗಳನ್ನು ಬೆಳೆಸುವುದು ಮತ್ತು ತನ್ನ ಸುತ್ತ ಮುತ್ತ ಇರುವವರಿಗೂ ಗಿಡ ಮರಗಳ ಪ್ರಾಮುಖ್ಯತೆಯನ್ನು ಹೇಳಿ ಅವರು ಬೆಳೆಸುವಂತೆ ಮಾಡುವುದು ಅವನ ಕೆಲಸ. ನಾಯಕಿ ಸ್ವಪ್ನಾ [ ಶೀಲಾ] ಇದನ್ನು ನೋಡಿ ಸೂರ್ಯನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆದರೆ ಯಾವುದೋ ಕಾರಣಕ್ಕೆ ಇಬ್ಬರೂ ದೂರವಾಗುತ್ತಾರೆ. ಈ ಪ್ರೇಮಿಗಳು ಮತ್ತೆ ಒಂದಾಗುತ್ತಾರಾ, ನಾಯಕನ ಪರಿಸರ ಪ್ರೇಮ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಿನಿಮಾವನ್ನೇ ನೋಡಬೇಕು.
.
ತನ್ನ ಪ್ರೇಮವನ್ನು ಪಡೆಯುತ್ತಾನಾ ಎಂದು ಪ್ರೇಕ್ಷಕ ಯೋಚನೆ ಮಾಡುತ್ತಿರುವ ಹೊತ್ತಿನಲ್ಲಿ, ಸೂರ್ಯನ ಮಾವನ ಸಂಸಾರದಲ್ಲಿ ಕೆಲ ಘಟನೆಗಳು, ಒಂದಷ್ಟು ಜನ ರೌಡಿಗಳು, ತನ್ನ ಹುಡುಗಿಗು ಆಕೆಯ ತಂದೆಯ ನಡುವೆ ಬಾಂಧವ್ಯ ಸರಿ ಇಲ್ಲ ಎಂಬ ವಿಷಯ ಹೀಗೆ ಚಿತ್ರಕಥೆಯಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ಗಳು ತೆಗೆದುಕೊಳ್ಳುತ್ತದೆ.
.
ಈ ಎಲ್ಲ ಟ್ವಿಸ್ಟ್‌ಗಳ ನಡುವೆಯೂ ನಿರ್ದೇಶಕರು ಪ್ರೇಕ್ಷಕರಿಗೆ ಒಂದು ಸಂದೇಶ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಥೆಯ ವಿಚಾರದಲ್ಲಿ ನಿರ್ದೇಶಕರು ಗೆದ್ದಿದ್ದಾರೆ, ಆದರೆ ಅದನ್ನು ಸಿನಿಮಾಗೆ ಇಳಿಸುವಾಗ ಅಲ್ಲಲ್ಲಿಸಣ್ಣ ಪುಟ್ಟ ಲೋಪಗಳು ಕಾಣುತ್ತವೆ. ಸುಖಾ ಸುಮ್ಮನೆ ಆಗುವ ಫೈಟ್‌ಗಳು . ಅಬ್ಬರದ ಮಾತುಗಳು ಕಡಿಮೆ ಆಗಬೇಕಿತ್ತು.
.
ನಾಯಕ ಅರ್ಜುನ್‌ ಆರ್ಯ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಚೆನ್ನಾಗಿ ನಟಿಸಿದ್ದಾರೆ. ಶೀಲಾ ನಟನೆ ಪಾತ್ರಕ್ಕೆ ತಕ್ಕಂತೆ ಇದೆ. ಡಿ.ಇಮಾನ್‌ ಕಂಪೋಸಿಶನ್ ನಲ್ಲಿ ಬಂದಿರುವ ‘ಸ್ವಪ್ನ ಸುಂದರಿ’ ಹಾಡು ಇಷ್ಟವಾಗುತ್ತದೆ. ಶಕ್ತಿವೇಲು ಅವರ ಕ್ಯಾಮೆರಾ ಕೆಲಸವನ್ನು ಮೆಚ್ಚಿಕೊಳ್ಳಬಹದು ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮತ್ತು ವೀಣಾ ಸುಂದರ್‌ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
.
ರೇಟಿಂಗ್ - 2.75/5
.
#Hyper #Cineloka

LJOS nigif

May 1st

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top