Headlines

"ಬೆಲ್‌ ಬಾಟಮ್‌" ಚಿತ್ರದಲ್ಲಿ ದರೋಡೆಯೇ ಪ್ರಮುಖ ಅಂಶ
ರಿಷಬ್‌ ಶೆಟ್ಟಿ ನಟನೆಯ ಬೆಲ್‌ಬಾಟಮ್‌ ಚಿತ್ರಕ್ಕೆ ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ದರೋಡೆಯೇ ಪ್ರೇರಣೆಯಂತೆ. . ಇದೇ ವಾರ ಅಂದರೆ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.... More detail
'ಚಂಬಲ್' ಚಿತ್ರದಲ್ಲಿದ್ಯಾ ಡಿಕೆ ರವಿ ಕಥೆ??
  ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ನಟ ಸತೀಶ್‌ ಅವರ ಚಂಬಲ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದನ್ನು ನೋಡಿದರೆ ಇದು ಐಎಎಸ್‌ ಅಧಿಕಾರಿ ಡಿ ಕೆ ರವಿ ಕಥೆ ಇದ್ದ ಹಾಗಿದೆ. . ಹೌದು ಚಂಬಲ್‌ ಸಿನಿಮಾದ ಟ್ರೇಲರ್ ನೋಡಿದ ತಕ್ಷಣ ಸಾಮಾನ್ಯರಿಗೆ ಬರುವ ಅಭಿಪ್ರಾಯ ಇದಾಗಿದೆ. ಈ ಸಿನಿಮಾವನ್ನು... More detail
"ಉದ್ಘರ್ಷ" ಚಿತ್ರದ ಟ್ರೈಲರ್ಗೆ 'ಕಿಚ್ಚ'ನ ಧ್ವನಿ
ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. . ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ 'ಉದ್ಘರ್ಷ' ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್... More detail
ಫ್ಲಮಿಂಗೊ ಅವಾರ್ಡ್ಸ್ 2018
ಸಿನಿಮಾ ಪ್ರಿಯರಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್‌ ಸೋಹ ಸಾರಥ್ಯದಲ್ಲಿ 2013ರಲ್ಲಿ ಪ್ರಾರಂಭ ಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು... More detail
'ದಂಡುಪಾಳ್ಯಂ 4' ಚಿತ್ರವನ್ನು ತಿರಸ್ಕರಿಸಿದ ಸೆನ್ಸಾರ್‌...
  ಸುಮನ್‌ ರಂಗನಾಥ್‌ ನಟಿಸಿರುವ ದಂಡುಪಾಳ್ಯಂ-4 ಚಿತ್ರವನ್ನು ಸೆನ್ಸಾರ್‌ ಮಂಡಳಿ ರಿಜೆಕ್ಟ್‌ ಮಾಡಿದೆ. ಆದರೆ ಯಾವುದೇ ಕಾರಣ ನೀಡದೆ ಸಿನಿಮಾವನ್ನು ತಿರಸ್ಕರಿಸಿರುವ ಸೆನ್ಸಾರ್‌  ಮಂಡಳಿ ವಿರುದ್ಧ ನಿರ್ಮಾಪಕ ವೆಂಕಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಸೆನ್ಸಾರ್‌ಗಾಗಿ... More detail
prev
next

Jan 21

nata

ttm

adweb

udgharsha

ಸಿನಿಮಾ ಅಂದರೆ ಒಂದು ಲವ್‌ಸ್ಟೋರಿ, ಆ ಲವ್ ಸ್ಟೋರಿಯನ್ನು ಉಳಿಸಿಕೊಳ್ಳಲು ನಾಯಕ ಪಡುವ ಕಷ್ಟ. ಇದು ಸಾಮಾನ್ಯ ಕಥಾ ಹಂದರವಾಗಿದೆ. ಈ ವಾರ ಬಿಡುಗಡೆಯಾಗಿರುವ ಹೈಪರ್‌ ಚಿತ್ರದಲ್ಲಿ ಸೇಮ್‌ ಸ್ಟೋರಿಯಿದ್ದರೂ ಅದರ ಜತೆಗೆ ಪರಿಸರ ಕಾಳಜಿ, ಅಪ್ಪ ಮಗಳ ಬಾಂಧವ್ಯವನ್ನು ಹೇಳಲಾಗಿದೆ. ಈ ಕಾರಣಕ್ಕಾಗಿ ಗಣೇಶ್‌ ವಿನಾಯಕ್‌ ನಿರ್ದೇಶನದ ಹೈಪರ್‌ ಚಿತ್ರ ಗಮನ ಸೆಳಯುತ್ತದೆ.
.
ಸೂರ್ಯ (ಅರ್ಜುನ್‌ ಆರ್ಯ). ಕಾಲೇಜು ವಿದ್ಯಾರ್ಥಿ. ಓದುವುದರ ಜತೆಗೆ ಗಿಡಗಳನ್ನು ಬೆಳೆಸುವುದು ಮತ್ತು ತನ್ನ ಸುತ್ತ ಮುತ್ತ ಇರುವವರಿಗೂ ಗಿಡ ಮರಗಳ ಪ್ರಾಮುಖ್ಯತೆಯನ್ನು ಹೇಳಿ ಅವರು ಬೆಳೆಸುವಂತೆ ಮಾಡುವುದು ಅವನ ಕೆಲಸ. ನಾಯಕಿ ಸ್ವಪ್ನಾ [ ಶೀಲಾ] ಇದನ್ನು ನೋಡಿ ಸೂರ್ಯನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆದರೆ ಯಾವುದೋ ಕಾರಣಕ್ಕೆ ಇಬ್ಬರೂ ದೂರವಾಗುತ್ತಾರೆ. ಈ ಪ್ರೇಮಿಗಳು ಮತ್ತೆ ಒಂದಾಗುತ್ತಾರಾ, ನಾಯಕನ ಪರಿಸರ ಪ್ರೇಮ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಿನಿಮಾವನ್ನೇ ನೋಡಬೇಕು.
.
ತನ್ನ ಪ್ರೇಮವನ್ನು ಪಡೆಯುತ್ತಾನಾ ಎಂದು ಪ್ರೇಕ್ಷಕ ಯೋಚನೆ ಮಾಡುತ್ತಿರುವ ಹೊತ್ತಿನಲ್ಲಿ, ಸೂರ್ಯನ ಮಾವನ ಸಂಸಾರದಲ್ಲಿ ಕೆಲ ಘಟನೆಗಳು, ಒಂದಷ್ಟು ಜನ ರೌಡಿಗಳು, ತನ್ನ ಹುಡುಗಿಗು ಆಕೆಯ ತಂದೆಯ ನಡುವೆ ಬಾಂಧವ್ಯ ಸರಿ ಇಲ್ಲ ಎಂಬ ವಿಷಯ ಹೀಗೆ ಚಿತ್ರಕಥೆಯಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ಗಳು ತೆಗೆದುಕೊಳ್ಳುತ್ತದೆ.
.
ಈ ಎಲ್ಲ ಟ್ವಿಸ್ಟ್‌ಗಳ ನಡುವೆಯೂ ನಿರ್ದೇಶಕರು ಪ್ರೇಕ್ಷಕರಿಗೆ ಒಂದು ಸಂದೇಶ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಥೆಯ ವಿಚಾರದಲ್ಲಿ ನಿರ್ದೇಶಕರು ಗೆದ್ದಿದ್ದಾರೆ, ಆದರೆ ಅದನ್ನು ಸಿನಿಮಾಗೆ ಇಳಿಸುವಾಗ ಅಲ್ಲಲ್ಲಿಸಣ್ಣ ಪುಟ್ಟ ಲೋಪಗಳು ಕಾಣುತ್ತವೆ. ಸುಖಾ ಸುಮ್ಮನೆ ಆಗುವ ಫೈಟ್‌ಗಳು . ಅಬ್ಬರದ ಮಾತುಗಳು ಕಡಿಮೆ ಆಗಬೇಕಿತ್ತು.
.
ನಾಯಕ ಅರ್ಜುನ್‌ ಆರ್ಯ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಚೆನ್ನಾಗಿ ನಟಿಸಿದ್ದಾರೆ. ಶೀಲಾ ನಟನೆ ಪಾತ್ರಕ್ಕೆ ತಕ್ಕಂತೆ ಇದೆ. ಡಿ.ಇಮಾನ್‌ ಕಂಪೋಸಿಶನ್ ನಲ್ಲಿ ಬಂದಿರುವ ‘ಸ್ವಪ್ನ ಸುಂದರಿ’ ಹಾಡು ಇಷ್ಟವಾಗುತ್ತದೆ. ಶಕ್ತಿವೇಲು ಅವರ ಕ್ಯಾಮೆರಾ ಕೆಲಸವನ್ನು ಮೆಚ್ಚಿಕೊಳ್ಳಬಹದು ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮತ್ತು ವೀಣಾ ಸುಂದರ್‌ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
.
ರೇಟಿಂಗ್ - 2.75/5
.
#Hyper #Cineloka
 
ಅರ್ಜುನ್ ಆರ್ಯ ನಾಯಕ ನಟರಾಗಿ ನಟಿಸಿರುವ, ಇತ್ತೀಚೆಗೆ ಟ್ರೇಲರ್‌ ಮತ್ತು ಹಾಡಿನಿಂದ ಸದ್ದು ಮಾಡಿದ್ದ "ಹೈಪರ್‌" ಸಿನಿಮಾ ಇದೇ 29ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ಎಂ ಬಿಗ್‌ ಪಿಕ್ಚರ್ಸ್‌ ಬ್ಯಾನರ್‌ ನಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಗಣೇಶ್‌ ವಿನಾಯಕ್‌ ನಿರ್ದೇಶನ ಮಾಡಿದ್ದಾರೆ.
.
ಈ ಹಿಂದೆ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಗಣೇಶ್‌ ಅವರಿಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ. ಸಂಬಂಧಗಳ ಮಹತ್ವವನ್ನು ತಿಳಿಸುವ ಕಥೆ ಇದರಲ್ಲಿದ್ದು, ಹಾಡುಗಳ ಚಿತ್ರೀಕರಣವನ್ನು ಜಮ್ಮು-ಕಾಶ್ಮೀರ, ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮಾಡಲಾಗಿದೆ.
.
ಈ ಚಿತ್ರಕ್ಕೆ ಡಿ ಇಮಾನ್‌ ಹಾಗೂ ಎಲ್ವಿನ್‌ ಸಂಗೀತ ನೀಡಿದ್ದಾರೆ. ಶಕ್ತಿವೇಲ್‌ ಅವರ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ಅರ್ಜುನ್‌ ಆರ್ಯ, ಶೀಲಾ, ರಂಗಾಯಣ ರಘು, ಶೋಭರಾಜ್‌, ಬುಲೆಟ್‌ ಪ್ರಕಾಶ್‌, ಅಚ್ಯುತಕುಮಾರ್‌, ಶ್ರೀನಿವಾಸಪ್ರಭು ಮತ್ತಿತರರು ನಿಟಸಿದ್ದಾರೆ.
.
#Hyper #Cineloka
 
ಎಂ.ಬಿಗ್‌ ಪಿಕ್ಚರ್ಸ್‌ ಲಾಂಛನದಲ್ಲಿ ತಯಾರಾಗಿರುವ 'ಹೈಪರ್‌' ಸಿನಿಮಾದ ಟ್ರೇಲರ್‌ ಈಗ ಹಿಟ್‌ ಆಗಿದ್ದು, 22 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಜಮ್ಮು, ಕಾಶ್ಮೀರ, ಮಡಿಕೇರಿ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಅರ್ಜುನ್‌ ಆರ್ಯ ನಾಯಕರಾಗಿದ್ದಾರೆ.
ನಾಯಕ ಅರ್ಜುನ್‌ ಆರ್ಯ ಬರೆದಿರುವ ಈ ಕಥೆಗೆ ಗಣೇಶ್‌ ವಿನಾಯಕ್‌ ಎಂಬುವವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
ಕಾಲೇಜ್‌ ಲವ್‌ ಸ್ಟೊರಿ ಹಾಗೂ ಅಪ್ಪ- ಮಗಳ ಭಾಂಧವ್ಯದ ಕಥಾ ಹಂದರ ಈ ಚಿತ್ರದಲ್ಲಿದ್ದು, ಐದು ಹಾಡುಗಳನ್ನು ಹೊಂದಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಡಿ ಇಮಾನ್‌ ಈ ಚಿತ್ರಕ್ಕೆ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಎ.ಪಿ.ಅರ್ಜುನ್‌, ಬಹದ್ದೂರ್‌ ಚೇತನ್‌, ದಿಲ್‌ವಾಲ ಅನಿಲ್‌ ಹಾಗೂ ಗೌಸ್‌ಫಿರ್‌ ಬರೆದಿದ್ದಾರೆ.
 
ಅರ್ಜುನ್‌ ಆರ್ಯ, ಶೀಲ, ರಂಗಾಯಣ ರಘು, ಶೊಭರಾಜ್‌, ಬುಲೆಚ್‌ ಪ್ರಕಾಶ್‌, ಅಚ್ಯುತಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಟ್ರೇಲರ್ ಲಿಂಕ್ : https://www.youtube.com/watch?v=TCLX6LPSCSs

kismat

aaadi nigif

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top