Headlines

ಕಾಡು ನಾಡಿನ ಮಿಶ್ರಣ ‘ಕನ್ನೇರಿ’
ಮೂಕಹಕ್ಕಿ ನಿರ್ದೇಶನ ಮಾಡಿರುವ ನೀನಾಸಂ ಮಂಜು ಈಗ ಕಾಡು, ನಾಡು ನಡುವಿನ ಕತೆಯನ್ನು ಆರಿಸಿಕೊಂಡು ‘ಕನ್ನೇರಿ’ ಅಡಿಬರಹದಲ್ಲಿ ಕಾಡಿನ ವಸಂತಗಳು ಎಂದು ಹೇಳಿಕೊಂಡಿರುವ ಚಿತ್ರ ಶುರು ಮಾಡಿದ್ದಾರೆ. ಕಾಡಿನ ಮಕ್ಕಳಿಗೆ, ವನವೇ ವಾಸತಾಣ. ಅಲ್ಲೇ ನೆಲೆ ಕಂಡುಕೊಂಡಿರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕøತಿಯನ್ನು... More detail
Brahmagantu’s #Gundamma to emerge on "Dance...
Zee Kannada, creating the best entertainment programmes, has become a household name for quality entertainment. One of the most popular serials on Zee Kannada is Brahmagantu, which narrates the story of Gundamma, an overweight girl who has a helpful nature, and since the beginning, it has been... More detail
ಬಿಡುಗಡೆಯಾಯ್ತು "ದಿ|| ಮಂಜುನಾಥನ ಗೆಳೆಯರು" ಟ್ರೈಲರ್
  ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಅರುಣ್ ಎನ್.ಡಿ. ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ.. ಈ ಚಿತ್ರದ... More detail
ಹಳ್ಳಿಯ ಉದ್ದಾರಕ ಈ 'ಗಂಡುಲಿ' :
  ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವು ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ‘ಗಂಡುಲಿ’ ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಆರ್.ಟಿ.ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಪಕ್ಕ... More detail
ಒಂದು ಮಿಲಿಯನ್‌ ದಾಟಿದ 'ಐ ಆ್ಯಮ್‌ ವಿಲನ್‌'...
ನಿನ್ನೆ ಬಿಡುಗಡೆಯಾಗಿದ್ದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ 'ದಿ ವಿಲನ್‌' ಚಿತ್ರದ ‘ಐ ಆ್ಯಮ್‌ ವಿಲನ್‌’ ಹಾಡು ಒಂದು ಮಿಲಿಯನ್‌ ವಿವ್ಯ್ಸೂ ಆಗಿದೆ ಮತ್ತು ಯೂಟ್ಯೂಬ್‌ನಲ್ಲಿ ನಂ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾನೆ. . ಡಾ.ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌... More detail
prev
next

Ad July 15

DKD Gif

6ne maili release gif

adweb

Raambo 2 gIF

 

ಪರಸಂಗ ಎಂದಾಕ್ಷಣ ನಮಗೆ ಲೊಕೇಶ್‌ ಅಭಿನಯದ ಪರಸಂಗದ ಗೆಂಡೆತಿಮ್ಮ ಎಂಬ ಸಿನಿಮಾ ಜ್ಞಾಪಕ ಬರುತ್ತದೆ. ಆ ಸಿನಿಮಾಗೂ ಈ ಸಿನಿಮಾಗೂ ಸಾಮ್ಯತೆಳಿಲ್ಲವಾದರೂ, ಸಿನಿಮಾದ ಎಳೆ ಅದೆ ಎಂಬ ಭಾವನೆ ಮೂಡುತ್ತದೆ.
.

ಮುಗ್ಧ ತಿಮ್ಮ ತನ್ನ ಹೆಂಡತಿ ಜತೆ ಹಳ್ಳಿಯಲ್ಲಿ ಜೀವನ ಮಾಡುತ್ತಿರುತ್ತಾನೆ, ತಿಮ್ಮ ಅಮ್ಮಾವ್ರ ಗಂಡ, ತಿಮ್ಮನ ಪತ್ನಿಯದ್ದು ಅಲ್ಲಿ ಇಲ್ಲಿ ಹೋಗುವ ಮನಸ್ಸು. ಊರಿನ ಜನ ಆಕೆಯ ಬಗ್ಗೆ ಸಾಕಷ್ಟು ಮಾತನಾಡುತ್ತಿರುತ್ತಾರೆ. ಯಾರು ಏನೇ ಅಂದರೂ ನನ್ನ ಪತ್ನಿ ನನಗೆ ಸರ್ವಸ್ವ, ಅವಳು ಬಹಳ ಒಳ್ಳೆಯವಳು ಯಾರು ಆಕೆ ಬಗ್ಗೆ ಮಾತನಾಡಬಾರದು ಎಂಬುದು ತಿಮ್ಮನ ಅಭಿಪ್ರಾಯ. ಇಂತಿಪ್ಪ ತಿಮ್ಮನ ಪತ್ನಿ ಪರರ ಸಂಗ ಮಾಡಿದಾಗ ಒಂದಷ್ಟು ಘಟನೆಗಳು ನಡೆಯುತ್ತವೆ, ಆ ಘಟನೆಗಳಿಂದ ತಿಮ್ಮನ ಬದುಕಲ್ಲಿ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳೇ ಸಿನಿಮಾದ ಕಥೆಯಾಗಿದೆ. 
.
ಪರಸಂಗ ಸಿನಿಮಾದಲ್ಲಿ ಒಳ್ಳೆ ಕಥೆ, ಕಾಮಿಡಿ, ಭಾವುಕತೆ, ಮನರಂಜನೆ ಹೀಗೆ ಎಲ್ಲವೂ ಇದೆ. ಇದು ನೈಜ ಘಟನೆ ಎಂದು ನಿರ್ದೇಶಕರು ಈ ಹಿಂದೆಯೇ ಹೇಳಿದ್ದಾರೆ. ನಿರ್ದೇಶಕ ರಘು ಇಡೀ ಸಿನಿಮಾವನ್ನು ಹಳ್ಳಿ ಬ್ಯಾಗ್ರೌಂಡ್‌ನಲ್ಲಿ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿಯ ಬದುಕು ಬವಣೆ, ಅಲ್ಲಿನ ಸಂಬಂಧಗಳ ನಡುವಿನ ಮೌಲ್ಯ ಎಲ್ಲವನ್ನು ತಮ್ಮ ಕೈಲಾದಷ್ಟರ ಮಟ್ಟಿಗೆ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ನಿರ್ದೇಶಕರಿಂದ ಆಗಿದೆ. 
ಇಡೀ ಕಥೆ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ, ಸಿನಿಮಾಗೆ ಪ್ಲಸ್‌ ಆಗಿರುವುದು ಆ ಭಾಷೆ. ಫಸ್ಟ್‌ ಆಫ್‌ನಲ್ಲಿ ಬರೀ ಮಾತು ಎನಿಸುತ್ತದೆ. ನಿರ್ದೇಶಕರು ಇಲ್ಲಿ ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳಿಗೆ ಕತ್ತರಿ ಹಾಕಬಹುದಿತ್ತು. ಆದರೂ ಪರಸಂಗದಲ್ಲಿ ಮನರಂಜನೆ ಎಷ್ಟಿದೆಯೋ, ಕಥೆ, ಮುಗ್ಧತೆ, ಮೌಢ್ಯತೆ, ಪತ್ನಿಯ ಮೇಲಿನ ಅಚಲವಾದ ನಂಬಿಕೆ ಇವೆಲ್ಲವೂ ಅಷ್ಟೇ ಇದೆ. ಸುಖಾ ಸುಮ್ಮನೆ ಕಮರ್ಷಿಯಲ್‌ ಅಂಶಗಳನ್ನು ತುಂಬದೆ, ನೀಟಾದ ಚಿತ್ರಕಥೆಯ ಮೂಲಕ ನಿರ್ದೇಶಕರು ಗಮನ ಸೆಳೆಯುತ್ತಾರೆ. 
.
ನಾಯಕ ಮಿತ್ರ ಅವರ ನಟನೆ ಎಂದಿಗಿಂತಲೂ ಬಹಳ ನೈಜವಾಗಿ ಮತ್ತು ಆಪ್ತವಾಗಿದೆ. ಮುಗ್ಧ ವ್ಯಕ್ತಿ ಹೀಗಿರುತ್ತಾನೆ ಎಂಬುದನ್ನು ಅವರ ಪಾತ್ರದ ಮೂಲಕ ಪ್ರತಿಯೊಬ್ಬರಿಗೂ ಪರಿಚಯಿಸಿದ್ದಾರೆ. ನಾಯಕಿ ಅಕ್ಷತಾ ಗ್ಲಾಮರ್‌ಸ್‌ ಆಗಿಯೂ ಕಾಣಿಸಿಕೊಂಡು, ತಮಗೆ ಸಿಕ್ಕ ಅವಕಾಶವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ.
.
ಮನೋಜ್‌ ಪುತ್ತೂರು ಸೇರಿದಂತೆ ಎಲ್ಲ ಕಲಾವಿದರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹರ್ಷವರ್ಧನ್‌ ರಾಜ್‌ ಅವರ ಸಂಗೀತದಲ್ಲಿ ಒಂದೆರೆಡು ಹಾಡುಗಳು ಇಷ್ಟವಾಗುತ್ತವೆ. ಸುಜಯ್‌ಕುಮಾರ್‌ ಸಿನಿಮಾಟೋಗ್ರಫಿಯಲ್ಲಿ ಹಳ್ಳಿ ಪರಿಸರ ಚೆನ್ನಾಗಿ ಕಾಣುತ್ತದೆ. ಒಂದಷ್ಟು ನ್ಯೂನ್ಯತೆಗಳಿದ್ದರೂ ಸಿನಿಮಾವನ್ನು ಒಮ್ಮೆ ಆರಾಮಾಗಿ ನೋಡಬಹುದು. 

ರೇಟಿಂಗ್ - 3.5/5.

#Parasanga #Cineloka

Amma Gif Running S

MMCHHHHH

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top