Headlines

ರಿಯಲ್ ಸ್ಟಾರ್ ಉಪೇಂದ್ರ `ಐ ಲವ್ ಯೂ’ ಚಿತ್ರಕ್ಕೆ ಭರ್ಜರಿ...
  ಬೆಂಗಳೂರಿನ ಹೆಸರುಘಟ್ಟ ಆಚಾರ್ಯ ಕಾಲೇಜಿನಲ್ಲಿ ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡಿ ಸಿದ್ದೇಶ್ವರ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಆಭಿನಯದ ಬಹುನಿರೀಕ್ಷೆಯ ಐ ಲವ್ ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಮಾರ್ಗದರ್ಶನದಲ್ಲಿ ಉಪೇಂದ್ರ ಅವರ... More detail
“ನಾವೇ ಭಾಗ್ಯವಂತರು” ಧ್ವನಿ ಸುರುಳಿ ಬಿಡುಗಡೆ :
  ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ನಾವೇ ಭಾಗ್ಯವಂತರು” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ನಾವೇ ಭಾಗ್ಯವಂತರು ಎಂಬ ಈ... More detail
ಇಂದಿನಿಂದ ಜೀ ವಾಹಿನಿಯಲ್ಲಿ "ಶ್ರೀ ವಿಷ್ಣು ದಶಾವತಾರ" :
  ವಿಭಿನ್ನ ರಿಯಾಲಿಟಿ ಶೋಗಳು ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ಜೀ ಕನ್ನಡ ವಾಹಿನಿ ಈಗ ಪೌರಾಣಿಕ ಧಾರಾವಾಹಿಗಳತ್ತ ಮುಖ ಮಾಡಿದೆ. ಇತ್ತೀಚೆಗಷ್ಟೇ “ಉಘೇ ಉಘೇ ಮಾÀದೇಶ್ವರ” ಎಂಬ ಪೌರಾಣಿಕ ಧಾರಾವಾಹಿಯನ್ನು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ. ಅದೇ ರೀತಿ ಈಗ ಮತ್ತೊಂದು ಪೌರಾಣಿಕ... More detail
"ದಿ ವಿಲನ್" ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ ವಿಭಿನ್ನ...
ಟೀಸರ್‌ಗಳು, ಹಾಡುಗಳಿಂದ ಅದ್ಧೂರಿ ನಿರೀಕ್ಷೆ ಹುಟ್ಟು ಹಾಕಿರುವ 'ದಿ ವಿಲನ್‌' ಸಿನಿಮಾದಲ್ಲಿ ಕಿಚ್ಚ ಸುದೀಪ್‌ ವಿಭಿನ್ನ ಗೆಟಪ್ಗಳು ಮತ್ತು 3-4 ವಿಭಿನ್ನ ಹೇರ್‌ಸ್ಟೈಲ್ ಗಳಲ್ಲಿ ಮಿಂಚಲಿದ್ದರಂತೆ. . ಹೌದು, ಈಗ ಬಿಡುಗೆಯಾಗಿರುವ ಟೀಸರ್‌ಗಳಲ್ಲಿ ಸುದೀಪ್‌ ಉದ್ದ ಕೂದಲು ಬಿಟ್ಟು ಮತ್ತು ಶಾರ್ಟ್‌ ಕಟಿಂಗ್‌ನಲ್ಲಿ... More detail
'ದಿ ಟೆರರಿಸ್ಟ್‌'ನಲ್ಲಿ ಬೆಂಗಳೂರು ಸರಣಿ ಬಾಂಬ್‌ ಸ್ಪೋಟದ...
  2009ರಲ್ಲಿ ಬೆಂಗಳೂರಲ್ಲಿ ನಡೆದ ಸರಣಿ ಬಾಂಬ್‌ ಸೊಧೀಟದ ಸುತ್ತಮುತ್ತ 'ದಿ ಟೆರರಿಸ್ಟ್‌' ಕಥೆಯನ್ನು ಹೆಣೆದಿದ್ದಾರಂತೆ ನಿರ್ದೇಶಕ ಪಿ ಸಿ ಶೇಖರ್‌..ಈ ಸಿನಿಮಾದಲ್ಲಿ ರಾಗಿಣಿ ಮುಸ್ಲೀಂ ಯುವತಿಯಾಗಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಫಸ್ಟ್‌ ಲುಕ್‌ನಿಂದ ಗಮನ ಸೆಳೆದಿರುವ ಈ ಸಿನಿಮಾ 'ದಿ ವಿಲನ್‌' ಚಿತ್ರದ... More detail
prev
next

october anigif

IB anigif

Ayugya Gif

adweb

udgharsha

ರಾಮಧಾನ್ಯ ಚರಿತೆಯ ಅನಾವರಣ
ಚಿತ್ರ: ರಾಮಧಾನ್ಯ
ನಿರ್ಮಾಣ: ದಶಮುಖ ವೆಂಚರ್ಸ್
ನಿರ್ದೇಶನ: ಟಿ.ಎನ್‌. ನಾಗೇಶ್‌
ತಾರಾಗಣ: ಯಶಸ್‌ ಸೂರ್ಯ, ನಿಮಿಕಾ ರತ್ನಾಕರ, ಮಂಡ್ಯ ರಮೇಶ್‌
ಭಕ್ತಿ ಪರಂಪರೆಯಲ್ಲಿ ಅಗ್ರ ಗಣ್ಯರಾದ ಕನಕದಾಸರು ರಚಿಸಿದ ರಾಮಧಾನ್ಯ ಚರಿತೆ ಸಿನಿಮಾವಾಗಿ ಈಗ ಬಿಡುಗಡೆಯಾಗಿದೆ.
‘ರಾಮಧಾನ್ಯ ಚರಿತೆ ಇದಕ್ಕೆ ಮೊದಲು ನಾಟಕರೂಪದಲ್ಲಿ ಪ್ರದರ್ಶನ ಕಂಡಿತ್ತು.ಅದನ್ನೇ ಆಧರಿಸಿ ನಿರ್ದೇಶಕ ನಾಗೇಶ್‌ ಸಿನಿಮಾ ಮಾಡಿದ್ದಾರೆ.
.
ಕನಕದಾಸರು ರಾಮಧಾನ್ಯ ಚರಿತೆಯಲ್ಲಿ ಭತ್ತ ಮತ್ತು ರಾಗಿಯನ್ನು ರೂಪಕಗಳಾಗಿ ಬಳಸಿಕೊಂಡು ಸಮಾಜದಲ್ಲಿರುವ ಮೇಲು ಕೀಳು ಎಂಬ ತಾರತಮ್ಯವನ್ನು ಹೇಳಿದ್ದರು.ಈ ಚಿತ್ರದಲ್ಲಿ ನಾಗೇಶ್‌ ಈ ಕಥೆಯನ್ನು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.
ಜಾತಿ ಪದ್ಧತಿಯೊಳಗೆ ನಾವು ಹೇಗೆ ಸಿಲುಕಿ ಹೇಗೆ ಒದ್ದಾಡುತ್ತಿದ್ದೇವೆ ಎಂಬುದನ್ನು ಚಿತ್ರಿಸಿದ್ದಾರೆ. ಜಾತಿ ಪದ್ಧತಿಗೆ ಕನಕದಾಸರ ಕೀರ್ತನೆಗಳೇ ದಾರಿ ದೀಪ ಎಂದು ಅವರು ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ.
.
.
ಕನಕದಾಸರನ್ನು ತೆರೆ ಮೇಲೆ ತಂದು ಅದನ್ನು ನೋಡುಗರ ಮನಸ್ಸಿಗೆ ಹಿಡಿಸುವಂತೆ ಮಾಡಲು ನಾಗೇಶ್‌ ಬಹಳ ಶ್ರಮ ಪಟ್ಟಿದ್ದಾರೆ. ಜನರಿಗೆ ಕನಕದಾಸರ ಕಥೆಯನ್ನು ಅರ್ಥ ಮಾಡಿಸಲು, ಒಂದಷ್ಟು ರಂಜನೆಯುಳ್ಳ ಅಂಶಗಳನ್ನು ಸೇರಿಸಿದ್ದಾರೆ. ಇದು ಕೆಲವೆಡೆ ಸಿನಿಮಾದ ಆಶಯವನ್ನು ಹಿಂದೆ ತಳ್ಳಿತೇನೋ ಎಂದು ಭಾಸವಾಗುತ್ತದೆ. ಕನಕದಾಸರ ಕೀರ್ತನೆಗಳನ್ನು ಗೀತೆ, ಸಂಭಾಷಣೆ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಸಂಗೀತ ಅಂತಹ ಮದ ನೀಡುವುದಿಲ್ಲ.
.
ನಿರ್ದೇಶಕರ ಕಲ್ಪನೆಯಲ್ಲಿ ನಟ ಯಶಸ್‌ ಸೂರ್ಯ ರಾಮ, ಕನಕದಾಸರಾಗಿ ಮಿಂದು ಎದ್ದಿದ್ದಾರೆ. ನಿಮಿಕಾ ರತ್ನಾಕರ ಸೀತೆಯಾಗಿ, ಕನಕನ ಪತ್ನಿಯಾಗಿ ಹಾಗೂ ಆಧುನಿಕ ಹುಡುಗಿಯಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ಸಿನಿಮಾಟೋಗ್ರಫರ್‌ ಬೆನಕ ರಾಜು ಕೆಲಸ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ.
.
ರಾಮಧಾನ್ಯ ಚರಿತ ನಾಟಕಕ್ಕೆ ಕೆಲಸ ಮಾಡಿದ್ದ ಬಸವರಾಜ ಸೂಳೇರಿಪಾಳ್ಯ ಅವರ ಸಂಭಾಷಣೆ ಚಿತ್ರಕ್ಕೊಂದು ಹಿರಿತನ ನೀಡಿದೆ. ದೇಸಿ ಮೋಹನ್‌ ಇನ್ನಷ್ಟು ಒಳ್ಳೆಯ ಕಂಪೋಸಿಂಗ್‌ ನೀಡಬಹುದಿತ್ತು. ಒಂದಷ್ಟು ಮೈನಸ್‌ ಮತ್ತು ಪ್ಲಸ್‌ಗಳ ನಡುವೆ ಕನಕದಾಸರ ಬಗ್ಗೆ ಅರಿಯಲು ಸಿನಿಮಾ ನೋಡಬಹುದು ಜತೆಗೆ ಕುಟುಂಬ ಸಮೇತರಾಗಿ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ.
.
ರೇಟಿಂಗ್ - 3/5
#Ramadhanya #Cineloka

na anigif

aaadi nigif

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top