Headlines

ಮತ್ತೆ "ರಿಚ್ಚಿ"ಯಾಗಿ ರಕ್ಷಿತ್ ಶೆಟ್ಟಿ
ಉಳಿದವರು ಕಂಡಂತೆ ಸಿನಿಮಾದ 'ರಿಚ್ಚಿ' ಕ್ಯಾರೆಕ್ಟರ್‌ ಎಲ್ಲರಿಗೂ ಇಷ್ಟವಾಗಿತ್ತು ಮತ್ತು ಎಲ್ಲೆಡೆ ಸಕ್ಕತ್ ಕ್ರೇಜ಼್ ಕ್ರಿಯೇಟ್ ಮಾಡಿತ್ತು, ಆ ಸಿನಿಮಾ ಕಮರ್ಷಿಯಲ್‌ ಆಗಿ ಸೋತರು ವಿಮರ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಅದೇ ಕ್ಯಾರೆಕ್ಟರ್‌ ಇಟ್ಟುಕೊಂಡು ರಾಹುಲ್‌ ಎನ್ನುವವರು ಸಿನಿಮಾ ಮಾಡುತ್ತಿದ್ದು, ರಕ್ಷಿತ್‌ ಶೆಟ್ಟಿ... More detail
ಇಂದಿನ ಪ್ರಸ್ತುತ ಬದುಕಿಗೆ  ಹತ್ತಿರವಾದ ಕಥಾವಸ್ತುವಿರುವ...
ಇಂದಿನ ಪ್ರಸ್ತುತ ಬದುಕಿಗೆ ಹತ್ತಿರವಾದ ಕಥಾವಸ್ತುವಿರುವ “ಲೈಫ್ ಜೊತೆ ಒಂದ್ ಸೆಲ್ಫಿ” : ————— ದಿನಕರ್‌ ತೂಗದೀಪ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ “ಲೈಫ್‌ ಜತೆ ಒಂದು ಸೆಲ್ಫಿ ” ಸಿನಿಮಾದಲ್ಲಿ ಟೆಕ್ಕಿಯೊಬ್ಬ ನಿರ್ದೇಶಕನಾಗಬೇಕು ಎಂಬ ಕನಸಿರುವ ಹುಡುಗ,ಮೊತ್ತೊಬ್ಬ ಮಲ್ಟಿ... More detail
ರಚಿತಾಗೆ ನೆರವಾದ ಮಂಡ್ಯದ ಹುಡುಗಿಯರು
  ಮಹೇಶ್‌ಕುಮಾರ್‌ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಪಕ್ಕಾ ಮಂಡ್ಯದ ಹುಡುಗಿಯಾಗಿ ನಟಿಸಿದ್ದಾರೆ. ಈ ರೀತಿ ನಟಿಸಲು ಅವರು, ಮಂಡ್ಯ ಭಾಗದ ಹುಡುಗಿಯರ ಸಹಾಯ ಪಡೆದುಕೊಂಡಿದ್ದಾರಂತೆ..‘ನಾನು ಇಷ್ಟು ದಿನ ಬರೀ ಪಟ್ಟಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇ, ಇದೇ ಮೊದಲ ಬಾರಿಗೆ ಮಂಡ್ಯದ ಹಳ್ಳಿ... More detail
ಐದು ಪಾತ್ರಗಳ "ಒಂಥರ ಬಣ್ಣಗಳು" :
ಉಪೇಂದ್ರ ಜತೆ ಕೆಲಸ ಮಾಡುತ್ತಿದ್ದ ಸುನೀಲ್‌ ಭೀಮರಾವ್‌ ಎಂಬುವವರು ಆ್ಯಕ್ಷನ್‌ ಕಟ್‌ ಹೇಳಿರುವ 'ಒಂಥರ ಬಣ್ಣಗಳು' ಸಿನಿಮಾದಲ್ಲಿ ಐದು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಕಥೆ ಹೇಳಲಾಗಿದೆಯಂತೆ. . ಸುಮಾರು 51 ದಿನ ಚಿತ್ರೀಕರಣ ಮಾಡಬೇಕಾಗಿದ್ದ ಚಿತ್ರವನ್ನು ನಿರ್ದೇಶಕರು ಪಕ್ಕಾ ಪ್ಲಾನಿಂಗ್‌ ಮಾಡಿಕೊಂಡು ಕೇವಲ 29... More detail
'ರಾಜಣ್ಣನ ಮಗ' ಪಕ್ಕಾ ಮಾಸ್‌
ಸ್ಯಾಂಡಲ್‌ವುಡ್‌ನಲ್ಲಿ ರಾಜಣ್ಣ ಅಂದ್ರೆ ಡಾ. ರಾಜ್‌ಕುಮಾರ್‌, ರಾಜಣ್ಣನ ಮಕ್ಕಳು ಅಂದ್ರೆ ಅಪ್ಪು, ಶಿವಣ್ಣ, ರಾಘಣ್ಣ, ಆದರೆ ಈಗ ರಾಜಣ್ಣನ ಮಗ ಎಂಬ ಟೈಟಲ್‌ ಇಟ್ಟು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕೋಲಾರ ಸೀನು. . ಈ ಸಿನಿಮಾಗೂ ಡಾ.ರಾಜ್‌ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಅವರು ಇದೊಂದು... More detail
prev
next

August 7

DKD Gif

Kumari gif

adweb

Raambo 2 gIF

 
ತನ್ನವರಿಗೆ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ನಾಯಕ ಹೋರಾಡುವ ಕಥೆಗಳು ಬಹಳಷ್ಟು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ಶತಾಯ ಗತಾಯ. ಈ ಚಿತ್ರದಲ್ಲಿ ನಾಯಕನ ತಾಯಿಗೆ ಅನ್ಯಾಯವಾಗಿರುತ್ತದೆ, ಅದನ್ನು ತೀರಿಸಿಕೊಳ್ಳಲು ಆತ ಏನು ಮಾಡುತ್ತಾನೆ ಎಂಬುದೇ ಚಿತ್ರಕಥೆಯಾಗಿದೆ. ಸರುಕು ಹಳೆಯದಾದರೂ, ಸ್ವಲ್ಪ ರೋಚಕವಾಗಿ ಚಿತ್ರಕಥೆ ಮಾಡಿಕೊಂಡಿರುವ ಕಾರಣ ಚಿತ್ರ ಇದ್ದುದರಲ್ಲೇ ಗಮನ ಸೆಳೆಯುತ್ತದೆ.
.
ನಿರ್ದೇಶಕ ಸಂದೀಪ್‌ಗೌಡ ಅವರಿಗೆ ನಿರ್ದೇಶನ ಹೊಸದಾದರೂ, ಸ್ವಲ್ಪ ವೃತ್ತಿಪರರಂತೆ ಕೆಲ ದೃಶ್ಯಗಳನ್ನು ಕಟ್ಟಿದ್ದಾರೆ. ಕಥೆ ಹಳಿ ತಪ್ಪುತ್ತಿದೆ ಎಂದಾಗ, ನಾಯಕನ ತಾತನ ಬಾಯಲ್ಲಿ, ಕಥೆಯನ್ನು ಜ್ಞಾಪಿಸುವ ತಂತ್ರ ಚೆನ್ನಾಗಿ ವರ್ಕೌಟ್‌ ಆಗಿದೆ.
ತನ್ನ ತಾಯಿಗೆ ಆದ ಅನ್ಯಾಯವನ್ನು ಸರಿ ಪಡಿಸಬೇಕು ಎಂಬುದು ನಾಯಕನ ಒನ್‌ಲೈನ್‌ ಅಜೆಂಡಾ, ಮತ್ತು ಅದು ಕಥೆಯೂ ಸಹ ಹೌದು. ಈ ಮಧ್ಯೆ ಒಂದು ಲವ್‌ಸ್ಟೋರಿ, ಕಾಮಿಡಿ, ಹೀಗೆ ಒಂದಷ್ಟು ಕನ್‌ಫ್ಯೂಷನ್‌ಗಳಿವೆ. ಈ ಕನ್‌ಫ್ಯೂಷನ್‌ಗಳಿಂದ ಪ್ರೇಕ್ಷಕ ಕೊಂಚ ಗೊಂದಲಕ್ಕೀಡಾಗುತ್ತಾನೆ.
.
ಸಿನಿಮಾ ಅಂದರೆ ಪಕ್ಕಾ ಕಮರ್ಷಿಯಲ್‌ ಆಗಿರಬೇಕು, ಪ್ರೇಕ್ಷಕರು, ಆಗಾಗ ಶಿಳ್ಳೆ ಹೊಡೆಯಬೇಕು, ಐಟಂ ಸಾಂಗ್‌ ಇರಲೇಬೇಕು ಇಂತಹ ಸಾಕಷ್ಟು ಮಸಾಲೆಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ ಸಂದೀಪ್‌ ಗೌಡ. ಈ ಮಸಾಲೆಗಳನ್ನು ಹದವಾಗಿ ಬೆರಸಿ ಸೇರಿಸಿದ್ದರೆ, ಒಂದೊಳ್ಳೆ ಥ್ರಿಲ್ಲಿಂಗ್‌ ಸಿನಿಮಾವಾಗುತ್ತಿತ್ತು.
ಈ ಚಿತ್ರದಲ್ಲಿ ನಿರ್ದೇಶಕರು ಸಸ್ಪೆನ್ಸ್ ಇಟ್ಟಿದ್ದಾರೆ,ಅದೇ ಚಿತ್ರದ ಮೇಜರ್ ಪ್ಲಸ್ ಪಾಯಿಂಟ್. ಡಬಲ್‌ ಮೀನಿಂಗ್‌ ಡೈಲಾಗ್‌ಗಳ ಹೆಚ್ಚಾಗಿರುವದರಿಂದ ಪಡ್ಡೆ ಹೈಕ್ಳಿಗೆ ಮಜಾ ಕೊಡುತ್ತದೆ ಎನ್ನಬಹುದು. ಒಟ್ಟಿನಲ್ಲಿ ಶತಾಯ ಗತಾಯ ಸಸ್ಪೆನ್ಸ್ ಥ್ರಿಲ್ಲರ್‌, ಅಥವಾ ಸೇಡಿನ ಕಥೆಯಾ, ಪ್ರೇಮ ಕಥೆಯಾ ಎಂದು ನೋಡಲು ಚಿತ್ರಮಂದಿರಕ್ಕೆ ಹೋಗಲೇಬೇಕು.
.
ನಾಯಕ ರಘು ರಾಮಪ್ಪ ಮೊದಲ ಪ್ರಯತ್ನವಾದರೂ, ಗಮನ ಸೆಳೆಯುತ್ತಾರೆ. ನಾಯಕಿ ಸೋನಿಕಾಗೌಡಾಗೆ ಹೆಚ್ಚಿನ ಚಾನ್ಸ್‌ ಇಲ್ಲ. ಸಿನಿಮಾ ನಿರೂಪಣಾ ಶೈಲಿಯನ್ನು ಬದಲಿಸಿಕೊಂಡಿದ್ದರೆ ಸಿನಿಮಾ ಇನ್ನಷ್ಟು ರೋಚಕವಾಗುತ್ತಿತ್ತು. ಹಾಡುಗಳು ಒಕೆ ಎನಿಸುವಂತೆ ಇಷ್ಟವಾಗುತ್ತವೆ.
ಶತಾಯ ಗತಾಯ ಸೀದಾ ಸಾದ ಕಮರ್ಷಿಯಲ್‌ ಸಿನಿಮಾವಾಗಿದೆ. ಆದರೆ ನಿರ್ದೇಶಕರು ತಮ್ಮ ಮೊದಲ ಪ್ರಯತ್ನದಲ್ಲಿಯೇ, ಕಂಪ್ಲೀಟ್‌ ಕಮಷಿರ್ಯಲ್‌ ಪ್ಯಾಕೇಜ್ ಮಾಡಿರುವುದು ಮೆಚ್ಚುಗೆಯಾಗುತ್ತದೆ.
.
#ShatayaGataya #Cineloka

Amma Gif Running S

Vassu nigif

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top