ಪತ್ತೇದಾರಿ ‘ಶಿವಾಜಿ ಸುರತ್ಕಲ್’ ಆಗಿ ರಮೇಶ್ ಅರವಿಂದ್

 ಪತ್ತೇದಾರಿ ‘ಶಿವಾಜಿ ಸುರತ್ಕಲ್’ ಆಗಿ ರಮೇಶ್ ಅರವಿಂದ್

ರಮೇಶ್ ಅರವಿಂದ್ ನಟನೆಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆ ಅಂತಿಮವಾಗಿದೆ, ಚಿತ್ರದ ಶೇಕಡಾ 30ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಪತ್ತೇದಾರಿಯೊಬ್ಬನ ಪಾತ್ರದ ಹೆಸರು ಶಿವಾಜಿ ಸುರತ್ಕಲ್ ಆಗಿದ್ದು ಅದನ್ನು ರಮೇಶ್ ಅರವಿಂದ್ ನಿರ್ವಹಿಸುತ್ತಿದ್ದಾರೆ. ರಣಗಿರಿ ರಹಸ್ಯ ಎಂಬುದು ಇದರ ಟ್ಯಾಗ್ ಲೈನ್ ಆಗಿದೆ.


ರಮೇಶ್ ಅರವಿಂದ್ ಅವರ ಚಿತ್ರದಲ್ಲಿನ ಫಸ್ಟ್ ಲುಕ್ ನ್ನು ನಿರ್ದೇಶಕರು ಸಿನಿ ಎಕ್ಸ್ ಪ್ರೆಸ್ ಗೆ ನೀಡಿದ್ದಾರೆ. ಇದರಲ್ಲಿ ಅವರದ್ದು ಎರಡು ಶೇಡ್ ಗಳ ಪಾತ್ರ. ಅವರ ಎಂದಿನ ಇಮೇಜ್ ಗಿಂತ ಸಂಪೂರ್ಣ ವಿಭಿನ್ನ. ಕೋಪಿಷ್ಠ, ಅಸಹಜ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಮಂಗಳೂರು ಮೂಲದ ಮೈಸೂರಿನಲ್ಲಿ ನೆಲೆಸಿ ಕೇಸೊಂದರ ತನಿಖೆಗೆ ಮಡಿಕೇರಿಗೆ ಹೋಗುವ ಕಥೆಯನ್ನು ಚಿತ್ರ ಒಳಗೊಂಡಿದೆ. ಶೇಕಡಾ 70ರಷ್ಟು ಭಾಗದ ಚಿತ್ರೀಕರಣ ಬಾಕಿಯಿದ್ದು ಮುಂದಿನ ಶೆಡ್ಯೂಲ್ ಸೋಮವಾರದಿಂದ ಆರಂಭವಾಗಲಿದೆ. ರಾಧಿಕಾ ಚೇತನ್ ಮತ್ತು ಅರೊಹಿ ನಾರಾಯಣ್ ಸೆಟ್ ಗೆ ನಾಳೆ ಸೇರ್ಪಡೆಯಾಗಲಿದ್ದಾರೆ ಎಂದು ಆಕಾಶ್ ಶ್ರೀವತ್ಸ ತಿಳಿಸಿದರು.
ಆಕಾಶ್ ಮತ್ತು ಅಭಿಷೇಕ್ ಕಥೆ ಬರೆದಿದ್ದಾರೆ. ಇದಕ್ಕೆ ರಮೇಶ್ ಅರವಿಂದ್ ಅವರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳು ನಮಗೆ ಸಿಗುತ್ತಲೇ ಇದೆ ಎಂದರು ನಿರ್ದೇಶಕರು.

ಅಂಜನಾದ್ರಿ ಸಿನಿ ಕ್ರಿಯೇಷನ್ ನಿರ್ಮಾಣದ ಶಿವಾಜಿ ಸುರತ್ಕಲ್ ಗೆ ಜೂಡಾ ಸ್ಯಾಂಡಿ ಸಂಗೀತ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಗುರುಪ್ರಸಾದ್ ಎಂ ಜಿ ಅವರ ಛಾಯಾಗ್ರಹಣವಿದೆ.


Digiqole ad

Nithyanand Amin

Leave a Reply