ರಾಜಕಾರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ತಂದೆಯ ಹಾದಿಯಲ್ಲೇ ನಡೆದ ಅಪ್ಪು

 ರಾಜಕಾರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ತಂದೆಯ ಹಾದಿಯಲ್ಲೇ ನಡೆದ ಅಪ್ಪು

[vc_row][vc_column][vc_column_text]


 ‘ನನಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸೇರಿಸಬೇಡಿ’ ಎಂದು  ನಟ ಪುನೀತ್ ರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಪುನೀತ್ ರಾಜ್‌ ಕುಮಾರ್ ಪತ್ರವೊಂದನ್ನು ಬರೆದಿದ್ದು ರಾಜಕಾರಣದ ಬಗ್ಗೆ ಅದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ’ ಎಂದು ಹೇಳಿದ್ದಾರೆ.
.
ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಟರಾದ ದರ್ಶನ್ ಮತ್ತು ಯಶ್ ಅವರಿಗೆ ಬೆಂಬಲ ನೀಡಿದ್ದಾರೆ. ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರು ಸುಮಲತಾ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿತ್ತು.
ಈ ಎಲ್ಲಾ ಊಹಾ ಪೋಹಗಳಿಗೆ ಸ್ಪಷ್ಟನೆ ನೀಡಿರುವ ಪುನೀತ್ ಪತ್ರದ ಮೂಲಕ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಮತ್ತು ಅಭಿಮಾನಿಗಳಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

[/vc_column_text][/vc_column][/vc_row][vc_row][vc_column][/vc_column][/vc_row]


Digiqole ad

Nithyanand Amin

Leave a Reply