2020 ಬೇಸಿಗೆಗೆ ದರ್ಶನ್ ‘ರಾಬರ್ಟ್’ ತೆರೆಗೆ

 2020 ಬೇಸಿಗೆಗೆ ದರ್ಶನ್ ‘ರಾಬರ್ಟ್’ ತೆರೆಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತುತ “ಒಡೆಯ” ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ದರ್ಶನ್, ತರುಣ್ ಸುಧೀರ್ ಜತೆಯಾಗಿ ತಯಾರಿಸುತ್ತಿರುವ ಚಿತ್ರ “ರಾಬರ್ಟ್ ನಲ್ಲಿ ಸಹ ತಾವು ಅಭಿನಯಿಸುವುದು ಖಾತ್ರಿ ಪಡಿಸಿದ್ದಾರೆ. ಈ ಚಿತ್ರವು ಏಪ್ರಿಲ್ 19ರ ನಂತರ ಸೆಟ್ಟೇರಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಅಲ್ಲದೆ 2020ರ ಬೇಸಿಗೆಯಲ್ಲಿ ದರ್ಶನ್ “ರಾಬರ್ಟ್” ತೆರೆಕಾಣಲಿದೆ ಎಂದೂ ನಿರ್ದೇಶಕ ಭರವಸೆ ಇತ್ತಿದ್ದಾರೆ.


ಇದಾಗಲೇ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಮೂಲಕ ಸುದ್ದಿ ಮಾಡುತ್ತಿರುವ “ರಾಬರ್ಟ್” ಚಿತ್ರದಲ್ಲಿ ನಟಿಸಲು ನಟ ನಟಿಯರ ಆಯ್ಕೆ ನಡೆದಿದೆ. ಯುಗಾದಿ ಆದ ನಂತರ ದರ್ಶನ್ ಅವರ ಫೋಟೋಶೂಟ್ ತೆಗೆದುಕೊಳ್ಳುವುದಕ್ಕೆ ನಿರ್ದೇಶಕರು ತೀರ್ಮಾನಿಸಿದ್ದಾರೆ.
ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕಾಗಿ 45 ದಿನಗಳ ಶೆಡ್ಯೂಲ್ ಯೋಜಿಸಲಾಗಿದ್ದು ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.  ಉಮಾಪತಿ ಫಿಲ್ಮ್ಸ್ ನಿರ್ಮಾಣದ “ರಾಬರ್ಟ್” ಚಿತ್ರಕ್ಕೆ ಚಂದ್ರಮೌಳಿ ಹಾಗೂ ಕೆ.ಎಲ್. ರಾಜಶೇಖರ್ ಸಂಬಾಷಣೆ ಬರೆಯಲಿದ್ದಾರೆ. ಸುಧಾಕರ್ ಜೈನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೀಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದ್ದು ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಇನ್ನೂ ಆಯ್ಕೆ ಮಾಡಬೇಕಿದೆ.


Digiqole ad

Nithyanand Amin

Leave a Reply