ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಸಿನಿಮಾ  ಶೂಟಿಂಗ್ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದೆ, ಇದೇ ವೇಳೆ ಗೀತಾ ಶೂಟಿಂಗ್ ಸೆಟ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ.

ಸಂತೋಷ್  ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ನಟ ಪುನೀತ್ ರಾಜ್ ಕುಮಾರ್ ಗಣೇಶ್ ಅವರನ್ನು ಭೇಟಿ ಮಾಡಿದ್ದರು, ಇದೇ ವೇಳೆ ನಿರ್ಮಾಪಕರಾದ ಸೈಯ್ಯದ್ ಅವರ ಜೊತೆ ಸಿನಿಮಾ ಬಗ್ಗೆ ಚರ್ಚೆ ನಡೆಸಿದರು.
ವಿಜಯ್ ನಾಗೇಂದ್ರ ನಿರ್ದೇಶನದ ಗೀತಾ ಸಿನಿಮಾ ಶೂಟಿಂಗ್ ಶೇ.75ರಷ್ಟು ಮುಗಿದಿದ್ದು, ಇನ್ನೂ 25 ದಿನಗಳ ಶೂಟಿಂಗ್ ಬಾಕಿ ಉಳಿದಿದೆ. ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಮುಗಿಯಲಿದೆ ಎಂದು ಚಿತ್ರತಂಡ ತಿಳಿಸಿದೆ.

Leave a Reply