ಹೊಸಬರ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಶುರು


ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರದ ಚಿತ್ರೀಕರಣವು ಇದೇ 14ರಂದು ನಗರದಲ್ಲಿ ಆರಂಭವಾಯಿತು.


ಚಿತ್ರದ ಮುಹೂರ್ತ ದೃಶ್ಯವನ್ನು ತ್ರಿವೇಣಿ ಕೃಷ್ಣ, ಶೌರ್ಯ ದೇವಸ್ಥಾನಕ್ಕೆ ಬಂದು ದೇವರನ್ನು ಪ್ರಾರ್ಥಿಸುವ ಸನ್ನಿವೇಶವನ್ನು ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣದಲ್ಲಿ ನಿರ್ದೇಶಕ ರತನ್‍ತೀರ್ಥ ಚಿತ್ರಿಸಿಕೊಂಡರು.
.
ಪ್ರಥಮ ಹಂತದ ಚಿತ್ರೀಕರಣವು 10 ದಿವಸಗಳ ಕಾಲ ನಗರದ ಸುತ್ತಮುತ್ತ ನಡೆಯಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್‍ ದೇಶಪ್ರಿಯ ಸಂಭಾಷಣೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್‍ರಾಜ್ ಸಂಗೀತ, ಉಜ್ವಲ್‍ಗೌಡ ಸಂಕಲನ, ಪ್ರದೀಪ್ ನಿರ್ಮಾಣ ನಿರ್ವಹಣೆಗೆ, ಸಿದ್ದು ನಿರ್ದೇಶನ ಸಹಕಾರವಿದ್ದು, ಚಿತ್ರದಕಥೆ, ಚಿತ್ರಕಥೆ ಮತ್ತು ನಿರ್ದೇಶನ ರತನ್‍ತೀರ್ಥ.

ತಾರಾಗಣದಲ್ಲಿ ತ್ರಿವೇಣಿಕೃಷ್ಣ, ಶೌರ್ಯ, ಶಂಕರ್‍ಅಶ್ವತ್ಥ್, ನಿಖಿಲ್‍ಗೌಡ, ಸುಮಂತ್, ಭಾರತಿ ಮುಂತಾದವರಿದ್ದಾರೆ.


Digiqole ad

Nithyanand Amin

Leave a Reply