ಬದ್ರಿ v/s ಮಧುಮತಿ – ಚಿತ್ರ ವಿಮರ್ಶೆ


ತನ್ನ ಮೆಲೋಡಿ ಹಾಡುಗಳ ಮೂಲಕ ಮತ್ತು ಸರ್ಜಿಕಲ್ ಸ್ಟ್ರೈಕ್ ಸೀನ್ಗಳಿವೆ ಎನ್ನುವ ಮೂಲಕ ಗಮನ ಸೆಳೆದಿದ್ದ ಬದ್ರಿ ವರ್ಸಸ್ ಮಧುಮತಿ ಸಿನಿಮಾ ಪಕ್ಕಾ ಲವ್ ಸ್ಟೋರಿಯ ಕಥೆಯನ್ನು ಹೊಂದಿದೆ.
.
ಆರ್ಮಿ ಹಿನ್ನಲೆಯ ನಾಯಕ ಪ್ರೀತಿ ಹುಡುಕಾಟದಲ್ಲಿದ್ದಾಗ ಸನ್ನಿವೇಶವೊಂದರಲ್ಲಿ ಭೇಟಿಯಾಗುವ ಮಧುಮತಿ ಮೇಲೆ ಪ್ರೀತಿ ಆಗಿ, ಆಕೆಯ ಹಿಂದೆ ಬಿದ್ದು ಪ್ರೀತಿಸಿ ಪ್ರೇಮಿಗಳಾಗುತ್ತಾರೆ. ಆನಂತರ ಅವರಿಬ್ಬರು ಒಟ್ಟಾಗಲು ಒಂದಷ್ಟು ದೃಶ್ಯಗಳ ಜೋಡಣೆಯಿದೆ. ಇಂತಹ ಸಾಕಷ್ಟು ಸಿನಿಮಾಗಳು ಮೂಡಿ ಬಂದಿದ್ದರು ಬದ್ರಿ ಗಮನ ಸೆಳೆಯುವುದು ತನ್ನ ವಿಶಿಷ್ಟ ಕಾನ್ಸೆಪ್ಟ್ನಿಂದಾಗಿ. ಒಂದಷ್ಟು ಯುದ್ಧದ ಸನ್ನಿವೇಶಗಳು ಸಹ ಸಿನಿಮಾದ ಕುತೂಹಲವನ್ನು ಹೆಚ್ಚಿಸುತ್ತವೆ. ಆದರೆ ಈ ಲವ್ ಸ್ಟೋರಿಯಲ್ಲಿ ಯುದ್ಧವೇಕೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.
.
ಚಿತ್ರದ ಮೊದಲರ್ಧ ಸಾಧಾರಣವೆನಿಸಿದರೂ, ದ್ವಿತೀಯಾರ್ಧ ಪರ್ವಾಗಿಲ್ಲ ಎನ್ನೋ ಭಾವನೆ ಮೂಡಿಸುತ್ತದೆ. ಚಿತ್ರದಲ್ಲಿನ ಕೆಲ ಕಾಮಿಡಿ ದೃಶ್ಯಗಳು ಅನವಶ್ಯಕ ಎನಿಸುತ್ತವೆ . ಮೇಕಿಂಗ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ.
.
ನಾಯಕ ಪ್ರತಾಪವನ್ ತೆರೆ ಮೇಲೆ ಚೆನ್ನಾಗಿ ಕಾಣುತ್ತಾರೆ ಜೊತೆಗೆ ಫೈಟ್ಸ್ ಮತ್ತು ಡ್ಯಾನ್ಸ್ ನಲ್ಲಿ ಮಿಂಚಿದ್ದಾರೆ. ನಟನೆಯಲ್ಲಿ ಅನುಭವ ಎದ್ದು ಕಾಣುತ್ತದೆ.ನಾಯಕಿ ಆಕಾಂಕ್ಷ ಬಹಳ ಸುಂದರವಾಗಿ ಕಾಣುತ್ತಾರೆ. ಉಳಿದಂತೆ ಎಲ್ಲ ಕಲಾವಿದರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
.
ನಿರ್ದೇಶಕ ಶಂಕರ ನಾರಾಯಣ ರೆಡ್ಡಿ ಚಿತ್ರಕ್ಕೆ ಇನ್ನಷ್ಟು ವೇಗ ನೀಡಬೇಕಿತ್ತು. ಚಿತ್ರದಲ್ಲಿನ ಪಂಚಿಂಗ್ ಡೈಲಾಗ್ಸ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಹೊಸಬರದ್ದರಿಂದ ಸಿನಿಮಾದಲ್ಲಿ ಒಂದಷ್ಟು ಕೊರತೆಗಳಿವೆ, ಆದರೆ ಹೊಸಬರು ಎನ್ನುವ ಕಾರಣಕ್ಕೆ ಅವುಗಳನ್ನು ಪಕ್ಕಕ್ಕಿಟ್ಟು ಚಿತ್ರವನ್ನು ಒಮ್ಮೆ ನೋಡಬಹುದು. ಹಾಡುಗಳು ಕೇಳಲು ಇಂಪಾಗಿವೆ.
ರೇಟಿಂಗ್ – 3/5

