‘ಕಲಾವಿಧ ಫಿಲಂ ಅಕಾಡೆಮಿ’ ಉದ್ಘಾಟನೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

ನಟ,ಪತ್ರಕರ್ತ,ನಿರೂಪಕ ಯತಿರಾಜ್ ಇತ್ತೀಚೆಗೆ ‘ಕಲಾವಿಧ ಫಿಲಂ ಅಕಾಡೆಮಿ’ ಎಂಬ ನಟನಾ ಶಾಲೆಯೊಂದನ್ನು ತೆರೆದಿದ್ದು, ಅದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉದ್ಘಾಟನೆ ಮಾಡಿದರು.

.
ಈ ನಟನಾ ಶಾಲೆಯ ಸಾರಥ್ಯವನ್ನು ರಂಗಿತರಂಗ ಖ್ಯಾತಿಯ ಅರವಿಂದ ವಹಿಸಿಕೊಂಡಿದ್ದಾರೆ. ಈ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ‘ತರಬೇತಿ ಶಾಲೆಯಲ್ಲಿ ಕಲಿತವರೆಲ್ಲರೂ ನಟರಾಗಲು ಸಾಧ್ಯವಿಲ್ಲ. ಕಲೆಯನ್ನು ಪ್ರೀತಿಸಿದರೆ ಅದು ನಮ್ಮನ್ನು ಪ್ರೀತಿಸುತ್ತದೆ. ಅದಕ್ಕಾಗಿ ಮೊದಲು ಪ್ರೀತಿಸುವುದನ್ನು ಕಲಿಯಿರಿ. ಅರವಿಂದ್ ಮತ್ತು ಯತಿರಾಜ್ ನನಗೆ ಬಹಳ ವರ್ಷಗಳಿಂದ ಪರಿಚಿತರು ಅವರ ಈ ಸಾಹಸ ಯಶಸ್ವಿಯಾಗಲಿ. ಇಲ್ಲಿ ಕಲಿತವರೆಲ್ಲರೂ ದೊಡ್ಡ ನಟರಾಗಿ, ತಂತ್ರಜ್ಞರಾಗಿ ಚಿತ್ರೋದ್ಯಮದಲ್ಲಿ ಹೆಸರು ಮಾಡಲಿ ’ಎಂದು ಸುದೀಪ್ ಹೇಳಿದರು.
.
ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ್ರು ಮಾತನಾಡಿ ಕಲಾವಿಧ ಫಿಲಂ ಅಕಾಡೆಮಿ ಎಂಬ ಹೆಸರಲ್ಲಿಯೇ ಒಂದು ಫೋರ್ಸ್ ಇದೆ. ಕಲಾವಿದ ಚಾಕು ಇದ್ದಂತೆ, ಇದರಲ್ಲಿ ಹಣ್ಣು, ತರಕಾರಿ,ಕೆಟ್ಟ ಕೆಲಸ ಎಲ್ಲದಕ್ಕೂ ಚಾಕನ್ನು ಬಳಸಬಹುದು. ಈ ಅಕಾಡೆಮಿಯಲ್ಲಿ ಆ ಚಾಕನ್ನು ಬರೀ ಕಲಾ ಪೋಷಣೆಗೆ ಬಳಸಿಕೊಳ್ಳಿ. ಈ ಕಲಾವಿಧ ಫಿಲಂ ಅಕಾಡೆಮಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.
.
ಈ ಫಿಲಂ ಅಕಾಡೆಮಿಯ ಯೂಟ್ಯೂಬ್ ಚಾನೆಲ್ಗೆ ನಿರ್ಮಾಪಕ ಜಾಕ್ ಮಂಜು ಚಾಲನೆ ನೀಡಿದರು.ಮೊದಲ ನಾಲ್ಕು ವಿದ್ಯಾರ್ಥಿಗಳಿಗೆ ಸುದೀಪ್ ಬಣ್ಣ ಹಚ್ಚುವ ಮೂಲಕ ಕಲಾವಿಧ ಫಿಲಂ ಅಕಾಡೆಮಿಗೆ ಚಾಲನೆ ನೀಡಿದರು.
ಬಸವರೇಶ್ವರ ನಗರದಲ್ಲಿರುವ ಈ ಕಲಾವಿಧ ಫಿಲಂ ಅಕಾಡೆಮಿಯಲ್ಲಿ ನಟನೆ, ನಿರ್ದೇಶನ, ನಿರೂಪಣೆ, ಸಂಕಲನ ಮತ್ತು ಯೋಗ ತರಬೇತಿ ನೀಡಲಾಗುತ್ತದೆ. ಜತೆಗ ವಾರಾಂತ್ಯದಲ್ಲಿ ಮಕ್ಕಳಿಗಾಗಿ ಅಭಿನಯ,ನೃತ್ಯ ತರಗತಿಗಳು ನುರಿತ ನಿರ್ದೇಶಕರು ಸಂಕಲನಕಾರರು, ನೃತ್ಯ ಪಟುಗಳು ಉಪನ್ಯಾಸಕರಾಗಿ ಕೆಲಸ ಮಾಡಲಿದ್ದಾರೆ.

