“ಲಂಡನಲ್ಲಿ ಲಂಬೋಧರ” ಚಿತ್ರದ ಹಾಡಿಗೆ ಸಿಕ್ತು ಉತ್ತಮ ರೆಸ್ಪಾನ್ಸ್.


‘ಲಂಡನ್ ಸ್ಕ್ರೀನ್ಸ್’ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ‘ಲಂಡನ್ನಲ್ಲಿ ಲಂಬೋದರ’ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಮೊನ್ನೆ ಬಿಡುಗಡೆಗೊಂಡಿದೆ.


ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿರುವ ಈ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ .

.

ಈಗ ಬಿಡುಗಡೆಯಾಗಿರುವ “ಟೇಕ್ಆಫ್” ಎನ್ನುವ ಹಾಡೂ ಸಹವೇಗವಾಗಿ ಜನರಮೆಚ್ಚುಗೆಯನ್ನುಪಡೆಯುತ್ತಿದೆ. ಪ್ರಸ್ತುತ ಈ ಹಾಡನ್ನು ಪ್ರಣವ್ ಅವರು ಸ್ವತಃ ಬರೆದಿದ್ದು ಹಾಡಿಗೆ ರಿನೋಸ್ಜಾರ್ಜ್ಅವರು ತಮ್ಮ ಕಂಠವನ್ನು ನೀಡಿದ್ದಾರೆ. ಹಾಡು ಕೇಳುವುದಕ್ಕೆ ಟ್ರೆಂಡಿ ಆಗಿದ್ದು, ಇಂಗ್ಲಿಷ್ಮತ್ತು ಕನ್ನಡದ ಒಳ್ಳೆಯ ಮಿಲನವು ಇದರಲ್ಲಿ ಕಾಣಿಸುತ್ತಿದೆ. ಎರಡೂ ಭಾಷೆಗಳ ಸಂಧಿಗ್ಧವನ್ನು ಬಿಡಿಸಿ ಅದರ ಪಾಡಿಗೆ ಇಟ್ಟಂತಿದೆ ಹಾಡಿನ ಬರೆವಣಿಗೆ.

.

ಏನೇ ಆದರೂ ಲಂಡನ್ನಿಗೇ ಹೋಗಿ ನೆಲೆಸಬೇಕೆಂದು ಕನಸು ಕಟ್ಟಿಕೊಂಡಿರುವ ನಾಯಕನ ತವಕವನ್ನು ಈ ಹಾಡಿನಲ್ಲಿ ಬಿಚ್ಚಿಟ್ಟಿದ್ದಾರೆ. ಚಿತ್ರದ ಮುಖ್ಯ ತಾರಾಗಣದಲ್ಲಿ ಸಂತೋಷ್, ಶ್ರುತಿಪ್ರಕಾಶ್, ಸಂಪತ್ರಾಜ್, ಸಾಧುಕೋಕಿಲ, ಅಚ್ಯುತ್ಕುಮಾರ್, ಸುಧಾಬೆಳವಾಡಿ, ವಿಜಯಲಕ್ಷ್ಮಿಉಪಾಧ್ಯ, ರಘು ರಾಮನಕೊಪ್ಪ ಇವರುಗಳು ಮುಖ್ಯಭೂಮಿಕೆಯನ್ನು ನಿಭಾಯಿಸುತ್ತಿದ್ದಾರೆ.


Digiqole ad

Nithyanand Amin

Leave a Reply