“ಮಿಸ್ಸಿಂಗ್ ಬಾಯ್” ಚಿತ್ರ ವಿಮರ್ಶೆ

 “ಮಿಸ್ಸಿಂಗ್ ಬಾಯ್” ಚಿತ್ರ ವಿಮರ್ಶೆ

ಚಿತ್ರ: ಮಿಸ್ಸಿಂಗ್‌ ಬಾಯ್‌. 


ನಿರ್ದೇಶಕ: ರಘುರಾಮ್‌. 

ನಿರ್ಮಾಣ: ಕೊಲ್ಲ ಪ್ರವೀಣ್‌. 

ಕಲಾವಿದರು: ಗುರುನಂದನ್‌, ಆರ್ಚನಾ, ರಂಗಾಯಣ ರಘು, ಭಾಗಿರಥಿ ಬಾಯಿ ಕದಂ ಮತ್ತಿತರರು.

.

ನೈಜ ಘಟನೆಗಳಿಗೆ ಸಿನಿಮಾ ರೂಪ ಆಗಾಗ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಎಲ್ಲ ಸಿನಿಮಾಗಳಲ್ಲಿಯೂ ಕಥೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ಆದರೆ “ಮಿಸ್ಸಿಂಗ್‌ ಬಾಯ್‌” ವಿಚಾರದಲ್ಲಿ ಅದು ಸುಳ್ಳಾಗಿದೆ. ನಿರ್ದೇಶಕ ರಘುರಾಮ್‌ ಮಿಸ್ಸಿಂಗ್‌ ಬಾಯ್‌ ಸಿನಿಮಾಗೆ ಬರೀ ನಿರ್ದೇಶನ ಮಾಡಿಲ್ಲ ಜೀವ ತುಂಬಿದ್ದಾರೆ.

.

ಹಲವು ವರ್ಷಗಳ ಹಿಂದೆ ಉತ್ತರಕರ್ನಾಟಕದ ಒಬ್ಬ ಹುಡುಗ ತನ್ನ ಮನೆಯಿಂದ ತಪ್ಪಿಸಿಕೊಂಡು ದೂರದ ದೇಶಕ್ಕೆ ಹೋಗಿ ನೆಲೆಸಿದ್ದ, ತದನಂತರ ತನ್ನ ತಾಯಿಯನ್ನು ಮತ್ತು ತಾಯ್ನಾಡನ್ನು ಆತ ಹುಡುಕಿಕೊಂಡು ಬರುವ ಕಥೆ ಈ ಮಿಸ್ಸಿಂಗ್‌ ಬಾಯ್‌. ಈ ಘಟನೆ ಆಗ ಸಾಕಷ್ಟು ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಲ್ಲದೇ, ಕೇಳಿದವರನ್ನು ನೋಡಿದವರನ್ನು ಭಾವುಕರನ್ನಾಗಿಸಿತ್ತು. ಈಗ ರಘುರಾಮ್‌ ಅವರ ಸಿನಿಮಾ ಕೂಡಾ ಅದನ್ನೇ ಮಾಡಿದೆ. ಕಳೆದುಕೊಂಡ ತನ್ನ ತಾಯಿಯನ್ನು ಹುಡುಕುವ ಮಗನ ಕಥೆಯನ್ನು ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಪ್ರೇಕ್ಷಕರ ಎದುರು ಬಿಚ್ಚಿಟ್ಟಿದ್ದಾರೆ ರಘುರಾಮ್‌.

.

ನೈಜ ಘಟನೆಯನ್ನು ಹೇಳುತ್ತಾ ಹೇಳುತ್ತಾ, ಮಾನವ ಸಂಬಂಧಗಳು ಮತ್ತು ತಾಯಿ ಎಂಬ ಜೀವ ಪ್ರತಿಯೊಬ್ಬ ಮನುಷ್ಯನಿಗೂ ಎಷ್ಟು ಮುಖ್ಯ ಮತ್ತು ಆಕೆಯೊಂದಿಗೆ ಮನುಷ್ಯರಿಗೆ ಇರುವ ನಂಟಿನ ಅರಿವನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ.

.

ಈ ಚಿತ್ರದ ಕಥೆಯೇ ವಜ್ರವಿದ್ದಂತೆ, ಅದನ್ನು ತಮ್ಮ ನಟನೆ ಎಂಬ ಪಾಲಿಶ್‌ ಮೂಲಕ ಮತ್ತಷ್ಟು ಹೊಳೆಯುವಂತೆ ಮಾಡಿದ್ದಾರೆ ಗುರುನಂದನ್‌, ಭಾಗಿರಥಿ ಬಾಯಿ ಕದಂ, ರಂಗಾಯಣ ರಘು.
ನಟ ರವಿಶಂಕರ್‌ಗೌಡ ಮತ್ತು ನಾಯಕಿ ಆರ್ಚನಾ ಈ ಮೂರು ಪಾತ್ರಗಳಿಗೆ ಬೆನ್ನೆಲುಬಾಗಿ ನಟಿಸಿದ್ದಾರೆ.

ಚಿತ್ರದ ಕೊನೆಯ ರೀಲ್ ನಲ್ಲಿ ಬರುವ ಭಾಗೀರಥಿ ಬಾಯಿ ಕದಂ ಅವರ ಅಭಿನಯಕ್ಕೆ ಪ್ರಶಸ್ತಿ ಸಿಕ್ಕರೂ ಕಮ್ಮಿನೇ, ಅಷ್ಟು ನೈಜವಾಗಿ, ಅದ್ಭುತವಾಗಿ ನಟಿಸಿ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಾರೆ.

.

ಸಿನಿಮಾಟೋಗ್ರಫರ್‌ ಜಗದೀಶ್‌ ವಾಲಿ, ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಕೆಲಸ ಸಿನಿಮಾದ ಪ್ಲಸ್‌ ಪಾಯಿಂಟ್‌.

ಇಂತಹ ಸದಭಿರುಚಿಯ ಮತ್ತು ರಿಯಲಿಸ್ಟಿಕ್‌ ಸಿನಿಮಾಗೆ ಯಾವುದೇ ಕಮರ್ಷಿಯಲ್‌ ಅಂಶಗಳು ಸೇರದಂತೆ ನಿರ್ಮಾಣ ಮಾಡಿರುವ ನಿರ್ಮಾಪಕ ಕೊಲ್ಲ ಪ್ರವೀಣ್‌ ಅವರ ಶ್ರಮ ಸಹ ನಿಜಕ್ಕೂ ಮೆಚ್ಚುವಂತಹದ್ದು.

.

ಮಿಸ್ಸಿಂಗ್‌ ಬಾಯ್‌ ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಸಿನಿಮಾ.

ರೇಟಿಂಗ್ – 4/5

 


Digiqole ad

Nithyanand Amin

Leave a Reply