ಚಿತ್ರ: ಒಂದು ಕಥೆ ಹೇಳ್ಲಾ

ನಿರ್ದೇಶನ: ಗಿರೀಶ್‌

ನಿರ್ಮಾಣ: ಪೇಟಾ ಸಿನಿಮಾ ಕೆಫೆ

ತಾರಾಗಣ: ತಾಂಡವ್‌ರಾಮ್‌, ಶಕ್ತಿ ಸೋಮಣ್ಣ, ಪ್ರತೀಕ್‌, ತಾರಾ ಮತ್ತಿತರರು

.

 

ಹಾರರ್‌ ಸಿನಿಮಾಗಳಲ್ಲಿ ಮುಖ್ಯವಾಗಿ ಬೇಕಾಗಿರುವುದು ಗಟ್ಟಿ ಸ್ಕ್ರೀನ್‌ ಪ್ಲೇ. ಸಾಕಷ್ಟು ಸಮಯದಲ್ಲಿ ಗಟ್ಟಿ ಕಥೆಯೆ ಇಲ್ಲದೇ ಹಾರರ್‌ ಸಿನಿಮಾಗಳು ಗೆದ್ದವಿ. ಈ ವಾರ ಬಿಡುಗಡೆಯಾಗಿರುವ ಒಂದು ಕಥೆ ಹೇಳ್ಲಾ ಸಿನಿಮಾದಲ್ಲಿಒಂದಲ್ಲ ಐದು ಕಥೆಗಳಿವೆ. ಈ ಐದು ಕಥೆಗಳು ಬಹಳ ಥ್ರಿಲ್ಲಿಂಗ್‌ ಎನಿಸುತ್ತವೆ.

ಐದು ಜನ ಸ್ನೇಹಿತರು ವಿಕೇಂಡ್‌ಗಾಗಿ ಹೊಂ ಸ್ಟೇ ಒಂದಕ್ಕೆ ಹೊರಾಟಗ ಈ ಕಥೆಗಳ ಚರ್ಚೆಯಾಗುತ್ತದೆ. ಅವರು ಹೊಂ ಸ್ಟೇ ತಲುಪಿದ ಮೇಲೆ ಸಿನಿಮಾದ ಚರ್ಯೆ ಬದಲಾಗುತ್ತದೆ. ಒದು ಕಥೆ ಹೇಳ್ಲಾ ಎಲ್ಲ ಹಾರರ್‌ ಸಿನಿಮಾಗಳ ರೀತಿಯಲ್ಲಿ ಮಾಮೂಲಿ ದೆವ್ವದ ಕಥೆಗಳನ್ನು ಹೊಂದಿದೆ. ಆದರೆ ಅದನ್ನು ಹೇಳಿರುವ ರೀತಿ ಮಾತ್ರ ಬೇರೆಯದ್ದೇ ಆಗಿದೆ.

.

ಸಾಮಾನ್ಯವಾಗಿ ಹಾರರ್‌ ಸಿನಿಮಾದಲ್ಲಿ ನಟಿಸುವ ಕಲಾವಿದರ ಸಂಖ್ಯೆ ಬಹಳ ಕಡಿಮೆ. ಆದರೆ ಇದರಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಯಾರ ಪಾತ್ರವು ಸುಖಾಸುಮ್ಮನೆ ಬರುವುದಿಲ್ಲ. ನಿರ್ದೇಶಕ ಗಿರೀಶ್‌ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರೂ ಒಂದಷ್ಟು ಶ್ರಮ ವಹಿಸಿ ಸಿನಿಮಾ ಮಾಡಿದ್ದಾರೆ. ಸಣ್ಣ ಸಣ್ಣ ಸೂಕ್ಸ್ಮಗಳನ್ನು ಗಮನವಹಿಸಿ ಹಣ ಕೊಟ್ಟ ಪ್ರೇಕ್ಷಕನಿಗೆ ಮೋಸವಾಗದಂತೆ ನೋಡಿಕೊಂಡಿದ್ದಾರೆ.
ಈ ಮೂಲಕ ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕರಾಗುವ ಎಲ್ಲ ಲಕ್ಷಣಗಳನ್ನು ಅವರು ತೋರಿಸಿದ್ದಾರೆ.

ಈ ಸಿನಿಮಾ ಎಲ್ಲ ವಿಭಾಗದಲ್ಲಿಯೂ ಅದರಲ್ಲೂ ಹಿನ್ನೆಲೆ ಸಂಗೀತ ಮತ್ತು ಸಿನಿಮಾಟೋಗ್ರಫಿ ನೂರಕ್ಕೆ ನೂರರಷ್ಟ ಅಂಕ ಗಿಟ್ಟಿಸಿಕೊಳ್ಳುತ್ತದೆ. ವಿಭಿನ್ನ ನಿರೂಪಣೆ ಶೈಲಿ ಆಗಿರೋದ್ರಿಂದ ಚಿತ್ರದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ದೋಷಗಳು ಕಾಣಿಸುತ್ತವೆ.

.

ಕಲಾವಿದರ ವಿಚಾರಕ್ಕೆ ಬಂದರೆ ಪ್ರತಿ ಕಥೆಯಲ್ಲಿಯೂ ಎಲ್ಲ ಕಲಾವಿದರೂ ಹೊಸಬರೇ ಆದರೆ ಎಲ್ಲರೂ ಬಹಳ ಅಚ್ಚುಕಟ್ಟಾಗಿ ತಮಗೆ ವಹಿಸಿದ ಅಷ್ಟೂ ಕೆಲಸವನ್ನು ಮಾಡಿಮುಗಿಸಿದ್ದಾರೆ. ಯಾರೊಬ್ಬರದೂ ಅತಿರೇಕದ ನಟನೆ ಎನ್ನಿಸುವುದಿಲ್ಲ. ನಿರ್ದೇಶಕರು ಒಂದು ಕಥೆಯ ಮುಖ್ಯ ಪಾತ್ರದಾರಿಯಾಗಿ ಗಮನ ಸೆಳೆದಿದ್ದಾರೆ.

ಹಾರರ್‌ ಸಿನಿಮಾಗನ್ನು ನೋಡಿ ಇಷ್ಟಪಡುವವರು ಮತ್ತು ಹೊಸ ಹುಡುಗರ ತಂಡವೊಂದು ವಿಶೇಷ ರೀತಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರಿಗೆ ಪ್ರಸೆಂಟ್‌ ಮಾಡಿರುವ ಕಾರಣಕ್ಕಾದರೂ ಒಂದು ಕಥೆ ಹೇಳ್ಲಾ ಸಿನಿಮಾವನ್ನು ನೋಡಲೇಬೇಕು.

.

ರೇಟಿಂಗ್‌: 3.25/5


Leave a Reply