ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ಹೊಸ ಸೇರ್ಪಡೆ“ಸೇವಂತಿ”.

.

ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ. ಹೊಸ ತಂತ್ರಜ್ಞಾನ, ವಿನೂತನಕಥಾ ಹಂದರ, ನವಿರಾದ ನಿರೂಪಣೆಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನು ಉಣಬಡಿಸಲು ಸಿದ್ಧತೆ ನಡೆಸಿದೆಉದಯ ಟಿವಿ. ‘ಸೇವಂತಿ’ ಎಂಬ ಈ ಸುಂದರಧಾರಾವಾಹಿ ಫೆ. 25 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

.

ಒಂದಾಗಬೇಕೆಂದುಕೊಂಡಾಗದೂರವಾಗುವ, ದೂರವಾಗಬೇಕೆಂದುಕೊಂಡಾಗಒಂದಾಗಲುಬಯಸುವ ಹುಡುಗಿಯಕಥೆ ‘ಸೇವಂತಿ’ – ಒಂದುದೃಶ್ಯ ವೈಭವವಾಗಿ ವೀಕ್ಷಕರ ಮುಂದೆ ಬರಲಿದೆ.
ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಬಹಳ ದಿನಗಳ ನಂತರಕಿರುತೆರೆಗೆಆಗಮಿಸುತ್ತಿರುವಹಿರಿಯ ನಟಿ ಭಾರತಿ ವಿಷ್ಣುವರ್ದನ್‍ಮುಖ್ಯ ಭೂಮಿಕೆಯಲ್ಲಿನಟಿಸುತ್ತಿದ್ದಾರೆ. ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ, ಸಂಗೀತ,ಗಿರೀಶ್‍ಅಭಿನಯಿಸುತ್ತಿದ್ದಾರೆ.

.

ಚೆಂದುಳ್ಳಿ ಚೆಲುವೆ ನಟಿ ಪಲ್ಲವಿ ಗೌಡ ಸೇವಂತಿ ಪಾತ್ರಕ್ಕೆಜೀವತುಂಬುತ್ತಿದ್ದಾರೆ. ಇವರಜೋಡಿಯಾಗಿ ಹ್ಯಾಂಡ್ ಸಮ್ ಶಿಶಿರ್ ಅವರು ನಾಯಕಅರ್ಜುನ್ ಆಗಿ ವೀಕ್ಷಕರನ್ನುರಂಜಿಸಲು ಬರುತ್ತಿದ್ದಾರೆ.

“ಸೇವಂತಿ” ಇದೇ ಫೆಬ್ರವರಿ 25 ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 7.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.


Leave a Reply