ಸಿನಿಮಾ : ಸ್ಟ್ರೈಕರ್

ತಾರಾಗಣ : ಪ್ರವೀಣ್, ಭಜರಂಗಿ ಲೋಕಿ, ಶಿಲ್ಪಾ ಮಂಜುನಾಥ್, ಧರ್ಮಣ್ಣ, ಅಶೋಕ್
ಡೈರೆಕ್ಷನ್: ಪವನ್ತ್ರಿವಿಕ್ರಮ್
ಮ್ಯೂಸಿಕ್: ಬಿ.ಜೆಭರತ್
ಪ್ರೊಡಕ್ಷನ್: ಗರುಡಾದ್ರಿ ಫಿಲಮ್ಸ್

.

ಕೆಲ ದಿನಗಳಿಂದ ಚಿತ್ರರಂಗದಲ್ಲಿ ಅತಿ ಹೆಚ್ಚು ಗೆಲುವು ಕಂಡ ಸಿನಿಮಾಗಳೆಂದರೆ ಅವು ಒಂದು ಕ್ರೈಂ ಥ್ರಿಲ್ಲರ್‌ ಮತ್ತೊಂದು ಹಾರರ್‌. ಈ ವಾರ ಕನ್ನಡದಲ್ಲಿ ಬಿಡುಗಡೆಯಾಗಿರುವ ಸ್ಟ್ರೈಕರ್‌ ಸಹ ಒಂದು ಕ್ರೈಂ ಥ್ರಿಲ್ಲರ್‌ ಸಬ್ಜೆಕ್ಟ್‌ ಹೊತ್ತು ತಂದಿದೆ.

ಮೂವರು ಸ್ನೇಹಿತರ ನಡುವೆ ನಡೆಯುವ ಕಥೆಯಲ್ಲಿ ಒಬ್ಬನ ಮರ್ಡರ್‌ ಆದಾಗ ಏನೆಲ್ಲ ಆಗುತ್ತದೆ ಈ ಕೊಲೆಗೂ ನಾಯಕನಿಗೆ ಇರುವ ಮಾನಸಿಕ ರೋಗಕ್ಕೆ ಸಂಬಂಧ ಕಲ್ಪಿತವಾಗಿ ಏನೇನಾಗುತ್ತದೆ ಎಂಬುದೇ ಸಿನಿಮಾ ಕಥೆ.

.

ಇದೊಂದು ಸಾಮಾನ್ಯ ಮತ್ತು ಬಂದು ಹೋಗಿರೋ ಕಥೆ ಆದರೆ ನಿರ್ದೇಶಕ ಪವನ್‌ ತ್ರಿವಿಕ್ರಮ್‌ ಚಿತ್ರಕಥೆ ಮತ್ತು ದೃಶ್ಯಗಳ ಜೋಡಣೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುತ್ತಾರೆ. ಇಡೀ ಸಿನಿಮಾ ಆ ಒಂದು ಕೊಲೆಯ ಸುತ್ತ ಸಾಗುತ್ತದೆ. ಒಂದೇ ಕೊಲೆ ಆದ ಕಾರಣ ನಿರ್ದೇಶಕರು ಒಂದಷ್ಟು ಕಮರ್ಷಿಯಲ್‌ ಅಂಶಗಳನ್ನು ಇಟ್ಟಿದ್ದರೆ ಸಿನಿಮಾಗೆ ಇನ್ನಷ್ಟು ವೇಗ ಸಿಗುತ್ತಿತ್ತು. ಆದರೂ ಕುತೂಹಲಕ್ಕೇನು ಕಡಿಮೆ ಇಲ್ಲ.

.

ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾದ್ದರಿಂದ ಎಲ್ಲವನ್ನುಆ ಸಸ್ಪೆನ್ಸ್‌ ನ್ನು ಚಿತ್ರಮಂದಿರದಲ್ಲಿಯೇ ನೋಡಿದರೆ ಥ್ರಿಲ್‌ ಆಗಬಹುದು.

ನಾಯಕ ಪ್ರವೀಣ್‌ ತೇಜ್‌ ಬಹಳ ನೈಜವಾಗಿ ನಟಿಸಿದ್ದು, ಈ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಿದ್ದಾರೆ. ಲವರ್‌ ಬಾಯ್‌ ಆಗಿ, ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಎಲ್ಲ ರೀತಿಯಲ್ಲಿ ಸಿಕ್ಸರ್‌ ಬಾರಿಸಿದ್ದಾರೆ. ಸೌರವ್‌ ಲೋಕಿ ವಿಲನ್‌ ಮಾತ್ರವಲ್ಲ ನಾನು ಖಡಕ್‌ ಪೊಲೀಸ್‌ ಅಧಿಕಾರಿಯಾಗಿಯೂ ನಟಿಸಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ. ಧರ್ಮಣ್ಣ ಕಡೂರು ಅವರು ಸಹ ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ.

.

ನಾಯಕಿ ಶಿಲ್ಪಾ ಮಂಜುನಾಥ್‌ ಅವರದ್ದು ಪಾತ್ರಕ್ಕೆ ತಕ್ಕಂತ ನಟನೆ. ಉಳಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಫಸ್ಟ್‌ ಆಫ್‌ ಅಲ್ಲಲ್ಲಿ ಎಳೆದಂತೆ ಅನಿಸಿದರೂ ಸೆಕೆಂಡ್‌ ಆಫ್‌ನಲ್ಲಿ ನಿರ್ದೇಶಕರು ಮೇಕ್‌ ಒವರ್‌ ಮಾಡಿಕೊಂಡಿದ್ದಾರೆ.

ಈ ಥ್ರಿಲ್ಲರ್ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

 

ರೇಟಿಂಗ್‌:3.25/5


Leave a Reply