ಉದ್ಘರ್ಷ – ಚಿತ್ರ ವಿಮರ್ಶೆ


ಸುನೀಲ್‌ಕುಮಾರ್‌ ದೇಸಾಯಿ ಸಿನಿಮಾಗಳೆಂದರೆ ಸಖತ್‌ ಥ್ರಿಲ್ಲಿಂಗ್‌, ಬೆಚ್ಚಿ ಬೀಳಿಸುವ ರಿರೇಕಾರ್ಡಿಂಗ್‌, ಒಂದೇ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಹೀಗೆ ಸಾಕಷ್ಟು ಅಂಶಗಳಿರುತ್ತವೆ. ಈ ವಾರ ಬಿಡುಗಡೆಯಾಗಿರುವ ಉದ್ಘರ್ಷದಲ್ಲಿ ಅಂತಹ ಅಂಶಗಳು ಸ್ವಲ್ಪ ಹೆಚ್ಚಾಗಿಯೇ ಇದೆ. ಅದರಲ್ಲೂ ಥ್ರಿಲ್ಲಿಂಗ್‌ ಅಂಶಗಳಂತೂ ಯಥೇಚ್ಛವಾಗಿದ್ದು, ಪ್ರೇಕ್ಷಕನ ಧೈರ್ಯಕ್ಕೆ ಸವಾಲಾಗಿರುವಂತಿವೆ.


.

ಉದ್ಘರ್ಷ ಎನ್ನುವ ಪದಕ್ಕೆ ನಿಖರವಾದ ಅರ್ಥವಿಲ್ಲ ಹಾಗಾಗಿ ನಿರ್ದೇಶಕ ದೇಸಾಯಿ ಅವರು ಸಿನಿಮಾದಲ್ಲಿ ಚೂರು ಹೆಚ್ಚೇ ಕ್ರೌರ್ಯವನ್ನು ತೋರಿಸಿದ್ದಾರೆ. ಸಿನಿಮಾದ ಕೊನೆಯವರೆಗೂ ಸಸ್ಪೆನ್ಸ್‌ ಅನ್ನು ಉಳಿಸಿಕೊಳ್ಳುವ ಮೂಲಕ ತಾವು ಮತ್ತೊಮ್ಮೆ ಸಸ್ಪೆನ್ಸ್‌ ಕಿಂಗ್‌ ಎನಿಸಿಕೊಳ್ಳುತ್ತಾರೆ. ಸಾಕಷ್ಟು ಹೊಸ ನಟರನ್ನು ಪರಿಚಯಿಸಿ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಕೂರುವಂತೆ ಮಾಡಿದ್ದಾರೆ. ಇಡೀ ಸಿನಿಮಾ ನಿಂತಿರುವುದು ಬ್ಯಾಗ್ರೌಂಡ್‌ ಮ್ಯೂಸಿಕ್‌ ಮೇಲೆ ಅದನ್ನು ಸಂಗೀತ ನಿರ್ದೇಶಕರು ಸಮರ್ಥವಾಗಿ ನಿರ್ವಹಿಸಿದ್ದಾರೆ.

.

ತಮ್ಮ ಹಿಂದಿನ ಸಾಕಷ್ಟು ಸಿನಿಮಾಗಳಂತೆ ಹಿಂಸೆ ಸ್ವಲ್ಪ ಜಾಸ್ತಿಯಾದರೂ, ಥ್ರಿಲ್‌ ಎನಿಸುವಂತೆ ಚಿತ್ರಿಸಿದ್ದಾರೆ. ಇಷ್ಟೇಲ್ಲ ಹೇಳುತ್ತಿರುವಾಗ ಕಥೆಯೇನು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಚಿತ್ರವು ಎರಡು ದಿನದಲ್ಲಿ ನಡೆಯುವ ಕಥೆಯಾದ್ದರಿಂದ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ,ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆಂದ.

.

ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಏಕೆಂದು ಚಿತ್ರ ನೋಡಿದ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ದೇಸಾಯಿಯವರ ಕೆಲವು ಚಿತ್ರಗಳಂತೆ ಇಲ್ಲಿಯೂ ರೇಪ್ ಸೀನನ್ನು ಬಹಳ ರೋಚಕವಾಗಿ ಚಿತ್ರಿಸಿದ್ದಾರೆ. ಚಿತ್ರದಲ್ಲಿನ ಕೆಲವೊಂದು ಶಾರ್ಟ್ ಕಂಪೋಸಿಷನ್ ಖುಷಿ ಕೊಡುತ್ತವೆ. ಚಿತ್ರದ ಮೇಕಿಂಗ್ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ ಚಿತ್ರದ ನಿರ್ದೇಶಕರು ಬಹಳ ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ.

.

ಸಾಯಿ ಧನ್ಸಿಕಾ, ಠಾಕೂರ್‌ ಅನೂಪ್‌ ಸಿಂಗ್‌, ಕಿಶೋರ್‌, ಶ್ರದ್ಧಾ ದಾಸ್‌, ಕಬೀರ್‌ ಸಿಂಗ್‌ ದುಹಾನ್‌ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಥ್ರಿಲ್ಲಿಂಗ್‌ ಅನುಭವಗಳನ್ನು ಪಡೆಯಬೇಕು ಎನ್ನುವವರು, ದೇಸಾಯಿ ಸಿನಿಮಾಗಳನ್ನು ಇಷ್ಟಪಡುವವರು ಉದ್ಘರ್ಷವನ್ನು ಒಮ್ಮೆ ನೋಡಬಹುದು.

.

ರೇಟಿಂಗ್ – 3.5/5.


Digiqole ad

Nithyanand Amin

Leave a Reply