ಚಿತ್ರ: ಯಾರಿಗೆ ಯಾರುಂಟು

ನಿರ್ದೇಶನ: ಕಿರಣ್‌ ಗೋವಿ

ನಿರ್ಮಾಣ: ಎಸ್‌ ಎಲ್‌ ಆರ್‌ ಎಂಟರ್‌ ಪ್ರೈಸಸ್‌

ತಾರಾಗಣ: ಒರಟ ಪ್ರಶಾಂತ್‌, ಲೇಖಾ ಚಂದ್ರ, ಕೃತಿಕಾ ರವೀಂದ್ರ, ಅದಿತಿ ರಾವ್‌, ಅಚ್ಯುತ್‌ಕುಮಾರ್‌

.

ಡಾಕ್ಟರ್‌ ಒಬ್ಬರು ಮೂರು ಜನರನ್ನು ಲವ್‌ ಮಾಡಿದರೆ ಹೇಗಿರುತ್ತದೆ, ಮತ್ತು ಅದಕ್ಕೊಂದಿಷ್ಟು ಕಾಮಿಡಿ, ಸುಮುಧರ ಹಾಡುಗಳು ಸೇರಿಕೊಂಡರೆ ಹೇಗಿರುತ್ತದೆ ಎಂದರೆ ಯಾರಿಗೆ ಯಾರುಂಟು ಸಿನಿಮಾವನ್ನು ನೋಡಬೇಕು.

ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ಹೃದಯವಂತ, ಮುಗ್ಧ ಯಾರೇ ಸಹಾಯ ಕೇಳಿದರೂ ಹಿಂದೆ ಮುಂದೆ ನೋಡದೇ ಮಾಡುವ ವ್ಯಕ್ತಿಯ ಲವ್‌ ಸ್ಟೋರಿಗಳೇ ಈ ಸಿನಿಮಾದ ಕಥೆ ಮತ್ತು ಚಿತ್ರಕಥೆ.

.

ಚಿರಂಜೀವಿ [ಒರಟ ಪ್ರಶಾಂತ್‌] ತನಗೆ ಆಗುವ ಪ್ರೀತಿಗಳನ್ನು ಉಳಿಸಿಕೊಳ್ಳಲಾಗದೇ ಒದ್ದಾಡುವ ವ್ಯಕ್ತಿ. ತನ್ನ ಪ್ರಾಮಾಣಿಕತೆ ಮತ್ತು ಮುಗ್ಧತೆಯಿಂದ ಆಸ್ಪತ್ರೆಯಲ್ಲಿ ಎಲ್ಲರಿಂದಲೂ ಮೆಚ್ಚುಗೆ ಗಳಿಸುವ ಆತನ ಲವ್‌ ಸ್ಟೋರಿಗೆ ಆಸ್ಪತ್ರೆ ಟೀಮ್ ಕೂಡಾ ಸಪೋರ್ಟ್‌ ಮಾಡುತ್ತಿರುತ್ತಾರೆ. ಇಂತಹ ಸಭ್ಯ, ಮುಗ್ಧ ಚಿರಂಜೀವಿ ಮೂರು ಬಾರಿ ಯಾಕೆ ಲವ್‌ ಮಾಡುತ್ತಾನೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ.

.

ಬಹಳ ದಿನಗಳ ನಂತರ ಬಂದಿರುವ ಒರಟ ಪ್ರಶಾಂತ್‌ ಮುಗ್ಧನಾಗಿ ಚೆನ್ನಾಗಿ ನಟಿಸಿದ್ದಾರೆ. ಆದರೆ ಲವರ್‌ ಬಾಯ್‌ ಲುಕ್‌ಗೆ ಇನ್ನಷ್ಟು ಶ್ರಮ ಹಾಕಬೇಕು. ನಾಯಕಿರಾದ ಲೇಖ ಚಂದ್ರ, ಕೃತಿಕಾ ರವೀಂದ್ರ, ಆದಿತಿ ಮೂವರು ತಮ್ಮ ಕೆಲಸವನ್ನು ಅಚ್ಚುಟ್ಟಾಗಿಸಿದ್ದಾರೆ. ನಿರ್ದೇಶಕ ಕಿರಣ್‌ ಗೋವಿ ಬಹಳ ದಿನಗಳ ನಂತರ ಕಮ್‌ ಬ್ಯಾಕ್‌ ಮಾಡಿದ್ದರೂ ನೀಟ್ ಸಿನಿಮಾ ಮಾಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಟ್ವಿಸ್ಟ್‌ ಗಳನ್ನು ಇಟ್ಟು, ರೋಚಕತೆಯನ್ನು ತುಂಬಿದ್ದರೆ ಸಿನಿಮಾ ಇನ್ನಷ್ಟು ಕಳೆಗಟ್ಟುತ್ತಿತ್ತು. ಕಾಮಿಡಿ ದೃಶ್ಯಗಳು ಅಲ್ಲಲ್ಲಿ ಅಷ್ಟೊಂದು ಪಂಚ್ ಆಗಿಲ್ಲ. ಚಿತ್ರದ ಹಾಡುಗಳ ಹೊರತಾಗಿ ಚಿತ್ರದ ಮೇಕಿಂಗ್ ನಾರ್ಮಲ್ ಅನಿಸುತ್ತದೆ.

.

ಬಿ.ಜೆ ಭರತ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರದ ಮೇಜರ್ ಹೈಲೈಟ್ ಎನ್ನಬಹುದು. ಕುರಿ ಪ್ರತಾಪ್‌ ಅವರ ಕಾಮಿಡಿ ಚೆನ್ನಾಗಿ ಬಿಂಬಿತವಾಗಿದೆ. ಎಲ್ಲ ಕಲಾವಿದರು ತಮಗೆ ವಹಿಸಿದ ಕೆಲಸವನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿದ್ದಾರೆ. ಈ ವಿಕೇಂಡ್‌ಗೆ ಸಂಗೀತಮಯ ಮತ್ತು ಫೀಲ್‌ ಗುಡ್ ಸಿನಿಮಾ ಇದಾಗಿದ್ದು ಒಮ್ಮೆ ನೋಡಬಹುದು.

ರೇಟಿಂಗ್ – 3/5


Leave a Reply