ಚಿತ್ರ: ಫಾರ್ಚುನರ್‌

ನಿರ್ದೇಶಕ: ಮಂಜುನಾಥ್‌ ಜೆ ಅನಿವಾರ್ಯ

ನಿರ್ಮಾಣ: ಗೊಲೇಚ ಫಿಲಂಸ್‌

ಸಂಗೀತ: ಪೂರ್ಣಚಂದ್ರ ತೇಜಸ್ವಿ

ಕಲಾವಿದರು: ದಿಗಂತ್‌, ಸೋನುಗೌಡ, ಸ್ವಾತಿ ಶರ್ಮಾ, ಕಲ್ಯಾಣಿ, ನವೀನ್‌ ಕೃಷ್ಣ, ರಾಜೇಶ್‌ ನಟರಂಗ

.

ಸಂಬಂಧಗಳನ್ನು ಪ್ರೀತಿಯಿಂದ ಮನಸ್ಸಿಗೆ ಸಂಬಂದಪಟ್ಟವೇ ಹೊರತು ಬಾಹ್ಯ ಜಗತ್ತಿಗೆ ತಕ್ಕಂತೆ ಅಲ್ಲ ಎಂಬುದನ್ನು ಮನರಂಜನೆಯ ಮೂಲಕ ಹೇಳುವ ಸಣ್ಣ ಪ್ರಯತ್ನವೇ ಈ ವಾರ ಬಿಡುಗಡೆಯಾಗಿರುವ ಫಾರ್ಚುನರ್‌.

ಫಾರ್ಚುನರ್‌ ಎಂದಾಕ್ಷಣ, ಕಾರಿನ ಬ್ರ್ಯಾಂಡ್‌ ನೆನಪಿಗೆ ಬರುತ್ತದೆ. ಈ ಸಿನಿಮಾದ ಕಥೆಯೂ ಈ ಫಾರ್ಚುನರ್ಗೆ ಸಂಬಂಧಪಟ್ಟಿದ್ದೆ ಆಗಿದೆ. ಫಾರ್ಚುನರ್ ಅಂದರೆ ಅದೃಷ್ಟ. ಈ ಅದೃಷ್ಟವನ್ನು ಇಲ್ಲಿ ಇಬ್ಬರು ಹುಡುಕಿ ಹೊರಡುತ್ತಾರೆ. ಹೊರಟ ಈ ಇಬ್ಬರಲ್ಲಿ ಒಬ್ಬರು ಯಶಸ್ವಿಯಾದರೆ ಮತ್ತೊಬ್ಬರು ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದಕ್ಕೆ ಅಲ್ಪ ವಿರಾಮ ಕೊಟ್ಟಿದ್ದಾರೆ ನಿರ್ದೇಶಕರು.

.

ಈ ಚಿತ್ರ ನಿರ್ದೇಶಕರ ಚೊಚ್ಚಲ ಸಿನಿಮಾವಾಗಿದೆ. ಆದರೆ ಇಡಿ ಸಿನಿಮಾದಲ್ಲಿ ಅಂತಹ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಬದಲಿಗೆ ಹಾಸ್ಯ, ಎಮೋಷನ್ಸ್‌, ಲವ್‌, ರೊಮ್ಯಾನ್ಸ್‌ ಎಲ್ಲವನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ನೀಡಿದ್ದಾರವರು. ಪ್ರತಿಯೊಬ್ಬರ ಸಂಬಂಧದಲ್ಲಿಯೂ ಸುಳ್ಳುಗಳನ್ನು ಹೇಳುತ್ತಾರೆ. ಆದರೆ ಈ ಸಿನಿಮಾದಲ್ಲಿ ಒಂದು ಸಂಬಂಧದ ಸೇತುವೆ ಸೃಷ್ಟಿಯಾಗುವುದೇ ಸುಳ್ಳಿನಿಂದ. ಆದರೆ ಅದೇ ಸುಳ್ಳು ಮನಸ್ಸಿನ ನೆಮ್ಮದಿಯನ್ನು ಸಹ ಹಾಳು ಮಾಡುತ್ತದೆ ಎಂಬುದನ್ನು ಬಹಳ ನೈಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಜುನಾಥ್‌. ಆ ಸುಳ್ಳು ಯಾವುದು, ಅದೃಷ್ಟವನ್ನು ಹುಡುಕಿಕೊಂಡು ಹೋಗುವ ವ್ಯಕ್ತಿಗಳ್ಯಾರು ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಚಿತ್ರಮಂದಿರಕ್ಕೆ ಹೋಗಿಯೇ ತಿಳಿಯಬೇಕು.

.

ನಿರ್ದೇಶಕ ಮಂಜುನಾಥ್‌ ತಮ್ಮ ಮೊದಲ ಚಿತ್ರದಲ್ಲಿಯೇ ಭರವಸೆಯ ನಿರ್ದೇಶಕರಾಗುವ ಲಕ್ಷಣ ತೋರಿದ್ದಾರೆ. ಹಾಸ್ಯದ ದೃಶ್ಯಗಳನ್ನಾಗಲಿ,  ಭಾವನಾತ್ಮಕ ದೃಶ್ಯಗಳನ್ನಾಗಲಿ ಅವರು ಅನುಭವಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರ ಕಲ್ಪನೆಗೆ ಪ್ರತಿಯೊಬ್ಬ ತಂತ್ರಜ್ಞರು, ಕಲಾವಿದರು ಸಾಥ್‌ ನೀಡಿದ್ದಾರೆ.

.

ಜವಬ್ದಾರಿ ಇಲ್ಲದ ಹುಡುಗನಾಗಿ, ಪ್ರೀತಿಗಾಗಿ ಹಂಬಲಿಸುವ ಪತಿಯಾಗಿ ನಟ ದಿಗಂತ್‌ ಅವರ ನಟನೆ ಇಷ್ಟವಾಗುತ್ತದೆ. ಅದರಲ್ಲೂ ಅವರು ನೀಡುವ ಎಕ್ಸ್‌ಪ್ರೆಶನ್‌ಗಳಿಗೆ ಪ್ರೇಕ್ಷಕರು ಬೋಲ್ಡ್‌ ಆಗುತ್ತಾರೆ. ಸೋನುಗೌಡ ಅವರ ಸೆಕೆಂಡ್‌ ಇನ್ನಿಂಗ್ಸ್‌ ಬಹಳ ಚೆನ್ನಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಗುಳ್ಟು ಸಿನಿಮಾದಲ್ಲಿಯೂ ಅವರ ನಟನೆ ಮತ್ತು ಸೌಂದರ್ಯದ ಬಗ್ಗೆ ಎಲ್ಲರೂ ಮಾತನಾಡಿದ್ದರು. ಈ ಚಿತ್ರದಲ್ಲಿಯೂ ಅವರು ತಮ್ಮ ಬೋಲ್ಡ್‌ ನಟನೆಯ ಮೂಲಕ ಗಮನ ಸೆಳೆಯುವುದರ ಜತೆಗೆ ಲುಕ್ಸ್ ಗಳಿಂದಲೂ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಾರೆ. ಸ್ವಾತಿ ಶರ್ಮಾ ಅವರ ಮುಗ್ಧ ನಟನೆಗೆ ಚಪ್ಪಾಳೆ ತಟ್ಟದವರೇ ಇಲ್ಲ. ಉಳಿದಂತೆ ಸುಜಯ್‌ ಶಾಸ್ತ್ರಿ, ರಾಜೇಶ್‌ ನಟರಂಗ ಸೇರಿದಂತೆ ಎಲ್ಲರೂ ತಮಗೆ ವಹಿಸಿದ ಕೆಲಸವನ್ನು ಚಾಚೂ ತಪ್ಪದೆ ನಿರ್ವಹಿಸಿದ್ದಾರೆ.

.

ಪೂರ್ಣಚಂದ್ರ ತೇಜಸ್ವಿಯವರ ಸಂಗೀತದಲ್ಲಿ ಎರಡ್ಮೂರು ಹಾಡು ಗುನುಗುವಂತೆ ಮಾಡುತ್ತದೆ. ಉಳಿದಂತೆ ಚಿತ್ರ ಒಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನರ್‌ ಆಗಿದ್ದು ಈ ವಿಕೇಂಡ್‌ನಲ್ಲಿ ಫ್ಯಾಮಿಲಿ ಸಮೇತ ನೋಡಬಹುದು.

ರೇಟಿಂಗ್ – 3.25/5


Leave a Reply