ಕಾಳಿದಾಸನಾದ ನವರಸ ನಾಯಕ ಜಗ್ಗೇಶ್


ತೋತಾಪುರಿ, ಪ್ರೀಮಿಯರ್ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಈ “ಕಾಳಿದಾಸ ಕನ್ನಡ ಮೇಷ್ಟ್ರು” ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

.
“ಕಾಳಿದಾಸ ಕನ್ನಡ ಮೇಷ್ಟ್ರು” ಸಿನಿಮಾದಲ್ಲಿ ಜಗ್ಗೇಶ್ ಕನ್ನಡ ಶಿಕ್ಷಕರಾಗಿ ನಟಿಸಲಿದ್ದಾರಂತೆ. ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ಮಾಡಿದ್ದ ಕವಿರಾಜ್ ಎರಡನೇ ಸಿನಿಮಾದಲ್ಲಿ ಕನ್ನಡದ ಕಂಪನ್ನು ಹರಡಿಸಲು ಸಿದ್ಧರಾಗಿದ್ದಾರೆ.
.
ಈ ಚಿತ್ರದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರಂತೆ ಇದೇ 10ರಿಂದ ಚಿತ್ರೀಕರಣ ಆರಂಭವಾಗಲಿದೆ.

