‘ಕವಚ’ ಒಪ್ಪಂನ ಸಂಪೂರ್ಣ ನಕಲಲ್ಲ : ನಿರ್ದೇಶಕ ವಾಸು

 ‘ಕವಚ’ ಒಪ್ಪಂನ ಸಂಪೂರ್ಣ ನಕಲಲ್ಲ : ನಿರ್ದೇಶಕ ವಾಸು

 


ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ‘ಕವಚ’ ಸಿನಿಮಾ ಮಲಯಾಳಂನ ‘ಒಪ್ಪಂ’ ರಿಮೇಕ್‌ ಆಗಿದ್ದರೂ, ಆ ಸಿನಿಮಾದ ಕಂಪ್ಲೀಟ್‌ ನಕಲಲ್ಲ ಎನ್ನುವುದು ನಿರ್ದೇಶಕರ ಮಾತಾಗಿದೆ.

.

ಚಿತ್ರ ಒಪ್ಪಂ ರೀಮೇಕ್‌ ಆಗಿದ್ದರೂ ಈ ಸಿನಿಮಾದಲ್ಲಿ ಕನ್ನಡದ ಸೊಗಡಿದೆ. ಶಿವರಾಜ್‌ಕುಮಾರ್‌ ಅವರು ಚಿತ್ರಕಥೆಯನ್ನು ಕಂಪ್ಲೀಟ್‌ ಚೇಂಜ್‌ ಮಾಡಿಕೊಂಡು ಹೇಳಿದಾಗಲೇ ನಟಿಸಲು ಒಪ್ಪಿಕೊಂಡರಂತೆ. ಹಾಗಾಗಿ ಅಭಿಮಾನಿಗಳು ಇದನ್ನು ಸ್ವಮೇಕ್‌ ರೀತಿಯಲ್ಲೇ ಒಪ್ಪಿಕೊಳ್ಳಬಹುದು ಎನ್ನುತ್ತಾರವರು.

.

ಈ ಚಿತ್ರದಲ್ಲಿ ಡಾ.ಶಿವರಾಜ್‌ಕುಮಾರ್‌ ಅಂಧನಾಗಿದ್ದರೂ ಫೈಟ್‌ ಸಹ ಮಾಡಿದ್ದಾರೆ. ಇದೇ 18ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಶಿವರಾಜ್‌ಕುಮಾರ್‌ ಜತೆ ಇಷಾ ಕೊಪ್ಪಿಕರ್‌, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ.


Digiqole ad

Nithyanand Amin

Leave a Reply