ದಾಖಲೆ ಮೊತ್ತಕ್ಕೆ “ಕೆಜಿಎಫ್” ಆಡಿಯೋ ಹಕ್ಕು ಮಾರಾಟ


ರಾಕಿಂಗ್ ಸ್ಟಾರ್ ಯಶ್ ನಟನೆಯ “ಕೆಜಿಎಫ್” ಟ್ರೇಲರ್ನಿಂದಾಗಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.ಚಿತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ, ಸಿನಿಮಾದ ಆಡಿಯೋ ಹಕ್ಕು 3.60 ಕೋಟಿಗೆ ಲಹರಿ ಸಂಸ್ಥೆಗೆ ಮಾರಾಟವಾಗಿದೆ.

.
ಹೌದು ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿ ಕನ್ನಡ,ತೆಲುಗು,ತಮಿಳು, ಮಲಯಾಳಂ ಭಾಷೆಗಳ ಹಕ್ಕನ್ನು ಅವರು ಖರೀದಿಸಿದ್ದಾರೆ. ಈ ಮೊತ್ತಕ್ಕೆ ಕನ್ನಡ ಸಿನಿಮಾವೊಂದರ ಆಡಿಯೋ ಮಾರಾಟವಾಗಿರುವುದು ದಾಖಲೆಯಾಗಿದೆ. ಒಟ್ಟಿನಲ್ಲಿ ಯಶ್ ಕೆಜಿಎಫ್ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.
.
ಡಿ. 21ಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾ ದೇಶಾದ್ಯಂತ 5 ಭಾಷೆಗಳಲ್ಲಿ ತೆರೆಕಾಣಲಿದೆ.

