ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ, ಹಿಂದಿ, ತೆಲುಗು,ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇಂದಿಗೆ(ಜ.31) ಚಿತ್ರರಂಗಕ್ಕೆ ಬಂದು 23 ವರ್ಷ.

.

ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ 23 ವರ್ಷಗಳ ತಮ್ಮ ಸಿನಿ ಜರ್ನಿಯನ್ನು ಕಿಚ್ಚ ನೆನಪಿಸಿಕೊಂಡಿದ್ದಾರೆ. ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದ ತಮ್ಮ ಮೊದಲ ಚಿತ್ರದ ನೆನಪಲ್ಲಿ ಸುದೀಪ್ ಟ್ವೀಟ್ ಮಾಡಿದ್ದು, ಈ ಬಗ್ಗೆ ಅವರಿಗೆ ಸ್ಯಾಂಡಲ್‌ವುಡ್‌ನ ಅನೇಕ ನಿರ್ದೇಶಕರು,ನಟರು ಟ್ವೀಟರ್‌ ಮೂಲಕ ಶುಭಾಶಯ ಕೋರಿದ್ದಾರೆ.

.

ತಮ್ಮ ಸಿನಿಮಾದ ನೆನೆಪಿನಲ್ಲಿ ಸುದೀಪ್‌ ತಮ್ಮ ಪತ್ನಿಯ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ತಾವು ಅವಕಾಶಕ್ಕಾಗಿ ಓಡಾಡುತ್ತಿದ್ದಾಗೆ ಪತ್ನಿಯ ಸ್ಕೂಟಿ ಬಳಸಿದ್ದನ್ನು ಸ್ಮರಿಸಿದ್ದಾರೆ. ಆ ಸಮಯದಲ್ಲಿ ನನಗೆ ಸ್ಕೂಟಿ ನೀಡಿದ್ದಕ್ಕೆ ಥ್ಯಾಂಕ್ಸ್‌ ಎಂದು ಪತ್ನಿಗೆ ಹೇಳಿದ್ದಾರೆ. ಸುದೀಪ್‌ ಅವರ ಈ ಭಾವಾನತ್ಮಕ ಟ್ವೀಟ್‌ ಈಗ ವೈರಲ್‌ ಆಗಿದೆ.

.

ಸುದೀಪ್ ಅವರ 23 ವರ್ಷದ ಜರ್ನಿಯನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಸಾಕಷ್ಟು ಪೋಸ್ಟರ್ ಗಳನ್ನು ಮಾಡುವ ಮುಖೇನ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

.

ಸುದೀಪ್‌ ಸದ್ಯ ಪೈಲ್ವಾನ್‌, ಸೈರಾ ನರಸಿಂಹ ರೆಡ್ಡಿ, ಕೋಟಿಗೋಬ್ಬ-3 ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ.


Leave a Reply