ಬಹುಕೋಟಿ ವೆಚ್ಚದ ಅಡ್ವೆಂಚರ್ ಥ್ರಿಲ್ಲರ್ ನಲ್ಲಿ ಕಿಚ್ಚ ಸುದೀಪ

 ಬಹುಕೋಟಿ ವೆಚ್ಚದ ಅಡ್ವೆಂಚರ್ ಥ್ರಿಲ್ಲರ್ ನಲ್ಲಿ ಕಿಚ್ಚ ಸುದೀಪ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುವ ಆಸೆಯ ಬಗ್ಗೆ ಬಹಳ ದಿನಗಳ ಹಿಂದೆಯೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು.. ಆ ಕಾಲ ಈಗ ಕೂಡಿ ಬಂದಿದೆ. ಹೌದು, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಅಡ್ವೆಂಚರ್ ಸಿನಿಮಾ ಒಂದರಲ್ಲಿ ಕಿಚ್ಚ ಸುದೀಪ ನಾಯಕರಾಗಿ ನಟಿಸಲಿದ್ದಾರೆ.


.

ಈ ಚಿತ್ರವು ಕಿಚ್ಚ ಸುದೀಪ ಅವರ “ಸುಪ್ರಿಯಾನ್ವಿ” ಬ್ಯಾನರ್ನಲ್ಲಿ ತಯಾರಾಗಲಿದ್ದು ಅವರೊಂದಿದೆ ಜಾಕ್ ಮಂಜುನಾಥ್ ಅವರ “ಕೆ ಎಸ್ ಕೆ ಶೋ ರೀಲ್” ಸಂಸ್ಥೆಯು ನಿರ್ಮಾಣದಲ್ಲಿ ಕೈಜೋಡಿಸಲಿದ್ದಾರೆ. ಈ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಬಹುಭಾಷಾ ಚಿತ್ರವಾಗಲಿದೆಯಂತೆ.

.

“ಅನೂಪ್ ಭಂಡಾರಿ ಅವರು ಹೇಳಿದ ಒನ್ ಲೈನ್ ಸ್ಟೋರಿ ತುಂಬಾ ಹಿಡಿಸಿತು. ಬಹಳ ಎಕ್ಸಿಟಿಂಗ್ ಅನ್ನಿಸ್ತು, ಅದರಿಂದ ನಾನೇ ನಿರ್ಮಿಸೋಣ ಅಂತ ತೀರ್ಮಾನಿಸಿದೆ. ನಮ್ಮ ಬ್ಯಾನರ್ “ಸುಪ್ರಿಯಾನ್ವಿ” ಜೊತೆ ಜಾಕ್ ಮಂಜು ಅವರ “ಕೆ ಎಸ್ ಕೆ ಷೋ ರೀಲ್” ಕೂಡ ನಿರ್ಮಾಣದಲ್ಲಿ ಜೊತೆಯಾಗಲಿದ್ದು, ಬಹು ಕೋಟಿವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ತಯಾರಾಗಲಿದೆ. ಸದ್ಯಕ್ಕೆ ಹೆಚ್ಚೇನೂ ಹೇಳಲಾರೆ, ಗುರುವಾರ ಸಂಜೆ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ” ಎಂದಷ್ಟೇ ಹೇಳಿ ಚಿತ್ರದ ಬಗೆಗಿನ ತಮ್ಮ ಉತ್ಸಾಹ ಹಂಚಿಕೊಂಡರು ಕಿಚ್ಚ ಸುದೀಪ್.

.

ಈ ಚಿತ್ರವು ಅವರು ಸದ್ಯ ಒಪ್ಪಿಕೊಂಡಿರುವ ಕನ್ನಡದ “ಪೈಲ್ವಾನ್” “ಕೋಟಿಗೊಬ್ಬ 3”, ತೆಲುಗಿನ “ಸೈರಾ” ಮತ್ತು ಹಾಲಿವುಡ್ ಚಿತ್ರ ರೈಸನ್ ಚಿತ್ರೀಕರಣ ಮುಗಿಸಿದ ನಂತರ ಬಹುಷಃ ಮೇ ತಿಂಗಳಲ್ಲಿ ಶುರುವಾಗಬಹುದು.

.

ಕಿಚ್ಚ ಸುದೀಪ್ ಅವರು ನಟಿಸುತ್ತಿರುವ “ಪೈಲ್ವಾನ್” ಚಿತ್ರದ ಶೇಕಡಾ 75ರಷ್ಟು ಶೂಟಿಂಗ್ ಮುಗಿದಿದ್ದು,ಜನವರಿಯಲ್ಲಿ ಬಹುತೇಕ ಚಿತ್ರೀಕರಣ ಮುಗಿಯಲಿದ್ದು.. ಸಂಕ್ರಾಂತಿ ನಂತರ ಸುದೀಪ್ ಅವರು ‘ಕೋಟಿಗೊಬ್ಬ 3’ ತಂಡ ಸೇರಿಕೊಳ್ಳಲಿದ್ದಾರೆ.

.

ಸದ್ಯಕ್ಕೆ ಈ ಅಡ್ವೆಂಚರ್ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಅನೂಪ್ ಭಂಡಾರಿ ಮತ್ತು ತಂಡ.


Digiqole ad

Nithyanand Amin

Leave a Reply