ಬ್ಯಾಂಕಾಕ್‌ನಲ್ಲಿ ನಡೆಯಲಿದೆ “ಕೋಟಿಗೊಬ್ಬ-3” ಕ್ಲೈಮ್ಯಾಕ್ಸ್‌

 ಬ್ಯಾಂಕಾಕ್‌ನಲ್ಲಿ ನಡೆಯಲಿದೆ “ಕೋಟಿಗೊಬ್ಬ-3” ಕ್ಲೈಮ್ಯಾಕ್ಸ್‌

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ ‘ಕೋಟಿಗೋಬ್ಬ-3’ ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ.


.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ.
.
ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ ಮತ್ತು ಕಿರುತೆರೆಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
.
ಇನ್ನು ಕೋಟಿಗೊಬ್ಬ-3 ಚಿತ್ರದ ಫಸ್ಟ್‌ ಲುಕ್‌ ಮತ್ತು ಟೀಸರ್‌ ನೋಡಿದ ಬಾಂಬೆ ಮೂಲದ ಕಂಪನಿಯೊಂದು ಹಿಂದಿ ಡಬ್ಬಿಂಗ್‌ ರೈಟ್ಸ್‌ನ್ನು 9 ಕೋಟಿಗೆ ಕೊಂಡುಕೊಳ್ಳಲು ಮುಂದಾಗಿದೆಯಂತೆ. ಇನ್ನು ಎಲ್ಲ ಭಾಷೆಯ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡಾ ಭಾರಿ ಮೊತ್ತದ ಆಫರ್‌ ಬಂದಿದೆಯಂತೆ. ಆದರೆ ಚಿತ್ರೀಕರಣ ಮುಗಿಯುವವರೆಗೂ ಮಾರಾಟ ಮಾಡದಿರುವ ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ.


Digiqole ad

Nithyanand Amin

Leave a Reply