ಶೃಂಗಾರದ ಹೊಂಗೆ ಮರದ ಹಾಡಿನ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ ಭಟ್ಟರ ‘ಪಂಚತಂತ್ರ’ ಸಿನಿಮಾ ಫೆಬ್ರವರಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

.

ಈಗಾಗಲೇ ಟೀಸರ್‌ ಮೂಲಕವೂ ಭಟ್ಟರು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ವಿಹಾನ್‌ಗೌಡ ಮತ್ತು ಸೋನಲ್‌ ಮಂಥೇರೋ , ಅಕ್ಷರಗೌಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಕಥೆ ಮಾಸ್ತಿ ಮತ್ತು ಕಾಂತರಾಜ್‌ ಅವರದ್ದು. ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಕಥೆ ಇದಾಗಿದ್ದು,ಇದರಲ್ಲಿ ಕಾರ್‌ ರೇಸ್‌ ಪ್ರಮುಖ ಅಂಶವಾಗಿದೆ.
.

ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೆಲೋಡಿ ಜತೆಗೆ ಮಾಸ್‌ ಹಾಡುಗಳು ಇವೆಯಂತೆ. ಹರಿಪ್ರಸಾದ್‌ ಜಯಣ್ಣ ಮತ್ತು ಹೇಮಂತ್‌ ಪರಾಡ್ಕರ್‌ ಬಂಡವಾಳ ಹೂಡಿದ್ದಾರೆ. ಯೂತ್‌ ಮತ್ತು ಫ್ಯಾಮಿಲಿಗೆ ಈ ಚಿತ್ರ ಇಷ್ಟವಾಗುತ್ತದೆ.
.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರೇಮಿಗಳ ದಿನ ಅಂದರೆ ಫೆ.14ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ.


Leave a Reply