ವಯಸ್ಸು 50 ದಾಟಿದರೂ ಚಿರ ಯುವಕನಂತೆ ನಟಿಸುವ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಚಿತ್ರರಂಗಕ್ಕೆ ಕಾಲಿಟ್ಟು ಮಂಗಳವಾರಕ್ಕೆ 33 ವರ್ಷಗಳಾಗಿವೆ. ಫೆಬ್ರವರಿ 16 1986 ರಂದು ಶಿವಣ್ಣರ ಮೊದಲ ಸಿನಿಮಾ “ಆನಂದ್” ಬಿಡುಗಡೆಯಾಗಿತ್ತು.

.

ಆನಂದ್ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಶಿವಣ್ಣ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್‌ ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸೂಪರ್‌ ಹಿಟ್‌ ಆದವು ಹಾಗಾಗಿ ಅವರಿಗೆ ಹ್ಯಾಟ್ರಿಕ್‌ ಹಿರೋ ಎಂಬ ಬಿರುದನ್ನು ಅಭಿಮಾನಿಗಳು ನೀಡಿದರು. ಜನುಮದ ಜೋಡಿ, ಓಂ,ಜೋಗಿ,ಟಗರು ಸೇರಿದಂತೆ ಹಲವು ಬಿಗ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವರಾಜ್‌ಕುಮಾರ್‌ ಇಂದಿಗೂ ಸ್ಯಾಂಡಲ್‌ವುಡ್‌ನ ಅತಿ ಬೇಡಿಕೆಯ ನಟ.

.

ಇಂದಿಗೆ ಶಿವಣ್ಣ ಸ್ಯಾಂಡಲ್ವುಡ್‌ಗೆ ಕಾಲಿಟ್ಟು 33 ವರ್ಷವಾಗಿದೆ ಈ ಪ್ರಯುಕ್ತ ಅಭಿಮಾನಿಗಳು ಇದನ್ನು ಸಂಭ್ರಮಿಸಲು ತಯಾರಾಗಿದ್ದರು ಆದರೆ ಪುಲ್ವಾಮ ಅಟ್ಯಾಕ್‌ ಆದ ಕಾರಣ ಶಿವರಾಜ್‌ಕುಮಾರ್‌ ಸಂಭ್ರಮಾಚರಣೆ ಮಾಡದಂತೆ ಮನವಿ ಮಾಡಿದ್ದಾರೆ. ಶಿವಣ್ಣನ ಮನವಿಗೆ ಒಪ್ಪಿದ ಅಭಿಮಾನಿಗಳು ಹುತಾತ್ಮ ಯೋಧ ಗುರು ಅವರ ಊರಿಗೆ ಹೋಗಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಬಂದಿದ್ದಾರೆ. ಒಟ್ಟಿನಲ್ಲಿ ಶಿವರಾಜ್‌ಕುಮಾರ್‌ ಅವರ 33ರ ಸಂಭ್ರಮವನ್ನು ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದ್ದಾರೆ.


Leave a Reply