ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ತಯಾರಾಗುತ್ತಿರುವ “ಸುವರ್ಣ ಸುಂದರಿ” ಸಿನಿಮಾದ ಟ್ರೇಲರ್‌ ಇದೇ 19ಕ್ಕೆ ಬಿಡುಗಡೆಯಾಗಲಿದೆ. ಈ ಟ್ರೇಲರ್‌ ಬಿಡುಗಡೆ ಸಮಾರಂಭಕ್ಕಾಗಿ ಚಿತ್ರತಂಡ ವಿಡಿಯೋ ಇನ್ವಿಟೇಶನ್‌ ಕಾರ್ಡ್‌ ಮಾಡಿಸಿದೆ.

.

ಹೌದು ಜಯಪ್ರದಾ,ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ನಟನೆಯ ಸುವರ್ಣ ಸುಂದರಿ ಸಿನಿಮಾದಿಂದ ಈ ಹಿಂದೆ ಒಂದು ಟೀಸರ್‌ ಮತ್ತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಇವುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದವು. ಈಗ ಅದೇ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೂ ಮುನ್ನವೇ ಇದರ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದೆ ಚಿತ್ರತಂಡ.

.
.

ಇನ್ವಿಟೇಶನ್‌ ಕಾರ್ಡ್‌ ಓಪನ್‌ ಮಾಡಿದ ಕೂಡಲೇ ಸಣ್ಣ ವಿಡಿಯೋ ಒಂದು ಪ್ರಸಾರವಾಗಲಿದ್ದು, ಅದು ಟ್ರೇಲರ್‌ ಲಾಂಚ್‌ ಬಗ್ಗೆ ತಿಳಿಸುತ್ತದೆ. ಇಂತಹ ಆಮಂತ್ರಣ ಪತ್ರಿಕೆ ಕನ್ನಡ ಸಿನಿಮಾದ ಮಟ್ಟಿಗೆ ಮೊದಲ ಪ್ರಯತ್ನವಾಗಿದೆ. ಈ ಸಿನಿಮಾದಲ್ಲಿ ವಿಜಯನಗರದ ಸಾಮ್ರಾಜ್ಯದ ಪ್ರಸ್ತಾಪವು ಇದ್ದು, ಶೇ. 40ರಷ್ಟು ಸಿನಿಮಾ ಸಿಜಿಯಲ್ಲೇ ಆಗಿದೆ. ಹಾಗಂತ ಇದು ಅಸಹಜವಾಗಿರುವುದಿಲ್ಲ, ನೋಡಿದ ಕೂಡಲೇ ಇಷ್ಟವಾಗುವಂತಿರುತ್ತದೆ ಎನ್ನುವುದು ಚಿತ್ರತಂಡದ ಮಾತು. ಇನ್ನು ಬಾಹುಬಲಿಗೆ ಕೆಲಸ ಮಾಡಿದ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಿದ್ದಾರೆ.


Leave a Reply