ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ನಟನೆಯ ಮಾಸ್ ಎಂಟರ್‌ಟೇನರ್ “ದಿ ವಿಲನ್‌” ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ.

.

ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ ಮಾಡಿದ ಸಿನಿಮಾ ಇದಾಗಿದ್ದು,ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ನಟನೆಯ ಜೊತೆಗೆ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಪ್ರೇಕ್ಷಕರಿಗೆ ಹಿಡಿಸಿತ್ತು.

.

ಇನ್ನು ಇಡೀ ಸಿನಿಮಾ ಎಚ್‌ಡಿ ಕ್ವಾಲಿಟಿಯ ಪ್ರಿಂಟ್ ಪೈರಸಿ ವಿಡಿಯೋ ಸಾಕಷ್ಟು ಜನರ ಮೊಬೈಲ್‌ನಲ್ಲಿದೆ ಆದರೂ, ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ,ಪ್ರಸನ್ನ ಸೇರಿದಂತೆ 4 ಚಿತ್ರಮಂದಿರಗಳ ಜೊತೆಗೆ ರಾಜ್ಯಾದ್ಯಂತ ಸುಮಾರು 20 ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನಗಳನ್ನು ಪೂರೈಸಿದೆ.

.

“ದಿ ವಿಲನ್‌” ಸಿನಿಮಾ 50 ದಿನಗಳನ್ನು ಪೂರೈಸಿದ್ದಕ್ಕೆ ನಟ ಸುದೀಪ್‌ ಅಭಿಮಾನಿಗಳಿಗೆ ಟ್ವೀಟರ್‌ ಮೂಲಕ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಈ ವರ್ಷದಲ್ಲಿ “ದಿ ವಿಲನ್‌” ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ.


Leave a Reply