ಫ್ರಾಂಕ್‌ ಕಾಲ್‌ ಮತ್ತು ಆರ್‌ಸಿಬಿ ಇನ್‌ಸೈಡರ್‌ ಆಗಿ ಫೇಮಸ್‌ ಆಗಿದ್ದ ದಾನಿಶ್‌ ಸೇಠ್‌ ಕಳೆದ ವರ್ಷ ಹಂಬಲ್‌ ಪೋಲಿಟಿಶಿಯನ್‌ ನೋಗರಾಜ್‌ ಸಿನಿಮಾ ಮೂಲಕ ನಾಯಕರಾಗಿ ಎಂಟ್ರಿ ಕೊಟ್ಟಿದ್ದರು, ಆ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದರ ಮುಂದಿನ ಭಾಗವನ್ನು ಮಾಡುವುದಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆ.

ಮೊದಲ ಸಿನಿಮಾವನ್ನು ದಾನಿಶ್‌ ಅವರ ಗೆಳೆಯ ಸಾದ್‌ಖಾನ್‌ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ರೀವಿಲ್‌ ಆಗಿಲ್ಲ. ಆದರೆ ಸಾದ್‌ ತಂಡದಲ್ಲಿ ಇರುತ್ತಾರೆ ಎಂಬುದಷ್ಟೇ ಗೊತ್ತಾಗಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಹಂಬಲ್‌ ಪೋಲಿಟಿಶಿಯನ್‌ನಂತೂ ನಾವು ನೋಡುತ್ತೇವೆ. ದಾನಿಶ್‌ ಸದ್ಯ ಪುನೀತ್‌ರಾಜ್‌ಕುಮಾರ್‌ ನಿರ್ಮಾಣದ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ಪನ್ನಗಭರಣ ನಿರ್ದೇಶನ ಮಾಡಿದ್ದಾರೆ. ಅದಕ್ಕಿನ್ನೂ ಟೈಟಲ್‌ ಇಟ್ಟಿಲ್ಲ. 


Leave a Reply