ನವರಸ ನಟನ ಚಲನಚಿತ್ರ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಒಂದು ವಿಭಿನ್ನ ಕಿರುಚಿತ್ರ ಮೂಡಿಬಂದಿದೆ.

ಚಿತ್ರದ ಹೆಸರು ’ಪ್ರಶ್ನೆ’. ಹೌದು ಚಿತ್ರದ ಶೀರ್ಷಿಕೆಯಂತೆ ಚಿತ್ರವು ವಿಭಿನ್ನವಾಗಿರುವುದಂತು ಸತ್ಯ.

ಕೆಲ ತಿಂಗಳುಗಳ ಹಿಂದೆ ಹೆಸರಾಂತ ದೇವಸ್ಥಾನದಲ್ಲಿ ಊಟಕ್ಕೆ ವಿಷ ಬೆರೆಸಿದ ಘಟನೆ ನಡೆದಿತ್ತು. ಇದರಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದು, 65 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದರು. ಇದನ್ನು ಕಥೆಯ ವಸ್ತುವಾಗಿ ಇಟ್ಟುಕೊಂಡು ಹೆಣೆದಿರುವ ಕಥೆಯು ನೋಡುಗರನ್ನು ಮಂತ್ರ ಮುಗ್ಧಗೊಳಿಸುವುದಂತು ಖಂಡಿತ.

ಈ ಕಿರು ಚಿತ್ರದ ಕಥಾ ಸಂಭಾಷಣೆ ಮತ್ತು ನಿರ್ದೇಶನ ಚೇತನ್ ಕುಮಾರ್ ಅವರದ್ದು. ಚಿತ್ರದಲ್ಲಿ ನವರಸ ನಟನ ಸಂಸ್ಥೆಯ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

ಕಿರುಚಿತ್ರ ನೋಡದೇ ಇರುವವರು ಯೂಟ್ಯೂಬ್ ನಲ್ಲಿ ’ನವರಸ ನಟನ’ ಚಾನೆಲ್ ನಲ್ಲಿ ವೀಕ್ಷಿಸಬಹುದು.


Leave a Reply