Month: <span>April 2019</span>

ಚಿತ್ರೀಕರಣ ಮುಗಿಸಿದ “ಪೈಲ್ವಾನ್”

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. . ಹೆಬ್ಬುಲಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬರೀ ಟೀಸರ್ ನಿಂದಲೇ ಭಾರತೀಯ ಚಿತ್ರರಂಗದ ಗಣ್ಯರ ಗಮನ ಸೆಳೆದಿತ್ತು. ಇತ್ತೀಚೆಗೆ ಮುಂಬೈನಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ ಕಂಪ್ಲೀಟ್ ಮಾಡುವ ಮೂಲಕ ಸಿನಿಮಾವನ್ನು ಮುಗಿಸಿದ್ದಾರೆ ನಿರ್ದೇಶಕ ಕೃಷ್ಣ . . “ಏನು ಮಾಡ್ಲಿ ಹೊಡೀತು ಕಣ್ಣು ಚಪ್ಪಾಳೆ” ಎಂದು ಶುರುವಾಗುವ ಈ ಡ್ಯುಯೆಟ್ ಹಾಡನ್ನು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ […]Read More

“ಡಿ. ಕೆ ಬೋಸ್” – ಫೆಬ್ರವರಿ 24ಕ್ಕೆ ಟ್ರೈಲರ್ ; ಮಾರ್ಚ್ 15ಕ್ಕೆ

  ಬ್ರೇಕ್ ಫ್ರೀ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಮಹಂತೇಶ್ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸಿರುವ `ಡಿ.ಕೆ.ಬೋಸ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಾರ್ಚ್ 15 ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. . `ಡೈಮೆಂಡ್ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎನ್ನುವ ಕಥಾ ಹಂದರವುಳ್ಳ ಈ ಚಿತ್ರವನ್ನು ಚಿತ್ರದ ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಂತೇಶ್ ಅವರ ಸಹೋದರ ಸಂದೀಪ್ ಮಹಂತೇಶ್ ನಿರ್ದೇಶಿಸಿದ್ದಾರೆ. […]Read More

ಕರುನಾಡ ಚಕ್ರವರ್ತಿಗೆ 33 ರ ಸಂಭ್ರಮ

ವಯಸ್ಸು 50 ದಾಟಿದರೂ ಚಿರ ಯುವಕನಂತೆ ನಟಿಸುವ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಚಿತ್ರರಂಗಕ್ಕೆ ಕಾಲಿಟ್ಟು ಮಂಗಳವಾರಕ್ಕೆ 33 ವರ್ಷಗಳಾಗಿವೆ. ಫೆಬ್ರವರಿ 16 1986 ರಂದು ಶಿವಣ್ಣರ ಮೊದಲ ಸಿನಿಮಾ “ಆನಂದ್” ಬಿಡುಗಡೆಯಾಗಿತ್ತು. . ಆನಂದ್ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಶಿವಣ್ಣ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್‌ ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸೂಪರ್‌ ಹಿಟ್‌ ಆದವು ಹಾಗಾಗಿ ಅವರಿಗೆ ಹ್ಯಾಟ್ರಿಕ್‌ ಹಿರೋ ಎಂಬ ಬಿರುದನ್ನು ಅಭಿಮಾನಿಗಳು ನೀಡಿದರು. ಜನುಮದ ಜೋಡಿ, ಓಂ,ಜೋಗಿ,ಟಗರು ಸೇರಿದಂತೆ […]Read More

“ಸ್ಟ್ರೈಕರ್‌” ಹಿಡಿದ ಚೂರಿಕಟ್ಟೆ ಪ್ರವೀಣ್‌

  ಸಿಂಪಲ್ಲಾಗಿನ್ನೊಂದು ಲವ್‌ಸ್ಟೋರಿ ಚೂರಿಕಟ್ಟೆ ಮೂಲಕ ಗಮನ ಸೆಳೆದಿದ್ದ ನಟ ಪ್ರವೀಣ್‌ ತೇಜ್‌ ಈ ಸ್ಟ್ರೈಕರ್‌ ಸಿನಿಮಾ ಮೂಲಕ ತೆರೆ ಮೇಲೆ ಬರಲು ತಯಾರಿ ನಡಿಸಿದ್ದಾರೆ. ಪವನ್ ತ್ರಿವಿಕ್ರಮ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಸಸ್ಪೆನ್ಸ್‌ ಥ್ರ್ಲಿಲ್ಲರ್‌ ಸಬ್ಜೆಕ್ಟ್‌ ಅಂತೆ. . ಚೂರಿ ಕಟ್ಟೆ ಸಿನಿಮಾದದಂತಹ ಯಶಸ್ವಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್ ನಲ್ಲಿ ಕಾಣಿಸಿಕೊಂಡಿದ್ದು ಪ್ರವೀಣ್‌ ಮತ್ತೊಮ್ಮೆ ಅದೇ ಥರಹದ ಸಿನಿಮಾದಲ್ಲಿ ನಟಿಸಲು ಕಥೆಯೇ ಮುಖ್ಯ ಕಾರಣವಂತೆ. ಪ್ರವಣೀ ಜತೆ ಭಜರಂಗಿ ಸೌರವ್ ಲೋಕಿ, ಶಿಲ್ಪಾ ಮಂಜುನಾಥ್ , ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]Read More

“ಬೆಲ್‌ ಬಾಟಮ್‌” ಚಿತ್ರದಲ್ಲಿ ದರೋಡೆಯೇ ಪ್ರಮುಖ ಅಂಶ

ರಿಷಬ್‌ ಶೆಟ್ಟಿ ನಟನೆಯ ಬೆಲ್‌ಬಾಟಮ್‌ ಚಿತ್ರಕ್ಕೆ ಹತ್ತು ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ದರೋಡೆಯೇ ಪ್ರೇರಣೆಯಂತೆ. . ಇದೇ ವಾರ ಅಂದರೆ 15ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹರಿಪ್ರಿಯಾ ರಿಷಬ್‌ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಹಾಡುಗಳು ಸಿನಿಮಾದ ಬಗ್ಗೆ ಕುತೂಹಲ ಸೃಷ್ಟಿ ಮಾಡಿದೆ. . ಈಗ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ ಎಂಬ ವಿಷಯ ಕೂಡಾ ಸೇರಿಕೊಂಡು […]Read More

‘ಚಂಬಲ್’ ಚಿತ್ರದಲ್ಲಿದ್ಯಾ ಡಿಕೆ ರವಿ ಕಥೆ??

  ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ನಟ ಸತೀಶ್‌ ಅವರ ಚಂಬಲ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದನ್ನು ನೋಡಿದರೆ ಇದು ಐಎಎಸ್‌ ಅಧಿಕಾರಿ ಡಿ ಕೆ ರವಿ ಕಥೆ ಇದ್ದ ಹಾಗಿದೆ. . ಹೌದು ಚಂಬಲ್‌ ಸಿನಿಮಾದ ಟ್ರೇಲರ್ ನೋಡಿದ ತಕ್ಷಣ ಸಾಮಾನ್ಯರಿಗೆ ಬರುವ ಅಭಿಪ್ರಾಯ ಇದಾಗಿದೆ. ಈ ಸಿನಿಮಾವನ್ನು ಜೇಕಬ್‌ ವರ್ಗೀಸ್‌ ನಿರ್ದೇಶನ ಮಾಡಿದ್ದಾರೆ. . ಈ ಹಿಂದೆ ಜೇಕಬ್‌ ಪೃಥ್ವಿ, ಸವಾರಿ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್ ಹೇಳಿದ್ದರು. ಚಂಬಲ್‌ನಲ್ಲಿ ಸತೀಶ್‌ […]Read More

“ಉದ್ಘರ್ಷ” ಚಿತ್ರದ ಟ್ರೈಲರ್ಗೆ ‘ಕಿಚ್ಚ’ನ ಧ್ವನಿ

ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. . ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ‘ಉದ್ಘರ್ಷ’ ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ […]Read More

ಫ್ಲಮಿಂಗೊ ಅವಾರ್ಡ್ಸ್ 2018

ಸಿನಿಮಾ ಪ್ರಿಯರಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್‌ ಸೋಹ ಸಾರಥ್ಯದಲ್ಲಿ 2013ರಲ್ಲಿ ಪ್ರಾರಂಭ ಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಪ್ರತಿ ವರ್ಷ ಸೆಲಬ್ರಿಟಿಸ್ ಕ್ಯಾಲೆಂಡರ್ ಹೊರತರಲಾಗುತ್ತಿದೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ಅವಾರ್ಡ್‌ಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ […]Read More

‘ದಂಡುಪಾಳ್ಯಂ 4’ ಚಿತ್ರವನ್ನು ತಿರಸ್ಕರಿಸಿದ ಸೆನ್ಸಾರ್‌ ಮಂಡಳಿ

  ಸುಮನ್‌ ರಂಗನಾಥ್‌ ನಟಿಸಿರುವ ದಂಡುಪಾಳ್ಯಂ-4 ಚಿತ್ರವನ್ನು ಸೆನ್ಸಾರ್‌ ಮಂಡಳಿ ರಿಜೆಕ್ಟ್‌ ಮಾಡಿದೆ. ಆದರೆ ಯಾವುದೇ ಕಾರಣ ನೀಡದೆ ಸಿನಿಮಾವನ್ನು ತಿರಸ್ಕರಿಸಿರುವ ಸೆನ್ಸಾರ್‌  ಮಂಡಳಿ ವಿರುದ್ಧ ನಿರ್ಮಾಪಕ ವೆಂಕಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಸೆನ್ಸಾರ್‌ಗಾಗಿ ವೆಂಕಟ್‌ ಅರ್ಜಿ ಸಲ್ಲಿಸಿದ್ದರಂತೆ. ಯಾವುದೇ ಸ್ಪಷ್ಟ ಕಾರಣ ನೀಡದೇ ತಿರಸ್ಕಾರ ಮಾಡಿ, ರವೈಸ್ಡ್‌ ಕಮಿಟಿ ಮುಂದೆ ಹೋಗಲು  ಹೇಳಿದ್ದಾರಂತೆ ಸೆನ್ಸಾರ್‌ ಮಂಡಳಿ ಅಧಿಕಾರಿಗ ಡಿ ಎನ್‌ ಶ್ರೀನಿವಾಸಪ್ಪ. . ಈ ಬಗ್ಗೆ ನಿರ್ಮಾಪಕ ವೆಂಕಟ್‌ ಮಾಧ್ಯಮಗಳ ಜತೆ ಮಾತನಾಡಿ ‘ನಾವು […]Read More

“ನಟಸಾರ್ವಭೌಮ” ಮುಂಗಡ ಬುಕಿಂಗ್ಸ್ ತೆರೆದಿದೆ; ಮೊದಲ ಶೋ 4 ಗಂಟೆಗೆ

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ “ನಟಸಾರ್ವಭೌಮ” ಸಿನಿಮಾ ಇದೇ ಫೆ.7ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಬುಕಿಂಗ್ಸ್ ತೆರೆದಿದ್ದು, ಅಪ್ಪು ಅಭಿಮಾನಿಯೊಬ್ಬರು ಉರ್ವಶಿ ಚಿತ್ರದ ಬೆಳಗಿನ ಜಾವದ 4 ಗಂಟೆ ಶೋ ಸಂಪೂರ್ಣ ಟಿಕೇಟ್ಸ್ ಖರೀದಿಸಿದ್ದಾರೆ. . ಈ ಸಿನಿಮಾದಲ್ಲಿ ಪುನೀತ್‌ರಾಜ್‌ಕುಮಾರ್‌ ಪತ್ರಿಕೆಯೊಂದರ ಫೋಟೋಗ್ರಫರ್‌ ಆಗಿ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ ಮತ್ತು ಪೋಸ್ಟರ್‌ಗಳಿಂದ ಇದು ಹಾರರ್‌ ಸಿನಿಮಾ ಎಂಬುದು ಗೊತ್ತಾಗಿದೆ. . ಆದರೆ ಇದರಲ್ಲಿ ಪುನೀತ್‌ ರಾಜ್‌ಕುಮಾರ್‌ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಪುನೀತ್‌ಗೆ […]Read More