ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಮತ್ತೆ ‘ಅಧ್ಯಕ್ಷ’ನಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 2014ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ‘ಅಧ್ಯಕ್ಷ’ ಸಿನಿಮಾ ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಿದ್ದ ‘ಅಧ್ಯಕ್ಷ’ ಚಿತ್ರದ ನಂತರ ಶರಣ್ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಈಗ ಮತ್ತದೆ ಹೆಸರಿನ ಚಿತ್ರದ ಮೂಲಕ ಶರಣ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ […]Read More
ಕನ್ನಡ ಚಿತ್ರರಂಗವನ್ನು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿದ್ದ ‘ಕೆಜಿಎಪ್’ ಚಿತ್ರದ ಚಾಪ್ಟರ್-2ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ‘ಕೆಜಿಎಫ್-2’ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮೇ ತಿಂಗಳ ಪ್ರಾರಂಭದಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದರು. ಆದ್ರೆ ಚಿತ್ರದ ನಾಯಕ ರಾಕಿ ಭಾಯ್ ಮಾತ್ರ ಇನ್ನು ಎಂಟ್ರಿ ಕೊಟ್ಟಿರಲಿಲ್ಲ. ಆದ್ರೀಗ ಯಶ್ ಎಂಟ್ರಿಗೆ ದಿನಾಂಕ ನಿಗಧಿಯಾಗಿದೆ. ಹೌದು, ಮುಂದಿನ ತಿಂಗಳು ಜೂನ್ 6ಕ್ಕೆ ಯಶ್ ಚಿತ್ರತಂಡ […]Read More
‘ಹಫ್ತಾ ರೇ ಹಫ್ತಾ..’ ಇದು ‘ಹಫ್ತಾ’ ಸಿನಿಮಾದ ಟೈಟಲ್ ಸಾಂಗ್. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಹಾಡು ಬಿಡುಗಡೆಯಾದ ಕೆಲವೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ. ದೊಡ್ಡ ಸ್ಟಾರ್ ಇಲ್ಲದೆ ಇದ್ದರೂ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗುತ್ತಿದೆ. ಪಕ್ಕಾ ಮಾಸ್ ಆಗಿರುವ ಈ ಹಾಡಿನ ಮ್ಯೂಸಿಕ್ ಮತ್ತು ಲಿರಿಕ್ಸ್ ಕ್ಯಾಜಿಯಾಗಿದೆ. ಕವಿರಾಜ್ ಈ ಹಾಡನ್ನು ಬರೆದಿದ್ದಾರೆ. ಗೌತಂ ಶ್ರೀವತ್ಸ ಹಾಡಿಗೆ ಸಂಗೀತ ನೀಡಿದ್ದಾರೆ. […]Read More
ನಟ ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಸಿನಿಮಾ ಶುರು ಆದಾಗಿನಿಂದ, ಆ ಚಿತ್ರದ ಬಿಡುಗಡೆಯವರೆಗೂ ಚಿತ್ರರಂಗದ ಎಲ್ಲ ನಟರು ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ‘ಅಮರ್’ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ವಿಡಿಯೋ ಮೂಲಕ ಶುಭ ಹಾರೈಸಿರುವ ಅವರು ”ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯದಲ್ಲಿ ಹೇಗೆ ವಿಜೃಂಭಿಸಿದನೋ […]Read More
ಜಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ. ಸಿನಿಮಾ ರಿಲೀಸ್ ಆಗಿ ಸದ್ಯ ಸೆಂಚುರಿಯತ್ತ ಮುನ್ನುತ್ತಿದೆ. ಈ ಸಂಭ್ರಮದಲ್ಲಿ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದ್ದಾರೆ. ಹೌದು, ಚಿತ್ರದ ಮೋಸ್ಟ್ ಇಂಟ್ರಸ್ಟಿಂಗ್ ಮತ್ತು ಅಭಿಮಾನಿಗಳ ನೆಚ್ಚಿನ ಹಾಡಾಗಿರುವ ‘ನಿಂತ ನೋಡು ಯಜಮಾನ’ ಹಾಡಿನ ವೀಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದೆ. ಈ ಹಾಡನ್ನು ಚಿತ್ರಮಂದಿರಗಳಲ್ಲಿ ಮಾತ್ರ ನೋಡಿದ ಅಭಿಮಾನಿಗಳೀಗ […]Read More
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಅಭಿಷೇಕ್ ಅದ್ಧೂರಿ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಇದೇ ತಿಂಗಳ ಕೊನೆಯಲ್ಲಿ ಮೇ 31ಕ್ಕೆ ‘ಅಮರ್’ ಸಿನಿಮಾ ರಾಜ್ಯದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಈಗಾಗಲೆ ‘ಅಮರ್’ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿಯೊಬ್ಬರು ‘ಅಮರ್’ ಸಿನಿಮಾದ ಒಂದು […]Read More
ಚಿತ್ರ: ವೀಕೆಂಡ್ ನಿರ್ದೇಶಕ: ಶ್ರಿಂಗೇರಿ ಸುರೇಶ್ ನಿರ್ಮಾಪಕ: ಮಂಜುನಾಥ್ ಸಂಗೀತ: ಮನೋಜ್ ಎಸ್ ತಾರಾಗಣ: ಮಿಲಿಂದ್, ಸಂಜನಾ ಬುರ್ಲಿ, ಗೋಪಿನಾಥ್, ವೀಣಾ, ಗೋಪಿನಾಥ್ ಭಟ್, ಶಿವು, ರಘು ನೀನಾಸಂ, ಅನಂತನಾಗ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ಸಾಫ್ಟ್ ವೇರ್ ಉದ್ಯಮ ಬಹಳ ದೊಡ್ಡದಾಗಿ ಬೂಮ್ ಆಯಿತು. ಆಗ ಸಾಕಷ್ಟು ಮಂದಿ ಟೆಕ್ಕಿಗಳು ಒಮ್ಮೇಲೆ ಶ್ರೀಮಂತರಾದರು,ಅವರ ಲೈಫ್ ಸ್ಟೈಲ್ಗಳು ಬದಲಾಯಿತು. ಹೆಚ್ಚಿನ ಖರ್ಚಿಗಾಗಿ ತಿಂಗಳ ಸಂಬಳ ನಂಬಿಕೊಂಡು ಅವರು ಲಕ್ಷಾಂತರ ಸಾಲ ಮಾಡತೊಡಗಿದರು. ಕೆಲ ದಿನಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾವಾಗ ರಿಸೇಶನ್ ಎಂಬುದು ಆರಂಭವಾಯಿತೋ ಆಗ ಎಲ್ಲವೂ […]Read More
ಚಿತ್ರ: D/0 ಪಾರ್ವತಮ್ಮ ನಿರ್ದೇಶಕ: ಶಂಕರ್ ನಿರ್ಮಾಪಕ: ದಿಶ ಎಂಟರ್ಪ್ರೈಸಸ್ ಸಂಗೀತ: ಮಿದುನ್ ಮುಕುಂದನ್ ತಾರಾಗಣ: ಹರಿಪ್ರಿಯಾ, ಸುಮಲತಾ ,ಪ್ರಭು, ಸೂರಜ್ ಗೌಡ, ತರಂಗ ವಿಶ್ವ, ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾಗಳು ಹೆಚ್ಚಾಗುತ್ತಿವೆ, ಅವುಗಳಲ್ಲಿ ಥ್ರಿಲ್ ಕೊಡುವಂತಹ ಚಿತ್ರಗಳು ಗೆಲ್ಲುತ್ತಿವೆ, ಆ ಸಾಲಿಗೆ ಈ ವಾರ ಬಿಡುಗಡೆಯಾಗಿರುವ ಡಾಟರ್ ಆಫ್ ಪಾರ್ವತಮ್ಮ ಸೇರುತ್ತದೆ.. ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ನಾಯಕ ನಟನ ಮೇಲೆ ಕೇಂದ್ರಿತವಾಗಿ ಕಥೆ ರಚನೆಯಾಗಿರುತ್ತದೆ. ಆದರೆ ಇಲ್ಲಿ ನಾಯಕಿ ಪ್ರಧಾನವನ್ನು ಇಟ್ಟುಕೊಂಡು ಕಥೆ […]Read More
ಕನ್ನಡ ಚಿತ್ರಗಳು ಈಗಾಗಲೇ ತನ್ನ ಗುಣಮಟ್ಟದಿಂದ ವಿಶ್ವದಲ್ಲೇ ಎಲ್ಲರ ಚಿತ್ತವನ್ನ ಸೆಳೆಯುತ್ತಿರುವಾಗಲೇ ಕನ್ನಡಿಗರಿಗೆ ಒಂದು ಸಿಹಿಸುದ್ಧಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಿಂದ ಬಂದಿದೆ. ಈಗಾಗಲೇ ಕನ್ನಡಿಗರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮೆಟ್ಟಿಲು ಹತ್ತಿದ್ದರೆ, ಇನ್ನು ರಿಲೀಸ್ ಆಗಲು ಕಾಯುತ್ತಿರುವ ಕನ್ನಡ ಚಿತ್ರದ ನಟಿಯೊಬ್ಬಳ ಹಿಂದಿ ಚಿತ್ರ ಈ ವರ್ಷ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೌದು, ಅಪ್ಪಟ್ಟ ಕನ್ನಡದ ನಟಿ, ಕಾಜಲ್ ಕುಂದರ್ ಹಿಂದಿಯ ಲೋಹರ್ದಗಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ […]Read More
Recent Comments