ಕನ್ನಡ ಚಿತ್ರದ ನಾಯಕಿ ನಟಿಸಿರುವ ಚಿತ್ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನ – ಕನ್ನಡಿಗರಿಗೆ ಹೆಮ್ಮೆಯ ನ್ಯೂಸ್

 ಕನ್ನಡ ಚಿತ್ರದ ನಾಯಕಿ ನಟಿಸಿರುವ ಚಿತ್ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನ – ಕನ್ನಡಿಗರಿಗೆ ಹೆಮ್ಮೆಯ ನ್ಯೂಸ್

ಕನ್ನಡ ಚಿತ್ರಗಳು ಈಗಾಗಲೇ ತನ್ನ ಗುಣಮಟ್ಟದಿಂದ ವಿಶ್ವದಲ್ಲೇ ಎಲ್ಲರ ಚಿತ್ತವನ್ನ ಸೆಳೆಯುತ್ತಿರುವಾಗಲೇ ಕನ್ನಡಿಗರಿಗೆ ಒಂದು ಸಿಹಿಸುದ್ಧಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಿಂದ ಬಂದಿದೆ.


ಈಗಾಗಲೇ ಕನ್ನಡಿಗರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮೆಟ್ಟಿಲು ಹತ್ತಿದ್ದರೆ, ಇನ್ನು ರಿಲೀಸ್ ಆಗಲು ಕಾಯುತ್ತಿರುವ ಕನ್ನಡ ಚಿತ್ರದ ನಟಿಯೊಬ್ಬಳ ಹಿಂದಿ ಚಿತ್ರ ಈ ವರ್ಷ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಹೌದು, ಅಪ್ಪಟ್ಟ ಕನ್ನಡದ ನಟಿ, ಕಾಜಲ್ ಕುಂದರ್ ಹಿಂದಿಯ ಲೋಹರ್ದಗಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ ಇಂದು ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಅಂದಹಾಗೆ, ಕಾಜಲ್ ಕುಂದರ್, ಮಾಯ ಕನ್ನಡಿ ಎಂಬ ಕನ್ನಡ ಚಿತ್ರದ ನಾಯಕಿ. ಕರಾವಳಿಯ ತಂಡ ನಿರ್ಮಿಸಿ, ವಿನೋದ್ ಪೂಜಾರಿ ನಿರ್ದೆಶನ ಮಾಡಿರುವ ಈ ಚಿತ್ರದಲ್ಲಿ ಪ್ರಭು ಮುಂಡ್ಕೂರು, ಕೆ.ಎಸ್. ಶ್ರೀಧರ್, ಅನೂಪ್ ಸಾಗರ್ ನಟಿಸಿದ್ದಾರೆ. ಅಭಿಶೇಕ್ ಎಸ್. ಎನ್ ಸಂಗೀತ ನೀಡಿರುವ ಚಿತ್ರಕ್ಕೆ ತುಳು ನಿರ್ದೇಶಕ ರಂಜಿತ್ ಬಜ್ಪೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ನೇರನ್ಯೂಸ್ ಜೊತೆ ಮಾತನಾಡುತ್ತಾ ಕಾಜಲ್ ಕುಂದರ್,  “ನಾನು ನಟಿಸಿರುವ ಚಿತ್ರ  ಫ್ರಾನ್ಸ್ನಲ್ಲಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ 2019 ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ತುಂಬಾ ಖುಶಿಯ ವಿಚಾರ. ಚಿತ್ರದಲ್ಲಿ ನನ್ನ ಪಾತ್ರ ಸಣ್ಣದಾದರೂ, ಚಿತ್ರದ ಕಥೆ ನನ್ನ ಪಾತ್ರದ ಮೇಲೆ ಇರುತ್ತದೆ.” ಅಂದಿದ್ದಾರೆ. “ಮಾಯ ಕನ್ನಡಿ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಈಗಾಗಲೇ ಹಲವಾರು ಕನ್ನಡ ಚಿತ್ರದಲ್ಲಿ ಆಫರ್ ಬಂದಿದೆ. ನಟನೆಗೆ ಆದ್ಯತೆಯಿರುವ ಚಿತ್ರಗಳೇ ನನ್ನ ಮೊದಲ ಆಯ್ಕೆ” ಎಂದು ಹೇಳಿದ್ದಾರೆ.

ಜಾರ್ಖಂಡ್ ಮೂಲದ ನಿರ್ಮಾಪಕ ಮತ್ತು ನಿರ್ದೇಶಕ ಲಾಲ್ ವಿಜಯ್ ಸಾಹೇಡೋ ಅವರು ನಿರ್ಮಿಸಿದ ‘ಲೋಹಾರ್ಡಾಗಾ’ ಮತ್ತು ‘ಫುಲ್ಮಾನಿಯಾ’ ಕ್ರಮವಾಗಿ ಬುಧವಾರ ಮತ್ತು ಗುರುವಾರ ಕ್ರಮವಾಗಿ ಫ್ರಾನ್ಸ್ನಲ್ಲಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ 2019 ರಲ್ಲಿ ಪ್ರದರ್ಶನಗೊಳ್ಳಲಿದೆ.

ಲೋಹರ್ದಗಾ ಚಿತ್ರ ಹಿಂದಿಯದ್ದಾದರೂ, ಕನ್ನಡದ ನಟಿಯೊಬ್ಬಳು, ಈ ಚಿತ್ರದ ಮೂಲಕ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಕನ್ನಡಿಗರಿಗೆಲ್ಲ ಒಂದು ಹೆಮ್ಮೆಯ ವಿಚಾರ.


Digiqole ad

Nithyanand Amin

Leave a Reply