ಚಿತ್ರ: D/0 ಪಾರ್ವತಮ್ಮ

ನಿರ್ದೇಶಕ: ಶಂಕರ್‌

ನಿರ್ಮಾಪಕ: ದಿಶ ಎಂಟರ್‌ಪ್ರೈಸಸ್‌

ಸಂಗೀತ: ಮಿದುನ್‌ ಮುಕುಂದನ್‌

ತಾರಾಗಣ: ಹರಿಪ್ರಿಯಾ, ಸುಮಲತಾ ,ಪ್ರಭು, ಸೂರಜ್‌ ಗೌಡ, ತರಂಗ ವಿಶ್ವ,

ಕನ್ನಡದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಸಿನಿಮಾಗಳು ಹೆಚ್ಚಾಗುತ್ತಿವೆ, ಅವುಗಳಲ್ಲಿ ಥ್ರಿಲ್‌ ಕೊಡುವಂತಹ ಚಿತ್ರಗಳು ಗೆಲ್ಲುತ್ತಿವೆ, ಆ ಸಾಲಿಗೆ ಈ ವಾರ ಬಿಡುಗಡೆಯಾಗಿರುವ ಡಾಟರ್‌ ಆಫ್‌ ಪಾರ್ವತಮ್ಮ ಸೇರುತ್ತದೆ.
.

ಸಾಮಾನ್ಯವಾಗಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳಲ್ಲಿ ನಾಯಕ ನಟನ ಮೇಲೆ ಕೇಂದ್ರಿತವಾಗಿ ಕಥೆ ರಚನೆಯಾಗಿರುತ್ತದೆ. ಆದರೆ ಇಲ್ಲಿ ನಾಯಕಿ ಪ್ರಧಾನವನ್ನು ಇಟ್ಟುಕೊಂಡು ಕಥೆ ಬರೆದಿದ್ದಾರೆ ನಿರ್ದೇಶಕ ಶಂಕರ್‌.
.

ಸಿನಿಮಾದಲ್ಲಿ ಹುಡುಗಿಯೊಬ್ಬಳ ಮರ್ಡರ್‌ ಆಗುತ್ತದೆ. ಈ ಕೊಲೆ ತನಿಖೆಯನ್ನು ಎತ್ತಿಕೊಳ್ಳುವ ಇನ್ವೆಸ್ಟಿಗೇಶನ್‌ ಆಫೀಸರ್‌ ವೈದೇಹಿ[ ಹರಿಪ್ರಿಯಾ] ಅದನ್ನು ಹೇಗೆ ಬೇಧಿಸುತ್ತಾರೆ ಎಂಬುದೇ ಸಿನಿಮಾದ ಒಟ್ಟು ಕಥೆ. ನಾಯಕಿಯನ್ನು ಇಟ್ಟುಕೊಂಡು ಕಮರ್ಷಿಯಲ್ ರೇಂಜ್‌ಗೆ ಸಿನಿಮಾ ಮಾಡಬಹುದು ಎಂಬುದನ್ನು ನಿರ್ದೇಶಕ ಬಹಳ ಚೆನ್ನಾಗಿ ತೋರಿಸಿದ್ದಾರೆ. ಜತೆಗೆ ತಾಯಿ ಮಗಳ ಅನುಬಂಧವನ್ನು ಸಹ ಬಹಳ ವಿಶೇಷವಾಗಿ ಬಿಂಬಿಸಿದ್ದಾರೆ.
.

ವೇಗವಾದ ಚಿತ್ರಕಥೆ ಮತ್ತು ಅಬ್ಬರದ ಹಿನ್ನೆಲೆ ಸಂಗೀತವಿಲ್ಲದೆ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಮಾಡಿ ಜನರನ್ನು ಮೆಚ್ಚಿಸಬಹುದು ಎಂದುಕೊಂಡಿರುವ ನಿರ್ದೇಶಕರು ಅದರಲ್ಲಿ ಸಕ್ಸಸ್‌ ಕೂಡಾ ಆಗಿದ್ದಾರೆ.
.

ಇನ್ನು ಕಾಪ್‌ ಆಗಿ ಹರಿಪ್ರಿಯಾ ಅವರದ್ದು ಉತ್ತಮ ನಟನೆ, ನಾಯಕನ ಜತೆ ಡ್ಯುಯೆಟ್‌ ಹಾಡುತ್ತಾ ಇದ್ದ ಹರಿಪ್ರಿಯಾ ಇಲ್ಲಿ ಬೈಕ್‌ ಓಡಿಸಿದ್ದಾರೆ, ಕ್ರಿಕೆಟ್‌ ಬ್ಯಾಟ್‌ ಹಿಡಿದು ಎದುರಾಳಿಯ ಸೊಂಟ ಸಹ ಮುರಿದಿದ್ದಾರೆ. ಸುಮಲತಾ ಅಂಬರೀಷ್‌ ಅವರ ನಟನೆ ಸಹ ಸೂಪರ್‌ ಆಗಿದೆ. ತರಂಗ ವಿಶ್ವ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಭು, ಸೂರಜ್‌ಗೌಡ ಸೇರಿದಂತೆ ಎಲ್ಲರ ನಟನೆಯೂ ಚೆನ್ನಾಗಿದ್ದು, ಸಿನಿಮಾಗೆ ಪ್ಲಸ್‌ ಪಾಯಿಂಟ್‌ ಆಗಿದೆ. 
.

ಸಿನಿಮಾದಲ್ಲಿ ಸಣ್ಣ ಪುಟ್ಟ ತಪ್ಪುಗಳಿವೆ, ಆದರೆ ಅವ್ಯಾವೂ ಚಿತ್ರವನ್ನು ಎಲ್ಲೂ ಬೋರ್ ಹೊಡೆಸಿಲ್ಲ. ಕನ್ನಡ ಚಿತ್ರರಂಗದಲ್ಲಿ ಇಂತಹ ನಾಯಕಿ ಪ್ರಧಾನ ಪ್ರಯತ್ನಗಳು ಆಗಾಗ ನಡೆಯುತ್ತಿರಬೇಕು.

ಒಟ್ಟಿನಲ್ಲಿ ಹೊಸ ರೀತಿಯ ಕಥೆಯನ್ನು ಹೊಸ ರೀತಿಯ ನಿರೂಪಣೆಯಲ್ಲಿ ನೋಡಬೇಕು ಎನ್ನುವವರು ಡಾಟರ್‌ ಆಫ್‌ ಪಾರ್ವತಮ್ಮ ಸಿನಿಮಾಗೆ ಹೋಗಲೇ ಬೇಕು.
.

ರೇಟಿಂಗ್ : 3.5/5.


Leave a Reply