ಚಿತ್ರ: ವೀಕೆಂಡ್‌

ನಿರ್ದೇಶಕ: ಶ್ರಿಂಗೇರಿ ಸುರೇಶ್‌

ನಿರ್ಮಾಪಕ: ಮಂಜುನಾಥ್‌

ಸಂಗೀತ: ಮನೋಜ್‌ ಎಸ್‌

ತಾರಾಗಣ: ಮಿಲಿಂದ್‌, ಸಂಜನಾ ಬುರ್ಲಿ, ಗೋಪಿನಾಥ್‌, ವೀಣಾ, ಗೋಪಿನಾಥ್‌ ಭಟ್‌, ಶಿವು, ರಘು ನೀನಾಸಂ, ಅನಂತನಾಗ್

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ಸಾಫ್ಟ್‌ ವೇರ್‌ ಉದ್ಯಮ ಬಹಳ ದೊಡ್ಡದಾಗಿ ಬೂಮ್‌ ಆಯಿತು. ಆಗ ಸಾಕಷ್ಟು ಮಂದಿ ಟೆಕ್ಕಿಗಳು ಒಮ್ಮೇಲೆ ಶ್ರೀಮಂತರಾದರು,ಅವರ ಲೈಫ್‌ ಸ್ಟೈಲ್‌ಗಳು ಬದಲಾಯಿತು. ಹೆಚ್ಚಿನ ಖರ್ಚಿಗಾಗಿ ತಿಂಗಳ ಸಂಬಳ ನಂಬಿಕೊಂಡು ಅವರು ಲಕ್ಷಾಂತರ ಸಾಲ ಮಾಡತೊಡಗಿದರು. ಕೆಲ ದಿನಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾವಾಗ ರಿಸೇಶನ್‌ ಎಂಬುದು ಆರಂಭವಾಯಿತೋ ಆಗ ಎಲ್ಲವೂ ಮಕಾಡೆ ಮಲಗಿತು, ಸಾಕಷ್ಟು ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು, ಇದರಿಂದ ಒಂದಷ್ಟು ಮಂದಿ ಕ್ರಿಮಿನಲ್‌ಗಳಾಗಿ ಬದಲಾದರು, ಮತ್ತೊಂದಿಷ್ಟು ಮಂದಿ ಆತ್ಮಹತ್ಯೆಯ ಹಾದಿ ಹಿಡಿದ್ರು, ಇಂಥಹವರ ಕಥೆ ಇಟ್ಟುಕೊಂಡು ಅವರ ಸಮಸ್ಯೆಗಳನ್ನು ನಿರ್ದೇಶಕ ಶ್ರಿಂಗೇರಿ ಸುರೇಶ್‌ ವಿಕೇಂಡ್‌ ಸಿನಿಮಾ ಮಾಡಿದ್ದಾರೆ.

ಅಜಯ್‌ (ಮಿಲಿಂದ್‌) ಟೆಕ್ಕಿಯಾಗಿ ಕೆಲಸ ಮಾಡುತ್ತಿರುತ್ತಾನೆ. ಇಂತಹವನಿಗೆ ಜೀವನ ಕಲೆಯನ್ನು ತಾತ (ಅನಂತನಾಗ್‌)ಕಲಿಸಿಕೊಟ್ಟಿರುತ್ತಾರೆ. ಈ ಅಜಯ್‌ನನ್ನು  ಪ್ರೀತಿಸುವ ಹುಡುಗಿ ಅನುಪಮಾ (ಸಂಜನಾ ಬುರ್ಲಿ)ಯೇ ,ಇವರ ಜತೆ ಟೆಕ್ಕಿಗಳಾಗಿ ಕೆಲಸ ಮಾಡುವ ಒಂದು ಗುಂಪು ಇವರೆಲ್ಲರೂ ವಿಕೇಂಡ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಜೀವನ ಮಾಡುತ್ತಿರುತ್ತಾರೆ ಇಂಥಹ ಸಮಯದಲ್ಲಿ ಎಲ್ಲರ ಕೆಲಸ ಹೋಗುತ್ತದೆ ಆಗ ಅವರು ಏನು ಮಾಡುತ್ತಾರೆ ಮತ್ತು ಅವರ ಮನಸ್ಥಿತಿಗಳೇನು ಎಂಬುದೇ ಸಿನಿಮಾದ ಕಥೆ. ಇದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಲೇಬೇಕು ಏಕೆಂದರೆ ಇಂದಿನ ಜೀವನ ಶೈಲಿಯನ್ನು ಸಿನಿಮಾದಲ್ಲಿ ಬಹಳ ನೈಜವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕರು.  ಜೀವನದಲ್ಲಿ ಬದುಕಲು ನೂರು ದಾರಿಗಳಿವೆ ಎಂಬ  ಸಂದೇಶವನ್ನು ಸಹ ನೀಡಿದ್ದಾರೆ.

ಸಿನಿಮಾದ ಸೆಕೆಂಡ್‌ ಹಾಫ್‌ನ್ನು ನಿರ್ದೇಶಕರು ಕಟ್ಟಿಕೊಟ್ಟಿರುವ ರೀತಿ ಬಹಳ ಚೆನ್ನಾಗಿದೆ. ಪ್ರೇಕ್ಷಕ ಯಾವುದೇ ಕಾರಣಕ್ಕೂ ಇದನ್ನು ಊಹೆ ಮಾಡಲು ಸಾಧ್ಯವಿಲ್ಲ.

ಬಹಳ ಆಪ್ತವಾದ ನಿರೂಪಣೆ, ಡೈಲಾಗ್‌, ಕಣ್ಣಿಗೆ ಹಿತ ನೀಡುವ ಛಾಯಾಗ್ರಹಣ, ಸಂಗೀತ ಎಲ್ಲವೂ ಚಿತ್ರಕ್ಕೆ ಪ್ಲಸ್‌ ಆಗಿದೆ. ನಾಯಕ ನಟ ಮಿಲಿಂದ್‌ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆಯುತ್ತಾರೆ. ಅನಂತನಾಗ್‌ಗೆ ಅನಂತ್‌ನಾಗ್‌ ಅವರೇ ಸಾಟಿ ,ಚಿತ್ರದಲ್ಲಿ ಅವರ ಅಭಿನಯ ಮೆಚ್ಚುವಂತದ್ದು. ಸಂಜನಾ ಬುರ್ಲಿ ಸೇರಿದಂತೆ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ಈ ವಿಕೇಂಡ್‌ನಲ್ಲಿ ನೋಡಲೇಬೇಕಾದ ಚಿತ್ರ ಇದು.


ರೇಟಿಂಗ್ – 3/5


Leave a Reply