ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಅಭಿಷೇಕ್ ಅದ್ಧೂರಿ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಇದೇ ತಿಂಗಳ ಕೊನೆಯಲ್ಲಿ ಮೇ 31ಕ್ಕೆ ‘ಅಮರ್’ ಸಿನಿಮಾ ರಾಜ್ಯದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಈಗಾಗಲೆ ‘ಅಮರ್’ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿಯೊಬ್ಬರು ‘ಅಮರ್’ ಸಿನಿಮಾದ ಒಂದು ಟಿಕೆಟ್ ಗೆ ಒಂದು ಲಕ್ಷ ಕೊಟ್ಟು ಕೊಂಡುಕೊಂಡಿದ್ದಾರೆ.

ದಾವಣಗೆರೆ ಮೂಲದವರಾದ ಮಂಜುನಾಥ್, ಅಂಬರೀಶ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ‘ಅಮರ್’ ಸಿನಿಮಾ ಫಸ್ಟ್ ಡೇ ಶೋ ನೋಡಲು ಬರೋಬ್ಬರಿ ಒಂದು ಲಕ್ಷ ನೀಡಿ ಟಿಕೆಟ್ ಕೊಂಡುಕೊಂಡಿದ್ದಾರೆ. ಒಂದು ಲಕ್ಷದ ಚೆಕ್ ಅನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ನೀಡಿದ್ದಾರೆ.


Leave a Reply