ಚಿತ್ರ: ಕಮರೊಟ್ಟು ಚೆಕ್‌ ಪೋಸ್ಟ್

ನಿರ್ದೇಶನ: ಪರಮೇಶ್‌

ನಿರ್ಮಾಣ: ಚೇತನ್‌ ರಾಜ್‌

ಸಂಗೀತ: ಎ ಟಿ ರವೀಶ್‌

ಕಲಾವಿದರು: ಸನತ್‌, ಉತ್ಪಲ್‌, ಸ್ವಾತಿ, ನಿಶಾ ವರ್ಮಾ, ಗಡ್ಡಪ್ಪ ಮತ್ತಿತರರು

ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಹೊಸ ರೀತಿಯ ಕಥೆಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಿದ್ದಾರೆ, ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಕಮರೊಟ್ಟು ಚೆಕ್‌ಪೋಸ್ಟ್‌ ಸಿನಿಮಾ ಬಹಳ ವಿಶೇಷವಾಗಿ ಕಾಣುತ್ತದೆ.

ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಪ್ಯಾರ ನಾರ್ಮಲ್‌ ಎಂಬ ಫಾರ್ಮ್ಯಾಟ್‌ನ್ನು ಸ್ಯಾಂಡ್‌ಲವುಡ್‌ಗೆ ಪರಿಚಯಿಸಿದ್ದಾರೆ. ಮೂವರು ಸ್ನೇಹಿತರು ಕಮರೊಟ್ಟು ಚೆಕ್ಪೋಸ್ಟ್ ಬಳಿ ಇರುವ ತಮ್ಮ ಸ್ನೇಹಿತನ ಮನೆಗೆ ತೆರಳುತ್ತಾರೆ,ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಬಹುಮುಖ್ಯ ತಿರುಳುಗಳು . ಹಾಗಾದರೆ ಪ್ಯಾರ ನಾರ್ಮಲ್‌ ಕಥೆಯನ್ನು ಸಿನಿಮಾಗೆ ಹೇಗೆ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಇಲ್ಲಿ ಕಥೆಯೇ ಮುಖ್ಯ ಪಾತ್ರಧಾರಿಯಾದ್ದರಿಂದ, ಕಲಾವಿದರು ಅದಕ್ಕೆ ಸಪೋರ್ಟ್‌ ಆಗಿ ಕೆಲಸ ಮಾಡಿದ್ದಾರೆ. ಸನತ್‌, ತಿಥಿ ಗಡ್ಡಪ್ಪ, ಉತ್ಪಲ್‌,  ಸ್ವಾತಿ, ಅಹಲ್ಯ ಸುರೇಶ್‌ ಸೇರಿದಂತೆ ಎಲ್ಲರೂ ನಿರ್ದೇಶಕರ ಕನಸಿಗೆ ಜೀವ ತುಂಬಿದ್ದಾರೆ. ಎ  ಟಿ ರವೀಶ್‌ ಅವರ ಸಂಗೀತ ಸಿನಿಮಾಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಸಾಕಷ್ಟು ಕಡೆ ಚಿತ್ರ ನೋಡುಗರಿಗೆ ಹಾರರ್ ಥ್ರಿಲ್ ಕೊಡುತ್ತದೆ.

ಸಂಭಾಷಣೆ ಮತ್ತು ಸಂಕಲನ ಇನ್ನಷ್ಟು ಗಟ್ಟಿಯಾಗಬೇಕಿತ್ತು. ಚಿತ್ರದ ಮೊದಲರ್ಧ ಸ್ವಲ್ಪ ಚುರುಕಾಗಿರಬೇಕಿತ್ತು ಎನ್ನಿಸುತ್ತದೆ ; ಉಳಿದಂತೆ ಹಾರರ್‌ ಸಿನಿಮಾಗಳನ್ನು ಇಷ್ಟಪಡುವ ಎಲ್ಲರಿಗೂ  ಕಮರೊಟ್ಟು ಚೆಕ್‌ ಪೋಸ್ಟ್‌ ಇಷ್ಟವಾಗುತ್ತದೆ.

ರೇಟಿಂಗ್ : 3.25/5


Leave a Reply