ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿಯ ರಂಜಾನ್ ಗೆ, ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡುತ್ತಿದ್ದಾರೆ. ದಚ್ಚು ನೀಡುತ್ತಿರುವ ರಂಜಾನ್ ಗಿಫ್ಟ್ ಗೆ ಅಭಿಮಾನಿಗಳು ಈಗಾಗಲೆ ಕುತೂಹಲದಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ ಚಿತ್ರದ ಚಿತ್ರೀಕರಣ ಮುಗಿಸಿ ಸದ್ಯ ‘ರಾಬರ್ಟ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರಕ್ಕಾಗಿ ಈಗಾಗಲೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ರಾಬರ್ಟ್’ ಚಿತ್ರದ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆಗಲೆ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರ ಬಿದ್ದಿದೆ. ಇದೇ ತಿಂಗಳು ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಲಿದೆ

‘ರಾಬರ್ಟ್’ ಚಿತ್ರದಿಂದ ಥೀಮ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈ ಪೋಸ್ಟರ್ ಮೂಲಕ ಚಿತ್ರದ ಥೀಮ್ ಏನಾಗಿರಲಿದೆ ಎನ್ನುವುದರ ಬಗ್ಗೆ ಈ ಪೋಸ್ಟರ್ ಮೂಲಕ ಮಾಹಿತಿ ನೀಡುವ ಸಾಧ್ಯತೆ ಇದೆ. ಮೊದಲ ಬಾರಿಗೆ ಥೀಮ್ ಪೋಸ್ಟರ್ ಎನ್ನುವ ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡುತ್ತಿರುವುದು ವಿಶೇಷ. ಇದು ಈಗಾಗಲೆ ಭಾರಿ ಕುತೂಹಲ ಮೂಡಿಸಿದೆ.

ಜೂನ್ ಐದು ಅಂದ್ರೆ ರಂಜಾನ್ ಹಬ್ಬದ ದಿನ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತರುಣ್ ಸುಧೀರ್ ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ.

ಪಾಂಡಿಚೇರಿಯಲ್ಲಿ ‘ರಾಬರ್ಟ್’ ಸಿನಿಮಾ ಶೂಟಿಂಗ್ ಮಾಡುತ್ತಿದ್ದ ದರ್ಶನ್ ಮತ್ತು ತಂಡ ಅಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಇತ್ತೀಚಿಗಷ್ಟೆ ಸುಮಲತಾ ಅವರ ಸ್ವಾಭಿಮಾನ ವಿಜಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದ ದರ್ಶನ್ ಈಗ ಬೆಂಗಳೂರಿನಲ್ಲಿ ನಡೆಯಲಿರುವ ‘ರಾಬರ್ಟ್’ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

‘ರಾಬರ್ಟ್’ ಚಿತ್ರಕ್ಕೆ ಇನ್ನು ನಾಯಕಿ ಸಿಕ್ಕಿಲ್ಲ. ನಾಯಕಿ ವಿಚಾರವಾಗಿ ‘ರಾಬರ್ಟ್’ ಚಿತ್ರ ಭಾರಿ ಚರ್ಚೆಯಾಗುತ್ತಿದೆ. ಸಾಕಷ್ಟು ದೊಡ್ಡ ದೊಡ್ಡ ನಟಿಯರ ಹೆಸರುಗಳು ಕೇಳಿ ಬರುತ್ತಿದೆ. ಆದ್ರ ಇದುವರೆಗೂ ನಾಯಕಿ ವಿಚಾರವಾಗಿ ಚಿತ್ರತಂಡ ಇನ್ನು ಬಹಿರಂಗ ಪಡಿಸಿಲ್ಲ. ಚಿತ್ರದಲ್ಲಿ ಖ್ಯಾತ ನಾಯಕ ಜಗಪತಿ ಬಾಬು ಖಳ ನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Leave a Reply