ಧಾರಾವಾಹಿಗಳ ಅಭಿಮಾನಿಗಳ ಕಥೆ “ಫ್ಯಾನ್”

 ಧಾರಾವಾಹಿಗಳ ಅಭಿಮಾನಿಗಳ ಕಥೆ “ಫ್ಯಾನ್”

ಪ್ರತಿನಿತ್ಯ ಹತ್ತಾರು ಟಿವಿ ಚಾನೆಲ್ ಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇಂಥ ಧಾರಾವಾಹಿಗಳಿಗೆ ಅದರದ್ದೇ ಆದ ಅಭಿಮಾನಿಗಳ ವರ್ಗವಿದೆ, ಪ್ರತಿನಿತ್ಯ ನಡೆಯುವ ಧಾರಾವಾಹಿ ಸನ್ನಿವೇಶಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತಹ ಕೆಲವು ಕಾಮೆಂಟ್ಸ್ ಗಳನ್ನು ಎತ್ತಿಕೊಂಡು ನಿರ್ದೇಶಕ ‘ಫ್ಯಾನ್’ ಚಿತ್ರದ ಕತೆಯನ್ನು ಹೆಣೆದಿದ್ದಾರೆ.


ನಿರ್ದೇಶಕ ದರ್ಶಿತ್ ಭಟ್ ಬಲವಳ್ಳಿ ಸುಮಾರು ಹದಿನಾಲ್ಕು ವರ್ಷಗಳಿಂದ ಕನ್ನಡದ ಕೆಲವು ಮೆಗಾ ಧಾರಾವಾಹಿಗಳಿಗೆ ಸ್ಕಿಪ್ ಬರೆಯುತ್ತಿದ್ದವರು ಇಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಈ ಚಿತ್ರದಲ್ಲಿರುವ ನಾಯಕ ಶಂಕರ್ ನಾಗ್ ಅವರ ಅಭಿಮಾನಿಯಾಗಿರುತ್ತಾನೆ. ಶಂಕರ್ ನಾಗ್ ಅವರ ಹುಟ್ಟೂರು ಹೊನ್ನಾವರದಲ್ಲಿ ಚಿತ್ರದ ಶೇಕಡ ಎಂಬತ್ತರಷ್ಟು ಭಾಗ ಚಿತ್ರೀಕರಣ ನಡೆದಿರುತ್ತದೆ.

ಚಿತ್ರದ ನಾಯಕನಾಗಿ ಆರ್ಯನ್ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ.

ಸವಿತಾ ಈಶ್ವರ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ವಿಕ್ರಮ್ ಚಂದನ್ ಸಂಗೀತ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಪ್ರಚಾರದ ಮೊದಲ ಭಾಗವಾಗಿ ಫ್ಯಾನ್ ಚಿತ್ರತಂಡದವರು ಫಸ್ಟ್ ಲುಕ್ ಪೋಸ್ಟರನ್ನು ಮೊನ್ನೆ ಬಿಡುಗಡೆಗೊಳಿಸಿದೆ.


Digiqole ad

Sunil H C

Leave a Reply