ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿರುವ “ರುಸ್ತುಂ” ಹಾಗೂ ಉಪೇಂದ್ರ ಅಭಿನಯದ “ಐ ಲವ್ ಯು” ಚಿತ್ರಗಳು ಜೂನ್ 14ರಂದು ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ  ಈಗ ಲಭಿಸಿದ ಮಾಹಿತಿಯಂತೆ  ಎರಡು ಚಿತ್ರಗಳ ಬಿಡುಗಡೆ ದಿನಾಂಕಗಲಲ್ಲಿ ಹದಿನೈದು ದಿನಗಳ ಅಂತರವಿರಲಿದೆ.

“ಐ ಲವ್ ಯು” ಚಿತ್ರ ಇದಕ್ಕೆ ಮುನ್ನ ಹೇಳಿರುವಂತೆ ಜೂನ್ 14ಕ್ಕೆ ತೆರೆ ಕಂಡರೆ “ರುಸ್ತುಂ” ಜೂನ್ 28ಕ್ಕೆ ಬಿಡುಗಡೆಯಾಗಲಿದೆ.

ಚಿತ್ರದ ಗ್ರಾಫಿಕ್ ಕೆಲಸಕ್ಕೆ ಹೆಚ್ಚು ಸಮಯ ಬೇಕಾಗುವ ಕಾರಣ ಚಿತ್ರ ಬಿಡುಗಡೆ ವಿಳಂಬವಾಗಲಿದೆ ಎಂದು ಚಿತ್ರತಂಡ ಹೇಳಿದೆ. ಅಲ್ಲದೆ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ತೋರಿಸಲಾಗಿದ್ದು ಮಂಡಳಿ ಇನ್ನೂ ಪ್ರಮಾಣಪತ್ರ ನೀಡಿಲ್ಲ.ಹಾಗಾಗಿ ನಿರ್ಮಾಪಕರಾದ ಜಯಣ್ಣ ಚಿತ್ರವನ್ನು ಜೂನ್ ಅಂತ್ಯದ ವೇಳೆಗೆ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದಾರೆ.

ಶಿವಣ್ಣ ನಾಯಕನಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಹ ಅಭಿನಯಿಸಿದ್ದಾರೆ. ಶ್ರದ್ದಾ ಶ್ರೀನಾಥ್ ನಾಯಕಿಯಾಗಿರುವ ಚಿತ್ರದಲ್ಲಿ ಮಯೂರಿ, ರಚಿತಾ ರಾಮ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.ಅನೂಪ್ ಸೀಳನ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

 


Leave a Reply