ನಟ ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ” ಚಿತ್ರದ ಶೂಟಿಂಗ್ ಕಡೆಗೂ ಮುಗಿದಿದೆ. ಚಿತ್ರತಂಡ ಚಿತ್ರಕಥೆ, ಶೂಟಿಂಗ್ ಗಾಗಿ ಬರೋಬ್ಬರಿ  600 ದಿನಗಳ ಕಾಲ ತೆಗೆದುಕೊಂಡಿದ್ದು ಮಂಗಳವಾರ ಅಂತಿಮ ದಿನದ ಚಿತ್ರೀಕರಣ ಮುಕ್ತಾಯವಾಗಲಿದೆ.

ಸಂಕಲನಕಾರರಾಗಿ ನಿರ್ದೇಶಕ ಸ್ಥಾನಕ್ಕೆ ಬಡ್ತಿ ಪಡೆದ ನಿರ್ದೇಶಕ ಸಚಿನ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಬಳಿಕ ಸಾಂಪ್ರದಾಯಿಕವಾಗಿ ನಡೆದುಬಂದಿರುವಂತೆ ಕುಂಬಳಕಾಯಿ ಒಡೆಯುವ ಮೂಲಕ ಶೂಟಿಂಗ್ ಗೆ ಮಂಗಳ ಹಾಡಲಾಗುವುದು.

ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್.ಕೆ.ಪ್ರಕಾಶ್ ಅವರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಗೆ ಹೋಗಲಿದ್ದು ಆಗಸ್ಟ್ ನಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಸೂಚನೆ ಇದೆ. “ಅವನೇ ಶ್ರೀಮನ್ನಾರಾಯಣ” ಚಿತ್ರ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಸಹ ಏಕಕಾಲಕ್ಕೆ ತೆರೆ ಕಾಣುತ್ತಿದೆ

“ಕಿರಿಕ್ ಪಾರ್ಟಿ” ನಾಯಕ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಜೂನ್ 6ಕ್ಕೆ ನಟ ರಕ್ಷಿತ್ ಹುಟ್ಟುಹಬ್ಬವಿದ್ದು ಆ ದಿನ ತಾವು ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುವುದಾಗಿ ನಟ ರಕ್ಷಿತ್ ಶೆಟ್ತಿ ಹೇಳಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಸಕ್ರಿಯರಾಗಲಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಟ ವಿಶೇಷ ಉಡುಗೊರೆ ನೀಡಲಿದ್ದಾರೆ

ಅವರು ತಮ್ಮ ಹುಟ್ಟುಹಬ್ಬದಂದು “ಅವನೇ ಶ್ರೀಮನ್ನಾರಾಯಣ” ವಿಶೇಷ ಪೋಸ್ಟರ್ ನೊಡನೆ ಸಾಮಾಜಿಕ ತಾಣಗಳಿಗೆ ಕಂಬ್ಯಾಕ್ ಆಗಲು ನಿರ್ಧರಿಸಿದ್ದಾಗಿ ಪತ್ರಿಕೆಗೆ ಹೇಳಿದ್ದಾರೆ.


Leave a Reply