‘ನನ್ನ ಪ್ರಕಾರ’ಕ್ಕೆ ಯು/ಎ ಪ್ರಮಾಣ ಪತ್ರ; ಜುಲೈ ನಲ್ಲಿ ತೆರೆಗೆ


ಪ್ರಿಯಾಮಣಿ ಮದುವೆಯಾದ ನಂತರ ಮೊದಲ ಬಾರಿಗೆ ನಟಿಸುತ್ತಿರುವ ನನ್ನ ಪ್ರಕಾರ ಸಿನಿಮಾ ಸೆನ್ಸಾರ್ ಆಗಿದ್ದು, ಅದಕ್ಕೆ ಮಂಡಳಿ ಯು/ ಅ ಪ್ರಮಾಣ ಪತ್ರ ನೀಡಿದೆ.

ಪ್ರಿಯಾಮಣಿ, ಮಯೂರಿ, ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಬರೀ ಟೀಸರ್ ಮತ್ತು ಪೋಸ್ಟರ್ನಿಂದಲೇ ಸದ್ದು ಮಾಡುತ್ತಿದೆ. ಸಸ್ಪೆನ್ಸ್ ಮಾದರಿಯ ಕಥೆ ಇರುವ ಸಿನಿಮಾದಲ್ಲಿ ಪಂಚತಂತ್ರ ಸಿನಿಮಾ ಖ್ಯಾತಿಯ ನಟ ವಿಹಾನ್ಗೌಡ ಸಹ ನಟಿಸಿದ್ದಾರೆ.
ವಿನಯ್ ಬಾಲಾಜಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಜುಲೈ ತಿಂಗಳಿನಲ್ಲಿ ತೆರೆಗೆ ಬರಬಹುದು ಎನ್ನುವ ಮಾತುಗಳು ಚಿತ್ರತಂಡದಿಂದ ಕೇಳಿ ಬರುತ್ತಿದೆ. ನಿರಂಜನ್ ದೇಶಪಾಂಡೆ, ಗಿರಿಜಾ ಲೊಕೇಶ್, ಪ್ರಮೋದ್ ಶೆಟ್ಟಿ ಸಹ ನಟಿಸಿದ್ದಾರೆ

